ಮನೆ ಕಟ್ಟಿಕೊಡಲಿಲ್ಲಂದ್ರ ಈ ಸರ್ಕಾರವನ್ನೇ ಕೆಡವಿಬಿಡ್ತೀನಿ: ಬಾಲಚಂದ್ರ ಜಾರಕಿಹೊಳಿ ಎಚ್ಚರಿಕೆ

ಅರಭಾವಿ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಬಾಲಚಂದ್ರ ಚಾರಕಿಹೊಳಿ ಕ್ಷೇತ್ರದ ಪ್ರವಾಸ ಮಾಡುವ ಸಂದರ್ಭದಲ್ಲಿ ಸಂತ್ರಸ್ತರಿಗೆ ಮನೆ ಕಟ್ಟಿಕೊಡುವ ಭರವಸೆ ನೀಡಿದ್ದಾರೆ.

news18-kannada
Updated:August 13, 2019, 4:21 PM IST
ಮನೆ ಕಟ್ಟಿಕೊಡಲಿಲ್ಲಂದ್ರ ಈ ಸರ್ಕಾರವನ್ನೇ ಕೆಡವಿಬಿಡ್ತೀನಿ: ಬಾಲಚಂದ್ರ ಜಾರಕಿಹೊಳಿ ಎಚ್ಚರಿಕೆ
ಬಾಲಚಂದ್ರ ಜಾರಕಿಹೊಳಿ
  • Share this:

ಚಿಕ್ಕೋಡಿ(ಆ. 13): ಬೆಳಗಾವಿಯ ಜಾರಕಿಹೊಳಿ ಸಹೋದರರು ಕಾಂಗ್ರೆಸ್ ಮತ್ತು ಜೆಡಿಎಸ್​ನ ಮೈತ್ರಿ ಸರ್ಕಾರವನ್ನೇ ಪತನಗೊಳಿಸಿದ ಪ್ರಮುಖ ಸೂತ್ರಧಾರರು. ಈಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಜಾರಕಿಹೊಳಿ ಸಹೋದರರೊಬ್ಬರು ಸರ್ಕಾರ ಬೀಳಿಸುವ ಮಾತನ್ನಾಡಿದ್ಧಾರೆ. ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಡಲಿಲ್ಲವೆಂದರೆ ಸರ್ಕಾರವನ್ನೇ ಕೆಡವಿ ಬಿಡ್ತೀನಿ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ಧಾರೆ.


ಅರಭಾವಿ ಕ್ಷೇತ್ರದ ಶಾಸಕರಾಗಿರುವ ಬಾಲಚಂದ್ರ ಜಾರಕಿಹೊಳಿ ತಮ್ಮ ಕ್ಷೇತ್ರದಲ್ಲಿನ ನೆರೆ ಸಂತ್ರಸ್ತರನ್ನು ಭೇಟಿ ಮಾಡಿದ ವೇಳೆ ಈ ಮಾತುಗಳನ್ನಾಡಿದ್ಧಾರೆ. ನಿಮಗೆ ಮನೆ ಕಟ್ಟಿಸಿಕೊಡುವ ಜವಾಬ್ದಾರಿ ನಮ್ಮದು. ಒಂದು ವೇಳೆ ಮನೆ ಕಟ್ಟಿಸಿಕೊಡದಿದ್ದರೆ ಈ ಸರ್ಕಾರವನ್ನೇ ಕೆಡವಿಬಿಡ್ತೀನಿ ಎಂದು ಸಂತ್ರಸ್ತರಿಗೆ ಜಾರಕಿಹೊಳಿ ಅಭಯ ನೀಡಿದ್ದಾರೆ.


ಇದನ್ನೂ ಓದಿ: ನೆರೆ ವೀಕ್ಷಣೆಗೆ ಗೃಹ ಸಚಿವ ಅಮಿತ್ ಶಾ ಬಂದ್ರು ಹೋದ್ರು ಆದರೆ, ಪರಿಹಾರ ಮಾತ್ರ ಬರಲಿಲ್ಲ; ವಿ.ಎಸ್. ಉಗ್ರಪ್ಪ ಕಿಡಿ

ನೆರೆ ಸಂತ್ರಸ್ತರಿಗೆ ಧೈರ್ಯ ತುಂಬಲು ಬಾಲಚಂದ್ರ ಜಾರಕಿಹೊಳಿ ಈ ಮಾತುಗಳನ್ನಾಡಿರಬಹುದಾದರೂ ಅವರ ಹೇಳಿಕೆಯು ಬಿಜೆಪಿಗೆ ಎಚ್ಚರಿಕೆಯ ಕರೆಗಂಟೆಯೂ ಆಗಿರಬಹುದು.


ಕರ್ನಾಟಕ ಕಳೆದ ಐದಾರು ದಶಕಗಳಲ್ಲೇ ಅತ್ಯಂತ ಭೀಕರ ಮಳೆ ಪ್ರವಾಹ ಕಂಡಿದೆ. 17-18 ಜಿಲ್ಲೆಗಳಲ್ಲಿ ಪ್ರವಾಹ ಅಪ್ಪಳಿಸಿ ಜನಜೀವನ ಸಂಪೂರ್ಣ ಅಸ್ತವ್ಯವಸ್ತವಾಗಿದೆ. ಲಕ್ಷಾಂತರ ಮಂದಿ ಸಂತ್ರಸ್ತರಾಗಿದ್ದಾರೆ. 50ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. ಬೆಳಗಾವಿ, ಚಿಕ್ಕೋಡಿ ಸೇರಿದಂತೆ ಬಹುತೇಕ ಉತ್ತರ ಕರ್ನಾಟಕವು ನೀರಿನಿಂದ ಮುಳುಗಿಹೋಗಿದೆ. ಕೃಷ್ಣೆ, ಮಲಪ್ರಭ ಮೊದಲಾದ ನದಿಗಳು ಉಕ್ಕೇರಿ ನೂರಾರು ಗ್ರಾಮಗಳನ್ನು ಮುಳುಗಿಸಿದೆ.


ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಏಕಾಂಗಿಯಾಗಿ ಪರಿಹಾರ ಕಾರ್ಯದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಸಚಿವ ಸಂಪುಟ ರಚನೆಯಾಗದ ಹಿನ್ನೆಲೆಯಲ್ಲಿ ಅವರ ಕೈ ದುರ್ಬಲಗೊಂಡಿದೆ.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:August 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ