ಇದು ಏಪ್ರಿಲ್‌ ಫೂಲ್ ತಮಾಷೆ ಅಲ್ಲ..! ರಸ್ತೆಗಿಳಿದರೆ ವಾಹನ ಜಪ್ತಿ ಗ್ಯಾರಂಟಿ; ಪೊಲೀಸ್ ಇಲಾಖೆ ಎಚ್ಚರಿಕೆ

ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುತ್ತಿರುವವರ ಸಾವಿರಾರು ವಾಹನಗಳನ್ನು ಕಳೆದ ಒಂದು ವಾರದ ಅವಧಿಯಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ. ಅಲ್ಲದೆ, ಏಪ್ರಿಲ್ 14ರ ವರೆಗೆ ಈ ಗಾಡಿಗಳನ್ನು ಕೊಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

MAshok Kumar | news18-kannada
Updated:April 1, 2020, 11:47 AM IST
ಇದು ಏಪ್ರಿಲ್‌ ಫೂಲ್ ತಮಾಷೆ ಅಲ್ಲ..! ರಸ್ತೆಗಿಳಿದರೆ ವಾಹನ ಜಪ್ತಿ ಗ್ಯಾರಂಟಿ; ಪೊಲೀಸ್ ಇಲಾಖೆ ಎಚ್ಚರಿಕೆ
ಬಾಗಲಕೋಟೆಯಲ್ಲಿ ಸೀಜ್ ಮಾಡಲಾದ ಬೈಕ್‌ಗಳು.
  • Share this:
ಬೆಂಗಳೂರು (ಏಪ್ರಿಲ್ 01); ಲಾಕ್‌ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್.14ರ ವರೆಗೆ ರಾಜ್ಯದಲ್ಲಿ ವಾಹನ ಓಡಾಟಕ್ಕೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ. ನಿಯಮವನ್ನುಉಲ್ಲಂಘಿಸಿದರೆ ಎಲ್ಲಾ ವಾಹಗಳನ್ನು ಜಪ್ತಿ ಮಾಡಲಾಗುವುದು. ಇದು ನಿಜಕ್ಕೂ ಏಪ್ರಿಲ್ ಫೂಲ್ ಸಂದೇಶ ಅಲ್ಲ ಎಂದು ರಾಜ್ಯ ಪೊಲೀಸ್ ಇಲಾಖೆ ಮತ್ತೊಮ್ಮೆ ಖಡಕ್ ಎಚ್ಚರಿಕೆ ನೀಡಿದೆ.

ಮಾರಣಾಂತಿಕ ಕೊರೋನಾ ಸೋಂಕನ್ನು ಹೋಗಲಾಡಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಕಳೆದ ಮಾರ್ಚ್ 25 ರಿಂದ ಲಾಕ್‌ಡೌನ್ ಘೋಷಿಸಲಾಗಿದೆ. ವಾಹನ ಸವಾರರು ಕಟ್ಟುನಿಟ್ಟಾಗಿ ಅನಗತ್ಯವಾಗಿ ರಸ್ತೆಗೆ ಇಳಿಯಬಾರದು ಎಂದು ಸೂಚನೆ ನೀಡಲಾಗಿದೆ. ಆದರೂ ದ್ವಿಚಕ್ರ ವಾಹನ ಸವಾರರು ಪೊಲೀಸರ ಮಾತನ್ನು ಕೇಳುವ ಯಾವುದೇ ಸೂಚನೆ ಕಾಣುತ್ತಿಲ್ಲ. ಈಗಲೂ ಎಲ್ಲಾ ಜಿ‌ಲ್ಲೆಯಲ್ಲೂ ದ್ವಿಚಕ್ರ ವಾಹನ ಸವಾರರು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ.
ಹೀಗೆ ರಸ್ತೆಯಲ್ಲಿ ಓಡಾಡುತ್ತಿರುವವರ ಸಾವಿರಾರು ವಾಹನಗಳನ್ನು ಕಳೆದ ಒಂದು ವಾರದ ಅವಧಿಯಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ. ಅಲ್ಲದೆ, ಏಪ್ರಿಲ್ 14ರ ವರೆಗೆ ಈ ಗಾಡಿಗಳನ್ನು ಕೊಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಮತ್ತೆ ಎಚ್ಚರಿಕೆಯ ಸಂದೇಶ ರವಾನಿಸಿರುವ ಪೊಲೀಸ್ ಇಲಾಖೆ“ಇದನ್ನು ಏಪ್ರಿಲ್ ಫೂಲ್ ಎಂದು ಭಾವಿಸಬೇಡಿ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್.14ರ ವರೆಗೆ ರಾಜ್ಯದಲ್ಲಿ ವಾಹನ ಓಡಾಟಕ್ಕೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ. ಇದನ್ನು ಉಲ್ಲಂಘಿಸಿದಲ್ಲಿ ಖಂಡಿತ ವಾಹಗಳನ್ನು ಜಪ್ತಿ ಮಾಡಲಾಗುತ್ತದೆ” ಎಂದು ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ.

ಇದನ್ನೂ ಓದಿ : ಕಾಸರಗೋಡಿನಿಂದ ಕರ್ನಾಟಕಕ್ಕೆ ಪ್ರವೇಶಿಸಲು ಮುಂದಾದ ಆಂಬ್ಯುಲೆನ್ಸ್‌ಗೆ ಪೊಲೀಸ್ ತಡೆ; ಕೊರೋನಾ ಸೋಂಕಿತ ವ್ಯಕ್ತಿ ಸಾವು!
First published: April 1, 2020, 11:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading