Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R | news18
Updated:April 22, 2019, 6:00 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: April 22, 2019, 6:00 PM IST
  • Share this:
1.ಶ್ರೀಲಂಕಾ ಬಾಂಬ್​ ಸ್ಪೋಟ; ನಾಲ್ವರು ಕನ್ನಡಿಗರ ಸಾವು

ಶ್ರೀಲಂಕಾ ರಾಜಧಾನಿಯಲ್ಲಿ ಸಂಭವಿಸಿದ ಸರಣಿ ಬಾಂಬ್​​ ಸ್ಫೋಟದಲ್ಲಿ ಕರ್ನಾಟಕ ಮೂಲದ ನಾಲ್ವರು ಸಾವನ್ನಪ್ಪಿದ್ದಾರೆ. 5ನೇ ಮೃತದೇಹವೊಂದು ಪತ್ತೆಯಾಗಿದ್ದು, ಗುರುತು ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದೆ. ಮೃತರನ್ನು ನೆಲಮಂಗಲ ಮೂಲದ ಕೆ.ಜಿ ಹನುಮಂತರಾಯಪ್ಪ, ರಂಗಪ್ಪ,  ಲಕ್ಷ್ಮಣ್​ಗೌಡ ರಮೇಶ್, ಕೆ.ಎಂ.ಲಕ್ಷ್ಮೀನಾರಾಯಣ ಮೃತರಾಗಿದ್ದಾರೆ. ಎಚ್​.ಶಿವಕುಮಾರ್, ಎ.ಮಾದೇಗೌಡ, ಎಚ್​.ಪುಟ್ಟರಾಜು ನಾಪತ್ತೆಯಾಗಿದ್ದಾರೆ. ಈ ಸಂಬಂಧ ಸಿಎಂ ಕುಮಾರಸ್ವಾಮಿ, ಮುಖ್ಯಕಾರ್ಯದರ್ಶಿಗಳು ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರ ಕಚೇರಿಯ ಹೈಕಮಿಷನರ್ ಅವರೊಂದಿಗೆ ಮಾತನಾಡಿದ್ದಾರೆ.ರಾಜ್ಯದ ಪ್ರವಾಸಿಗರ ತಂಡವೊಂದು ಕ್ಯಾಂಡಿಯಿಂದ ಹಿಂದಿರುಗಲಿದೆ. ಪತ್ತೆಯಾಗಿರುವ 5ನೇ ಶವ ಗುರುತಿಸಲು ಅವರು ನೆರವಾಗುವರು. ಪತ್ತೆಯಾಗದ ಇನ್ನಿಬ್ಬರು ವ್ಯಕ್ತಿಗಳ ಮಾಹಿತಿ ದೊರೆತ ಕೂಡಲೇ ತಿಳಿಸಲಾಗುವುದು ಎಂದು ಅವರು ಹೇಳಿದ್ದಾರೆ ಎಂದು ಟ್ವೀಟ್​ ಮಾಡಿದ್ದಾರೆ.

2.ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ನಿನ್ನೆ 8 ಸರಣಿ ಬಾಂಬ್ ಸ್ಫೋಟಗಳಿಂದ 290ಕ್ಕೂ ಹೆಚ್ಚು ಜನರು ಬಲಿಯಾದ ಘಟನೆ ನಡೆದ ಬೆನ್ನಲ್ಲೇ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲು ಅಲ್ಲಿನ ಸರಕಾರ ಅಣಿಯಾಗಿದೆ. ಸೋಮವಾರ ಮಧ್ಯರಾತ್ರಿಯಿಂದಲೇ ಅನ್ವಯವಾಗುವಂತೆ ಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಎಮರ್ಜೆನ್ಸಿ ಸ್ಥಿತಿ ಘೋಷಿಸಲಿದ್ದಾರೆ. ತುರ್ತು ಸ್ಥಿತಿ ಘೋಷಣೆಗೆ ಕಾನೂನಿನಲ್ಲಿ ತಿದ್ದುಪಡಿ ತರಲಾಗುತ್ತಿದೆ. ತುರ್ತು ಸ್ಥಿತಿ ಭಯೋತ್ಪಾದನೆ ನಿಗ್ರಹಕ್ಕಷ್ಟೇ ಸೀಮಿತವಾಗುತ್ತದೆ. ಜನರ ವಾಕ್​ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆಯಾಗದಂತೆ ಎಚ್ಚರ ವಹಿಸಲಾಗುವುದು ಎಂದು ಸರಕಾರದ ಮಾಧ್ಯಮ ಘಟಕವು ಸ್ಪಷ್ಟಪಡಿಸಿದೆ.

3.ಭಾರತದ ಕರಾವಳಿಯಲ್ಲಿ ಕಟ್ಟೆಚ್ಚರ

ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ನಿನ್ನೆ 8 ಸರಣಿ ಬಾಂಬ್ ಸ್ಫೋಟಗಳಿಂದ 290ಕ್ಕೂ ಹೆಚ್ಚು ಜನರು ಬಲಿಯಾದ ಘಟನೆ ನಡೆದ ಬೆನ್ನಲ್ಲೇ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲು ಅಲ್ಲಿನ ಸರಕಾರ ಅಣಿಯಾಗಿದೆ. ಸೋಮವಾರ ಮಧ್ಯರಾತ್ರಿಯಿಂದಲೇ ಅನ್ವಯವಾಗುವಂತೆ ಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಎಮರ್ಜೆನ್ಸಿ ಸ್ಥಿತಿ ಘೋಷಿಸಲಿದ್ದಾರೆ. ತುರ್ತು ಸ್ಥಿತಿ ಘೋಷಣೆಗೆ ಕಾನೂನಿನಲ್ಲಿ ತಿದ್ದುಪಡಿ ತರಲಾಗುತ್ತಿದೆ. ತುರ್ತು ಸ್ಥಿತಿ ಭಯೋತ್ಪಾದನೆ ನಿಗ್ರಹಕ್ಕಷ್ಟೇ ಸೀಮಿತವಾಗುತ್ತದೆ. ಜನರ ವಾಕ್​ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆಯಾಗದಂತೆ ಎಚ್ಚರ ವಹಿಸಲಾಗುವುದು ಎಂದು ಸರಕಾರದ ಮಾಧ್ಯಮ ಘಟಕವು ಸ್ಪಷ್ಟಪಡಿಸಿದೆ.

4.ಸುಪ್ರೀಂ ಕೋರ್ಟ್​ ಕ್ಷಮೆಯಾಚಿಸಿದ ರಾಹುಲ್​"ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಚೌಕಿದಾರ್​ ಚೋರ್​ ಹೈ' ಎಂದು ಸುಪ್ರೀಂಕೋರ್ಟೇ ಹೇಳಿದೆ," ಎನ್ನುವ ಮೂಲಕ ನ್ಯಾಯಾಲಯದ ಹೆಸರು ಬಳಕೆ ಮಾಡಿದ್ದಕ್ಕಾಗಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಸರ್ವೋಚ್ಚ ನ್ಯಾಯಾಲಯಕ್ಕೆ ಕ್ಷಮೆಯಾಚಿಸಿದ್ದಾರೆ. 'ಚೌಕಿದಾರ್​ ಚೋರ್​ ಹೈ' ಎಂದು ಸುಪ್ರೀಂ ಕೋರ್ಟ್​ ತಿಳಿಸಿದೆ ಎಂದು ಚುನಾವಣಾ ಪ್ರಚಾರದ ವೇಳೆ ಆರೋಪ ಮಾಡಿದ್ದ ರಾಹುಲ್​ ಗಾಂಧಿಗೆ ಸುಪ್ರೀಂ ಕೋರ್ಟ್​ ವಿವರಣೆ ಕೇಳಿತ್ತು. ಈ ಸಂಬಂಧ ಇಂದು ನ್ಯಾಯಾಲಯದ ಮುಂದೆ ಹಾಜರಾದ ರಾಹುಲ್​ ಗಾಂಧಿ, 'ಈ ರೀತಿ ಪದ ಬಳಕೆ ಮಾಡಬಾರದಾಗಿತ್ತು. ನ್ಯಾಯಾಲಯ ಈ ರೀತಿ ಎಲ್ಲಿಯೂ ಹೇಳಿಲ್ಲ. ಚುನಾವಣಾ ಕಾವಿನ ಬಿಸಿಯಲ್ಲಿ ಭಾಷಣ ಮಾಡುವಾಗ ಈ ಪ್ರಮಾದ ಆಗಿದೆ ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ ನನ್ನ ಹೇಳಿಕೆಯನ್ನು ವಿಪಕ್ಷಗಳು ತಪ್ಪಾಗಿ ಅರ್ಥೈಸಿ ಬಳಕೆ ಮಾಡಿದೆ' ಎಂದೂ ಅವರು ಆರೋಪಿಸಿದ್ದಾರೆ.

5.ದೆಹಲಿ ಕಾಂಗ್ರೆಸ್​ ಅಭ್ಯರ್ಥಿ ಪಟ್ಟಿ ಬಿಡುಗಡೆ

ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಾಂಗ್ರೆಸ್​ ಕಣಕ್ಕಿಳಿಸಿದೆ. ಇಂದು ಅಧಿಕೃತವಾಗಿ ಆರು ಸ್ಪರ್ಧಿಗಳ ಹೆಸರನ್ನು ಕಾಂಗ್ರೆಸ್​ ಪ್ರಕಟಿಸಿದೆ. ಈಶಾನ್ಯ ದೆಹಲಿಯಿಂದ ಶೀಲಾ ದೀಕ್ಷಿತ್​, ದೆಹಲಿಯಿಂದ ಅಜಯ್​ ಮಾಕನ್​ ಅವರನ್ನು ಕಣಕ್ಕಿಳಿಸುವ ಮೂಲಕ ಎಎಪಿಯೊಂದಿಗಿನ ಮೈತ್ರಿ ಊಹಾಪೋಹಕ್ಕೆ ತೆರೆ ಎಳೆದಿದೆ. ಉಳಿದಂತೆ ಚಾಂದಿನಿ ಚೌಕ್​ ಕ್ಷೇತ್ರದಿಂದ ಜೆ.ಪಿ. ಅಗರ್​ವಾಲ್, ಪೂರ್ವ ದೆಹಲಿಯಿಂದ ಅರವಿಂದರ್ ಸಿಂಗ್ ಲವ್ಲಿ, ವಾಯುವ್ಯ ದೆಹಲಿ (ಎಸ್ಸಿ ಮೀಸಲು) ಕ್ಷೇತ್ರದಿಂದ ರಾಜೇಶ್ ಲಿಲೋಥಿಯಾ ಹಾಗೂ ಪಶ್ಚಿಮ ದೆಹಲಿಯಿಂದ ಮಹಾಬಲ್ ಮಿಶ್ರಾ ಅವರನ್ನು ಕಾಂಗ್ರೆಸ್​ ಕಣಕ್ಕೆ ಇಳಿಸಿದೆ

6.ರಾಹುಲ್​ ನಾಮಪತ್ರ ಮಾನ್ಯಮಾಡಿದ ಚುನಾವಣಾ ಆಯೋಗ

 ಉತ್ತರಪ್ರದೇಶದ ಆಮೇಥಿಯಿಂದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಸಲ್ಲಿಸಿದ್ದ ನಾಮಪತ್ರವನ್ನು ಅಮಾನ್ಯ ಮಾಡುವಂತೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸೋಮವಾರ ಜಿಲ್ಲಾ ಮ್ಯಾಜಿಸ್ಟ್ರೇಟ್​ ವಜಾಗೊಳಿಸಿದೆ. ಕೋರ್ಟ್​ ಆದೇಶದ ನಂತರ ಚುನಾವಣಾ ಆಯೋಗ ರಾಹುಲ್ ಗಾಂಧಿ ಅವರ ನಾಮಪತ್ರವನ್ನು ಮಾನ್ಯ ಮಾಡಿದೆ. ರಾಹುಲ್ ಗಾಂಧಿ ಸಲ್ಲಿಸಿರುವ ಅಫಿಡವಿಟ್​ನಲ್ಲಿ ದೇಶದ ಪೌರತ್ವ  ಹಾಗೂ ಶಿಕ್ಷಣ ಬಗ್ಗೆ ನೀಡಿರುವ ಮಾಹಿತಿ ವಿರೋಧಾಬಾಸದಿಂದ ಕೂಡಿವೆ. ರಾಹುಲ್ ಎರಡು ದೇಶಗಳ ನಾಗರಿಕತ್ವ ಹೊಂದಿದ್ದಾರೆ. ಹೀಗಾಗಿ ಇವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಸ್ವತಂತ್ರ ಅಭ್ಯರ್ಥಿ ಧ್ರುವ ರಾಜ್​ ಶನಿವಾರ ದೂರು ಸಲ್ಲಿಸಿದ್ದರು. ಇಂದು ರಾಹುಲ್​ ಗಾಂಧಿ ಪರ ಕೋರ್ಟ್​ಗೆ ಹಾಜರಾದ ವಕೀಲ ಕೆ.ಸಿ.ಕೌಶಿಕ್​, ರಾಹುಲ್​ ಗಾಂಧಿ ಭಾರತದಲ್ಲೇ ಹುಟ್ಟಿದವರು. ಭಾರತದ ಪಾಸ್​ಪೋರ್ಟ್ ಹೊಂದಿದ್ದಾರೆ. ಅವರು ಯಾವುದೇ ದೇಶದ ನಾಗರಿಕತ್ವ ಹೊಂದಿಲ್ಲ. ಅವರ ಪಾಸ್​ಪೋರ್ಟ್​, ಮತದಾರ ಚೀಟಿ, ಆದಾಯ ತೆರಿಗೆ ಎಲ್ಲವೂ ಇರುವುದು ಭಾರತದಲ್ಲೇ. 1995ರಲ್ಲಿ ರಾಹುಲ್ ಕೇಂಬ್ರಿಡ್ಜ್​ ವಿಶ್ವವಿದ್ಯಾಲಯದಿಂದ ಎಂ.ಫಿಲ್​ ಪದವಿ ಪಡೆದಿದ್ದಾರೆ. ಅದರ ದಾಖಲೆ, ಪ್ರಮಾಣಪತ್ರಗಳನ್ನು ಸಲ್ಲಿಸಿದ್ದೇವೆ ಎಂದು ಹೇಳಿದರು.

7.ನಾಳೆ ರಾಜ್ಯದಲ್ಲಿ ಎರಡನೇ ಹಂತದ ಮತದಾನ

ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಎರಡನೇ ಹಂತದ ಮತದಾನ ನಾಳೆ ನಡೆಯಲಿದೆ. ಕಾಂಗ್ರೆಸ್​​ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ, ರಮೇಶ್ ಜಿಗಜಿಣಗಿ ಸೇರಿದಂತೆ ಹಲವು ಅಭ್ಯರ್ಥಿಗಳು ಕಣದಲ್ಲಿದ್ಧಾರೆ. ಘಟಾನುಘಟಿ ನಾಯಕರ ಭವಿಷ್ಯ ನಿರ್ಧರಿಸುವ ಚುನಾವಣೆ ಇದಾಗಿದ್ದು, ಭಾರೀ ಬಿಗಿ ಬಂದೋಬಸ್ತ್​​ ನಡುವೆ ಮತದಾನ ನಡೆಯಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೇ ನೋಡಿಕೊಳ್ಳಲು ಆಯೋಗ ಮುನ್ನೆಚ್ಚರಿಕಾ ಕ್ರಮವಾಗಿ ಸುಮಾರು 45 ಸಾವಿರ ಪೊಲೀಸರು ಭದ್ರತೆಗಾಗಿ ನಿಯೋಜಿಸಿದೆ. ರಾಜ್ಯದಲ್ಲಿ ಒಟ್ಟು 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.  ಸುಮಾರು 28,028 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ 5,674 ಸೂಕ್ಷ್ಮ, 22,354 ಸಾಮಾನ್ಯ ಮತಗಟ್ಟೆಗಳಿವೆ. ಚುನಾವಣಾ ಕರ್ತವ್ಯಕ್ಕಾಗಿ ಆಯೋಗ ಒಟ್ಟು 90,997 ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದೆ ಎಂದು ತಿಳಿದು ಬಂದಿದೆ

8.ಚಡಚಣ ಸಹೋದರರ ಪ್ರಕರಣ; ಆರೋಪಿಗಳಿಗೆ ಜಾಮೀನು

ಭೀಮಾ ತೀರದ ಗಂಗಾಧರ ಚಡಚಣ ನಿಗೂಢ ಕೊಲೆ ಹಾಗೂ ಧರ್ಮರಾಜ ಚಡಚಣ ನಕಲಿ ಎನ್​ಕೌಂಟರ್ ಈ ಎರಡೂ ಪ್ರಕರಣಗಳಲ್ಲಿ ಆರೋಪಿಗಳಾದ ಅಂದಿನ ಚಡಚಣ ಪಿಎಸ್ಐ ಹಾಗೂ ಇತರ ಮೂವರು ಪೊಲೀಸ್ ಕಾನ್ಸ್​ಟೆಬಲ್​ಗಳಿಗೆ ಜಾಮೀನು ಮಂಜೂರಾಗಿದೆ. ಆರೋಪಿಗಳಾದ ಅಂದಿನ ಚಡಚಣ ಪಿಎಸ್ಐ ಗೋಪಾಲ ಹಳ್ಳೂರ, ಪೊಲೀಸ್ ಪೇದೆಗಳಾದ ಸತ್ಯಪ್ಪ ನಾಯ್ಕೋಡಿ, ಸಿದ್ಧಾರೂಢ ರೂಗಿ ಮತ್ತು ಚಂದ್ರಶೇಖರ ಜಾಧವ ಅವರಿಗೆ ಕಲಬುರಗಿ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ. ಭೀಮಾ ತೀರದ ಹಂತಕ ಧರ್ಮರಾಜ ಚಡಚಣ ನಕಲಿ ಎನಕೌಂಟರ್, ಗಂಗಾಧರ ಚಡಚಣ ನಿಗೂಢ ಕೊಲೆ ಆರೋಪದಡಿ ಈ ಆರೋಪಿಗಳು ಈಗಾಗಲೇ ನಾನಾ ಕಾರಾಗೃಹಗಳಲ್ಲಿದ್ದಾರೆ. ಈಗ ಗಂಗಾಧರ ಚಡಚಣ ನಿಗೂಢ ಕೊಲೆ ಆರೋಪ ಪ್ರಕರಣದಲ್ಲಿ ಮಾತ್ರ ಈ ನಾಲ್ವರಿಗೆ ಆರೋಪಿಗಳಿಗೆ ಕಲಬುರಗಿ ಹೈಕೋರ್ಟ್ ಷರತ್ತು ಬದ್ಧ ಜಾನೀನು ನೀಡಿದೆ ಎಂದು ನ್ಯೂಸ್ 18 ಕನ್ನಡಕ್ಕೆ ಪೊಲೀಸ್ ಉನ್ನತ ಮೂಲಗಳು ಮಾಹಿತಿ ನೀಡಿವೆ.

9.ಕೆಜಿಎಫ್​ ಚಾಪ್ಟರ್​ 2ನಲ್ಲಿ ಅಭಿನಯಿಸಲು ಸುವರ್ಣಾವಕಾಶ

'ಕೆ.ಜಿ.ಎಫ್ ಚಾಪ್ಟರ್ 1'ರ ನಂತರ ಪ್ರೇಕ್ಷಕರು 'ಚಾಪ್ಟರ್​ 2'ಗಾಗಿ ಕಾತುರರಾಗಿದ್ದಾರೆ. ಅವರಿಗಾಗಿ ಈಗ ಹೊಂಬಾಳೆ ಫಿಲ್ಮ್ಸ್​ ಒಂದು ಸಿಹಿ ಸುದ್ದಿ ನೀಡಿದೆ. ಸಿನಿಮಾ ನೋಡಲು ಕಾಯುತ್ತಿದ್ದರು ಈಗ ಚಿತ್ರದಲ್ಲೇ ತೆರೆ ಮೇಲೆ ಕಾಣಿಸಿಕೊಳ್ಳಬಹುದು. ಹೌದು, 'ಕೆ.ಜಿ.ಎಫ್​ ಚಾಪ್ಟರ್​ 2'ನಲ್ಲಿ ನಟಿಸೋಕೆ ಅವಕಾಶವನ್ನು 'ಕೆ.ಜಿ.ಎಫ್' ತಂಡ ಮಾಡಿಕೊಡುತ್ತಿದೆ. ಸದ್ಯ ಈ ಚಿತ್ರದ ಚಾಪ್ಟರ್ 2 ಚಿತ್ರೀಕರಣದ ತಯಾರಿಯಲ್ಲಿದೆ ಚಿತ್ರತಂಡ. ಹೀಗಿರುವಾಗಲೇ ಹೊಂಬಾಳೆ ಫಿಲ್ಮ್ಸ್​ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಧಿಕೃತ ಪಯಟದಲ್ಲಿ ಆಡಿಷನ್​ ಕುರಿತಾದ ಪೋಸ್ಟ್​ ಮಾಡಿದೆ. ಇದೇ ಶುಕ್ರವಾರ ಅಂದರೆ ಏ.26ರಂದು ಆಡಿಷನ್ ನಡೆಯುತ್ತಿದೆ. 8ರಿಂದ 16 ವರ್ಷದ ಬಾಲಕರು ಮತ್ತು 25 ದಾಟಿದ ಪುರುಷರು ಈ ಆಡಿಷನ್‍ನಲ್ಲಿ ಭಾಗವಹಿಸಬಹುದು.  ಮಲ್ಲೇಶ್ವರಂನ ಜಿ.ಎಂ. ರಿಜಾಯ್ಸ್​ ಡಿಜಿಟಲ್​ ಆಡಿಟೋರಿಯಂನಲ್ಲಿ ಬೆಳಿಗ್ಗೆ 8ರಿಂದ ಸಂಜೆ 4ರ ವರೆಗೆ ನಡೆಯಲಿರುವ ಆಡಿಷನ್​ನಲ್ಲಿ ಒಂದು ನಿಮಿಷ ಹೇಳಬಹುದಾದಷ್ಟು ಸಂಭಾಷಣೆಯೊಂದಿಗೆ ಆಸಕ್ತರು ಹೋಗಬೇಕು. ನಂತರ ಅದನ್ನು 'ಕ.ಜಿ.ಎಫ್​' ತಂಡದ ಮುಂದೆ ಅಭಿನಯಿಸಿ ತೋರಿಸಬೇಕು.

10.ರಾಜಸ್ಥಾನಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ

ಐಪಿಎಲ್ನ ಇಂದಿನ ಪಂದ್ಯ ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಖಾಮುಖಿ ಆಗುತ್ತಿದೆ. ಡೆಲ್ಲಿ ಈಗಾಗಲೇ ಉತ್ತಮ ಸ್ಥಿತಿಯಲ್ಲಿದೆ. ಇತ್ತ ರಾಜಸ್ಥಾನಕ್ಕೆ ಇಂದಿನ ಪಂದ್ಯ ಸೇರಿದಂತೆ ಮುಂದಿನ ಎಲ್ಲ ಪಂದ್ಯ ಗೆಲ್ಲ ಬೇಕಾದ ಒತ್ತಡದಲ್ಲಿದ್ದು, ಮಾಡು ಇಲ್ಲವೇ ಮಡಿ ಪಂದ್ಯವನ್ನು ಆಡಲಿದೆ. ಹೀಗಾಗಿ ಜೈಪುರದಲ್ಲಿ ಹೈವೋಲ್ಟೇಜ ಪಂದ್ಯವಾಗುವ ಅಂದಾಜಿದೆ.
First published:April 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ