ಏಪ್ರಿಲ್ ಫೂಲ್; ಸುಳ್ಳು ವದಂತಿ ನಂಬಿ ಎಣ್ಣೆ ಅಂಗಡಿ ಮುಂದೆ ಜಮಾಯಿಸಿದ ಮದ್ಯಪ್ರಿಯರು!

ಗದಗದಲ್ಲಿ ಇಂದು ಸರ್ಕಾರಿ ಮದ್ಯದ ಅಂಗಡಿ MSIL ತೆರೆದಿದೆ ಎಂಬ ಸುಳ್ಳು ವದಂತಿ ಹರಡಿದೆ. ಹೀಗಾಗಿ ಮಹಿಳೆಯರು, ಯುವಕರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಮದ್ಯಪ್ರಿಯರು ಎಣ್ಣೆ ಅಂಗಡಿ ಎದುರು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬಂದಿದೆ.

news18-kannada
Updated:April 1, 2020, 12:08 PM IST
ಏಪ್ರಿಲ್ ಫೂಲ್; ಸುಳ್ಳು ವದಂತಿ ನಂಬಿ ಎಣ್ಣೆ ಅಂಗಡಿ ಮುಂದೆ ಜಮಾಯಿಸಿದ ಮದ್ಯಪ್ರಿಯರು!
ಪ್ರಾತಿನಿಧಿಕ ಚಿತ್ರ.
  • Share this:
ಗದಗ (ಏಪ್ರಿಲ್ 01); ಇಂದು ಮದ್ಯದ ಅಂಗಡಿ ತೆರೆದಿದೆ ಎಂಬ ಸುಳ್ಳು ವದಂತಿಯನ್ನು ನಂಬಿ ಸಾವಿರಾರು ಜನ MSIL ಎದುರು ಸಾಲುಗಟ್ಟಿ ನಿಂತು ಕೊನೆಗೆ ನಿರಾಸೆಗೆ ಒಳಗಾದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

ಲಾಕ್‌ಡೌನ್‌ನಿಂದಾಗಿ ಅಬಕಾರಿ ಇಲಾಖೆ ಮಾರ್ಚ್ 31ರ ವರೆಗೆ ಮದ್ಯದ ಮಾರಾಟಕ್ಕೆ ತಡೆ ನೀಡಿತ್ತು. ಹೀಗಾಗಿ ಏಪ್ರಿಲ್ 01 ರಂದು ಮದ್ಯ ಸಿಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ನಿನ್ನೆ ಸಂಜೆ ಹೊಸ ಆದೇಶ ಹೊರಡಿಸಿದ್ದ ಅಬಕಾರಿ ಇಲಾಖೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ  ಹಿನ್ನೆಲೆಯಲ್ಲಿ ಮದ್ಯ ಮಾರಾಟದ ಮೇಲಿನ ನಿರ್ಬಂಧ ಏಪ್ರಿಲ್ 14ರವರೆಗೆ ಮುಂದುವರಿಯಲಿದೆ ಎಂದು ಹೊಸ ಆದೇಶ ಹೊರಡಿಸಿದೆ.

ಆದರೆ, ಹೆಚ್ಚು ಜನರಿಗೆ ಈ ಮಾಹಿತಿ ತಿಳಿದಿಲ್ಲ. ಈ ನಡುವೆ ಗದಗದಲ್ಲಿ ಇಂದು ಸರ್ಕಾರಿ ಮದ್ಯದ ಅಂಗಡಿ MSIL ತೆರೆದಿದೆ ಎಂಬ ಸುಳ್ಳು ವದಂತಿ ಹರಡಿದೆ. ಹೀಗಾಗಿ ಮಹಿಳೆಯರು, ಯುವಕರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಮದ್ಯಪ್ರಿಯರು ಎಣ್ಣೆ ಅಂಗಡಿ ಎದುರು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬಂದಿದೆ.

ಆದರೆ, ಇದು ಸುಳ್ಳು ವದಂತಿ ಎಂಬುದು ತಿಳಿದ ತಕ್ಷಣ ಎಲ್ಲಾ ಮದ್ಯಪ್ರಿಯರು ನಿರಾಸೆಯಿಂದ ಮನೆಗೆ ತೆರಳಿದ್ದಾರೆ. ಅಂದಹಾಗೆ ಕಳೆದ ಒಂದು ವಾರದ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 6 ಜನ ಮದ್ಯ ಸಿಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಉಲ್ಲೇಖಾರ್ಹ.

ಇದನ್ನೂ ಓದಿ : ಮದ್ಯಪ್ರಿಯರಿಗೆ ಶಾಕ್; ಏಪ್ರಿಲ್ 14ರವರೆಗೆ ಲಿಕ್ಕರ್ ಮಾರಾಟ ಇಲ್ಲ!
First published:April 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading