Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R | news18
Updated:April 15, 2019, 6:13 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: April 15, 2019, 6:13 PM IST
  • Share this:

1. ಪಿಯುಸಿ ಫಲಿತಾಂಶ; ಉಡುಪಿ ಪ್ರಥಮ, ಚಿತ್ರದುರ್ಗಕ್ಕೆ ಕೊನೆ ಸ್ಥಾನ


ಪ್ರಸ್ತಕ್ತ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು, ಶೇ.92.20 ಅಂಕದೊಂದಿಗೆ ಉಡುಪಿ ಮೊದಲ ಸ್ಥಾನ ಪಡೆದುಕೊಂಡಿದೆ. ಶೇ.51.42 ಅಂಕದೊಂದಿಗೆ ಚಿತ್ರದುರ್ಗ ಕಳಪೆ ಫಲಿತಾಂಶ ಪಡೆದ ಜಿಲ್ಲೆಯಾಗಿದೆವಿಜ್ಞಾನ ವಿಭಾಗದಲ್ಲಿ 594 ಅತಿ ಹೆಚ್ಚಿನ ಅಂಕವಾಗಿದ್ದರೆ, ವಾಣಿಜ್ಯದಲ್ಲಿ 596 ಹಾಗೂ ಕಲಾ ವಿಭಾಗದಲ್ಲಿ 594 ಟಾಪ್ಸ್ಕೋರ್ಆಗಿದೆ. ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 333985 ಬಾಲಕಿಯರು ಪರೀಕ್ಷೆ ಬರೆದಿದ್ದು 227897 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. 337668 ಬಾಲಕರು ಪರೀಕ್ಷೆ ಎದುರಿಸಿದ್ದು ಇವರಲ್ಲಿ 186690 ಮಂದಿ ಪಾಸಾಗಿದ್ದಾರೆ. ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
2. ವಿಶ್ವಕಪ್​ಗೆ ಭಾರತ ತಂಡ ಆಯ್ಕೆ


ಮೇ 30 ರಿಂದ ಇಂಗ್ಲೆಂಡ್​​ನಲ್ಲಿ ಆರಂಭವಾಗುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟಗೊಂಡಿದೆ. ಒಟ್ಟು 15 ಮಂದಿ ಆಟಗಾರರ ಹೆಸರನ್ನು ಆಯ್ಕೆ ಮಾಡಲಾಗಿದೆ.
ಮುಂಬೈನಲ್ಲಿಂದು ನಡೆದ ಬಿಸಿಸಿಐ ಆಯ್ಕೆ ಸಮಿತಿ ಸಭೆಯಲ್ಲಿ ನಾಯಕ ವಿರಾಟ್ಕೊಹ್ಲಿ, ಕೋಚ್ ರವಿಶಾಸ್ತ್ರಿ ಭಾಗಿಯಾಗಿದ್ದು, ಐದು ಆಯ್ಕೆದಾರರು ನಡೆಸಿದ ಸಭೆಯಲ್ಲಿ 15 ಆಟಗಾರರ ಹೆಸರನ್ನು ಪಕ್ರಟಮಾಡಲಾಗಿದೆ. ಪ್ರಸ್ತುತ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹಿರಿಯ ಆಟಗಾರ ಯುವರಾಜ್ ಸಿಂಗ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದು, ಕನ್ನಡಿಗ ಕೆ ಎಲ್ ರಾಹುಲ್​​ ತಂಡದಲ್ಲಿದ್ದಾರೆ. ಅಲ್ಲದೆ ಯುವ ಆಟಗಾರ ರಿಷಭ್ ಪಂತ್​​ರನ್ನು ಕೈಬಿಟ್ಟು ದಿನೇಶ್ ಕಾರ್ತಿಕ್ರನ್ನು ಆಯ್ಕೆ ಮಾಡಲಾಗಿದೆ. ಅಂಬಟಿ ರಾಯುಡು ಹಾಗೂ ಖಲೀಲ್ ಅಹ್ಮದ್ ಕೂಡ ವಿಶ್ವಕಪ್ ತಂಡದಿಂದ ಹೊರಗುಳಿದಿದ್ದಾರೆ

3. ರಾಹುಲ್​ ಗಾಂಧಿಯಿಂದ ವಿವರಣೆ ಕೇಳಿದ ಸುಪ್ರೀಂ ಕೋರ್ಟ್​​


ಚೌಕಿದಾರ್ ಚೋರ್ ಹೈ ಎಂದು ಸ್ವತಃ ಸುಪ್ರೀಂ ಕೋರ್ಟೇಹೇಳಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಸಂಬಂಧಿಸಿದಂತೆ ನೊಟೀಸ್ ಜಾರಿಗೊಳಿಸಿರುವ ಸರ್ವೊಚ್ಚ ನ್ಯಾಯಾಲಯ ಏಪ್ರಿಲ್ 22 ಒಳಗಾಗಿ ವಿವರಣೆ ನೀಡುವಂತೆ ತಾಕೀತು ಮಾಡಿದೆ.
.10 ರಂದು ರಫೇಲ್ ಒಪ್ಪಂದದ ಕುರಿತ ತೀರ್ಪು ಮರುಪರಿಶೀಲನೆ ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ಸುಪ್ರೀಂ ಕೇಂದ್ರ ಸರಕಾರದ ಆಕ್ಷೇಪವನ್ನು ವಜಾಗೊಳಿಸಿ ಅರ್ಜಿ ಮರುಪರಿಶೀಲನೆಗೆ ಒಪ್ಪಿಗೆ ಸೂಚಿಸಿತ್ತು. ಆದರೆ, ನ್ಯಾಯಾಲಯದ ಇದೇ ಹೇಳಿಕೆಯನ್ನು ತನ್ನ ರಾಜಕೀಯ ಭಾಷಣೆಕ್ಕೆ ಬಳಸಿಕೊಂಡಿದ್ದ ರಾಹುಲ್ ಗಾಂಧಿಚೌಕಿದಾರ್ ಚೋರ್ ಹೈಎಂದು ಸ್ವತಃ ಸುಪ್ರೀಂ ತೀರ್ಪು ನೀಡಿದೆ ಎಂದು ಹೇಳಿಕೆ ನೀಡಿದ್ದರು. ಇಂದು ಸ್ವತಃ ಅವರ ಹೇಳಿಕೆಯೇ ಅವರಿಗೆ ಕಂಟಕವಾಗಿದೆ.


4. ಏ.17ರಂದು ಬಿಜೆಪಿ ಸಮಾವೇಶಕ್ಕೆ ಯೋಗಿ ಆದಿತ್ಯನಾಥ್​​ ಬರುವಂತಿಲ್ಲ


ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ . 17ರಂದು ಚುನಾವಣಾ ಪ್ರಚಾರಕ್ಕೆ ಕರ್ನಾಟಕಕ್ಕೆ ಆಗಮಿಸುವವರಿದ್ದರು. ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಬೀದರ್, ಕಲ್ಬುರ್ಗಿ, ಧಾರವಾಡದಲ್ಲಿ ಚುನಾವಣಾ ಪ್ರಚಾರ ನಡೆಸುವವರಿದ್ದರು. ಆದರೆ, ನಾಳೆ ಬೆಳಗ್ಗೆಯಿಂದ 3 ದಿನಗಳ ಕಾಲ ಯೋಗಿ ಆದಿತ್ಯನಾಥ್ ಪ್ರಚಾರದಲ್ಲಿ ಭಾಗಿಯಾಗುವಂತಿಲ್ಲ ಎಂದು ಚುನಾವಣಾ ಆಯೋಗ ನಿಷೇಧ ಹೇರಿದೆ. ಹೀಗಾಗಿ, ಅವರು ಕರ್ನಾಟಕಕ್ಕೆ ಆಗಮಿಸುವಂತಿಲ್ಲ. ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೀದರ್, ಕಲ್ಬುರ್ಗಿ, ಧಾರವಾಡದಲ್ಲಿ ಏಪ್ರಿಲ್ 23ರಂದು ಚುನಾವಣೆ ನಡೆಯಲಿದೆ. ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಳ್ಳಲು ಯೋಗಿ ಆದಿತ್ಯನಾಥ ಬರುವವರಿದ್ದರು. ಅದೇ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ಶಾ ಕೂಡ ಉತ್ತರ ಕರ್ನಾಟಕದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ


5. ಜಂಟಿ ಸಮಾವೇಶದಲ್ಲಿ ಕಣ್ಣೀರು ಹಾಕಿದ ಸಿಎಂ ಎಚ್​ಡಿಕೆ


"ನಾನು ಮುಖ್ಯಮಂತ್ರಿ ಆದ ದಿನದಿಂದ ಒಂದು ದಿನವೂ ನೆಮ್ಮದಿಯಾಗಿ ಆಡಳಿತ ಮಾಡಲು ಬಿಟ್ಟಿಲ್ಲನಾನು 120 ಸೀಟ್ ಗೆದ್ದಿದ್ರೆ ನೆಮ್ಮದಿಯಾಗಿ ಆಡಳಿತ ನಡೆಸುತ್ತಿದೆ. ಈಗ ಎಂಥಾ ಕಷ್ಟದಲ್ಲಿ ಸರ್ಕಾರ ನಡೆಸ್ತಿದ್ದೇನೆ ನಿಮಗೆ ಗೊತ್ತಿಲ್ಲ," ಎಂದು ಸಿಎಂ ಕುಮಾರಸ್ವಾಮಿ ಕಣ್ಣೀರು ಹಾಕಿ ತಮ್ಮ ದುಃಖವನ್ನು ಮತ್ತೊಮ್ಮೆ ಹೊರಹಾಕಿದ್ದಾರೆ. ಕೆ.ಆರ್ಪೇಟೆಯಲ್ಲಿ ಜೆಡಿಎಸ್​, ಕಾಂಗ್ರೆಸ್ ಜಂಟಿಸಮಾವೇಶದಲ್ಲಿ ಮಾತನಾಡಿದ ಅವರು, "ರೈತರು ಆತ್ಮಹತ್ಯೆ ಮಾಡಿಕೊಂಡಾಗ ಜಾತಿ, ಧರ್ಮ ನೋಡದೇ  ಅವರ ಮನೆಗೆ ಹೋಗಿ ನಾನು ಸಾಂತ್ವನ ಹೇಳಿದೆ. 200 ಕುಟುಂಬಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ತಾಯಂದಿರ ಕಷ್ಟ ಕೇಳೋಕೆ ಯಾರಾದ್ರೂ ಬಂದಿದ್ರಾ," ಎಂದು ಪ್ರಶ್ನಿಸಿದರು. "ಪಕ್ಷೇತರ ಅಭ್ಯರ್ಥಿ ಕಣ್ಣಲ್ಲಿ ನೀರು ಹಾಕಿ ಡ್ರಾಮಾ ಶುರು ಮಾಡಿದ್ದಾರೆ. ಆದರೆ, ನಿಜವಾಗಿ ಕಣ್ಣೀರು ಹಾಕುತ್ತಿರುವವರು ನಾನು, ನಮ್ಮ ತಂದೆಜನರ ಸಮಸ್ಯೆ ನೋಡಿ ಕಣ್ಣಲ್ಲಿ ನೀರು ಬರುತ್ತಿದೆ." ಎಂದರು.


6. ದರ್ಶನ್​ ಫಾರ್ಮ್​ಹೌಸ್​ ಮೇಲೆ ಐಟಿ ದಾಳಿ


ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ನಡೆಸುತ್ತಿರುವ ನಟ ದರ್ಶನ್ಫಾರ್ಮ್ಹೌಸ್ಮೇಲೆ ಇಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇತ್ತ ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರದಲ್ಲಿ ನಟ ದರ್ಶನ್ಬ್ಯಸಿಯಾಗಿದ್ದರೆ, ಅತ್ತ ಟಿ.ನರಸೀಪುರದಲ್ಲಿರುವ ದರ್ಶನ್ಪಾರ್ಮ್ಹೌಸ್ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಅಲ್ಲಿ ಪರಿಶೀಲನೆ ನಡೆಸಿ ತೆರಳಿದ್ದಾರೆ. ಯಾವ ಕಾರಣಕ್ಕೆ ಶೋಧ ಮಾಡಿದ್ದಾರೆ, ಎಷ್ಟು ಜನ ಅಧಿಕಾರಿಗಳಿದ್ದರು, ಅಲ್ಲಿ ಯಾವ ಮಾಹಿತಿ ಲಭ್ಯವಾಗಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇನ್ನು ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ದರ್ಶನ್​, ಇದು ಐಟಿ ದಾಳಿಯಲ್ಲ, ಚುನಾವಣಾಧಿಕಾರಿಗಳ ದಾಳಿ. ದುಡ್ಡು ಹಂಚಲಾಗುತ್ತಿತ್ತು ಎಂದು ಯಾರೋ ಸುಳ್ಳು ಸುದ್ದಿ ನೀಡಿದ್ದರು. ಹಿನ್ನೆಲೆಯಲ್ಲಿ ನಾಲ್ಕೈದು ಜನ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಆದರೆ. ಫಾರ್ಮ್ಹೌಸ್ನಲ್ಲಿ ಏನು ಸಿಗುತ್ತದೆ. ಅಲ್ಲಿ ಸಿಗುವುದು ಬೂಸಾ ಹಿಂಡಿ ಅಷ್ಟೇ, ಅಲ್ಲಿ ಪ್ರಾಣಿ ಪಕ್ಷಿಗಳನ್ನು ನೋಡಿಕೊಂಡು ಹೋಗಲಿ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಪ್ರಚಾರದ ವೇಳೆ ತಿಳಿಸಿದ್ದಾರೆ.


7. ಈ ಬಾರಿ ಸಹಜ ಮುಂಗಾರು


ದಾಖಲೆ ಬಿಸಿಲಿಗೆ ಬಾರಿ ದೇಶ ಸಾಕ್ಷಿಯಾಗಿದ್ದು, ಮಳೆಗಾಗಿ ರೈತರು ಪರಿತಪಿಸಿದ್ದಾರೆ. ಬಿಸಿಲಿನ ತಾಪವನ್ನು ನೋಡಿದ ರೈತರು ಬಾರಿ ಮಳೆ ಹೇಗಿರಲಿದೆ; ಕಳೆದ ಬಾರಿಯಂತೆ ಪ್ರವಾಹ ತರಲಿದೆಯಾ ಅಥವಾ ಬರಗಾಲ ಆವರಿಸಲಿದೆಯಾ ಎಂದು ಕಳವಳಗೊಂಡಿರುವ ರೈತರಿಗೆ ಹವಾಮಾನ ಇಲಾಖೆ ಸಂತಸದ ಸುದ್ದಿ ನೀಡಿದೆ. ದೇಶದಲ್ಲಿ ಬಾರಿ ಸಹಜ ಮಳೆ ಆಗಲಿದೆ ಎಂದು ಅಂದಾಜಿಸುವ ಮೂಲಕ ರೈತರ ಮೊಗದಲ್ಲಿ ಹರ್ಷ ಮೂಡುವಂತೆ ಮಾಡಿದ್ದಾರೆ. ಮಾನ್ಸೂನ್ಬಗ್ಗೆ ವರದಿ ನೀಡಿರುವ ಭಾರತೀಯ ಹವಾಮಾನ ಇಲಾಖೆ ಬಾರಿ ಸಹಜ ಮುಂಗಾರು ಆಗಲಿದ್ದು, ಕೃಷಿಕರಿಗೆ ಸಹಾಯವಾಗಲಿದೆ ಎಂದಿದ್ದಾರೆ. 2019ರಲ್ಲಿ ನೈರುತ್ಯ ಮಳೆ ಸಾಮಾನ್ಯ ಮಾದರಿಯಾಗಿರಲಿದೆ. ಶೇ. 96ರಷ್ಟು ಪ್ರಮಾಣ ಮಳೆ ಬೀಳುವ  ಸಾಧ್ಯತೆ ಇದೆ.  ಎಂದು  ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರಾಜೀವನ್ನಾಯರ್ತಿಳಿಸಿದ್ದಾರೆ


8. ಬಿಜೆಪಿ ಅಸಮಾಧಾನಿತರನ್ನುಯ ಸೆಳೆಯುತ್ತಿರುವ ಮಧ್ವರಾಜ್​


ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಒಂದಿಷ್ಟು ರಾಜಕೀಯ ಚದುರಂಗದಾಟಗಳಿಗೆ ಸಾಕ್ಷಿಯಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಡೆಗಣಿಸ್ಪಟ್ಟ ನಾಯಕರು, ಕಾರ್ಯಕರ್ತರು, ಗೋ ಬ್ಯಾಕ್ ಶೋಭಕ್ಕ ಎಂದ ಅತೃಪ್ತರು ಇವರೆಲ್ಲರ ಬೆಂಬಲಕ್ಕಾಗಿ ಮೈತ್ರಿ ಅಭ್ಯರ್ಥಿ ಕೈ ಚಾಚಿರುವ ಬೆಳವಣಿಗೆ ನಡೆದಿದೆ. ಜಿಲ್ಲೆಯ ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅತೃಪ್ತರನ್ನು ಚಿಕ್ಕಮಗಳೂರು-ಉಡುಪಿ ಲೋಕಸಭಾ  ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಕುಂದಾಪುರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಪ್ರಮೋದ್ ಮಧ್ವರಾಜ್ ದಿಢೀರ್ ಆಗಿ ಬಿಜೆಪಿ ಅತೃಪ್ತ ಬಣವನ್ನು ಭೇಟಿಯಾಗಿ ಬೆಂಬಲ ಯಾಚಿಸಿದ್ದಾರೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕುಂದಾಪುರದಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಅಭ್ಯರ್ಥಿತನವನ್ನು ವಿರೋಧಿಸಿ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿ ದೂರವುಳಿದಿದ್ದ ಬಿಜೆಪಿಯ ಪ್ರಬಲ ಅತೃಪ್ತ ನಾಯಕ ಕಿಶೋರ್ ಕುಮಾರ್ ಕುಂದಾಪುರ, ಸತೀಶ್ ಹೆಗ್ಡೆ, ಜಾನಕಿ ಬಿಲ್ಲವ ಹಾಗೂ ಬಿಜೆಪಿ ಪಕ್ಷದಿಂದ ಉಚ್ಛಾಟನೆಗೊಳಪಟ್ಟ ಮಾಜಿ ಪುರಸಭಾ ಉಪಾಧ್ಯಕ್ಷ ರಾಜೇಶ್ ಕಾವೇರಿ ಸೇರಿದಂತೆ ಹಲವು ಅತೃಪ್ತ ನಾಯಕರ ಬಳಿ ಪ್ರಮೋದ್ ಮಧ್ವರಾಜ್ ಬೆಂಬಲ ಕೋರಿದ್ದಾರೆ.


9. ಮತದಾನ ಬಹಿಷ್ಕಾರ


ತಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳು ತಮ್ಮ ಕಷ್ಟಗಳಿಗೆ ಸ್ಪಂದಿಸದಿದ್ದರೆ ಜನರಿಗೆ ಆಕ್ರೋಶವಾಗುವುದು ಸಹಜ. ಬಹುತೇಕ ಜನರು ತಮ್ಮ ಅಸಮಾಧಾನವನ್ನು ನುಂಗಿಕೊಂಡು, ಮುಂಬರುವ ದಿನಗಳಲ್ಲಾದರೂ ನೂತನ ಜನಪ್ರತಿನಿಧಿ ಕೆಲಸ ಮಾಡಬಹುದೆಂಬ ಆಶಯದೊಂದಿಗೆ ಮತದಾನ ಮಾಡುತ್ತಾರೆ. ಕೆಲವರು ಮತದಾನ ಬಹಿಷ್ಕಾರ ಮಾಡಿ ತಮ್ಮ ಅಸಮಾಧಾನ ಹೊರಹಾಕುತ್ತಾರೆ. ಮೂಲಸೌಕರ್ಯ ಕೊರತೆ, ನೀರಿನ ಸಮಸ್ಯೆಗಳಿಂದ ಬೆಂದ ಜನರು ಬಾರಿ ಮತದಾನ ಬಹಿಷ್ಕರಿಸಲು ನಿರ್ಧರಿಸಿರುವ ಸುದ್ದಿ ಬಳ್ಳಾರಿ, ಚಿಕ್ಕೋಡಿ ಮತ್ತು ಚಾಮರಾಜನಗರದಿಂದ ವರದಿಯಾಗಿದೆ.


10.ಮೋದಿ ಹೆಸರು ಹೇಳಿಕೊಂಡು ಮತ ಕೇಳೋದ್ಯಾಕೆ?


ತಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳು ತಮ್ಮ ಕಷ್ಟಗಳಿಗೆ ಸ್ಪಂದಿಸದಿದ್ದರೆ ಜನರಿಗೆ ಆಕ್ರೋಶವಾಗುವುದು ಸಹಜ. ಬಹುತೇಕ ಜನರು ತಮ್ಮ ಅಸಮಾಧಾನವನ್ನು ನುಂಗಿಕೊಂಡು, ಮುಂಬರುವ ದಿನಗಳಲ್ಲಾದರೂ ನೂತನ ಜನಪ್ರತಿನಿಧಿ ಕೆಲಸ ಮಾಡಬಹುದೆಂಬ ಆಶಯದೊಂದಿಗೆ ಮತದಾನ ಮಾಡುತ್ತಾರೆ. ಕೆಲವರು ಮತದಾನ ಬಹಿಷ್ಕಾರ ಮಾಡಿ ತಮ್ಮ ಅಸಮಾಧಾನ ಹೊರಹಾಕುತ್ತಾರೆ. ಮೂಲಸೌಕರ್ಯ ಕೊರತೆ, ನೀರಿನ ಸಮಸ್ಯೆಗಳಿಂದ ಬೆಂದ ಜನರು ಈ ಬಾರಿ ಮತದಾನ ಬಹಿಷ್ಕರಿಸಲು ನಿರ್ಧರಿಸಿರುವ ಸುದ್ದಿ ಬಳ್ಳಾರಿ, ಚಿಕ್ಕೋಡಿ ಮತ್ತು ಚಾಮರಾಜನಗರದಿಂದ ವರದಿಯಾಗಿದೆ.
First published: April 15, 2019, 6:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading