Evening Digest: ಈ ದಿನ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R | news18
Updated:April 13, 2019, 5:40 PM IST
Evening Digest: ಈ ದಿನ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: April 13, 2019, 5:40 PM IST
  • Share this:
1. ಮಂಗಳೂರಿನಲ್ಲಿ ಮೋದಿ ಅಬ್ಬರ

ಕರಾವಳಿಯಲ್ಲಿ ಲೋಕಸಭಾ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್​ ವಂಶಾಡಳಿತದ ವಿರುದ್ಧ ಹರಿಹಾಯದ್ದರು. ಅವರದ್ದು ವಂಶೋದಯ, ನಮ್ಮದು ಅಂತ್ಯೋದಯ ಮಂತ್ರ. ವಂಶೋದಯದಿಂದ ಭ್ರಷ್ಟಾಚಾರ, ಅನ್ಯಾಯವಾಗುತ್ತದೆ. ಆದರೆ, ಅಂತ್ಯೋದಯದಿಂದ ಪಾರದರ್ಶಕತೆ, ಪ್ರಾಮಾಣಿಕತೆ ಸಾಧ್ಯ. ಅವರಲ್ಲಿ ದೊಡ್ಡವರು ಮಾತ್ರ ಪ್ರಧಾನಿಯಾಗ್ತಾರೆ. ನಮ್ಮಲ್ಲಿ ಚಾಯ್​ವಾಲಾನೂ ಪ್ರಧಾನಿಯಾಗ್ತಾನೆ. ಅವರಲ್ಲಿ ತುಷ್ಟೀಕರಣದ ರಾಜಕೀಯ. ಬುಡಕಟ್ಟು ಹೆಂಗಸಿಗೂ ಪದ್ಮಶ್ರೀ ಸಿಗುತ್ತೆ ಎಂದರೆ ಅದು ಅತ್ಯೋದಯದಿಂದ ಸಾಧ್ಯ. ಮರ ಕಾಪಾಡುವವರಿಗೂ ಪದ್ಮಶ್ರೀ ನೀಡಿದ್ದೇವೆ ಎಂದು ಸಾಲುಮರದ ತಿಮ್ಮಕ್ಕನನ್ನು ಮೋದಿ ಭಾಷಣದಲ್ಲಿ ನೆನೆದರು.

2. ಕೋಟೆ ನಾಡಿನಲ್ಲಿ ರಾಹುಲ್​ ಗುಡುಗು

ಚಿತ್ರದುರ್ಗದಲ್ಲಿ ಚುನಾವಣಾ ಪ್ರಚಾರ ನಡೆಸಿದ ಕಾಂಗ್ರೆಸ್​ ಅಧ್ಯಕ್ಷ, ನಾನು ಸುಳ್ಳು ಭರವಸೆ ನೀಡುವುದಿಲ್ಲ. ನಾವು ಹೇಳಿದಂತೆ ಆರು ಸಾವಿರ ಖಾತೆಯನ್ನು ಬಡ ಕುಟುಂಬಗಳಿಗೆ ನೀಡುವ ಮಾತಿಗೆ ನಾವು ಬದ್ದರಾಗಿದ್ದೇವೆ. ಈ ಬಗ್ಗೆ ಈಗಾಗಲೇ ಅರ್ಥಶಾಸ್ತ್ರದಲ್ಲಿ ಚರ್ಚೆ ನಡೆಸಿದ್ದೇವೆ. ಮಹಿಳೆಯರಿಗೆ 33 ರಷ್ಟು ಮೀಸಲಾತಿ ಅನುಷ್ಠಾನಗೊಳಿಸುತ್ತೇವೆ. ನಾನು ಇಲ್ಲಿಗೆ ಬಂದಿರುವುದು ಮನದ ಮಾತು ಹೇಳಲು ಅಲ್ಲ, ಮನದ ಮಾತು ಕೇಳಲು ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು

3.ನನ್ನನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ಎಂದು ನಿತೀಶ್​ ಕೇಳಿಕೊಂಡಿದ್ದರು; ರಾಬ್ರಿದೇವಿ

ನಿತೀಶ್​ ಕುಮಾರ್​ ಮತ್ತೆ ಅಧಿಕಾರಕ್ಕೆ ಮರಳಬೇಕು ಎಂದು ಬಯಸಿದ್ದರು. ಇದಕ್ಕಾಗಿ ತೇಜಸ್ವಿಯನ್ನು 2020ರಲ್ಲಿ ಸಿಎಂ ಆಗಿ ನಾನು ನೋಡಬೇಕು. ನೀವು ನನ್ನನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ಎಂದು ನನ್ನ ಬಳಿ ಹೇಳಿದ್ದಾಗಿ  ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮಾಧ್ಯಮದ ಮುಂದೆ ತಿಳಿಸಿದ್ದಾರೆ. ಆರ್​ಜೆಡಿ ಜೊತೆ ಮೈತ್ರಿ ಮುರಿದುಕೊಂಡ ಬಳಿಕ ನಿತೀಶ್​ ಕುಮಾರ್​ ಮತ್ತೆ ಮೈತ್ರಿ ಸಾಧಿಸಲು ಪ್ರಶಾಂತ್​ ಕಿಶೋರ್​ರನ್ನು ಸಂಪರ್ಕಿಸಿದ್ದರು ಎಂದು ರಾಬ್ರಿ ದೇವಿ ತಿಳಿಸಿದ್ದರು, ಆದರೆ, ಪ್ರಶಾಂತ್​ ಕಿಶೋರ್​ ಈ ಆರೋಪವನ್ನು ನಿರಾಕರಿಸಿದ್ದಾರೆ. ಮಾಧ್ಯಮಕ್ಕೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಬ್ರಿ ದೇವಿ, ಮೈತ್ರಿ ಕುರಿತು ಮಾತುಕತೆಗೆ ಬಂದಾಗ, ನಿಮ್ಮ ಮೇಲೆ ನಮಗೆ ನಂಬಿಕೆ ಇಲ್ಲ. ಹೊರ ಹೋಗಿ ಎಂದು ನಾನು ಕೇಳಿಕೊಂಡೆ. ಈ ಘಟನೆಗೆ ನಮ್ಮ ಸಿಬ್ಬಂದಿ ಹಾಗೂ ರಕ್ಷಣಾಕಾರರು ಸಾಕ್ಷಿಯಾಗಿದ್ದಾರೆ. ಇದಾದ ಬಳಿಕ ಅವರು ಐದು ಬಾರಿ ನಮ್ಮನ್ನು ಸಂಪರ್ಕಿಸಿದ್ದರು ಎಂದು ಅವರು ತಿಳಿಸಿದ್ದಾರೆ.

4. ಜಲಿಯನ್​ ವಾಲಾಬಾಗ್​ ಘಟನೆಗೆ 100 ವರ್ಷ1919ರ ಏಪ್ರಿಲ್​ 13ರಂದು ಜಲಿಯನ್​ ವಾಲಾಬಾಗ್​ನಲ್ಲಿ ಸಭೆ  ಸೇರಿದ್ದ ನೂರಾರು ಸ್ವಾತಂತ್ರ ಹೋರಾಟಗಾರರ ಮೇಲೆ ಬ್ರಿಟಿಷ್​ ಅಧಿಕಾರಿ ಜನರಲ್​ ಡಯರ್​ ಗುಂಡಿನ ದಾಳಿ ನಡೆಸಿ, ನೂರಾರು ಜನರನ್ನು ಹತ್ಯೆಗೈದ ಘಟನೆ ನಡೆದು ಇಂದಿಗೆ ನೂರು ವರ್ಷ. ಸ್ವಾತಂತ್ರ್ಯಕ್ಕಾಗಿ ಹೋರಾಡಿ  ಹುತಾತ್ಮರಾದ ಹೋರಾಟಗಾರರಿಗೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ನಮನ ಸಲ್ಲಿಸಿದ್ದಾರೆ. ಶುಕ್ರವಾರ ರಾತ್ರಿಯೇ ಪಂಜಾಬ್​ಗೆ ತೆರಳಿದ್ದ ರಾಹುಲ್​ ಗಾಂಧಿ ಇಂದು ಪಂಜಾಬ್​ ಸಿಎಂ ಅಮರಿಂದರ್​ ಸಿಂಗ್​ ಜೊತೆಗೂಡಿ ಜಲಿಯನ್​ ವಾಲಾಬಾಗ್​ ಸ್ಮಾರಕಕ್ಕೆ ತೆರಳಿ ನಮನ ಸಲ್ಲಿಸಿದ್ದರು. ಇದೇ ವೇಳೆ ಈ ಸ್ಮಾರಕಕ್ಕೆ ಆಗಮಿಸಿರುವ ಬ್ರಿಟಿಷ್​ ಹೈ ಕಮಿಷನರ್​  ಡೊಮಿನಿಕ್​ ಆ್ಯಶ್ಕ್ವಿತ್​  ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದರು.​ ಭಾರತ ಮತ್ತು ಬ್ರಿಟಿಷ್ ಸಂಬಂಧದ​ ಇತಿಹಾಸದಲ್ಲಿಯೇ ಇದೊಂದು ಹೇಯ ಕೃತ್ಯ ಎಂದು ವಿಸಿಟರ್​ ಬುಕ್​ನಲ್ಲಿ ಬರೆದಿದ್ದಾರೆ

5. ನನ್ನ ಮಾತಿಗೆ ಬದ್ದನಾಗಿದ್ದೇನೆ; ಡಿಕೆ ಶಿವಕುಮಾರ್​

ಲೋಕಸಭಾ ಚುನಾವಣೆ ಹೊತ್ತಲ್ಲಿ ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವಾಗಿ ಕಾಂಗ್ರೆಸ್​​ ನಾಯಕರ ನಡುವೇ ವಾಕ್ಸಮರ ಮುಂದುವರೆದಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಈ ಲಿಂಗಾಯತ ಧರ್ಮದ ವಿವಾದಕ್ಕೆ ಸಂಬಂಧಿಸಿದಂತೆ ಸಚಿವ ಡಿ.ಕೆ ಶಿವಕುಮಾರ್ ​​ ಕ್ಷಮೆಯಾಚಿಸಿದ್ದರು. ಲಿಂಗಾಯತ ಧರ್ಮದ ವಿಚಾರದಲ್ಲಿ ನಮ್ಮ ಸರ್ಕಾರ ದೊಡ್ಡ ತಪ್ಪು ಮಾಡಿದೆ. ಅದಕ್ಕೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದರು. ಅದೇ ಹೇಳಿಕೆ ಈಗ ಮತ್ತೆ ರಾಜಕೀಯವಾಗಿ ಮುನ್ನೆಲೆಗೆ ಬಂದಿದ್ದು, ಗೃಹ ಸಚಿವ ಎಂ.ಬಿ ಪಾಟೀಲರು ಡಿಕೆಶಿ ವಿರುದ್ಧ ಕೆಂಡಮಂಡಲರಾಗಿದ್ದಾರೆ. ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ವಿಷಯದಲ್ಲಿ ಕಾಂಗ್ರೆಸ್ ತಪ್ಪು ಮಾಡಿದೆ ಎಂಬ ಡಿಕೆಶಿ ಹೇಳಿಕೆ ಹಾಲಿ ಗೃಹ ಸಚಿವ ಎಂ.ಬಿ. ಪಾಟೀಲ್ ಅವರಿಗೆ ತೀವ್ರ ಇರಿಸು-ಮುರುಸು ಉಂಟು ಮಾಡಿದೆ. ಈ ವಿಚಾರಕ್ಕೆ ಕೆಂಡಮಂಡಲ ಆಗಿರುವ ಸಚಿವ ಎಂ.ಬಿ ಪಾಟೀಲ್​​ ಅವರು, ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

6. ಬೆಳಗಾವಿಯಲ್ಲಿ ಅಣ್ಣ-ತಮ್ಮಂದಿರ ತಂತ್ರ-ಪ್ರತಿತಂತ್ರ

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಲೆನೋವಾಗಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ತಲೆನೋವಾಗಿದ್ದರು. ಆದರೇ ರಮೇಶ ಜಾರಕಿಹೊಳಿ ಪರ್ಯಾಯವಾಗಿ ಮತ್ತೊಬ್ಬ ಸಹೋದರನನ್ನು ಸೆಳೆಯುವ ಮೂಲಕ ಶಾಕ್ ನೀಡಿದ್ದಾರೆ ಸಚಿವ ಸತೀಶ ಜಾರಕಿಹೊಳಿ. ಹೌದು ಇಂದು ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು. ಸಭೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಜತೆಗೆ ಸಹೋದರ ಲಖನ್ ಜಾರಿಹೊಳಿ ಪಾಲ್ಗೊಂಡಿದ್ದರು.  ಕಳೆದ ಒಂದು ವಾರದಿಂದ ಲಖನ್ ಜಾರಕಿಹೊಳಿ ಸೆಳೆಯಲು ಸತೀಶ್ ಪ್ಲ್ಯಾನ್ ಮಾಡಿದ್ದರು. ಇದು ಕೊನೆಗು ಯಶಸ್ವಿಯಾಗಿದ್ದು, ಇಂದು ಗೋಕಾಕ್ ನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಲಖನ್ ಜಾರಕಿಹೊಳಿ ಪಾಲ್ಗೊಂಡಿದ್ದರು. ಈ ಮೂಲಕ ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸದೆ ಪಕ್ಷದಿಂದ ಅಂತರ ಕಾಯ್ದುಕೊಂಡ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಬಿಗ್ ಶಾಕ್ ನೀಡಿದ್ದಾರೆ

7. ಪ್ರಚಾರದ ವೇಳೆಯೂ ಕೈ ನೋವಿನಿಂದ ಬಳಲುತ್ತಿರುವ ನಟ ದರ್ಶನ್

ಅಪಘಾತದಿಂದ ಕೈ ಮುರಿದುಕೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ದರ್ಶನ್​ ಕೈ ನೋವಿನಿಂದ ಇನ್ನು ಬಳಲುತ್ತಿದ್ದಾರೆ. ಪ್ರಚಾರದ ವೇಳೆಯೂ ಅವರು ಕೈಗೆ ಬ್ಯಾಂಡೇಜ್ ಹಾಕಿಕೊಂಡೆ ಪ್ರಚಾರ ನಡೆಸಿದ್ದಾರೆ. ಈ ಕುರಿತು ಮೊದಲ ಬಾರಿ ಮಾತನಾಡಿರುವ ಅವರು, ಹೌದು ಪ್ರಚಾರದ ವೇಳೆ ಕೈ ನೋವು  ಹೆಚ್ಚಾಗಿದೆ. ನೋವು ನಿವಾರಕ ಔಷಧ ತೆಗೆದುಕೊಂಡು ಪ್ರಚಾರದಲ್ಲಿ ಭಾಗಿಯಾಗುತ್ತಿದ್ದೇನೆ ಎಂದು ಹೇಳಿದ್ದಾರೆ. ಇಂಡುವಾಳು ಗ್ರಾಮದಲ್ಲಿ ಈ ಕುರಿತು ಮಾತನಾಡಿದ ಅವರು, ಇಂದಿಗೂ ಕೂಡ ನಾನು ಕೈ ನೋವಿನಿಂದ ನಾನು ಬಳಲುತ್ತಿದ್ದೇನೆ. ಆದರೂ ನಾನು ಏಪ್ರಿಲ್​ 16ರವರೆಗೆ ಸುಮಲತಾ ಪರ ಪ್ರಚಾರ ಮಾಡುತ್ತೇನೆ. ಅಲ್ಲಿವರೆಗೂ ಎಷ್ಟೇ ಕಷ್ಟ ಆದರೂ ಪ್ರಚಾರದಲ್ಲಿ ಭಾಗಿಯಾಗುತ್ತೇನೆ. ಯಮನೇ ಕರೆದ್ರೂ 16ರವರೆಗೆ ಅವಕಾಶ ಕೇಳ್ತೀನಿ ಎಂದಿದ್ದಾರೆ.

8. ಸಿದ್ದರಾಮಯ್ಯಗೆ ಬ್ಲಾಕ್​ಮೇಲ್​

ಲೋಕಸಭೆ ಚುನಾವಣೆ ಪ್ರಚಾರಕ್ಕೆ ಇನ್ನು ಮೂರು ದಿನ ದಿನ ಬಾಕಿ ಇರುವಂತೆ ಮಂಡ್ಯ ಅಖಾಡದಲ್ಲಿ ಪ್ರಚಾರ ಕಾವು ಇಂದು ಜೋರಾಗಿ ನಡೆದಿದೆ. ಇಂದು ಮಳವಳ್ಳಿಯ ದಳವಾಯಿ ಕೋಡಿಯಲ್ಲಿ ಪ್ರಚಾರ ಮಾಡಿದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್, ಜಿಲ್ಲೆಯಲ್ಲಿ ಮೋಸದ ರಾಜಕಾರಣ, ಕುತಂತ್ರ ರಾಜಕರಣ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ನಮ್ಮ ದೇಶದ ಸೈನಿಕರ ಬಗ್ಗೆ ಕೇವಲ ವಾಗಿ ಮಾತುಗಳನ್ನು ಹಾಡಿದ್ದಾರೆ. ನಿಮ್ಮ ಊರಿನ ರೈತನ ಮಗಳಾದ ಲಕ್ಷ್ಮಿ ಅಶ್ವಿನ್ ಗೆ ಮೋಸ ಮಾಡಿದ್ದಾರೆ. ಅಲ್ಲಿ ಅಧಿಕಾರ ಕೆಳದುಕೊಂಡು ಇಲ್ಲಿ ರಾಜಕೀಯ ಭವಿಷ್ಯ ಕೂಡ ಕಳೆದುಕೊಂಡಿದ್ದಾರೆ. ಬರೀ ಕುಟುಂಬ ರಾಜಕಾರಣ ಅಷ್ಟೇ. ಮೂವರು ಸಚಿವರು ಮಾಡದ ಅಭಿವೃದ್ಧಿಯನ್ನು ಈಗ ಅವರ ಮಗ ಮಾಡ್ತಾರಂತೆ. ಸ್ವಾರ್ಥ ರಾಜಕಾರಣ ಮಾಡದೆ ಇರೋ ರಾಜಕಾರಣಿ ಅಂದರೆ ಅಂಬರೀಷ್​ ಮಾತ್ರ ಎಂದು ಸುಮಲತಾ ಅವರು ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು

9. ಆರ್​ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ

ಐಪಿಎಲ್​ನಲ್ಲಿಂದು ಮೊಹಾಲಿಯಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣೆಸಾಟ ನಡೆಸಲಿದೆ. ಸತತ ಆರು ಸೋಲುಗಳಿಂದ ಕಂಗೆಟ್ಟಿರುವ ವಿರಾಟ್ ಟೀಂಗೆ ಇಂದಿನದು ಮಾಡು ಇಲ್ಲವೇ ಮಡಿ ಪಂದ್ಯ. ಬಲಿಷ್ಠ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಗೆಲುವಿನ ಲಯಕ್ಕೆ ಆರ್ಸಿಬಿ ಮರಳಬೇಕಿದೆ. ಇನ್ನು ಉಳಿದಿರುವ ಎಲ್ಲ ಪಂದ್ಯಗಳನ್ನು ಗೆದ್ದರೆ ಮಾತ್ರ ಆರ್ಸಿಬಿ ಪ್ಲೇ ಆಫ್ಗೆ ಲಗ್ಗೆಇಡುವ ಅವಕಾಶವಿದೆ.10

10. ಯುವತಿಯ ಮೇಲೆ ಅತ್ಯಾಚಾರ; ಆಸೀಸ್ ಕ್ರಿಕೆಟಿಗ ಬಂಧನ

ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ 23 ವರ್ಷ ಪ್ರಾಯದ ಅಲೆಕ್ಸ್ ಹೆಪ್ಬರ್ನ್ ಎಂಬವ ಪರಿಚಿತ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 2013 ರಿಂದ ಇಂಗ್ಲೆಂಡ್ ಕ್ರಿಕೆಟ್ ಕ್ಲಬ್ ಪರವಾಗಿ ಆಡುತ್ತಿದ್ದ ಈತ, ಅಲ್ಲೆ ಪರಿಚಿತವಾದ ಯುವತಿಯ ಫ್ಲಾಟ್ಗೆ ತೆರಳಿ ಅತ್ಯಾಚಾರ ನಡೆಸಿದ್ದಾನೆ. ಕಳೆದ ಒಂದು ವರ್ಷದಿಂದ ನಡೆದಿದ್ದ ವಿಚಾರಣೆಯಲ್ಲಿ ಅಲೆಕ್ಸ್ ಇದೀಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.
First published: April 13, 2019, 5:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading