Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R | news18
Updated:April 12, 2019, 5:59 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: April 12, 2019, 5:59 PM IST
  • Share this:
1. ದೇವೇಗೌಡರ ಕುಲದೇವರ ಮೇಲೆ ಐಟಿ ದಾಳಿ

ಚುನಾವಣೆಗೆ ದಿನಗಣನೆ ಇರುವಾಗ ರಾಜ್ಯದಲ್ಲಿ ಐಟಿ ಅಧಿಕಾರಿಗಳು ಹೆಚ್ಚು ಸಕ್ರಿಯವಾಗಿದ್ದು, ಜೆಡಿಎಸ್​ ನಾಯಕರನ್ನೇ ಉದ್ದೇಶಪೂರ್ವಕವಾಗಿ ದಾಳಿ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಬಹಿರಂಗವಾಗಿ ಆಕ್ರೋಶ ಹೊರಹಾಕುತ್ತಲೆ ಇದ್ದಾರೆ. ಅದಕ್ಕೆ ಪೂರಕ ಎಂಬಂತೆ ಇಂದು ಆದಾಯ ತೆರಿಗೆ ಅಧಿಕಾರಿಗಳು ದೇವೇಗೌಡರ ಕುಟುಂಬದ ದೇವರು ಹರದನಹಳ್ಳಿ ಈಶ್ವರ ದೇಗುಲದ ಮೇಲೆ ದಾಳಿ ನಡೆಸಿದ್ದಾರೆ. ಈಶ್ವರ ದೇವಾಲಯದ ಅರ್ಚಕ ಪ್ರಕಾಶ್ ಭಟ್ ಎಂಬುವರ ಮನೆ ಮೇಲಿನ ದಾಳಿ ಖಂಡಿಸಿರುವ ಕುಮಾರಸ್ವಾಮಿ, ಶಿವನ ಅರ್ಚಕರ ಮನೆಗೂ ಐಟಿ ದಾಳಿ ಮಾಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಐಟಿ ಇಲಾಖೆಯನ್ನು ಬಿಜೆಪಿಯ ಇಲಾಖೆ ಎಂದು ಟೀಕಿಸಿದ್ದಾರೆ. ಅಲ್ಲದೇ, ಈಶ್ವರನ ದೇವಾಲಯದ ಒಳಕ್ಕೆ ಕಾಲಿಟ್ಟಿರುವುದರಿಂದ ಬಿಜೆಪಿಯನ್ನು ಆ ಶಿವ ಈ ಚುನಾವಣೆಯಲ್ಲಿ ಧೂಳೀಪಟ ಮಾಡಲಿದ್ದಾನೆ ಎಂದು ಗುಡುಗಿದ್ದಾರೆ

2 .ಮತ್ತೆ ಮುನ್ನೆಲೆಗೆ ಬಂದ ಇವಿಎಂ ಸಾಚಾತನ

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಗಿಯುತ್ತಿದ್ದಂತೆ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ಸಾಚಾತನ ಮತ್ತು ತಾಂತ್ರಿಕ ದೋಷದ ಕುರಿತ ರಾಜಕೀಯ ಚರ್ಚೆಗಳು ಮತ್ತೊಮ್ಮೆ ಗರಿಗೆದರಿವೆ. ಮೊದಲ ಹಂತದ ಚುನಾವಣೆಯಲ್ಲಿ 16 ರಾಜ್ಯಗಳು 2 ಕೇಂದ್ರಾಡಳಿತ ಪ್ರದೇಶ ಸೇರಿದಂತೆ ದೇಶದ ಒಟ್ಟು 91 ಲೋಕಸಭಾ ಕ್ಷೇತ್ರ ಹಾಗೂ ಆಂಧ್ರಪ್ರದೇಶ, ಒಡಿಶಾ, ಅರುಣಾಚಲಪ್ರದೇಶ, ಸಿಕ್ಕಿಂ ರಾಜ್ಯಗಳ 296 ವಿಧಾನಸಭಾ ಕ್ಷೇತ್ರಗಳಿಗೆ ಏ.11 ರಂದು ಮತದಾನ ನಡೆದಿತ್ತು. ಈ ಪೈಕಿ ಆಂಧ್ರಪ್ರದೇಶ, ಮಹಾರಾಷ್ಟ್ರ, ಜಮ್ಮ-ಕಾಶ್ಮೀರದಲ್ಲಿ ಇವಿಎಂ ಯಂತ್ರ ಕೈಕೊಟ್ಟಿದೆ. ಆಂಧ್ರಪ್ರದೇಶ ಒಂದರಲ್ಲೆ ಸುಮಾರು 350ಕ್ಕೂ ಹೆಚ್ಚು ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ತಾಂತ್ರಿಕ ದೋಷದಿಂದ 150 ಮತಗಟ್ಟೆಗಳಲ್ಲಿ ಮತದಾನ ಅರ್ಧಕ್ಕೆ ಸ್ತಬ್ಧವಾಗಿದೆ. ಪರಿಣಾಮ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ಮತಗಟ್ಟೆಗಳಲ್ಲಿ ಮರುಮತದಾನ ನಡೆಸುವಂತೆ ಚುನಾವಣಾ ಆಯೋಗವವನ್ನು ಆಗ್ರಹಿಸಿದ್ದಾರೆ

3. ಮೊದಲ ಹಂತದ ಮತದಾನ; ಶೇ65ರಷ್ಟು ಮತಚಲಾವಣೆ

ಗುರುವಾರ ನಡೆದ ಮೊದಲ ಹಂತದ ಲೋಕಸಭಾ ಸಮರದಲ್ಲಿ ದೇಶದ 91 ಹಾಗೂ ಅಂಧ್ರಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ, ಒದಿಶಾ ರಾಜ್ಯಗಳ 296 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟಾರೆ ನಡೆಸಲಾದ ಚುನಾವಣೆಯಲ್ಲಿ  ಶೇ. 65 ರಷ್ಟು ಮತದಾನ ದಾಖಲಾಗಿದೆ. ದೇಶದಾದ್ಯಂತ 543 ಲೋಕಸಭಾ ಕ್ಷೇತ್ರಗಳ ಚುನಾವಣೆಯು ಏಪ್ರಿಲ್ 11 ರಿಂದ ಮೇ.19 ರ ವರೆಗೆ ಒಟ್ಟು 7 ಹಂತಗಳಲ್ಲಿ ನಡೆಯಲಿದೆ. ಈ ಪೈಕಿ ಗುರುವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ18 ರಾಜ್ಯ, 2 ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಒಟ್ಟು 91 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗಿತ್ತು.

4. ಗಂಗಾವತಿಯಲ್ಲಿ ಮೋದಿ ಗುಡುಗುಕೊಪ್ಪಳದ ಗಂಗಾವತಿಯಲ್ಲಿ ಬಿಜೆಪಿ ಸಮಾವೇಶದಲ್ಲಿ ಮೋದಿ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪುಲ್ವಾಮಾ ದಾಳಿ ಬಗ್ಗೆ ಗೊತ್ತಿತ್ತು ಎಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಬೇಜವಾಬ್ದಾರಿ ವ್ಯಕ್ತಿ. ಕುಮಾರಸ್ವಾಮಿ ಕರ್ನಾಟಕವನ್ನ  ಗೂಂಡಾ ಸಾಮ್ರಾಜ್ಯ ಮಾಡಲಯ ಹೊರಟಿದ್ದಾರೆ ಎಂದು ಗುಡುಗಿದರು. ರೈತ ಸಮೂಹಕ್ಕೆ ಸಾಲ‌ಮನ್ನಾ ಹೆಸರಿನಲ್ಲಿ ದ್ರೋಹ ಮಾಡಿದ್ದಾರೆ. ವಿರೋಧಿಗಳು ಹಣ, ಜಾತಿ, ತೋಳ್ಬಲದಿಂದ ಚುನಾವಣೆ ಗೆಲ್ಲಬಹುದು ಅನ್ಕೊಂಡಿದಾರೆ. ಅಂಥವರಿಗೆ ಈ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿ ಎಂದರು.

5.ಯಡಿಯೂರಪ್ಪಗೆ ಮತ್ತೆ ಸಂಕಷ್ಟ

ಎರಡು ವರ್ಷದ ಹಿಂದೆ ಸದ್ದು ಮಾಡಿದ್ದ ಯಡಿಯೂರಪ್ಪ ಡೈರಿ ಲೋಕಸಭಾ ಚುನಾವಣೆಯಲ್ಲೀಗ ಮತ್ತೆ ಸದ್ದು ಮಾಡಿದ್ದು, ಅವರಿಗೆ ಉರುಳಾಗಲಿದೆಯಾ ಎಂಬ ಅನುಮಾನ ಮೂಡಿದೆ. ಇದಕ್ಕೆ ಕಾರಣ ಈಶ್ವರಪ್ಪ ಆಪ್ತ ಕಾರ್ಯದರ್ಶಿಯಾಗಿದ್ದ ವಿನಯ್​. ಯಡಿಯೂರಪ್ಪ ಅವರು ಕೇಂದ್ರಕ್ಕೆ ಹಣ ಸಂದಾಯ ಮಾಡಿದ್ದಾರೆ ಎನ್ನಲಾದ ದಾಖಲೆಗಳನ್ನು ಹೊಂದಿರುವ ಸಿಡಿ ಹಾಗೂ ಪೆನ್​ ಡ್ರೈವ್​​ ನನ್ನ ಬಳಿಯಿದೆ.  ಇವನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಿದ್ದನಿದ್ದೇನೆ. ಆದರೆ ತನ್ನ ಕುಟುಂಬ ಹಾಗೂ ನನಗೆ ಜೀವ ಬೆದರಿಕೆ ಇದ್ದು, ತಮಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ ಬಳಿಕ ಮಾತನಾಡಿದ ಅವರು ಸಂತೋಷ್​ ರಿಂದ ತಮಗೆ ಜೀವ ಬೆದರಿಕೆ ಇದೆ. ಪೊಲೀಸರು ಭದ್ರತೆ ನೀಡಿದ್ರೆ ತನಿಖಾಧಿಕಾರಿ ಅಥವಾ ನ್ಯಾಯಾಲಯಕ್ಕೆ ಡೈರಿ ನೀಡಲು ತಯಾರಿದ್ದೇನೆ. ಆ ಸಾಕ್ಷ್ಯ ಬಯಲಾದ ಬಳಿಕ ನನ್ನ ಜೀವಕ್ಕೆ ಅಪಾಯ ವಿದೆ ಎಂದು ತಿಳಿಸಿದ್ದಾರೆ.

6.ಬಿಎಸ್​ವೈ ಕೂಡ ಮೂಲೆಗುಂಪಾಗಲಿದ್ದಾರೆ; ವೆಂಕಟರಾವ್​

ಲೋಕಸಭಾ ಚುನಾವಣೆಯ ನಂತರ ಎಲ್​.ಕೆ. ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿಯಂತೆ ಯಡಿಯೂರಪ್ಪನವರೂ ಸಹ ಬಿಜೆಪಿಯಲ್ಲಿ ಮೂಲೆ ಗುಂಪಾಗಲಿದ್ದಾರೆ ಎಂದು ಪಶು ಸಂಗೋಪನೆ ಹಾಗೂ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಭವಿಷ್ಯ ನುಡಿದ್ದಾರೆ.
ಇತ್ತೀಚೆಗೆ ಎಚ್​. ಡಿ. ದೇವೇಗೌಡ ಕುಟುಂಬ ರಾಜಕಾರಣದ ವಿರುದ್ಧ ಕಿಡಿ ಕಾರಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ “ಮೈತ್ರಿ ಸರ್ಕಾರ ಐಸಿಯು ನಲ್ಲಿದೆ, ಈ ಬಾರಿಯ ಚುನಾವಣೆಯಲ್ಲಿ ಅಜ್ಜ ಮೊಮ್ಮಕ್ಕಳು ಸೋಲಲಿದ್ದಾರೆ” ಎಂದು ಟಾಂಗ್ ನೀಡಿದ್ದರು.

7.ಚೆಲುವರಾಯಸ್ವಾಮಿ ಕ್ಷಮೆಯಾಚಿಸಿದ ಪುಟ್ಟರಾಜು

ಸಕ್ಕರೆ ನಾಡಿನಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿಗೆ ಕಾಂಗ್ರೆಸ್​ ಅತೃಪ್ತ ನಾಯಕರು ಬೆಂಬಲ ನೀಡದಿರಲು ಕಾರಣ ಏನು?  ಹೈ ಕಮಾಂಡ್​ ಒತ್ತಡಕ್ಕೂ ಮಣಿಯದೆ ಕಾಂಗ್ರೆಸ್​ ನಾಯಕರು ಯಾಕೆ ಪಟ್ಟು ಹಿಡಿದಿದ್ದರೆ?  ಸಿದ್ದರಾಮಯ್ಯ ಮನವೊಲಿಕೆಗೂ ಮಂಡ್ಯ ರೆಬೆಲ್ಸ್​ ನಾಯಕರು ಬಗ್ಗದಿರುವುದಕ್ಕೆ ಕಾರಣ, ಸಚಿವ ಸಿಎಸ್​ ಪುಟ್ಟರಾಜುನಾ ಎಂಬ ಅನುಮಾನ ಮೂಡಿದೆ. ಇದಕ್ಕೆ ಕಾರಣ ಇಂದು ನಾಗಮಂಗಲದ ಜಂಟಿ ನಾಯಕರ ಸಮಾವೇಶದಲ್ಲಿ ನಡೆದ ಘಟನೆ. ಮಳವಳ್ಳಿಯಲ್ಲಿ ನಿಖಿಲ್​ ಕುಮಾರಸ್ವಾಮಿ ಪರ ಪ್ರಚಾರ ನಡೆಸುತ್ತಿದ್ದ ಸಚಿವ ಸಿಎಸ್​ ಪುಟ್ಟರಾಜು, ಎಕಾಏಕಿ ನಾಗಮಂಗಲದಲ್ಲಿ ನಡೆಯುತ್ತಿದ್ದ ಮೈತ್ರಿ ನಾಯಕರ ಸಮಾವೇಶಕ್ಕೆ ತೆರಳಿ  ವೇದಿಕೆ ಮೇಲೆ ನಿಂತು ಚೆಲುವರಾಯಸ್ವಾಮಿ ಪರ ಕ್ಷಮೆ ಯಾಚಿಸಿದ್ದಾರೆ. "ನಾನು ವಾಡಿಕೆಯಂತೆ ಆಡಿದ ಕೆಲವು ಮಾತುಗಳಿಂದ ಚಲುವರಾಯಸ್ವಾಮಿ ಬೇಸರಗೊಂಡಿದ್ದಾರೆ. ನನ್ನ ಮಾತಿನಿಂದ ಬೇಸರವಾಗಿದ್ದರೆ, ಅವರಿಗೆ ನಾನು ಕ್ಷಮೆ ಕೇಳುತ್ತೇನೆ.  ಮುಂದೆ ಅವರಿಗೆ ಯಾವುದೇ ಅಸಮಾಧಾನವಾಗದಂತೆ ನೋಡಿಕೊಳ್ಳುತ್ತೇನೆ. ಮುಂದೆಯಾದರೂ ನಮ್ಮೊಂದಿಗೆ ಜೊತೆಯಿರಿ ಎಂದು ಕೈ ಜೋಡಿಸಿ ಮನವಿ ಮಾಡಿಕೊಳ್ಳುತ್ತೇನೆ" ಎಂದು ವಿನಂತಿ ಮಾಡಿಕೊಂಡರು. ಇದಾದ ಬಳಿಕ ಅವರು ಮತ್ತೆ ಮಳವಳ್ಳಿಗೆ ತೆಳಿ ಮೊಟಕುಗೊಳಿಸಿದ ಚುನಾವಣಾ ಪ್ರಚಾರಕ್ಕೆ ಮುಂದಾದರು

8.ರಾಜ್​ಕುಮಾರ್​ 13ನೇ ವರ್ಷದ ಪುಣ್ಯ ತಿಥಿ

ಇವತ್ತು ನಟಸಾರ್ವಭೌಮ ಡಾ. ರಾಜ್​ಕುಮಾರ್ ಅವರ 13ನೇ ವರ್ಷದ ಪುಣ್ಯತಿಥಿ. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಡಾ. ರಾಜ್ ಸ್ಮಾರಕಕ್ಕೆ ಭೇಟಿ ಕೊಡಲಿದ್ದಾರೆ. ತಮ್ಮ ನೆಚ್ಚಿನ ನಟನನ್ನು ಮತ್ತೆ ಸ್ಮರಿಸಿಕೊಂಡು, ಕೈ ಮುಗಿದು ಪುಷ್ಪನಮನ ಸಲ್ಲಿಸುತ್ತಿದ್ದಾರೆ. ಕನ್ನಡ, ಕರ್ನಾಟಕ, ಕನ್ನಡ ಸಿನಿಮಾ ಅಂದಾಕ್ಷಣ ನೆನಪಿಗೆ ಬರುವ ಮೊದಲ ಹೆಸರು, ಕಣ್ಣಮುಂದೆ ಬರುವ ಮೊದಲ ಚಿತ್ರ ಡಾ. ರಾಜ್​ ಅವರದ್ದು . ಅಷ್ಟರ ಮಟ್ಟಿಗೆ ತಮ್ಮ ನಟನೆ, ಸರಳ ವ್ಯಕ್ತಿತ್ವ, ನಾಡು-ನುಡಿ-ಜಲದ ಬಗೆಗಿನ ಕಾಳಜಿಯ ಮೂಲಕ ಅಣ್ಣಾವ್ರು ಎಲ್ಲರ ಮನಗಳಲ್ಲಿ ನೆಲೆಸಿದ್ದಾರೆ. ಇಂತಹ ಮೇರು ನಟ ನಮ್ಮಿಂದ ದೂರಾಗಿ ಇವತ್ತಿಗೆ 13 ವರ್ಷ. ಪ್ರತಿ ವರ್ಷದಂತೆ ಈ ಬಾರಿಯೂ ಬೇರೆ ಬೇರೆ ಜಿಲ್ಲೆಗಳಿಂದ, ದೂರದ ಊರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಅಣ್ಣಾವ್ರ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ನಮನ ಸಲ್ಲಿಸಲಿದ್ದಾರೆ.

9.ಕುಂದಗೋಳ ಉಪಚುನಾವಣೆಗೆ ಟಿಕೆಟ್​ಗೆ ಪೈಪೋಟಿ

ಕುಂದಗೋಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿಯವರು ಮಾರ್ಚ್ 22ರಂದು ಅಕಾಲಿಕ ನಿಧನ ಹೊಂದಿದ್ದರಿಂದ ಕ್ಷೇತ್ರದಲ್ಲಿ ಉಪ ಚುನಾವಣೆ ಘೋಷಣೆಯಾಗಿದೆ. ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಮತ್ತು ಕುಟುಂಬಸ್ಥರಲ್ಲಿ ಸಿ.ಎಸ್. ಶಿವಳ್ಳಿಯವರ ಸಾವಿನ ಆಘಾತ ಇನ್ನೂ ಮಾಸಿಲ್ಲ. ಮೇ 19 ರಂದು ಕ್ಷೇತ್ರದಲ್ಲಿ ಮತದಾನ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದೆ. ಲೋಕಸಭೆ ಚುನಾವಣೆ ಕಾವಿನ ಮಧ್ಯೆಯೇ ಕುಂದಗೋಳ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿರುವುದರಿಂದ ರಾಜಕೀಯ ಚಟುವಟಿಕೆಗಳು ಸಹಜವಾಗಿಯೇ ಮತ್ತಷ್ಟು ತುರುಸುಗೊಂಡಿವೆ. ಕುಂದಗೋಳ ಕ್ಷೇತ್ರದಲ್ಲಿ ಯಾರನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಡಬೇಕು ಅನ್ನೋ ವಿಚಾರ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ

10.ಐಪಿಎಲ್​​​ನಲ್ಲಿಂದು ಕೋಲ್ಕತ್ತಾ-ಡೆಲ್ಲಿ ಮುಖಾಮುಖಿ

ಐಪಿಎಲ್​​ನಲ್ಲಿಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕೋಲ್ಕತ್ತಾ ನೈಡ್ ರೈಡರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣೆಸಾಟ ನಡೆಸಲಿದೆ. ಈಗಾಗಲೇ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಕಾರ್ತಿಕ್ ಪಡೆ ಬಲಿಷ್ಠವಾಗಿದ್ದು, ಆರನೇ ಸ್ಥಾನದಲ್ಲಿರುವ ಡೆಲ್ಲಿ ಯಾವರೀತಿ ಪ್ರದರ್ಶನ ತೋರಲಿದೆ ಎಂಬುದು ಕುತೂಹಲ ಕೆರಳಿಸಿದೆ.
First published:April 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ