Dharwad: ಅಪ್ಪು ಅಭಿಮಾನಿಯಿಂದ ವಿನೂತ ಸಾಹಸ : ಧಾರವಾಡದಿಂದ ಪುನೀತ್ ಸಮಾಧಿವರೆಗೆ ಓಡುತ್ತ ನೇತ್ರ ದಾನ, ರಕ್ತದಾನ ಜಾಗೃತಿ

Puneeth Fans Work: ಇನ್ನು ಇವರ ಸಾಹಸಕ್ಕೆ ಪತಿ ಉಮೇಶ ಪಾಟೀಲ್ ಸಾಥ್ ನೀಡಿದ್ದು, ಅವರೊಂದಿಗೆ ವಾಹನದೊಂದಿಗೆ ಕುಟುಂಬ ಸಮೇತರಾಗಿ ಹೋಗುತ್ತಿದ್ದಾರೆ. ವಾಹನದಲ್ಲಿ ಮೂರು ಮಕ್ಕಳು ಹಾಗೂ ತಾಯಿ ಸಹ ಇದ್ದಾರೆ. ಇನ್ನು ಈಗಾಗಲೇ ಕ್ರೀಡಾ ಚಟುವಟಿಕೆ ಮೂಲಕ ತನ್ನ ಪ್ರತಿಭೆ ಪ್ರದರ್ಶಿಸಿ, ಊರಿಗೆ ಕೀರ್ತಿ ತಂದಿರೋ ಈ ಮಹಿಳೆಗೆ ಗ್ರಾಮಸ್ಥರು ಕೂಡ ಸಾಥ್ ನೀಡಿದ್ದಾರೆ.

ಅಪ್ಪು ಅಭಿಮಾನಿ ದಾಕ್ಷಾಯಿಣಿ

ಅಪ್ಪು ಅಭಿಮಾನಿ ದಾಕ್ಷಾಯಿಣಿ

  • Share this:
 ಪವರ್ ಸ್ಟಾರ್ ಪುನೀತ್ ರಾಜಕುಮಾರ(Power Star Puneeth Rajkuar) ನಿಧನರಾಗಿ ಒಂದು ತಿಂಗಳು ಕಳೆದಿದೆ. ಒಂದು ತಿಂಗಳು ಕಳೆದರೂ ಇನ್ನು ಕೂಡ ಎಲ್ಲರ ಮನಸ್ಸಿನಲ್ಲಿ ಅವರನ್ನು ಕಳೆದುಕೊಂಡು ನೋವು ಕೊಂಚವೂ ಕಡಿಮೆಯಾಗಿಲ್ಲ. ಇದೇ ಕಾರಣಕ್ಕೆ ಅವರ ಅಭಿಮಾನಿಗಳು ಅನೇಕ ಸಮಾಜಮುಖಿ ಕಾರ್ಯಗಳಿಗೆ ಮುಂದಾಗಿದ್ದು, ಧಾರವಾಡದಲ್ಲೊಬ್ಬ ಗೃಹಿಣಿ ಪುನೀತ್ ಸಮಾಧಿ ದರ್ಶನಕ್ಕೆ ವಿಶೇಷವಾಗಿ ತೆರಳಿದ್ದಾರೆ.  ಹೀಗೆ ತೆರಳುವಾಗ ಆ ಮಹಿಳೆ ದಾರಿಯುದ್ದಕ್ಕೂ ನೇತ್ರದಾನ, ದೇಹದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಿದ್ದಾರೆ. ಹೌದು ದ್ರಾಕ್ಷಾಯಿಣಿ ಪಟೀಲ ಎಂಬ ಮಹುಳೆಯೇ ಅಪ್ಪು ಸಮಾಧಿನವರೆಗೆ ಓಡುತ್ತ ಜಾಗೃತಿ ಮೂಡಿಸುತ್ತ ಹೊರಟ ಮಹಿಳೆ.

ಪುನೀತ್ ರಾಜಕುಮಾರ ನಮ್ಮನ್ನಗಲಿ ಇಂದಿಗೆ ಬರೋಬ್ಬರಿ ಒಂದು ತಿಂಗಳು ಕಳೆದಿದೆ. ಅಪಾರ ಅಭಿಮಾನಿ ಸಮೂಹ ಹೊಂದಿದ್ದ ಪುನೀತ್ ಗೆ ಎಲ್ಲ ಬಗೆಯ ಅಭಿಮಾನಿಗಳಿದ್ದರು. ಅಂಥ ನಟನನ್ನು ಕಳೆದುಕೊಂಡ ನೋವಿನಲ್ಲಿಯೂ ಅನೇಕ ಅಭಿಮಾನಿಗಳು ಹಲವಾರು ಜನಪರ ಕಾರ್ಯಗಳನ್ನು ಮಾಡುತ್ತಿದ್ದಾರೆ. ಆ ಪೈಕಿ ಧಾರವಾಡದ ಈ ಮಹಿಳೆ ವಿಭಿನ್ನ ಜಾಗೃತಿಯೊಂದರ ಮೂಲಕ ಅವರ ಸಮಾಧಿ ಸ್ಥಳಕ್ಕೆ ಹೋಗುತ್ತಿದ್ದಾರೆ. ಹೌದು ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ 30 ವರ್ಷದ ದ್ರಾಕ್ಷಾಯಿಣಿ ಪಾಟೀಲ್ ಎಂಬ ಮಹಿಳೆ. ಈ ಮಹಿಳೆಗೆ ಮೊದಲಿನಿಂದಲೂ ಪುನೀತ್ ಅಂದರೆ ಪಂಚಪ್ರಾಣ.

ಯಾರಿದು ದಾಕ್ಷಾಯಿಣಿ? 

ಮೂರು ಮಕ್ಕಳ ತಾಯಿಯಾಗಿರೋ ದಾಕ್ಷಾಯಿಣಿ ಹೈಸ್ಕೂಲು, ಕಾಲೇಜು ದಿನಗಳಲ್ಲಿ ಒಳ್ಳೆಯ ಓಟಗಾರ್ತಿ. ಮದುವೆಯಾದ ಬಳಿಕ ಸಂಸಾರದ ಜಂಜಡದಲ್ಲಿ ಸಿಲುಕಿ, ಸಾಧನೆ ಅಲ್ಲಿಗೆ ನಿಂತು ಬಿಟ್ಟಿತು. ಆದರೆ ಮೂರು ಮಕ್ಕಳ ತಾಯಿಯಾಗಿರೋ ಆಕೆ ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ತಮ್ಮ ಮನಗುಂಡಿ ಗ್ರಾಮದಿಂದ ಬೆಂಗಳೂರಿನಲ್ಲಿನ ಪುನಿತ್ ಸಮಾಧಿವರೆಗೆ ಓಡುತ್ತಲೇ ಹೋಗಲಿರೋ ಆಕೆ, ಆ ಮೂಲಕ ತನ್ನ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: ಹಾಸನಕ್ಕಾಗಿ ಪ್ರಧಾನಿಯನ್ನೇ ಭೇಟಿ ಮಾಡಿ ಬಂದ್ರಾ ದೇವೇಗೌಡ್ರು? ಅವರ ಡಿಮ್ಯಾಂಡ್ ಕೇಳಿ ಜನ ಫುಲ್ ಖುಷ್!

ನಾನು ಐದನೇ ತರಗತಿಯಲ್ಲಿದ್ದಾನಿಂದ‌ ಅಪ್ಪು ಅಂದ್ರೆ‌ ಪಂಚಪ್ರಾಣ. ಅವರ ಸಾವಿನ ಸುದ್ದಿ ತಿಳಿದು ಆಘಾತವಾಯಿತು. ಆಗ ಅಪ್ಪು ಅವರು ಮೃತಪಟ್ಟ ದಿನವೇ ಅವರ ದರ್ಶಕ್ಕೆ ಹೋಗಬೇಕೆಂದು ಅಂದುಕೊಂಡೆ‌ ಆದ್ರೆ ಕಾರಣಾಂತರಗಳಿಂದ ಹೋಗಲು ಆಗಲಿಲ್ಲ. ಆದ್ರೆ ಅವರನ್ನು ಕಾಣದೆ ಇದ್ದರು ಸಹ ಅವರದ್ದೆ ಗಾದಿಯಲ್ಲಿ ಸಾಗಬೇಕೆಂದು ಹಾಗೂ ಅವರ ಸಮಾಧಿಗೆ ಓಡುತ್ತ ಸಾಗಬೆಕೆಂದು ತೀರ್ಮಾನ ಮಾಡಿದೆ. ಅದಕ್ಕೆ‌ ನನ್ನ‌ ಕುಟುಂಬದ ಸದಸ್ಯರು ಬೆಂಬಲ‌ ನೀಡಿದರು. ಆದ್ದರಿಂದ ನಾನು  ಓಟವನ್ನು ಆರಂಭಿಸಿರೋ ನಾನು ಒಟ್ಟು 13 ದಿನಗಳಲ್ಲಿ ಬೆಂಗಳೂರು ತಲುಪುತ್ತೇನೆ ಎಂದು ಅಪ್ಪು ಅಭಿಮಾನಿ ದ್ರಾಕ್ಷಾಯಿಣಿ ಹೇಳುತ್ತಾರೆ.

ದಾಕ್ಷಾಯಣಿ ಅಪ್ಪು ಅವರ ಅಪ್ಪಟ ಅಭಿಮಾನಿ. ಆದರೂ ಮುಖಾಮುಖಿಯಾಗಿ ಒಮ್ಮೆಯೂ ಅವರನ್ನು ನೋಡಲು ಆಗಿರಲಿಲ್ಲವಂತೆ. ಆದರೆ ಇದೀಗ ಅವರೇ ಇಲ್ಲ. ಹೀಗಾಗಿ ಅವರ ಸಮಾಧಿ ದರ್ಶನಕ್ಕೆ ಸುಮ್ಮನೆ ಹೋಗುವ ಬದಲಿಗೆ ಅವರದ್ದೇ ಆದರ್ಶಗಳ ಬಗ್ಗೆ ಜಾಗೃತಿ ಮೂಡಿಸುತ್ತಾ ಸಾಗಿದರೆ ಒಳ್ಳೆಯದು ಅನ್ನೋ ಕಾರಣಕ್ಕೆ ಇಂಥದ್ದೊಂದು ಅಭಿಯಾನ ಆರಂಭಿಸಿದ್ದಾರೆ. ನಿತ್ಯ ಸುಮಾರು 40 ಕಿಮೀ. ಓಡುವ ಗುರಿ ಹೊಂದಿರೋ ದ್ರಾಕ್ಷಾಯಣಿ ಅವರು ದಾರಿ ಮಧ್ಯೆ ನೇತ್ರದಾನ, ರಕ್ತದಾನ, ದೇಹದಾನಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಿದ್ದಾರೆ.

ದಾಕ್ಷಾಯಿಣಿ ಸಾಹಸಕ್ಕೆ ಪತಿ ಸಾಥ್

ಇನ್ನು ಇವರ ಸಾಹಸಕ್ಕೆ ಪತಿ ಉಮೇಶ ಪಾಟೀಲ್ ಸಾಥ್ ನೀಡಿದ್ದು, ಅವರೊಂದಿಗೆ ವಾಹನದೊಂದಿಗೆ ಕುಟುಂಬ ಸಮೇತರಾಗಿ ಹೋಗುತ್ತಿದ್ದಾರೆ. ವಾಹನದಲ್ಲಿ ಮೂರು ಮಕ್ಕಳು ಹಾಗೂ ತಾಯಿ ಸಹ ಇದ್ದಾರೆ. ಇನ್ನು ಈಗಾಗಲೇ ಕ್ರೀಡಾ ಚಟುವಟಿಕೆ ಮೂಲಕ ತನ್ನ ಪ್ರತಿಭೆ ಪ್ರದರ್ಶಿಸಿ, ಊರಿಗೆ ಕೀರ್ತಿ ತಂದಿರೋ ಈ ಮಹಿಳೆಗೆ ಗ್ರಾಮಸ್ಥರು ಕೂಡ ಸಾಥ್ ನೀಡಿದ್ದಾರೆ. ಈ ಅಭಿಯಾನಕ್ಕೆ ಬೇಕಾಗೋ ಎಲ್ಲ ರೀತಿಯ ಸಹಾಯವನ್ನು ಗ್ರಾಮಸ್ಥರೇ ಮಾಡಿದ್ದಾರೆ.

ದಾರಿ ಮಧ್ಯೆ ಎಲ್ಲಿ ಅವಕಾಶ ಸಿಗುತ್ತದೋ ಅಲ್ಲಿಯೇ ಉಳಿದುಕೊಂಡು ಮತ್ತೆ ಹಗಲು ಹೊತ್ತಿನಲ್ಲಿ ಓಡಲು ಶುರು ಮಾಡಲು ದ್ರಾಕ್ಷಾಯಿಣಿ ನಿರ್ಧರಿಸಿದ್ದಾರೆ. 13 ದಿನಗಳ ಬಳಿಕ ಅಪ್ಪುನ ಸಮಾಧಿಗೆ ತಲುಪಿದ ವೇಳೆಗೆ ಅಪ್ಪು ಕುಟುಂಬಸ್ಥರನ್ನು ಭೇಟಿಯಾಗೋ ಇಚ್ಛೆ ಕೂಡ ಈ ಕುಟುಂಬಕ್ಕೆ ಇದೆ.

ಇದನ್ನೂ ಓದಿ: ಗಾಜನೂರಲ್ಲಿ ಹುಟ್ಟಿ ಬೆಳದವನಿಗೆ… ಜನಪದರ ಹಾಡಾದ ಪುನೀತ್ ರಾಜಕುಮಾರ್

ಒಟ್ಟಿನಲ್ಲಿ ಅಪ್ಪು ಜನರ ಮನಸ್ಸಿನಲ್ಲಿ ಅಜರಾಮರ. ಅವರನ್ನು ಜನರು ಮರೆಯಲು ಸಾಧ್ಯವೇ ಇಲ್ಲ ಅನ್ನೋದಕ್ಕೆ ಈ ಮಹಿಳೆಯೇ ಸಾಕ್ಷಿ. ಇಂಥದ್ದೊಂದು ಸಾಹಸಕ್ಕೆ ಕೈ ಹಾಕಿರೋ ದ್ರಾಕ್ಷಾಯಿಣಿ ಅವರ ದಾರಿ ಸುಗಮವಾಗಲಿ ಅಂತಾ ಹಾರೈಸೋಣ.

ವರದಿ: ಮಂಜುನಾಥ ಯಡಳ್ಳಿ
Published by:Sandhya M
First published: