news18-kannada Updated:January 2, 2021, 7:27 AM IST
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್
ಕೊಡಗು (ಜನವರಿ. 02): ಇತರೆ ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯಡಿ 314 ಕ್ಲೇಮುಗಳಿಗೆ ಅರಣ್ಯ ಹಕ್ಕು ಪತ್ರ ನೀಡಲು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅನುಮೋದನೆ ನೀಡಿದ್ದಾರೆ. ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪುನರ್ ಪರಿಶೀಲಿಸಲು ಸಲ್ಲಿಕೆಯಾಗಿದ್ದ 314 ಅರ್ಜಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಅನುಮೋದನೆ ನೀಡಿದ್ದಾರೆ. ಉಪ ವಿಭಾಗೀಯ ಮಟ್ಟದ ಅರಣ್ಯ ಹಕ್ಕು ಸಮಿತಿಯಲ್ಲಿ 23 ಪರಿಶಿಷ್ಟ ಪಂಗಡ ಮತ್ತು 291 ಇತರೆ ವೈಯಕ್ತಿಕ ಪರಿಹಾರಗಳನ್ನು ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ಮರು ಪರಿಶೀಲಿಸಿ ಅನುಮೋದನೆ ನೀಡಲು ನಿರ್ಧರಿಸಲಾಗಿದೆ. ಇತರೆ ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯಡಿ ಇದೇ ಪ್ರಪ್ರಥಮ ಬಾರಿಗೆ 314 ಅರ್ಜಿಗಳಿಗೆ ಅರಣ್ಯ ಹಕ್ಕು ಪತ್ರ ನೀಡುತ್ತಿರುವುದು ವಿಶೇಷ.
ಅರಣ್ಯ ಹಕ್ಕು ಪತ್ರ ಸಂಬಂಧಿಸಿದಂತೆ ಇತರೆ ಬಾಕಿ ಇರುವ ಅರ್ಜಿಗಳನ್ನು ಪರಿಶೀಲಿಸಿ ಜಿಲ್ಲಾ ಅರಣ್ಯ ಸಮಿತಿಗೆ ಮಾಹಿತಿ ಒದಗಿಸಬೇಕು. ಈಗಾಗಲೇ ಅನುಮೋದನೆ ನೀಡಲಾಗಿರುವ ಅರಣ್ಯಹಕ್ಕು ಅರ್ಜಿಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮವಹಿಸುವಂತೆ ಐಟಿಡಿಪಿ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಈಗಾಗಲೇ ಅರಣ್ಯ ಹಕ್ಕು ಕಾಯ್ದೆಯಡಿ ಪರಿಶಿಷ್ಟ ಪಂಗಡದ 2,806 ಅರ್ಜಿಗಳು ಸಲ್ಲಿಸಿಕೆ ಆಗಿವೆ. ಹಾಗೆಯೇ ಇತರೆ ಜನಾಂಗದ 1,185 ಜನರುು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇದರಲ್ಲಿ 1,739 ಪರಿಶಿಷ್ಟ ಪಂಗಡದವರ ಅರ್ಜಿಗಳು ಅನುಮೋದನೆಗೊಂಡು ಹಕ್ಕು ಪತ್ರ ನೀಡಲಾಗಿದೆ. ಉಳಿದಂತೆ 1,067 ಅರ್ಜಿಗಳು ತಿರಸ್ಕøತಗೊಂಡಿವೆ ಎಂದು ಸಮಿತಿ ತಿಳಿಸಿದೆ.
ಪರಿಶಿಷ್ಟ ಪಂಗಡದ 690 ಅರ್ಜಿಗಳನ್ನು ಪುನರ್ ಪರಿಶೀಲಿಸಲಾಗಿದೆ ಮತ್ತು ಇತರೆ ವರ್ಗದ 1,185 ಅರ್ಜಿಗಳನ್ನು ಪುನರ್ ಪರಿಶೀಲಿಸಲಾಗಿದೆ ಎಂದು ಐಟಿಡಿಪಿ ಇಲಾಖಾ ಅಧಿಕಾರಿ ಸಿ.ಶಿವಕುಮಾರ್ ಅವರು ಸಭೆಯಲ್ಲಿ ಮಾಹಿತಿ ನೀಡಿದರು.
ಪುನರ್ ಪರಿಶೀಲಿಸಿ ಅಂಗೀಕರಿಸಿದ ಅರ್ಜಿಗಳಿಗೆ ಸಂಬಂಧಿಸಿದಂತೆ ಪರಿಶಿಷ್ಟ ಪಂಗಡದ 162, ಇತರೆ ಜನಾಂಗದ 271 ಅರ್ಜಿಗಳನ್ನು ಪುನರ್ ಪರಿಶೀಲಿಸಿ ಬಳಿಕ ಹಕ್ಕುಪತ್ರ ನೀಡಲು ಅರ್ಜಿಗಳನ್ನು ಅಂಗೀಕರಿಸಲಾಯಿತು. ಪರಿಶಿಷ್ಟ ಪಂಗಡದ 405 ಮತ್ತು ಇತರೆ ವರ್ಗದ 111 ಒಟ್ಟು 516 ಅರ್ಜಿಗಳು ಪುನರ್ ಪರಿಶೀಲನೆಗೆ ಬಾಕಿ ಇದೆ ಎಂದು ಐಟಿಡಿಪಿ ಇಲಾಖಾ ಅಧಿಕಾರಿ ಅವರು ಮಾಹಿತಿ ನೀಡಿದರು.
ಇದನ್ನೂ ಓದಿ :
ಬೆಳಗಾವಿಯಲ್ಲಿ ಮತ್ತೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಧ್ವಜಾರೋಹಣ
ಸೋಮವಾರಪೇಟೆ ತಾಲ್ಲೂಕಿನ ಬೇಳೂರು ಗ್ರಾ.ಪಂ.ವ್ಯಾಪ್ತಿಯ ಬಜೆಗುಂಡಿ ಹಾಡಿಯ ಪರಿಶಿಷ್ಟ ಪಂಗಡದ ನಾಲ್ಕು ಹಾಗೂ ಇತರೆ 286 ಸಮುದಾಯಗಳ ಹಾಗೂ 7 ನೇ ಹೊಸಕೋಟೆ ಗ್ರಾ.ಪಂ.ಯ ಬಿದ್ರಳ್ಳ ಹಾಡಿಯ ಇತರೆ ಸಮುದಾಯದಡಿ 5, ಹಾಗೆಯೇ ವಿರಾಜಪೇಟೆ ತಾಲ್ಲೂಕಿನ ಕೆ.ಬಾಡಗ ಗ್ರಾ.ಪಂ.ವ್ಯಾಪ್ತಿಯ ಬಾಳೆಕೋವು ಮಾರನಕೊಲ್ಲಿ ಹಾಡಿಯ 7 ಪರಿಶಿಷ್ಟ ಪಂಗಡ, ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ಮಜ್ಜಿಗೆಹಳ್ಳ ಫಾರ್ಮ್ ಹಾಡಿಯ 1,
ಬೊಂಬುಕಾಡು ಹಾಡಿಯ 3, ನಾಲ್ಕೇರಿ ಗ್ರಾ.ಪಂ.ಯ ಬೊಮ್ಮಾಡು ಹಾಡಿ 5, ಚೆನ್ನಯ್ಯನಕೋಟೆ ಗ್ರಾ.ಪಂ. ದಿಡ್ಡಳ್ಳಿ ಹಾಡಿಯ 1 ಮತ್ತು ದಯ್ಯದಹಡ್ಲು 2, ಒಟ್ಟು ಪರಿಶಿಷ್ಟ ಪಂಗಡದ 23 ಮತ್ತು ಇತರೆ 291 ಸೇರಿದಂತೆ 314 ಕ್ಲೇಮುಗಳಿಗೆ ಅರಣ್ಯ ಹಕ್ಕು ಪತ್ರ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
Published by:
G Hareeshkumar
First published:
January 2, 2021, 7:27 AM IST