ಸಾಮಾಜಿಕ ನ್ಯಾಯದ ಆಧಾರದ ಮೇಲೆ ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡಿ - ಸೋನಿಯಾಗೆ ಪತ್ರ ಬರೆದ ಪರಮೇಶ್ವರ್

ಬೆಳಗಾವಿ ಕರ್ನಾಟಕದ ಪ್ರತಿನಿಧಿಯಾಗಿ ಎಸ್ ಆರ್ ಪಾಟೀಲ್ ಇದ್ದಾರೆ. ಹಿಂದುಳಿದ ವರ್ಗ ಮತ್ತು ಮೈಸೂರು ಭಾಗದಲ್ಲಿ ಸಿದ್ಧರಾಮಯ್ಯ ಇದ್ದಾರೆ. ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದರೆ ಬೆಂಗಳೂರು ಭಾಗದವರಾಗುತ್ತಾರೆ ಎಂದು ಹೇಳಿದ್ದಾರೆ.

 ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಡಿಸಿಎಂ ಜಿ ಪರಮೇಶ್ವರ್​

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಡಿಸಿಎಂ ಜಿ ಪರಮೇಶ್ವರ್​

  • Share this:
ಬೆಂಗಳೂರು(ಜ.20) : ರಾಜ್ಯದಲ್ಲಿ ಪಕ್ಷವನ್ನ ಪುನರ್ ಸಂಘಟಿಸಬೇಕಿದೆ. ಹೀಗಾಗಿ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಶೀಘ್ರವೇ ಕೆಪಿಸಿಸಿ ಅಧ್ಯಕ್ಷರನ್ನ ನೇಮಕ ಮಾಡಿ ಎಂದು ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿಯವರಿಗೆ ಇಮೇಲ್​​​​​ ಮೂಲಕ ಪತ್ರ ಬರೆದು ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್​​ ಮನವಿ ಮಾಡಿದ್ದಾರೆ.

ಇಮೇಲ್ ಮೂಲಕ ಮನವಿ ಮಾಡಿರುವ ಡಿಸಿಎಂ ಜಿ ಪರಮೇಶ್ವರ್​​ ಅವರು, ಬೆಳಗಾವಿ ಕರ್ನಾಟಕದ ಪ್ರತಿನಿಧಿಯಾಗಿ ಎಸ್ ಆರ್ ಪಾಟೀಲ್ ಇದ್ದಾರೆ. ಹಿಂದುಳಿದ ವರ್ಗ ಮತ್ತು ಮೈಸೂರು ಭಾಗದಲ್ಲಿ ಸಿದ್ಧರಾಮಯ್ಯ ಇದ್ದಾರೆ. ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದರೆ ಬೆಂಗಳೂರು ಭಾಗದವರಾಗುತ್ತಾರೆ ಎಂದು ತಿಳಿಸಿದ್ದಾರೆ.

ಕೆಪಿಸಿಸಿ ಕಾರ್ಯಧ್ಯಕ್ಷರಾಗಿ ಈಶ್ವರ್ ಖಂಡ್ರೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕದ ಬಗ್ಗೆ ಗೊಂದಲ ಬೇಡ ಎಂದು ಮಾಜಿ ಸಚಿವ ಎಂ‌ ಬಿ ಪಾಟೀಲ ಬೆನ್ನಿಗೆ ನಿಂತಿರುವ ಸಿದ್ದರಾಮಯ್ಯ ಅವರಿಗೆ ಪರಮೇಶ್ವರ್ ತಿರುಗೇಟು ನೀಡಿದ್ದಾರೆ.

ಈಗ ಕೆಪಿಸಿಸಿಗೆ ನಾಲ್ಕು ಕಾರ್ಯಾಧ್ಯಕ್ಷರ ನೇಮಕದ ಅವಶ್ಯಕತೆ ಇಲ್ಲ. ಆದರೆ, ಕೆಪಿಸಿಸಿ ಅಧ್ಯಕ್ಷರನ್ನ ನೇಮಕ ಮಾಡಿ. ಅದು ಜಾತಿ ಆಧಾರದ ಮೇಲೆ ಅಧ್ಯಕ್ಷರ ನೇಮಕ ಬೇಡ ಎಂದು ಪರಮೇಶ್ವರ್ ತಿಳಿಸಿದ್ದಾರೆ ಎನ್ನಲಾಗಿದೆ.

ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿ. ಪರಮೇಶ್ವರ್​,  ನಮ್ಮ ನಿವಾಸದಲ್ಲಿ ನಡೆದ ಹಿರಿಯ ಸಭೆಯ ವಿಚಾರವನ್ನ ಉಸ್ತುವಾರಿಗೆ ತಿಳಿಸಿದ್ದೆ ಅವರು ಸೋನಿಯಾರವರಿಗೆ ಮಾಹಿತಿ ನೀಡಿದ್ದಾರೆ. ಹಾಗಾಗಿ ನಾನು ಪ್ರತ್ಯೇಕ ಇಮೇಲ್​​​ ಮಾಡಿಲ್ಲ. ದಿನೇಶ ಗುಂಡೂರಾವ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದ್ದರಿಂದ  ಅವರು ಪಕ್ಷದ ಕಚೇರಿಯತ್ತ ಹೋಗುತ್ತಿಲ್ಲ. ಹಾಗಾಗಿ ಕೂಡಲೇ ಹೊಸಬರನ್ನಾದರೂ ಮಾಡಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರುತ್ತೆ ಹಾಗಾಗಿ ಪಕ್ಷ ಸಂಘಟಿಸಬೇಕಿದೆ ಆದ್ರಿಂದ ಕೂಡಲೇ ಅಧ್ಯಕ್ಷರ ನೇಮಕ‌ಮಾಡಿ ಡಿಕೆಶಿ ಅಧ್ಯಕ್ಷರಾಗ್ತಾರೆ. ಎಂ ಬಿ ಪಾಟೀಲ ಅಧ್ಯಕ್ಷರಾಗ್ತಾರೆ ಅನ್ನೋ ಮಾತಿದೆ ಯಾರೇ ಆಗಲಿ ಬೇಗ ಮಾಡಿ ಎಂದು ಹೇಳಿದ್ದಾರೆ

ಸಿಎಂ ಬಿಎಸ್ ವೈ ದಾವೋಸ್ ಭೇಟಿ ವಿಚಾರ, ಸಾಕಷ್ಟು ಬಂಡವಾಳವನ್ನ ರಾಜ್ಯಕ್ಕೆ ತರಬಹುದು. ಬಂಡವಾಳ ಹೂಡಿಕೆದಾರರ ಮನವೊಲಿಸಿ ಬಂಡವಾಳ ಹರಿದುಬರುವಂತೆ ಮಾಡಲಿ. ಸದ್ಯದ ದೇಶದಲ್ಲಿನ ಪರಿಸ್ಥಿತಿ ನೋಡಿದ್ರೆ ಬಂಡವಾಳ ಹೂಡಿಕೆ ಕಷ್ಟವಾಗಬಹುದು. ಸಿಎಎ ಮತ್ತು ಆರ್ಥಿಕ ಹಿಂಜರಿತ ಹಿನ್ಬಲೆಯಲ್ಲಿ ಬಂಡವಾಳ ಹೂಡಿಕೆ ಮಾಡಲು ಕಷ್ಟವಾಗಬಹುದು ಆದರೂ ಸಿಎಂ ಯಾವ ರೀತಿ ಮನವೊಲಿಸುತ್ತಾರೆ ಅನ್ನೋದು ಮುಖ್ಯ ಎಂದರು.

ಇದನ್ನೂ ಓದಿ : ಬಾದಾಮಿಯ ನೆರೆ ಪೀಡಿತ ಗ್ರಾಮವನ್ನು ದತ್ತು ಪಡೆದ ಥರ್ಡ್​ ಕ್ಲಾಸ್​​ ಚಿತ್ರ ತಂಡ

ಸಂಪುಟ ವಿಸ್ತರಣೆ ವಿಚಾರ, ನಮ್ಮ ಪಕ್ಷ ಬಿಟ್ಟು ಆ ಪಕ್ಷಕ್ಕೆ ಹೋಗಿ ಗೆದ್ದಿದ್ದಾರೆ. ಅವರಿಗೆ ಮಂತ್ರಿ ಮಾಡ್ತಿವಿ ಅಂದಿದ್ದಾರೆ. ಮಾಡಬೇಕಲ್ಲಾ. ಬಿಜೆಪಿಯವರಿಗೆ ಮಾಡುತ್ತಾರೆ ಬಿಡ್ತಾರೆ ಗೊತ್ತಿಲ್ಲ.‌ ಇವರನ್ನ ಮಂತ್ರಿ ಮಾಡಬೇಕು ಎಂದರು

ಉಪ ಚುನಾವಣೆಗೆ ಮುನ್ನ ಪಕ್ಷದಲ್ಲಿ ಮೂಡಿದ್ದ ವಲಸಿಗ ಹಾಗೂ ಮೂಲ ಕಾಂಗ್ರೆಸ್​ನಾಯಕರ ನಡುವಿನ ತಿಕ್ಕಾಟ ಪಕ್ಷದ ಸೋಲಿಗೆ ಕಾರಣವೂ ಆಗಿತ್ತು. ಅಧಿಕಾರ, ಪಕ್ಷದ ಚುಕ್ಕಾಣಿಗಾಗಿ ನಾಯಕರ ನಡುವೆ ಮೂಡಿದ ಪ್ರತಿಷ್ಟೆ, ಹಿರಿ-ಕಿರಿ ನಾಯಕರ ಆಂತರಿಕ ಸಂಘರ್ಷಗಳು ಕೂಡ ಉಪಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣವಾಗಿತ್ತು.
First published: