ಭ್ರಷ್ಟಾಚಾರ ನಿಗ್ರಹ ದಳ (Anti Corruption Bureau – ACB) ರದ್ದುಗೊಳಿಸಿ ಹೈಕೋರ್ಟ್ (highcourt) ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ಗೆ(Supreme Court) ಮೇಲ್ಮನವಿ ಸಲ್ಲಿಸಿದೆ. ಈ ಬಗ್ಗೆ ಕರ್ನಾಟಕ ಸರ್ಕಾರ (Karnataka Government) ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಚುನಾವಣೆ ವೇಳೆ ಎಸಿಬಿ ರದ್ದುಪಡಿಸುವ ಬಗ್ಗೆ ಬಿಜೆಪಿ (BJP) ಹೇಳಿತ್ತು. ಆದ್ರೆ ಈಗ ಎಸಿಬಿ ರದ್ದುಪಡಿಸುವ ಆದೇಶದ ವಿರುದ್ಧವೇ ಹೋರಾಟ ಬಿಜೆಪಿ ಸರ್ಕಾರ ಮುಂದಾಗಿದ್ದು, ಅಚ್ಚರಿಗೆ ಕಾರಣವಾಗಿದೆ. ಎಸಿಬಿ ರದ್ದುಪಡಿಸುವ ಬಗ್ಗೆ ಚುನಾವಣೆ ಪ್ರಣಾಳಿಕೆಯಲ್ಲೂ (Election Manifesto) ಬಿಜೆಪಿ ಹೇಳಿಕೊಂಡಿತ್ತು. ಈಗ ಎಸಿಬಿ ರದ್ದುಪಡಿಸುವ ಆದೇಶದ ವಿರುದ್ಧವೇ ಸುಪ್ರೀಂ ಮೊರೆ ಹೋಗುವ ಮೂಲಕ ಬಿಜೆಪಿ ಉಲ್ಟಾ ಹೊಡೆದಿದೆ.
ಏನಿದು ACB ವಿವಾದ?
ಎಸಿಬಿ ರಚನೆಗೆ ಲೋಕಾಯುಕ್ತದಿಂದ ವಿರೋಧವಿದೆ. ಕಾನೂನಿನ ಮಾನ್ಯತೆ ಇಲ್ಲ ಎಂದು ವಾದವಿದೆ. ಎಸಿಬಿ ರಚನೆಯನ್ನು ರದ್ದುಗೊಳಿಸಬೇಕು ಎಂದು ಲೋಕಾಯುಕ್ತ ನ್ಯಾಯಾಲಯದ ಮೊರೆ ಹೋಗಿತ್ತು. ಎಸಿಬಿಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಹಲವು ಅರ್ಜಿಗಳು ಸಹ ಸಲ್ಲಿಕೆ ಅಗಿದ್ದವು.
ಎಸಿಬಿಯಲ್ಲಿ ಕಾರ್ಯಾಂಗದ ಹಸ್ತಕ್ಷೇಪವಿದೆ. ಎಸಿಬಿ ಅಧಿಕಾರಿಗಳ ಮೇಲೆ ಸರ್ಕಾರದ ಹಿಡಿತವಿದೆ. ಕಲಂ 14 ಹಾಗೂ 21ಕ್ಕೆ ವಿರುದ್ಧವಾಗಿ ರಚನೆಯಾಗಿದೆ. ಸರ್ಕಾರ, ಗೃಹ ಇಲಾಖೆ ನಿಯಂತ್ರಿಸುತ್ತದೆ ಎಂಬ ಆರೋಪಗಳಿವೆ.
ಇದನ್ನೂ ಓದಿ: Madikeri Chalo: ಕಾಂಗ್ರೆಸ್ ಪ್ಲ್ಯಾನ್‌ಗೆ ಬಿಜೆಪಿ ಠಕ್ಕರ್; ಕೊಡಗಿನಲ್ಲಿ ನಾಳೆಯಿಂದ 4 ದಿನ ನಿಷೇಧಾಜ್ಞೆ
ಏನಿದು ಎಸಿಬಿ?
ಭ್ರಷ್ಟಾಚಾರ ನಿಗ್ರಹ ದಳದ ಒಂದು ವಿಶೇಷ ಸಂಸ್ಥೆಯಾಗಿದೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಗುಪ್ತ ಮಾಹಿತಿ ಸಂಗ್ರಹ ಮಾಡಲಾಗುತ್ತದೆ. ಸರ್ಕಾರಿ ಅಧಿಕಾರಿಗಳ ಕೆಲಸದ ಮೇಲೆ ನಿಗಾ ಇರಿಸಿ, ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸುವಂತೆ ಕ್ರಮಕೈಗೊಳ್ಳುತ್ತದೆ.
ಭ್ರಷ್ಟಾಚಾರದ ದೂರುಗಳು ಬಂದ್ರೆ ಅಂತಹ ಅಧಿಕಾರಿಗಳ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗುತ್ತದೆ. ಭ್ರಷ್ಟರ ವಿರುದ್ಧ ತನಿಖೆ ನಡೆಸಿ ವರದಿ ಕೊಡುತ್ತದೆ. ಡಿಜಿಪಿ ದರ್ಜೆಯ ಹಿರಿಯ ಐಪಿಎಸ್ ಅಧಿಕಾರಿ ನಿರ್ದೇಶಕರಾಗಿರುತ್ತಾರೆ. ಎಡಿಜಿಪಿಗೆ ಆಡಳಿತಾತ್ಮಕ ಹಾಗೂ ಇತರ ವಿಷಯಗಳಲ್ಲಿ ಸಹಕಾರ ನೀಡಲಾಗುತ್ತದೆ. ಐಜಿಪಿ ಹುದ್ದೆಯ ಅಧಿಕಾರಿಯ ಸಲಹೆ, ಸೂಚನೆ ನೀಡುತ್ತಾರೆ
ದಾಳಿಗಷ್ಟೇ ಸೀಮಿತವಾಯ್ತಾ ಎಸಿಬಿ?
ಪ್ರತಿವರ್ಷ 250 - 300 ಕೇಸ್ ದಾಖಲು ಆಗುತ್ತದೆ. ಆರು ವರ್ಷಗಳಲ್ಲಿ 2121 ಪ್ರಕರಣ ದಾಖಲಾಗಿವೆ. ಶಿಕ್ಷೆಯಾಗಿರುವುದು ಕೇವಲ 22 ಕೇಸಲ್ಲಿ ಮಾತ್ರ ಎಂಬುವುದು ಅಚ್ಚರಿಯ ವಿಷಯ. ಎಸಿಬಿ ಸ್ಥಾಪನೆಯಾದ ಬಳಿಕ ಈವರೆಗೆ 2,121 ಕೇಸ್ ದಾಖಲಾಗಿದ್ದು. 99 ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಸಲಾಗಿದೆ.
ಸೂಕ್ತ ಸಾಕ್ಷ್ಯಗಳಿಲ್ಲದೆ 39 ಪ್ರಕರಣಗಳಲ್ಲಿ ಖುಲಾಸೆಯಾಗಿವೆ. 9 ಆರೋಪಿಗಳು ಪ್ರಕರಣದಿಂದ ಆರೋಪ ಮುಕ್ತರಾಗಿವೆ. ಕೋರ್ಟ್ನಲ್ಲಿ 70 ಪ್ರಕರಣಗಳು ಇತ್ಯರ್ಥವಾಗಿವೆ.
ನ್ಯಾ. ಸಂದೇಶ್ ಹೇಳಿದ್ದೇನು?
ಎಸಿಬಿಯನ್ನ ಭ್ರಷ್ಟಾಚಾರ ತಡೆಯುವ ಉದ್ದೇಶದಿಂದ ಸ್ಥಾಪಿಸಲಾಗಿದೆಯೇ? ಎಸಿಬಿಯನ್ನ ಭ್ರಷ್ಟರ ರಕ್ಷಣೆಗೆ ಸ್ಥಾಪಿಸಲಾಗಿದೆಯೇ? ನಿಜಕ್ಕೂ ಇದು ನಾಚಿಕೆಗೇಡಿನ ಸಂಗತಿ ಎಸಿಬಿಗೆ ನ್ಯಾ. H.P. ಸಂದೇಶ್ ಚಾಟಿ ಬೀಸಿದ್ದರು.
ಕೇಸ್ ಹೇಗೆ ದಾಖಲಾಗುತ್ತೆ?
ಎಸಿಬಿಯಲ್ಲಿ ಭ್ರಷ್ಟಾಚಾರ ನಿಗ್ರಹ ಅಧಿನಿಯಮ 1988ರ ಅಡಿ ಕೇಸ್ ದಾಖಲಾಗುತ್ತದೆ. ಸಾರ್ವಜನಿಕರು, ಸರ್ಕಾರ, ಲೋಕಾಯುಕ್ತದಿಂದ ದೂರು ಬಂದರೆ ತನಿಖೆ ನಡೆಸಲಾಗುತ್ತದೆ. ಎಫ್ಐಆರ್ ದಾಖಲಿಸಿ ರೇಡ್ ಮಾಡಿ, ತನಿಖೆ ನಡೆಸಲಾಗುತ್ತದೆ. ನಂತರ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಲಾಗುತ್ತದೆ.
ಎಸಿಬಿ 7 ವಲಯಗಳು
ಕೇಂದ್ರ ವಲಯ, ದಕ್ಷಿಣ ವಲಯ, ಪೂರ್ವ ವಲಯ, ಪಶ್ಚಿಮ ವಲಯ, ಉತ್ತರ ವಲಯ, ಈಶಾನ್ಯ ವಲಯ, ಬಳ್ಳಾರಿ ವಲಯ
ಇದನ್ನೂ ಓದಿ: Siddaramaiah: ಮನೆಯಲ್ಲಿ ಏನಾದ್ರೂ ತಿನ್ನಿ, ದೇವಸ್ಥಾನಕ್ಕೆ ಹೋಗುವಾಗ ಶಿಷ್ಟಾಚಾರ ಪಾಲಿಸಿ: ಪ್ರತಾಪ್ ಸಿಂಹ
ACB/ಲೋಕಾಯುಕ್ತ.. ಯಾವುದು ಪ್ರಬಲ?
ACBಯಲ್ಲಿ ದಾಖಲಾದ ಕೇಸ್-1,814
ACBಯಲ್ಲಿ ಇತ್ಯರ್ಥವಾದ ಕೇಸ್-10
ACBಯಲ್ಲಿ ಶಿಕ್ಷೆ ಪ್ರಮಾಣ - ಶೇ.0.55
ಲೋಕಾಯುಕ್ತದಲ್ಲಿ ದಾಖಲಾದ ಕೇಸ್-4,680
ಲೋಕಾಯುಕ್ತದಲ್ಲಿ ಇತ್ಯರ್ಥವಾದ ಕೇಸ್-878
ಲೋಕಾಯುಕ್ತದಲ್ಲಿ ಶಿಕ್ಷೆ ಪ್ರಮಾಣ - ಶೇ.19
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ