ಕೊಡಗು (ಆ. 6): ನಾನೇ ಬೆಳೆಸಿದ ಬೇತಾಳದಿಂದ ನನಗೆ ಸಚಿವ ಸ್ಥಾನ ಕೈ ತಪ್ಪಿ ಹೋಯಿತು. ನನಗೆ ಮಂತ್ರಿ ಸ್ಥಾನ ತಪ್ಪಲು ಕಾರಣ ಹಲವು ವರ್ಷಗಳಿಂದ ನನ್ನ ಬೆನ್ನಿಗೆ ಬಿದ್ದ ಬೇತಾಳ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಕೊಡಗಿನ ಜನ ಪ್ರತಿನಿಧಿಯೊಬ್ಬರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದು ನಾನೇ ಬೆಳೆಸಿದ ಬೇತಾಳ, ಬೇತಾಳವನ್ನು ಬೆಳೆಸಬಾರದಿತ್ತು ಎನ್ನೋದು ನನಗೆ ಗೊತ್ತಿರಲಿಲ್ಲ. ಈಗ ನಾನು ಬೆಳೆಸಿದ ಬೇತಾಳವೇ ನನ್ನ ತಲೆಗೆ ಹೊಡೆಯುತ್ತಿದೆ ಎಂದು ಸಿಟ್ಟು ಹೊರ ಹಾಕಿದ್ದಾರೆ. ನನಗೆ ಸಚಿವ ಸ್ಥಾನಸಿ ಗುವುದು ಖಚಿತ ಅಂತ ಹೈಕಮಾಂಡ್ ನ ಮೂವರಿಂದ ಕರೆ ಬಂದಿತ್ತು. ಆದರೆ, ಸಚಿವಸ್ಥಾನ ಪಡೆಯುವವರ ಪಟ್ಟಿ ಬೆಂಗಳೂರಿಗೆ ಬಂದು ಅಲ್ಲಿಂದ ವಿಧಾನಸೌಧ ತಲುಪುವಷ್ಟರಲ್ಲಿ ಎಲ್ಲವೂ ಕೈತಪ್ಪಿಹೋಯಿತು ಎಂದಿದ್ದಾರೆ.
ಹೈಕಮಾಂಡ್ ಕೂಡ ಈ ಬಾರಿ ಸಚಿವ ಸಂಪುಟ ಪುನರ್ ರಚನೆ ಸಂದರ್ಭ ಪ್ರತೀ ಜಿಲ್ಲಾವಾರು ಮತ್ತು ಜಾತಿವಾರು ಸಾಮಾಜಿಕ ನ್ಯಾಯ ಒದಗಿಸುವುದಾಗಿ ಹೇಳಿತ್ತು. ಆದರೆ ಅದನ್ನು ಸಂಪೂರ್ಣ ಉಲ್ಲಂಘನೆ ಮಾಡಲಾಗಿದೆ. ಬೆಂಗಳೂರಿಗೆ ಎಂಟು ಸ್ಥಾನ, ಮಂಗಳೂರಿಗೆ ಮೂರು ಸ್ಥಾನ, ಬೆಳಗಾವಿಗೆ 5 ಸ್ಥಾನ ಮತ್ತು ಶಿವಮೊಗ್ಗಕ್ಕೆ ಮೂರು ಸಚಿವ ಸ್ಥಾನಗಳನ್ನು ನೀಡಲಾಗಿದೆ. ಆದರೆ, ಕೊಡಗನ್ನು ಲಘುವಾಗಿ ಪರಿಗಣಿಸಲಾಗಿದೆ. ಹೀಗಾಗಿಯೇ ಕೊಡಗನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ಸಂಸದರು ಕೂಡ ಈ ಕುರಿತು ಹೈಕಮಾಂಡ್ ಜೊತೆಗೆ ಮಾತನಾಡಬಹುದಿತ್ತು. ಜಿಲ್ಲೆಯಲ್ಲಿ ಐದು ಬಾರಿ ಎಂಎಲ್ಎ ಆಗಿರುವವರು, ನಾಲ್ಕು ಬಾರಿ ಶಾಸಕರಾಗಿ ಗೆದ್ದಿರುವವರೂ ಇದ್ದಾರೆ. ಯಾರಿಗಾದರೂ ಒಬ್ಬರಿಗಾದರೂ ಸಚಿವ ಸ್ಥಾನ ನೀಡುವಂತೆ ಹೇಳಬಹುದಿತ್ತು. ಆದರೆ, ಅವರು ಕೂಡ ಸುಮ್ಮನಾಗಿಬಿಟ್ಟರು. ನಾವು ಜಿಲ್ಲೆಯಲ್ಲಿ ಸಂಸದರಿಗೆ 80 ಸಾವಿರ ಮತಗಳ ಲೀಡ್ ಮೂಲಕ ಗೆಲ್ಲಿಸಿದೆವು. ಆದರೆ ಅವರು ಯಾಕೆ ಮೌನ ವಹಿಸಿದರು ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧವೂ ಬೇಸರ ಹೊರ ಹಾಕಿದರು.
ಇದನ್ನು ಓದಿ: 2022ರಲ್ಲಿ ಮಕ್ಕಳಿಗೆ ಸಿಗಲಿದೆ Covovax ಲಸಿಕೆ, ಅಕ್ಟೋಬರ್ನಿಂದ ವಯಸ್ಕರಿಗೆ ಲಭ್ಯ; ಅದಾರ್ ಪೂನವಾಲಾ
ರಾಜ್ಯದಲ್ಲಿ ನಡೆದಿರುವ 8 ಚುನಾವಣೆಗಳಲ್ಲಿ ಬಿಜೆಪಿ 7 ಬಾರಿ ಸೋತಿದೆ. ಆದರೆ ಮಡಿಕೇರಿಯಲ್ಲಿ ಬಹುಮತದ ಮೂಲಕ ನಾವು ಬಿಜೆಪಿಯನ್ನು ಗೆಲ್ಲಿಸಿದೆವು. ಹಾಗಾದರೆ ಬಿಜೆಪಿಯನ್ನು ಇಷ್ಟೊಂದು ದೊಡ್ಡ ರೀತಿಯಲ್ಲಿ ಗೆಲ್ಲಿಸಿದ್ದೇ ತಪ್ಪಾಗಿ ಹೋಯಿತಾ ಎಂದು ಇದೇ ವೇಳೆ ಪ್ರಶ್ನಿಸಿದರು.
ಸಚಿವ ಸಂಪುಟದಲ್ಲಿ ಜಿಲ್ಲೆಯನ್ನು ಕಡೆಗಣಿಸಿರುವುದಕ್ಕೆ ನನಗೂ ಜಿಲ್ಲೆಯ ಜನರಿಗೂ ಸಾಕಷ್ಟು ಬೇಸರವಾಗಿದೆ. ಇನ್ನು ಹದಿನೈದು ದಿನಗಳ ಬಿಟ್ಟು ನೋಡೋಣ ಎಂದು ರಾಜ್ಯ ನಾಯಕರು ಹೇಳಿದ್ದಾರೆ. ಕಾದು ನೋಡೋತ್ತೇನೆ ಕಾಲ ಇನ್ನೂ ಮಿಂಚಿ ಹೋಗಿಲ್ಲ. ಇದು ಹೀಗೆ ಮುಂದುವರಿದರೆ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿಗೆ ಸಾಕಷ್ಟು ನಷ್ಟವಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಒಟ್ಟಿನಲ್ಲಿ ಸಚಿವಸ್ಥಾನ ಕೈತಪ್ಪಿದ ಬಳಿಕ ನಾಲ್ಕು ದಿನಗಳಿಂದ ಮೌನವಹಿಸಿದ್ದ ಶಾಸಕ ಅಪ್ಪಚ್ಚು ರಂಜನ್ ಅಸಮಾಧಾನ ಹೊರಹಾಕಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ