ಬೆಂಗಳೂರು (ಜೂ 23): ಬೆಂಗಳೂರಲ್ಲಿ ಅಪಾರ್ಟ್ಮೆಂಟ್ಗಳ (Apartments) ಸಂಖ್ಯೆ ಕಡಿಮೆ ಇಲ್ಲ. ಜನರೆಲ್ಲಾ ಅಪಾರ್ಟ್ಮೆಂಟ್ಗಳ ಮೊರೆ ಹೋಗೋದು ಅಲ್ಲಿ ವಾಸಿಸಲು ಭದ್ರತೆ (Security) ಹಾಗೂ ಒಳ್ಳೆ ವ್ಯವಸ್ಥೆ ಇರುತ್ತದೆ ಎಂದು. ಆದ್ರೆ ಇಲ್ಲೊಂದು ಅಪಾರ್ಟ್ಮೆಂಟ್ನಲ್ಲಿ ವಿಚಿತ್ರ ಕೇಸ್ ನಡೆದಿದೆ. ಅಪಾರ್ಟ್ಮೆಂಟ್ನಲ್ಲಿ ಇಲಿಗಳ (Rat) ಕಾಟಕ್ಕೆ ಅಪಾರ್ಟ್ಮೆಂಟ್ ನಿವಾಸಿ ಬೇಸತ್ತಿದ್ದಾರೆ. ಆರ್ ಟಿ ನಗರದ (R.T Nagar) ಅಪಾರ್ಟ್ಮೆಂಟ್ ಒಂದರಲ್ಲಿ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಕಾರನ್ನು ಇಲಿ ಕಚ್ಚಿದೆ. ಇಲಿ ಕಾಟಕ್ಕೆ ಬೇಸತ್ತ ಮಾಲೀಕರು 5 ಲಕ್ಷ ಪರಿಹಾರ ಕೇಳಿ ರಂಪಾಟ ಮಾಡಿದ್ದಾರೆ. ಅಪಾಟ್ಮೆಂಟ್ ಮುಂಭಾಗ ಕಸ (Garbage) ಸುರಿದ ಪರಿಣಾಮ ಕಾರಿನ ವೈರ್ಅನ್ನು ಇಲಿ ಕಚ್ಚಿದೆ ಎಂದು ಕಾರ್ ಮಾಲೀಕ ರಂಪಾಟ ಮಾಡಿದ್ದಾನೆ. ಕಾರ್ ಮಾಲೀಕನ ರಂಪಾಟಕ್ಕೆ ಬೇಸತ್ತು ಸದ್ಯ ಅಪಾರ್ಟ್ಮೆಂಟ್ ನಿವಾಸಿಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಕಾರಿನ ವೈಯರ್ ಕಚ್ಚಿದ ಇಲಿಗಳು
ಆರ್ ಟಿ ನಗರದ ಗಂಗಾನಗರದಲ್ಲಿರುವ ಕಂಫರ್ಟ್ ಎನ್ ಕ್ಲೇವ್ ಅಪಾರ್ಟ್ ಮೆಂಟ್ನಲ್ಲಿ ಘಟನೆ ನಡೆದಿದೆ. ಅಪಾರ್ಟ್ಮೆಂಟ್ ನಿವಾಸಿ ಲಕ್ಷ್ಮಿನಾರಾಯಣ್ ರಂಪಾಟ ನಡೆಸಿದವರು. ಲಕ್ಷ್ಮಿನಾರಾಯಣ್ ಅವರ ಕಾರಿನ ವೈರ್ ಗಳನ್ನು ಇಲಿಗಳು ಕಚ್ಚಿದಕ್ಕೆ ಅವರು ಪರಿಹಾರ ಕೇಳಿದ್ದಾರೆ. ಪರಿಹಾರ ಕೊಡಲ್ಲಾ ಎಂದಿದ್ದಕ್ಕೆ ಅಪಾರ್ಟ್ ಮೆಂಟ್ ಅಸೋಸಿಯೇಷನ್ ಅಧ್ಯಕ್ಷರಿಗೆ ಕೊಲೆ ಬೆದರಿಕೆ ಹಾಕಿದ್ದಾನೆ.
ಅಪಾರ್ಟ್ಮೆಂಟ್ ನಿವಾಸಿಗಳ ದೂರು
ಜೊತೆಗೆ ಆತ ಅಪಾರ್ಟ್ಮೆಂಟ್ ಮುಂಭಾಗ ಕಸ ಸುರಿದು ರಂಪಾಟ ಮಾಡಿದ್ದಾನೆ. ರಂಪಾಟದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಾರ್ಟ್ಮೆಂಟ್ ವಾಸಿಗಳು ಬೆದರಿಕೆಯಿಂದ ಬೇಸತ್ತಿದ್ದು, ಅಪಾರ್ಟ್ ಮೆಂಟ್ ನಿವಾಸಿಯೊಬ್ಬರು ಲಕ್ಷ್ಮಿನಾರಾಯಣ್ ವಿರುದ್ದ ದೂರು ನೀಡಿದ್ಧಾರೆ.
ಇದನ್ನೂ ಓದಿ: Super Cop: ಜಸ್ಟ್ 6 ಗಂಟೆಗಳಷ್ಟೇ, ಬರೋಬ್ಬರಿ 2 ಲಕ್ಷ ರೂ. ದಂಡ ವಸೂಲಿ ಮಾಡಿದ ಸೂಪರ್ ಕಾಪ್
ಲಕ್ಷ್ಮಿನಾರಾಯಣ್ ವಿರುದ್ದ FIR
ಪೊಲೀಸರು ಲಕ್ಷ್ಮೀ ನಾರಾಯಣ್ ವಿರುದ್ದ FIR ದಾಖಲಿಸಿದ್ದಾರೆ. ಇವರ ಇನೋವಾ ಕಾರ್ನ ವೈಯರ್ ಇಲಿ ಕಚ್ಚಿ ತುಂಡರಿಸಿತ್ತು. ಇದರಿಂದ ಕಾರ್ ವೈರಿಂಗ್ ಮಾಡಿಸಲು ಪರಿಹಾರ ನೀಡುವಂತೆ ಮಾಲೀಕ ಡಿಮ್ಯಾಂಡ್ ಮಾಡಿ ಟಾರ್ಚರ್ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸ್ಕೂಟರ್ ಬೀಳಿಸಿದ್ದಕ್ಕೆ ಹಿಗ್ಗಾಮುಗ್ಗಾ ಥಳಿತ- ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
ಬೆಂಗಳೂರು : ಸ್ಕೂಟರ್ ಬೀಳಿಸಿದ್ದಕ್ಕೆ ಸೆಕ್ಯೂರಿಟಿಗೆ ಹಿಗ್ಗಾಮುಗ್ಗಾ ಥಳಿಸಿ ಆತನ ಸಾವಿಗೆ ಕಾರಣನಾದ ಡೆಲಿವರಿ ಬಾಯ್ನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾರ್ತಿಕ್ (25) ಬಂಧಿತ ಆರೋಪಿ, ಕುಮಾರ್ ನಾಯ್ಕ್ (45) ಮೃತ ದುರ್ದೈವಿ.
ಜೂ.12 ರಂದು ಕೊಡಿಗೆಹಳ್ಳಿ ಗೇಟ್ ಸಮೀಪದ ಗೋದ್ರೇಜ್ ಅಪಾರ್ಟ್ಮೆಂಟ್ಗೆ ಬಂದಿದ್ದ ಡೆಲಿವರಿ ಬಾಯ್ ಕಾರ್ತಿಕ್, ಅಡ್ಡಾದಿಡ್ಡಿ ಸ್ಕೂಟರ್ ಪಾರ್ಕ್ ಮಾಡಿದ್ದ.
ಇದನ್ನೂ ಓದಿ: Textbook Row: ಪಠ್ಯ ಪರಿಷ್ಕರಣೆ ವಿವಾದ; ಹೌದು ಇದೆಲ್ಲಾ ಸೇರಿಸಿದ್ದೇವೆ ಏನೀಗ ಎಂದ ಸಚಿವ ಆರ್.ಅಶೋಕ್
ಸ್ಥಳದಲ್ಲಿದ್ದ ಸೆಕ್ಯೂರಿಟಿ ಕುಮಾರ್ ನಾಯ್ಕ್ ತಾವೇ ಸ್ಕೂಟರ್ ಅನ್ನು ಸರಿಯಾಗಿ ಪಾರ್ಕ್ ಮಾಡಲು ತೆಗೆದಿದ್ದಾರೆ. ಈ ವೇಳೆ, ನಿಯಂತ್ರಣ ತಪ್ಪಿ ಆರೋಪಿಯ ಸ್ಕೂಟರ್ ಬಿದ್ದಿದೆ. ಅಷ್ಟಕ್ಕೆ ರೊಚ್ಚಿಗೆದ್ದ ಕಾರ್ತಿಕ್, ಸೆಕ್ಯೂರಿಟಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಿಗ್ಗಾಮುಗ್ಗಾ ಥಳಿಸಿದ್ದಾನೆ.
9 ದಿನಗಳ ಬಳಿಕ ಚಿಕಿತ್ಸೆ ಫಲಿಸದೇ ಸಾವು
ತೀವ್ರವಾಗಿ ಗಾಯಗೊಂಡಿದ್ದ ಕುಮಾರ್ ನಾಯ್ಕ್ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ 9 ದಿನಗಳ ಬಳಿಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಘಟನಾ ದಿನ ಆರೋಪಿಯನ್ನ ವಶಕ್ಕೆ ಪಡೆದಿದ್ದ ಅಮೃತಹಳ್ಳಿ ಪೊಲೀಸರು, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಡಾ.ಅನೂಪ್ ಎ ಶೆಟ್ಟಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ