• Home
 • »
 • News
 • »
 • state
 • »
 • KMF: ಹಾಲು,‌ ಮೊಸರು ದರ ಮಾತ್ರವಲ್ಲ, ಕೆಎಂಎಫ್​ನ ಎಲ್ಲ ಪ್ರಾಡೆಕ್ಟ್ ದರ ಏರಿಕೆ!

KMF: ಹಾಲು,‌ ಮೊಸರು ದರ ಮಾತ್ರವಲ್ಲ, ಕೆಎಂಎಫ್​ನ ಎಲ್ಲ ಪ್ರಾಡೆಕ್ಟ್ ದರ ಏರಿಕೆ!

 ಹೌದು ನಿನ್ನೆ ಹಾಲು, ಮೊಸರಿನ ದರವನ್ನು ಲೀಟರ್ ಗೆ ಎರಡು ರೂಪಾಯಿ ಹೆಚ್ಚಳ ಮಾಡಿ ಕೆಎಂಎಫ್ ಅಧಿಕೃತ ಘೋಷಣೆ ಮಾಡಿತು‌. ಆದ್ರೆ ಅಧಿಕೃತ ಘೋಷಣೆ ಮಾಡದೇ ಕೆಎಂಫ್ ನ ಎಲ್ಲ ಉತ್ಪನ್ನಗಳ ದರ ಹೆಚ್ಚಳವನ್ನು ಸೈಲೆಂಟಾಗಿ ಮಾಡುತ್ತಿದೆ.

 ಹೌದು ನಿನ್ನೆ ಹಾಲು, ಮೊಸರಿನ ದರವನ್ನು ಲೀಟರ್ ಗೆ ಎರಡು ರೂಪಾಯಿ ಹೆಚ್ಚಳ ಮಾಡಿ ಕೆಎಂಎಫ್ ಅಧಿಕೃತ ಘೋಷಣೆ ಮಾಡಿತು‌. ಆದ್ರೆ ಅಧಿಕೃತ ಘೋಷಣೆ ಮಾಡದೇ ಕೆಎಂಫ್ ನ ಎಲ್ಲ ಉತ್ಪನ್ನಗಳ ದರ ಹೆಚ್ಚಳವನ್ನು ಸೈಲೆಂಟಾಗಿ ಮಾಡುತ್ತಿದೆ.

 ಹೌದು ನಿನ್ನೆ ಹಾಲು, ಮೊಸರಿನ ದರವನ್ನು ಲೀಟರ್ ಗೆ ಎರಡು ರೂಪಾಯಿ ಹೆಚ್ಚಳ ಮಾಡಿ ಕೆಎಂಎಫ್ ಅಧಿಕೃತ ಘೋಷಣೆ ಮಾಡಿತು‌. ಆದ್ರೆ ಅಧಿಕೃತ ಘೋಷಣೆ ಮಾಡದೇ ಕೆಎಂಫ್ ನ ಎಲ್ಲ ಉತ್ಪನ್ನಗಳ ದರ ಹೆಚ್ಚಳವನ್ನು ಸೈಲೆಂಟಾಗಿ ಮಾಡುತ್ತಿದೆ.

 • News18 Kannada
 • Last Updated :
 • Karnataka, India
 • Share this:

  ಬೆಂಗಳೂರು(ನ.25): ಗ್ರಾಹಕರಿಗೆ ಹಾಲು, ಮೊಸರಿನ ದರದ ಬಿಸಿ‌ ತಟ್ಟಿದೆ. ಈ ಬಗ್ಗೆ KMF ಹಾಲು, ದರ ಹೆಚ್ಚಳ ಅಧಿಕೃತ‌ ಘೋಷಣೆ ಮಾಡಿದೆ. ಆದರೆ ಘೋಷಣೆ ಮಾಡದೇ ಸೈಲೆಂಟಾಗಿ KMFನ ಎಲ್ಲ ಉತ್ಪನ್ನಗಳ ದರವೂ ಏರಿಕೆ ಮಾಡಿದೆ.  ಸರ್ಕಾರ ಚಾಪೆ‌ ಕೆಳಗೆ ತೂರಿದರೆ, ಕೆಎಂಎಫ್ ರಂಗೋಲಿ ಕೆಳಗೆ ತೂರುತ್ತಿದೆ. ಹೌದು ನಿನ್ನೆ ಹಾಲು, ಮೊಸರಿನ ದರವನ್ನು ಲೀಟರ್ ಗೆ ಎರಡು ರೂಪಾಯಿ ಹೆಚ್ಚಳ ಮಾಡಿ ಕೆಎಂಎಫ್ ಅಧಿಕೃತ ಘೋಷಣೆ ಮಾಡಿತು‌. ಆದ್ರೆ ಅಧಿಕೃತ ಘೋಷಣೆ ಮಾಡದೇ ಕೆಎಂಫ್ ನ ಎಲ್ಲ ಉತ್ಪನ್ನಗಳ ದರ ಹೆಚ್ಚಳವನ್ನು ಸೈಲೆಂಟಾಗಿ ಮಾಡುತ್ತಿದೆ.


  ದಸರಾ ಹಬ್ಬದಿಂದಲೇ ತುಪ್ಪದ ದರ ಹೆಚ್ಚುತ್ತಲೇ ಇದೆ. ಒಂದೇ ಬಾರಿ ದರ ಏರಿಸದೇ ಕಳೆದ ಎರಡು ತಿಂಗಳಿನಲ್ಲಿ  ನಾಲ್ಕು ಬಾರಿ ಹಂತ ಹಂತವಾಗಿ ಒಟ್ಟು 170 ರೂಪಾಯಿವರೆಗೆ ಹೆಚ್ಚಳ ಮಾಡಿತ್ತು. ಕೇವಲ ತುಪ್ಪ ಮಾತ್ರವಲ್ಲ ಇದೀಗ ಕೆಎಂಎಫ್ ನ ಎಲ್ಲ ಉತ್ಪನ್ನಗಳ ದರವೂ ಶೇ.5-15ರಷ್ಟು ಹೆಚ್ಚು ಮಾಡಿದೆ. ಇನ್ನು ಒಂದು ಕೆಜಿಗೆ 50 ರೂ. ತುಪ್ಪದ ದರ ಹೆಚ್ಚಳ ಆಗೋ ಸಾಧ್ಯತೆಯಿದೆ.


  ಕೆ ಎಂಎಫ್ ಉತ್ಪನ್ನಗಳ ದರದ ವಿವರ


  ಪೇಡ: 220 -  240 1/4 kg


  ಬಾದಾಮ್ ಪೌಡರ್ 40 ರು. ಹೆಚ್ಚಳ: 400 - 440:   1 kg


  ಕೋಡ್ ಬಳೆ - 500 ರಿಂದ 600: 200 gm


  ರಸ್ಕ್ - 15 - 20: 100 grm


  ಜಾಮೂನು 130 - 150: 1/2 kg


  ಪ್ಲೇವರ್ಡ್ ಮಿಲ್ಕ್ 5 ರೂ: 20 - 25 rs: 200 ml


  ರಸಗುಲ್ಲ - 130 - 150 ರೂ.: 1/4


  ಬರ್ಫಿ - 195 - 210 ರೂ.:  1/4


  ಗುಡ್ ಲೈಫ್ - 26 - 28: 1/2 ltr


  ಮೈಸೂರು ಪಾಕ್ - 135 - 160: 1/4 kl


  ಕೋವಾ 60 - 90 - 200 gm


  ಈ ಮೊದಲು ಹಾಲು, ಮೊಸರು ದರ ಹೆಚ್ಚಳಕ್ಕೆ ಕೆಎಂಎಫ್ ಹಲವು ಬಾರಿ ಸರ್ಕಾರಕ್ಕೆ ಪ್ರಸ್ತಾಪ ಮಾಡಿತ್ತು. ಆದರೆ ಚುನಾವಣೆ ವರ್ಷ ದರ ಏರಿಕೆಗೆ ಸಿಎಂ ಒಪ್ಪಿರಲಿಲ್ಲ. ಇದರಿಂದಾಗಿ ತುಪ್ಪದ ದರ 170 ರೂ. ಘೋಷಣೆ ಮಾಡದೇ ಸೈಲೆಂಟಾಗಿ ಹೆಚ್ಚಳ ಮಾಡಿತ್ತು. ಅದೇ ರೀತಿ ಕೆಎಂಎಫ್ ನ ಇತರೆ ಉತ್ಪನ್ನಗಳ ದರವೂ ಹೆಚ್ಚಳ ಮಾಡಿದೆ.


  ಈ‌ ಬಗ್ಗೆ ಕೆಎಂಎಫ್ ಅಧ್ಯಕ್ಷರನ್ನು ಕೇಳಿದ್ರೆ ತುಪ್ಪದ ದರ ಹೆಚ್ಚಳ ಮಾಡಿದ್ದು ನಿಜ.‌ ಇತರೆ ಉತ್ಪನ್ನಗಳ ದರವೂ ಜಾಸ್ತಿ ಮಾಡಿದ್ದೇವೆ.  ತುಪ್ಪ, ಇತರೆ ಪ್ರಾಡೆಕ್ಟ್ ದರ ಹೆಚ್ಚು ಮಾಡೋದಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.


  ಹಾಲು,‌ ಮೊಸರಿನ ದರ ಎರಡು ರೂಪಾಯಿ ಹೆಚ್ಚಳ ಮಾಡಿದ್ರೂ ಹೊಟೇಲ್ ಅಲ್ಲಿ ದರ ಏರಿಕೆ ಮಾಡಲ್ಲವಂತೆ.‌ ಈ ಕೂಡಲೇ ನಾವು ಹೋಟೆಲ್ ಅಲ್ಲಿ ತಿಂಡಿ, ಆಹಾರದ ಬೆಲೆ ಏರಿಕೆ ಮಾಡಲ್ಲ. ಈ ವಿಚಾರದ ಬಗ್ಗೆ ಸ್ವಲ್ಪ ದಿನ ಕಾದು ಚರ್ಚೆ ಮಾಡ್ತೀವಿ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ ಸಿ ರಾವ್ ಸ್ಪಷ್ಟನೆ ನೀಡಿದ್ದಾರೆ.


  ಅದೇನೇ ಇದ್ದರೂ ದುಬಾರಿ ದುನಿಯಾದಲ್ಲಿ ಹಾಲು, ಮೊಸರು ದರದ ಜೊತೆ ಕೆಎಂಫ್ ನ ಎಲ್ಲ ಪ್ರಾಡೆಕ್ಟ್ ಗಳ ದರವೂ ಹೆಚ್ಚು ಮಾಡಿದೆ. ಸದ್ಯಕ್ಕೆ ಹೋಟೆಲ್ ಗಳ ಟೀ-ಕಾಫಿ, ತಿಂಡಿ ದರ ಹೆಚ್ಚಳ ಮಾಡುತ್ತಿಲ್ಲ ಎನ್ನುವುದು ಸದ್ಯದ ಸಮಾಧಾನದ ಸಂಗತಿ.

  Published by:Precilla Olivia Dias
  First published: