ನಮಗೇನು ತಿನ್ನುವುದಕ್ಕೆ ಅನ್ನ ಸಿಗುತ್ತಿದೆ.. ಜಾನುವಾರುಗಳ ಗತಿಯೇನು - ಭೀಮೆ ಸಂತ್ರಸ್ತರ ಗೋಳು

ಪ್ರವಾಹದ ಕಾರಣದಿಂದಾಗಿ ಒಂದು ಕಡೆ ಜನ ಸಂಕಷ್ಟಕ್ಕೆ ಗುರಿಯಾಗುತ್ತಿದ್ದರೆ, ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮೂಕ ಪ್ರಾಣಿಗಳು ಮೂಕ ವೇದನೆ ಅನುಭವಿಸಲಾರಂಭಿಸಿವೆ

news18-kannada
Updated:October 21, 2020, 8:01 PM IST
ನಮಗೇನು ತಿನ್ನುವುದಕ್ಕೆ ಅನ್ನ ಸಿಗುತ್ತಿದೆ.. ಜಾನುವಾರುಗಳ ಗತಿಯೇನು - ಭೀಮೆ ಸಂತ್ರಸ್ತರ ಗೋಳು
ಪ್ರವಾಹ ಸಂತ್ರಸ್ತೆ
  • Share this:
ಕಲಬುರ್ಗಿ(ಅಕ್ಟೋಬರ್​. 21): ಭೀಮಾ ನದಿಯ ವ್ಯಾಪ್ತಿಯಲ್ಲಿ ಉಂಟಾದ ಪ್ರವಾಹದ ಅಬ್ಬರಕ್ಕೆ ಜನ ಜೀವನ ನಲುಗುವಂತಾಗಿದೆ. ಭಾರಿ ಪ್ರವಾಹದಲ್ಲಿ ಮೇವು ಜಲಾವೃತಗೊಂಡು ಜಾನುವಾರುಗಳೂ ಸಂಕಷ್ಟಕ್ಕೆ ಗುರಿಯಾಗಿವೆ. ಕೆಲವೆಡೆ ನೀರಿನಲ್ಲಿ ಮೇವು ಕೊಚ್ಚಿ ಹೋಗಿದೆ. ಹೀಗಾಗಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಜನರಿಗೇನು ಕಾಳಜಿ ಕೇಂದ್ರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಆದರೆ, ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡುವವರಾರು ಎಂದು ಸಂತ್ರಸ್ತರು ಪ್ರಶ್ನಿಸುತ್ತಿದ್ದಾರೆ. ಕಲಬುರ್ಗಿ ಜಿಲ್ಲೆಯಲ್ಲಿ ಪ್ರವಾಹ ಇಳಿ ಮುಖದತ್ತ ಸಾಗಿದೆ. ಭೀಮಾ ನದಿ ಹರಿವಿನ ಪ್ರಮಾಣ ಕ್ರಮೇಣ ಇಳಿಮುಖವಾಗಲಾರಂಭಿಸಿದೆ. ಆದರೆ, ಭಾರಿ ಪ್ರವಾಹದಿಂದಾಗಿ ಜನ ಕಂಗಲಾಗುವಂತೆ ಮಾಡಿದೆ. ಜನರ ಜೊತೆ ಜಾನುವಾರುಗಳೂ ತೀವ್ರ ಸಂಕಷ್ಟಕ್ಕೆ ಗುರಿಯಾಗಿವೆ. ಜನರಿಗೇನು ಸರ್ಕಾರ ಕಾಳಜಿ ಕೇಂದ್ರಗಳಲ್ಲಿ ಊಟದ ವ್ಯವಸ್ಥೆ ಮಾಡಿದೆ. ಆದರೆ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ.

ಪ್ರವಾಹದಲ್ಲಿ ಕೆಲವೆಡೆ ಮೇವು ಕೊಚ್ಚಿ ಹೋಗಿದೆ. ಮತ್ತೆ ಕೆಲವೆಡೆ ಜಲಾವೃತಗೊಂಡಿದೆ. ಹೀಗಾಗಿ ಜಾನುವಾರುಗಳು ಉಪವಾಸ ಬೀಳುವಂತಾಗಿದೆ. ಕಲಬುರ್ಗಿ ತಾಲೂಕಿನ ಸರಡಗಿ(ಬಿ) ಗ್ರಾಮದಲ್ಲಿ ನೂರಾರು ದನಗಳು, ಕುರಿಗಳನ್ನು ಎತ್ತರದ ಪ್ರದೇಶದಲ್ಲಿ ತಂಡು ಬಿಡಲಾಗಿದೆ. ಗ್ರಾಮದಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆಗಳು ಮುಳುಗಿರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಜಾನುವಾರುಗಳನ್ನು ಎತ್ತರದ ಜಾಗದಲ್ಲಿ ತಂದು ಬಿಡಲಾಗಿದೆ. ಆದರೆ, ಅವುಗಳಿಗೆ ಕಳೆದ ಎರಡು ದಿನಗಳಿಂದಲೂ ಅಗತ್ಯ ಮೇವು ಸಿಗದಂತಾಗಿದೆ. ನಮಗೇನು ಸರ್ಕಾರ ಊಟ ಕೊಡುತ್ತಿದೆ. ಆದರೆ, ಜಾನುವಾರುಗಳಿಗೆ ಮೇವು ಕೊಡುವವರು ಯಾರು. ನಮಗೆ ಊಟ ಕೊಡದಿದ್ದರೂ ಚಿಂತೆಯಿಲ್ಲ, ಜಾನುವಾರುಗಳಿಗೆ ಮೇವು ಕೊಡಿ ಎಂದು ಸರಡಗಿ ಗ್ರಾಮದ ಸಂತ್ರಸ್ತ ಭೀಮಣ್ಣ ಪೂಜಾರಿ ಆಗ್ರಹಿಸಿದ್ದಾನೆ.

ಇದೇ ಸಂದರ್ಭದಲ್ಲಿ ಪ್ರವಾಹದ ಜೊತೆ ಜೊತೆಗೆ ಮಳೆ ಅಬ್ಬರವೂ ಹೆಚ್ಚಾಗಿದೆ. ಇವರೆಡರ ನಡುವೆ ಜಾನುವಾರುಗಳು ಸಂಕಷ್ಟಕ್ಕೆ ಗುರಿಯಾಗುವಂತಾಗಿದೆ. ಸತತ ಮಳೆಯಿಂದಾಗಿ ಕುರಿಗಳಿಗೆ ರೋಗ ಬಂದು ನಿತ್ಯ ಒಂದೆರಡು ಕುರಿ ಸಾಯಲಾರಂಭಿಸಿವೆ ಎಂದು ಸರಡಗಿ ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ. ನಮ್ಮ ಜೀವನಾಡಿಗಳಾದ ಕುರಿಗಳು ಸಾಯುತ್ತಿರುವುದನ್ನು ನೋಡಲು ಆಗುತ್ತಿಲ್ಲವೆಂದು ಅಲವತ್ತುಕೊಂಡಿದ್ದಾರೆ.

ಇದನ್ನೂ ಓದಿ : ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಪಾಲಿಕೆ ಮೇಯರ್ ತಸ್ನಿಂ ಗರಂ ಯಾಕೆ ಗೊತ್ತಾ?

ಕೇವಲ ಓಟಿಗಾಗಿ ಮಾತ್ರ ಜನಪ್ರತಿನಿಧಿಗಳು ಬರುತ್ತಾರೆ. ಸಂಕಷ್ಟ ಬಂದಾಗ ನಮ್ಮ ಬಳಿ ಯಾರೂ ಬರುತ್ತಿಲ್ಲ ಎಂದು ಕಲಬುರ್ಗಿ ತಾಲೂಕಿನ ಸರಡಗಿ ಗ್ರಾಮದ ಸಂತ್ರಸ್ತೆ ಚಾಜಮ್ಮ ಕಿಡಿಕಾರಿದ್ದಾರೆ.

ಪ್ರವಾಹದ ಕಾರಣದಿಂದಾಗಿ ಒಂದು ಕಡೆ ಜನ ಸಂಕಷ್ಟಕ್ಕೆ ಗುರಿಯಾಗುತ್ತಿದ್ದರೆ, ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮೂಕ ಪ್ರಾಣಿಗಳು ಮೂಕ ವೇದನೆ ಅನುಭವಿಸಲಾರಂಭಿಸಿವೆ. ಬಾಯಿ ಇದ್ದ ಮನುಷ್ಯನೇನೋ ಕೇಳಿ ಪಡೆಯುತ್ತಾನೆ. ಆದರೆ, ಮೂಕ ಪ್ರಾಣಿಗಳ ಗೋಳನ್ನು ಯಾರೂ ಕೇಳದ ಸ್ಥಿತಿ ನಿರ್ಮಾಣವಾಗಿದ್ದು, ಪ್ರವಾಹಕ್ಕೆ ಸಂತ್ರಸ್ತರು ಹಿಡಿ ಶಾಪ ಹಾಕುತ್ತಿದ್ದಾರೆ.
Published by: G Hareeshkumar
First published: October 21, 2020, 8:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading