ನ್ಯಾಯಾಲಯ ಮೇಲೆ ಅಧಿಕಾರ ಹೇರಲು ಯಾವ ಪಕ್ಷಗಳಿಗೂ ಸಾಧ್ಯವಿಲ್ಲ; ಡಿಕೆಶಿ ಇಡಿ ಕಸ್ಟಡಿ ಅವಧಿ ವಿಸ್ತರಣೆ ಬಗ್ಗೆ ಸಿ.ಟಿ.ರವಿ ಹೇಳಿಕೆ

ಬಿಜೆಪಿ ರಾಜ್ಯಾಧ್ಯಕ್ಷ ವಿಚಾರ ಒಂದು ವರ್ಷ ಪೋಸ್ಟ್ ಪೋನ್ ಆಗಿದೆ. ಮುಂದಿನ ದಿನಗಳಲ್ಲಿ ಸಿಗಬಹುದು. ನಾವು ಒಂದು ಟೀಮ್ ಆಗಿ ಕೆಲಸ ಮಾಡುತ್ತಿದ್ದೇವೆ. ನಾವೊಂದು ಬಗೆದರೆ ದೈವವೊಂದು ಬಗೆಯುತ್ತದೆ. ನನ್ನಂತಹ ಕಾರ್ಯಕರ್ತರೊಬ್ಬರು, ಅಧ್ಯಕ್ಷರಾಗಿದ್ದಾರೆ. ನಮ್ಮಲ್ಲಿ ಮುಕ್ತವಾದ ಅವಕಾಶ ಇದೆ. ಅದು ಬರುವ ಸಮಯದಲ್ಲಿ ಬಂದೇ ಬರುತ್ತದೆ ಎಂದು ಹೇಳಿದರು.

HR Ramesh | news18-kannada
Updated:September 13, 2019, 8:22 PM IST
ನ್ಯಾಯಾಲಯ ಮೇಲೆ ಅಧಿಕಾರ ಹೇರಲು ಯಾವ ಪಕ್ಷಗಳಿಗೂ ಸಾಧ್ಯವಿಲ್ಲ; ಡಿಕೆಶಿ ಇಡಿ ಕಸ್ಟಡಿ ಅವಧಿ ವಿಸ್ತರಣೆ ಬಗ್ಗೆ ಸಿ.ಟಿ.ರವಿ ಹೇಳಿಕೆ
ಸಚಿವ ಸಿ ಟಿ ರವಿ
  • Share this:
ಶಿವಮೊಗ್ಗ; ಡಿಕೆ ಶಿವಕುಮಾರ್ ಇನ್ನು ನಾಲ್ಕು ದಿನಗಳ ಕಾಲ ಇಡಿ‌ ಕಸ್ಟಡಿ ಅವಧಿ  ವಿಸ್ತರಣೆ ಮಾಡಿರುವುದು ನ್ಯಾಯಾಲಯ. ನ್ಯಾಯಾಲಯದ‌ ಮೇಲೆ‌ ಅಧಿಕಾರ ಹೇರುವುದಕ್ಕೆ ಕಾಂಗ್ರೆಸ್​ಗೂ ಸಾಧ್ಯವಿಲ್ಲ ಹಾಗೆಯೇ ಬಿಜೆಪಿಗೂ ಸಾಧ್ಯವಿಲ್ಲ ಎಂದು ಸಚಿವ ಸಿ.ಟಿ.ರವಿ ಹೇಳಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಇಡಿಯವರಿಗೆ ಇನ್ನು ಸಮಗ್ರ ಮಾಹಿತಿ ಸಿಕ್ಕಿಲ್ಲ ಅಂತ ಕಾಣುತ್ತೆ. ಸತ್ಯ ಹೇಳುವುದಕ್ಕೆ ಬಹಳ ಸಮಯ ಬೇಡ. ಬಹಳ ಎಳೆದುಕೊಂಡು ಹೋಗುವುದು ಒಳ್ಳೆಯದಲ್ಲ. ಇರುವ ಸತ್ಯ ಹೇಳಿದ್ರೆ, ತನಿಖೆ ಪೂರ್ಣಗೊಳ್ಳುತ್ತೇ. ಇಡಿಯುವರು ಸಮಾಧಾನ ಪಟ್ಟುಕೊಳ್ತಾರೆ. ಇಡಿ ತನಿಖೆ ತಪ್ಪಿಸಿಕೊಂಡು ಮುಂದಿನ ತನಿಖೆ ಎದುರಿಸಬಹುದು ಎಂದು ಹೇಳಿದರು.

ದತ್ತಪೀಠದ ಪ್ರಕರಣ ನ್ಯಾಯಾಲಯದಲ್ಲಿದೆ. ನ್ಯಾಯಾಲಯದ ತೀರ್ಪು ಕಾಯ್ತಾ ಇದ್ದೇವೆ. ತೀರ್ಪು ಸತ್ಯದ ಪರವಾಗಿ ಬರಬೇಕು. ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ವಾಸ್ತವಕ್ಕೆ ವಿರುದ್ದವಾಗಿರುವಂತಹ ಮನವಿ ಸಲ್ಲಿಸಿತ್ತು. ನಾವು ಕೂಡ ಕೊರ್ಟ್​ನಲ್ಲಿ ಸವಾಲು ಮಾಡಿದ್ದು ತೀರ್ಪು ಸತ್ಯದ ಪರವಾಗಿ ಬರುತ್ತದೆ ಎಂಬ ನಂಬಿಕೆ ಇದೆ ಎಂದರು.

ನೆರೆ ಪರಿಹಾರದ ವಿಚಾರವಾಗಿ ಕಾಂಗ್ರೆಸ್ ಶಾಸಕ‌ ಈಶ್ವರ ಖಂಡ್ರೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿ.ಟಿ.ರವಿ, ತಾಕತ್ತು ಕುಸ್ತಿ ಅಖಾಡದಲ್ಲಿ ಇರಬೇಕು. ನೆರೆ ಪರಿಹಾರ ವಿಚಾರದಲ್ಲಿ ವಿಶ್ವಾಸ ತೋರಿಸಬೇಕು. ಪ್ರಧಾನ ಮಂತ್ರಿಗಳು ಯಾವ ರಾಜ್ಯಕ್ಕೂ ಅನ್ಯಾಯ ಮಾಡುವುದಿಲ್ಲ. ಒಂದು ಸೀಟ್ ಗೆಲ್ಲಿಸಿದ ಕೇರಳ ಹಾಗೂ ತಮಿಳುನಾಡಿಗೂ ಅನ್ಯಾಯ ಮಾಡಿಲ್ಲ. ಇನ್ನು 26 ಸೀಟು ಗೆಲ್ಲಿಸಿದ ಕರ್ನಾಟಕಕ್ಕೆ ಅನ್ಯಾಯ ಮಾಡಲ್ಲ. ಎನ್​ಡಿಆರ್ ತಂಡ ನೀಡಿರುವ ವರದಿ ಮೇಲೆ ಮುಂದಿನ ವಾರದಲ್ಲಿ ಕೇಂದ್ರದಿಂದ ಅನುದಾನ ಬರುವುದಾಗಿ ಸಿಎಂ ಹೇಳಿದ್ದಾರೆ ಎಂದು ತಿಳಿಸಿದರು.

ಇದನ್ನು ಓದಿ: ಡಿಕೆಶಿಗೆ ಮತ್ತೆ ಸಂಕಷ್ಟ; ಸೆ.17ರವರೆಗೆ ಇ.ಡಿ. ವಶಕ್ಕೆ ಒಪ್ಪಿಸಿದ ನ್ಯಾಯಾಲಯ

ಸಿ.ಟಿ. ರವಿ ಎಲ್ಲೂ ಕೂಡ ಖಾತೆ ವಿಚಾರದಲ್ಲಿ ಕ್ಯಾತೆ ತೆಗೆದಿಲ್ಲ. ನನ್ನ ಪರವಾಗಿ ಮಾಧ್ಯಮದ ಸ್ನೇಹಿತರು ಹೇಳಿದ್ದರು. ನಾನು ಎಲ್ಲ ಕೆಲಸ ಮಾಡಲು ಪೂರ್ವ ತಯಾರಿ ಮಾಡಿಕೊಂಡು ಹೊರಟ್ಟಿದ್ದೇನೆ ಎಂದು ಅವರು, ಬಿಜೆಪಿ ರಾಜ್ಯಾಧ್ಯಕ್ಷ ವಿಚಾರ ಒಂದು ವರ್ಷ ಪೋಸ್ಟ್ ಪೋನ್ ಆಗಿದೆ. ಮುಂದಿನ ದಿನಗಳಲ್ಲಿ ಸಿಗಬಹುದು. ನಾವು ಒಂದು ಟೀಮ್ ಆಗಿ ಕೆಲಸ ಮಾಡುತ್ತಿದ್ದೇವೆ. ನಾವೊಂದು ಬಗೆದರೆ ದೈವವೊಂದು ಬಗೆಯುತ್ತದೆ. ನನ್ನಂತಹ ಕಾರ್ಯಕರ್ತರೊಬ್ಬರು, ಅಧ್ಯಕ್ಷರಾಗಿದ್ದಾರೆ. ನಮ್ಮಲ್ಲಿ ಮುಕ್ತವಾದ ಅವಕಾಶ ಇದೆ. ಅದು ಬರುವ ಸಮಯದಲ್ಲಿ ಬಂದೇ ಬರುತ್ತದೆ ಎಂದು ಹೇಳಿದರು.

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading