Anushree: ಡ್ರಗ್ ಡೀಲರ್ ಕಿಶೋರ್ ಶೆಟ್ಟಿ ಜೊತೆಗಿನ ನಂಟೇ ಕಂಟಕವಾಯ್ತಾ ಅನುಶ್ರೀಗೆ; ಪೊಲೀಸರಿಂದ ನಿರೂಪಕಿಯ ವಿಚಾರಣೆ ಸಾಧ್ಯತೆ?
ಸದ್ಯ ಕಿಶೋರ್ ಶೆಟ್ಟಿಯ ಹೇಳಿಕೆ ಹಾಗೂ ಕಾಲ್ ಲಿಸ್ಟ್ ಹಿಡಿದು ಪೊಲೀಸರು ಅನುಶ್ರೀ ವಿಚಾರಣೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ನಾಳೆ ಅಧಿಕೃತವಾಗಿ ನಟಿ-ನಿರೂಪಕಿ ಅನುಶ್ರೀ ಅವರ ವಿಚಾರಣೆಗೆ ಸಿಸಿಬಿ ಪೊಲೀಸರು ನೋಟೀಸ್ ನೀಡುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದ್ದು ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲ.
news18-kannada Updated:September 24, 2020, 4:18 PM IST

ನಿರೂಪಕಿ ಅನುಶ್ರೀ.
- News18 Kannada
- Last Updated: September 24, 2020, 4:18 PM IST
ಬೆಂಗಳೂರು (ಸೆಪ್ಟೆಂಬರ್ 24); ಕಳೆದ ಎರಡು ತಿಂಗಳಿನಿಂದ ಡ್ರಗ್ಸ್ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ. ಈ ಪ್ರಕರಣ ಬೆಳಕಿಗೆ ಬಂದ ದಿನದಿಂದ ಸಿಸಿಬಿ ಪೊಲೀಸರ ವಿಚಾರಣೆಯಲ್ಲಿ ದೊಡ್ಡ ದೊಡ್ಡ ಹೆಸರುಗಳು ಕೇಳಿ ಬರುತ್ತಿವೆ. ಅದರಲ್ಲೂ ಡ್ರಗ್ಸ್ ಮಾಫಿಯಾ ಜೊತೆಗೆ ಸ್ಯಾಂಡಲ್ವುಡ್ ನಂಟಿನ ಸುದ್ದಿ ಸದ್ದು ಮಾಡುತ್ತಲೇ ಪ್ರಖ್ಯಾತ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿಯವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಅಲ್ಲದೆ, ಇವರಿಗೆ ಡ್ರಗ್ಸ್ ಡೀಲರ್ಗಳ ಜೊತೆಗೆ ನಂಟು ಇದ್ದದ್ದು ಸತ್ಯ ಎಂಬುದು ಖಚಿತವಾಗುತ್ತಲೇ ಇಬ್ಬರನ್ನೂ ಇದೀಗ ಪರಪ್ಪನ ಅಗ್ರಹಾರ ಜೈಲಿಗೆ ಬಿಟ್ಟು ಬಂದಿದ್ದಾರೆ. ಈ ಇಬ್ಬರೂ ನಟಿಯರೂ ಜಾಮೀನಿಗಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿರುವ ಬೆನ್ನಿಗೆ ಮತ್ತೋರ್ವ ಖ್ಯಾತನಾಮರ ಹೆಸರು ಈ ಪ್ರಕರಣದಲ್ಲಿ ತಗಲಾಕಿಕೊಂಡಿದೆ. ಡ್ರಗ್ ಡೀಲರ್ ಕಿಶೋರ್ ಶೆಟ್ಟಿ ಎಂಬಾತನ ಜೊತೆಗಿನ ನಂಟೇ ಇಂದು ಅವರಿಗೆ ಕಂಟಕವಾಗಿ ಪರಿಣಮಿಸಿದೆ. ಅಂದಹಾಗೆ ಅವರ ಹೆಸರು ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ ಮತ್ತು ನಟಿ ಅನುಶ್ರೀ.
ಕನ್ನಡ ಕಿರುತೆರೆಯಲ್ಲಿ ಅನುಶ್ರೀ ಅವರದ್ದು ದೊಡ್ಡ ಹೆಸರು. ಖಾಸಗಿ ವಾಹಿನಿಯೊಂದರಲ್ಲಿ ಅವರು ನಡೆಸಿಕೊಡುವ ಎಲ್ಲಾ ರಿಯಾಲಿಟಿ ಶೋಗಳು ಇಂದು ಮನೆ ಮಾತಾಗಿವೆ. ಹಲವಾರು ರಿಯಾಲಿಟಿ ಶೋಗಳನ್ನು ನಡೆಸಿಕೊಟ್ಟ ಖ್ಯಾತಿ ಇವರಿಗಿದೆ. ಇದಲ್ಲದೆ ಕೆಲವ ಕನ್ನಡ ಸಿನಿಮಾಗಳಲ್ಲೂ ಸಹ ಇವರು ನಟಿಸಿದ್ದಾರೆ. ಆದರೆ, ಶ್ರೇಯಸ್ಸಿನ ಉತ್ತುಂಗದಲ್ಲಿದ್ದ ನಟಿ-ನಿರೂಪಕಿಗೆ ಯಕಶ್ಚಿತ್ ಓರ್ವ ಡ್ರಗ್ ಡೀಲರ್ ಕಿಶೋರ್ ಶೆಟ್ಟಿ ಎಂಬಾತನ ಜೊತೆಗಿನ ನಂಟು ಇದೀಗ ಪೊಲೀಸ್ ವಿಚಾರಣೆಯವರೆಗೂ ತಂದು ಬಿಟ್ಟಿದೆ. ಅಂದಹಾಗೆ ಸಿಸಿಬಿ ಪೊಲೀಸರು ನಗರದ ಎಲ್ಲಾ ಪ್ರಮುಖ ಡ್ರಗ್ ಡೀಲರ್ಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ವಿದೇಶಿಯರು ಸೇರಿದಂತೆ ಅನೇಕರನ್ನು ಅರೆಸ್ಟ್ ಮಾಡಲಾಗಿದೆ. ಹೀಗೆ ಪೊಲೀಸರಿಂದ ಬಂಧನಕ್ಕೊಳಗಾದ ವ್ಯಕ್ತಿಯೇ ಪ್ರತೀಕ್ ಶೆಟ್ಟಿ. 2018ರ ಬಾಣಸವಾಡಿ ಡ್ರಗ್ ಕೇಸ್ ನಲ್ಲಿ ಸಹ ಈತ ಆರೋಪಿಯಾಗಿದ್ದ.
ಸ್ಯಾಂಡಲ್ ವುಡ್ ಡ್ರಗ್ ಕೇಸ್ನಲ್ಲಿ ಸಿಸಿಬಿ ಪೊಲೀಸರು ಇದೀಗ ಪ್ರತೀಕ್ ಶೆಟ್ಟಿಯನ್ನ ಸಹ ಅರೆಸ್ಟ್ ಮಾಡಿದ್ದಾರೆ. ಪ್ರತೀಕ್ ಶೆಟ್ಟಿ ವಿಚಾರಣೆ ವೇಳೆ ಮಂಗಳೂರು ಡ್ರಗ್ ಜಾಲದ ಬಗ್ಗೆ ಲಿಂಕ್ ಬಗ್ಗೆ ಹಲವಾರು ಮಾಹಿತಿಗಳು ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗುತ್ತಿದೆ. ಇದಲ್ಲದೆ ಈತ ವಿಚಾರಣೆ ವೇಳೆ ನಿರೂಪಕಿ ಅನುಶ್ರೀ, ಡ್ಯಾನ್ಸರ್ ಕಿಶೋರ್ ಶೆಟ್ಟಿ ಹಾಗೂ ತರುಣ್ ಬಗ್ಗೆಯೂ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.
ಇದನ್ನೂ ಓದಿ : ನೂತನ ಕೃಷಿ ಮಸೂದೆಗಳು ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಲಿವೆ; ಸಚಿವ ತೋಮರ್ ವಿಶ್ವಾಸ
ಬೆಂಗಳೂರು ನಗರ ಸಿಸಿಬಿ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತಯ್ಯ ಪ್ರತೀಕ್ ಶೆಟ್ಟಿ ಹಾಗೂ ಕಿಶೋರ್ ಶೆಟ್ಟಿ ನಡುವಿನ ಲಿಂಕ್ ಅನ್ನು ಬೆಳಕಿಗೆ ತಂದಿದ್ದಾರೆ. ಇದರ ಬೆನ್ನಿಗೆ ಮಂಗಳೂರು ಸಿಸಿಬಿಗೆ ಮಾಹಿತಿ ಕೊಟ್ಟಿದ್ದ ಬೆಂಗಳೂರು ಸಿಸಿಬಿ ಡ್ಯಾನ್ಸರ್ ಕಿಶೋರ್ ಶೆಟ್ಟಿ ಹಾಗು ತರುಣ್ ನನ್ನ ಅರೆಸ್ಟ್ ಮಾಡಿದ್ದಾರೆ. ಇದೀಗ ಕಿಶೋರ್ ಶೆಟ್ಟಿ ಸಂಪರ್ಕದಿಂದಾಗಿ ಅನುಶ್ರೀಗೆ ಕಂಟಕ ಶುರುವಾಗಿದೆ.
ಸದ್ಯ ಕಿಶೋರ್ ಶೆಟ್ಟಿಯ ಹೇಳಿಕೆ ಹಾಗೂ ಕಾಲ್ ಲಿಸ್ಟ್ ಹಿಡಿದು ಪೊಲೀಸರು ಅನುಶ್ರೀ ವಿಚಾರಣೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ನಾಳೆ ಅಧಿಕೃತವಾಗಿ ನಟಿ-ನಿರೂಪಕಿ ಅನುಶ್ರೀ ಅವರ ವಿಚಾರಣೆಗೆ ಸಿಸಿಬಿ ಪೊಲೀಸರು ನೋಟೀಸ್ ನೀಡುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದ್ದು ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ, ಡ್ರಗ್ ಡೀಲರ್ ಓರ್ವನ ನಂಟು ಉದಯೋನ್ಮುಖ ನಟಿ ನಿರೂಪಕಿ ಅನುಶ್ರೀ ಅವರ ಯಶಸ್ಸಿನ ಪಯಣಕ್ಕೆ ತೊಡಕಾಗುತ್ತಾ? ಪೊಲೀಸರು ಅವರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸುತ್ತಾರಾ? ಎಂಬುದನ್ನು ಕಾದುನೋಡಬೇಕಿದೆ.
ಕನ್ನಡ ಕಿರುತೆರೆಯಲ್ಲಿ ಅನುಶ್ರೀ ಅವರದ್ದು ದೊಡ್ಡ ಹೆಸರು. ಖಾಸಗಿ ವಾಹಿನಿಯೊಂದರಲ್ಲಿ ಅವರು ನಡೆಸಿಕೊಡುವ ಎಲ್ಲಾ ರಿಯಾಲಿಟಿ ಶೋಗಳು ಇಂದು ಮನೆ ಮಾತಾಗಿವೆ. ಹಲವಾರು ರಿಯಾಲಿಟಿ ಶೋಗಳನ್ನು ನಡೆಸಿಕೊಟ್ಟ ಖ್ಯಾತಿ ಇವರಿಗಿದೆ. ಇದಲ್ಲದೆ ಕೆಲವ ಕನ್ನಡ ಸಿನಿಮಾಗಳಲ್ಲೂ ಸಹ ಇವರು ನಟಿಸಿದ್ದಾರೆ. ಆದರೆ, ಶ್ರೇಯಸ್ಸಿನ ಉತ್ತುಂಗದಲ್ಲಿದ್ದ ನಟಿ-ನಿರೂಪಕಿಗೆ ಯಕಶ್ಚಿತ್ ಓರ್ವ ಡ್ರಗ್ ಡೀಲರ್ ಕಿಶೋರ್ ಶೆಟ್ಟಿ ಎಂಬಾತನ ಜೊತೆಗಿನ ನಂಟು ಇದೀಗ ಪೊಲೀಸ್ ವಿಚಾರಣೆಯವರೆಗೂ ತಂದು ಬಿಟ್ಟಿದೆ.