• Home
  • »
  • News
  • »
  • state
  • »
  • Anubhava Mantapa Vs Peer Pasha Dargah: ಪೀರ್ ಪಾಶಾ ದರ್ಗಾದಲ್ಲಿದೆಯಾ ಅನುಭವ ಮಂಟಪ?

Anubhava Mantapa Vs Peer Pasha Dargah: ಪೀರ್ ಪಾಶಾ ದರ್ಗಾದಲ್ಲಿದೆಯಾ ಅನುಭವ ಮಂಟಪ?

ಪೀರ್ ಪಾಶಾ ದರ್ಗಾ

ಪೀರ್ ಪಾಶಾ ದರ್ಗಾ

ಅಲ್ಲಿ ಅನುಭವ ಮಂಟಪ ಇತ್ತು ಅನ್ನೋದಿದ್ರೆ ತಜ್ಞರಿಂದ ಪರಿಶೀಲನೆ ಆಗಬೇಕು. ಪುರಾತತ್ವ ಇಲಾಖೆಯಿಂದ ಪರಿಶೀಲನೆ ನಡೆಸಬೇಕು ಎಂದು ಬೆಲ್ದಾಳೆ ಶರಣು ಆಗ್ರಹಿಸಿದ್ದಾರೆ.

  • Share this:

ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ (Srirangapattana Jamia Mosque), ಮಳಲಿಯ ಮಸೀದಿ (Malali Mosque) ಬಳಿಕ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿರುವ ಹಜರತ್ ಪೀರ್ ಪಾಶಾ ದರ್ಗಾ (Hazarat Peer Pasha Darga Or Peerapasha Bunglow) ಮುನ್ನಲೆಗೆ ಬಂದಿದೆ. ಅನುಭವ ಮಂಟಪದ ವ್ಯಾಪ್ತಿಯಲ್ಲಿಯೇ ಪೀರ್ ಪಾಶಾ ದರ್ಗಾವಿದೆ. ಮೂಲ ಅನುಭವ ಮಂಟಪ (Anubhava Mantapa) ಈ ಪೀರ್ ಪಾಶಾ ದರ್ಗಾದಲ್ಲಿದೆ ಎಂಬ ವಾದ ಚರ್ಚೆಗೆ ಗ್ರಾಸವಾಗಿದೆ. 12ನೇ ಶತಮಾನದಲ್ಲಿ ಬಸವಣ್ಣವರ (Basavanna) ಅನುಭವ ಮಂಟಪ ನಿರ್ಮಾಣ ಮಾಡಿದ್ರು. ತದನಂತರ ಆಡಳಿತಕ್ಕೆ ಬಂದ ನವಾಬರು (Nawab) ಈ ಜಾಗದಲ್ಲಿಯೇ ಪೀರ್ ಪಾಶಾ ದರ್ಗಾ ನಿರ್ಮಾಣ ಮಾಡಿರುವ ಅನುಮಾನಗಳಿವೆ ಎಂದು ಬಸವ ಭಕ್ತರು ಹೇಳುತ್ತಿದ್ದಾರೆ. ಈ ಸಂಬಂಧ ಸೂಕ್ತ ಸಮೀಕ್ಷೆ ನಡೆಸಬೇಕು ಎಂದು ಭಕ್ತರು ಆಗ್ರಹಿಸುತ್ತಿದ್ದಾರೆ.


ಪೀರ್ ಪಾಶಾನ ಬಂಗ್ಲಾ ಅಂತ ಕರೆಯಲಾಗುವ ಜಾಗದಲ್ಲಿ ಅನುಭವ ಮಂಟಪ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಸುಮಾರು 50 ವರ್ಷಗಳಿಂದ ಜನ ಮನ್ನಣೆಯಿಂದ ಕೇಳುತ್ತಾ ಬಂದಿದ್ದೇನೆ. ಹಿರಿಯ ತಜ್ಞರು ಏನೇನೋ ಬೆಳವಣಿಗಳಾಗಿ ದರ್ಗಾವಾಗಿ ಬದಲಾವಣೆ ಆಗಿದೆ ಎಂದು ಹೇಳ್ತಾರೆ. ಮಹಾಮನೆ ಅಂತಾ ಇದ್ದದ್ದು ಪಿರ್ ಪಾಶಾ ದರ್ಗಾ ಅಂತಾ ಕರೆಯಲಾಗುತ್ತದೆ. ಅಲ್ಲಿ ಅನುಭವ ಮಂಟಪ ಇತ್ತು ಅನ್ನೋದಕ್ಕೆ ಖಚಿತವಾಗಿ ಹೇಳಲು ಆಗಲ್ಲ ಎಂದು ಬೆಲ್ದಾಳೆ ಶರಣರು ಹೇಳುತ್ತಾರೆ.


ತಜ್ಞರಿಂದ ಪರಿಶೀಲನೆ ಆಗಬೇಕು


ಅಲ್ಲಿ ಅನುಭವ ಮಂಟಪ ಇತ್ತು ಅನ್ನೋದಕ್ಕೆ ಅರ್ಥವಿದೆ. ಇಲ್ಲ ಅನ್ನೋದರ ಬಗ್ಗೆ ವಿಚಾರ ಮಾಡಬೇಕಾಗುತ್ತದೆ. ಈ ಹಿಂದೆ ಪರುಷ ಕಟ್ಟೆ ಬಗ್ಗೆ ಸಾಕಷ್ಟು ಚರ್ಚೆಗಳಾದವು. ಆದ್ರೆ ಅಲ್ಲಿನ ಮುಸ್ಲಿಂ ಆ ಜಾಗವನ್ನು ಬಿಟ್ಟು ಕೊಟ್ಟಿದ್ದಾರೆ. ಹೀಗಾಗಿ ಅಲ್ಲಿ ಅನುಭವ ಮಂಟಪ ಇತ್ತು ಅನ್ನೋದಿದ್ರೆ ತಜ್ಞರಿಂದ ಪರಿಶೀಲನೆ ಆಗಬೇಕು. ಪುರಾತತ್ವ ಇಲಾಖೆಯಿಂದ ಪರಿಶೀಲನೆ ನಡೆಸಬೇಕು ಎಂದು ಬೆಲ್ದಾಳೆ ಶರಣು ಆಗ್ರಹಿಸಿದ್ದಾರೆ.


ಇದನ್ನೂ ಓದಿ:  Hijab Row: ಸೊಕ್ಕಿನಿಂದ ವರ್ತನೆ ಮಾಡುತ್ತ ಹಿಜಾಬ್ ಧರಿಸಿ ಬಂದವರ ಮೇಲೆ ಕೇಸ್ ಹಾಕಿ: ಪ್ರಮೋದ್ ಮುತಾಲಿಕ್


ಪೀರ್ ಪಾಶಾ ದರ್ಗಾದಲ್ಲಿ ಅನುಭವ ಮಂಟಪ ಇತ್ತು ಅನ್ನೋದಾದ್ರೆ, ಅದು ಯಾರ ವಶದಲ್ಲಿದೆ ಅವರ ಮನಸ್ಸು ಒಲಿಸಬೇಕು. ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿ ಇತಿಹಾಸ ಉಳಿಸುವಂತ ಕೆಲಸ ಆಗಬೇಕು ಎಂದು ಬೆಲ್ದಾಳೆ ಶರಣರು ಅಭಿಪ್ರಾಯ ವ್ಯಕ್ತಡಿಸಿದ್ದಾರೆ.


ಶರಣ ವಿ.ಸಿದ್ದರಾಮಣ್ಣ ಬರೆದ ಶರಣ ಸ್ಮಾರಕಗಳು ಲೇಖನ


ಪೀರ್ ಪಾಶಾ ದರ್ಗಾದ ಜಾಗದಲ್ಲೇ ಅನುಭವ ಮಂಟಪವಿದೆ ಅಂತ ಹೇಳಲು ದಾಖಲೆಗಳ ಕೊರತೆ ಇದೆ ಎನ್ನಲಾಗುತ್ತಿದೆ. ಆದರೆ, ಪೀರ್ ಪಾಶಾ ದರ್ಗಾದ ಒಳಗಡೆ  ನಂದಿ ಮಂಟಪವಾಗಿರಬಹುದಾದ ಸ್ಮಾರಕವು ಅನುಭವ ಮಂಟಪನಾ ಎಂಬ ಅನುಮಾನಗಳಿವೆ. ಇದನ್ನು ಅನುಭವ ಮಂಟಪವಾಗಿರಬಹುದಾದ ಸ್ಮಾರಕ ಎಂದು ಕಲ್ಯಾಣದ ಹಿರಿಯರು ಭಾವಿಸುತ್ತಾರೆಂದು ಶರಣ ವಿ.ಸಿದ್ದರಾಮಣ್ಣ ಬರೆದ ಶರಣ ಸ್ಮಾರಕಗಳು ಲೇಖನದಲ್ಲಿ ಉಲ್ಲೇಖವಿದೆ.


ವಿವಾದಕ್ಕೆ ತೆರೆ ಎಳೆಯುತ್ತಾ ಸರಕಾರ?


ಶರಣ ವಿ.ಸಿದ್ದರಾಮಣ್ಣ ಬರೆದ ಲೇಖನ ಆಧಾರದ ಮೇಲೆ ತಜ್ಞರ ಸಮಿತಿ ರಚನೆ ಮಾಡಲು ಬಸವ ಭಕ್ತರ ಆಗ್ರಹಿಸಿದ್ದಾರೆ. ತಜ್ಞರ ವರದಿ ನಂತರ ಮುಂದಿನ ಕ್ರಮಕ್ಕೆ ಒತ್ತಾಯ‌ ಮಾಡಿದ್ದಾರೆ. ಆದ್ರೆ ಪೀರ್ ಪಾಶಾ ದರ್ಗಾವೇ ಅನುಭವ ಮಂಟಪ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಜ್ಯ ಕಾರ್ಯದರ್ಶಿ ಸಾಗರ ದಂಡೋತಿ ಹೇಳಿಕೆ ನೀಡಿದ್ದಾರೆ.


ಹಿಂದು ಶೈಲಿ ಸ್ಮಾರಕಗಳು


ಅನುಭವ ಮಂಟಪ ಬಸವಕಲ್ಯಾಣದಲ್ಲಿದೆ. ಅನುಭವ ಮಂಟಪ ತೆಗೆದು ಪೀರ್ ಪಾಶಾ ದರ್ಗಾವೆಂದು  ಮುಸ್ಲಿಂ ರಾಜರ ಆಳ್ವಿಕೆಯಲ್ಲಿ ಹೆಸರು ಬದಲಾವಣೆ ಮಾಡಲಾಗಿದೆ. ಅನುಭವ ಮಂಟಪ ಇದೆ ಎನ್ನಲಾದ ಪೀರ್ ಪಾಶಾ ದರ್ಗಾ ನವಾಬರ್ ಸ್ವಾಧೀನದಲ್ಲಿದೆ. ಹಿಂದು ಶೈಲಿಯಲ್ಲಿ ಅನುಭವ ಮಂಟಪ ಹಾಗೂ ಹಿಂದು ಶೈಲಿ ಸ್ಮಾರಕಗಳಿವೆ. ಪಿಎಂ ಮೋದಿ ಅವರು ಮಸೀದಿ ಜಾಗ ಪುನಶ್ಚೇತನ  ಮಾಡಲು ಮುಂದಾಗಿದ್ದು, ಪೀರ್ ಪಾಶಾ ದರ್ಗಾ ವಶಪಡಿಸಿಕೊಂಡು ಅನುಭವ ಮಂಟಪ ಅಭಿವೃದ್ಧಿ ಮಾಡಬೇಕು ಎಂದು ಸಾಗರ್ ದಡೋತಿ ಆಗ್ರಹಿಸಿದ್ದಾರೆ.


ಅನುಭವ ಮಂಟಪ ಕಡೆ ಕಾರ್ಯಕ್ರಮ


ಪೀರ್ ಪಾಶಾ ದರ್ಗಾದಲ್ಲಿ ಅನುಭವ ಮಂಟಪ ಇದೆ ಎಂಬುದರ ಬಗ್ಗೆ ಚರ್ಚೆ ಬೆನ್ನಲ್ಲೇ ಅನುಭವ ಮಂಟಪ ಮರಳಿ ಪಡೆಯಲು ಸ್ವಾಮಿಗಳು ಹಾಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ  ಮುಂದಾಗಿದೆ. ಜೂನ್ 12 ರಂದು ಸ್ವಾಮಿಗಳ ನಡೆ ಮೂಲ ಅನುಭವ ಮಂಟಪ ಕಡೆ ಕಾರ್ಯಕ್ರಮವನ್ನು ಬಸವಕಲ್ಯಾಣನ ಥೇರ್ ಮೈದಾನದಲ್ಲಿ ಆಯೋಜನೆ ಮಾಡಲಾಗಿದೆ.


ಇದನ್ನೂ ಓದಿ:  Tambula Prashne: ಮಳಲಿಯಲ್ಲಿ ಇದ್ದಿದ್ದು ಮಂದಿರವೋ, ಮಸೀದಿಯೋ? ತಾಂಬೂಲ ಪ್ರಶ್ನೆಯಲ್ಲಿ ರಹಸ್ಯ ಬಯಲು!


ಸಾಮಾಜಿಕ ಸಾಮರಸ್ಯ ಕೆಡಿಸುವ ಕಾರ್ಯವಲ್ಲ


ಈ ಕಾರ್ಯಕ್ರಮದಲ್ಲಿ ಹಲವಾರು ಸ್ವಾಮಿ ಹಾಗೂ ಬಸವ ಭಕ್ತರು ಭಾಗವಹಿಸುವ ನಿರೀಕ್ಷೆಗಳಿವೆ. ಹಳೆ ಅನುಭವ ಮಂಟಪ ಚಿಂತನೆ ಮಾಡಲು ಬಸವಕಲ್ಯಾಣನಲ್ಲಿ ಜಾಥಾ ಹಮ್ಮಿಕೊಳ್ಳಲಾಗಿದೆ. ನಾಡಿನ ಮಠಾದೀಶರು ಪುಣ್ಯ ಭೂಮಿಗೆ ಬರುತ್ತಿದ್ದಾರೆ. ಸಾಮಾಜಿಕ ಸಾಮರಸ್ಯ ಕೆಡಿಸುವ ಕಾರ್ಯವಲ್ಲ. ಸಾಮರಸ್ಯ ಬೆಳೆಸಲು ಜಾಥಾ ಮಾಡಲಾಗುತ್ತದೆ. ಸರಕಾರ ಮಧ್ಯೆಸ್ಥಿಕೆ ವಹಿಸಿ ಪೀರ್ ಪಾಶಾ ದರ್ಗಾದ ಬಗ್ಗೆ ಸತ್ಯಸತ್ಯತೆ ಗುರುತು ಮಾಡಿ ತಡೋಳ ರಾಜೇಶ್ವರ ಶಿವಾಚಾರ್ಯ ಸ್ವಾಮಿ ಹೇಳಿಕೆ ನೀಡಿದ್ದಾರೆ.

Published by:Mahmadrafik K
First published: