Basavakalyana: ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ; ಇಂದು ಬೃಹತ್ ಸಮಾವೇಶ

ಈ ಬೃಹತ್ ಸಮಾವೇಶ ಮತ್ತು ಚಿಂತನ ಮಂಥನ ಸಭೆಯಲ್ಲಿ ಸುಮಾರು 700 ಮಠಾಧೀಶರು ಭಾಗಿಯಾಗುವ ಸಾಧ್ಯತೆಗಳಿವೆ. ಇತ್ತ ಬೃಹತ್ ಸಮಾವೇಶ ಹಿನ್ನೆಲೆ ಬಸವ ಕಲ್ಯಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಪೀರ್ ಪಾಶಾ ದರ್ಗಾ

ಪೀರ್ ಪಾಶಾ ದರ್ಗಾ

  • Share this:
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ (Basavakalyana) ಇಂದು ಮಠಾಧೀಶರ ನಡೆ ಮೂಲ ಅನುಭವ ಮಂಟಪದ (Anubhava Mantapa) ಕಡೆ ಬೃಹತ್ ಸಮಾವೇಶ (Rally) ನಡೆಯಲಿದೆ. ಪೀರ್ ಪಾಶಾ ದರ್ಗಾವೇ (Peer Pasha Dargah) ಮೂಲ ಅನುಭವ ಮಂಟಪವಾಗಿದ್ದು, ಅದನ್ನು ಹಿಂದೂಗಳ (Hindu) ವಶಕ್ಕೆ ನೀಡಬೇಕೆಂದು ಒತ್ತಾಯಿಸಿ ಈ ಸಮಾವೇಶ ಆಯೋಜನೆ ಮಾಡಲಾಗಿದೆ. ಬೆಳಗ್ಗೆ 10 ಗಂಟೆಯ ನಂತರ ಸಮಾವೇಶ ಆರಂಭಗೊಳ್ಳಲಿದ್ದು, ಅದಕ್ಕೂ ಮೊದಲು ಬಸವ ಕೇಂದ್ರದಲ್ಲಿ (Basava Kendra) ಇಷ್ಟಲಿಂಗದ ಪೂಜೆ ನಡೆಯಲಿದೆ. ಪೂಜೆ ಬಳಿಕ ಮಠಾಧೀಶರು ತೇರು ಮೈದಾನಕ್ಕೆ ಆಗಮಿಸಿ, ಅಲ್ಲಿಯ ಸಭಾ ಭವನದಲ್ಲಿ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಈ ಬೃಹತ್ ಸಮಾವೇಶ ಮತ್ತು ಚಿಂತನ ಮಂಥನ ಸಭೆಯಲ್ಲಿ ಸುಮಾರು 700 ಮಠಾಧೀಶರು ಭಾಗಿಯಾಗುವ ಸಾಧ್ಯತೆಗಳಿವೆ. ಇತ್ತ ಬೃಹತ್ ಸಮಾವೇಶ ಹಿನ್ನೆಲೆ ಬಸವ ಕಲ್ಯಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ನಗರದಾದ್ಯಂತ ಪೊಲೀಸರು ಪಥ ಸಂಚಲನ ನಡೆಸಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರಮೋದ್ ಮುತಾಲಿಕ್ ಮತ್ತು ಸಿದ್ದಲಿಂಗ ಸ್ವಾಮೀಜಿ ಭಾಗಿ

ಇನ್ನು ಈ ಸಭೆಯಲ್ಲಿ ಶ್ರೀರಾಮ ಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ ಮತ್ತು ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಸಹ ಭಾಗಿಯಾಗಲಿದ್ದಾರೆ. ಕಳೆದ ವಾರ ಇಬ್ಬರು ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾಡಳಿತ ನಿರ್ಬಂಧ ಹಾಕಿತ್ತು. ಜಿಲ್ಲಾಡಳಿತದ ಆದೇಶ ಪ್ರಶ್ನಿಸಿ ಶ್ರೀರಾಮ ಸೇನೆ ನ್ಯಾಯಾಲಯದ ಮೊರೆ ಹೋಗಿತ್ತು. ನ್ಯಾಯಾಲಯ ಜಿಲ್ಲಾಡಳಿತ ಆದೇಶ ತೆರವುಗೊಳಿಸಿದ ಹಿನ್ನೆಲೆ ಈ ಇಬ್ಬರು ನಾಯಕರು ಇಂದು ಬಸವಕಲ್ಯಾಣದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ:  Anubhava Mantapa: ಯಾವ ಆಧಾರದಲ್ಲಿ ಲಿಂಗಾಯತರು, ಮುಸ್ಲಿಮರು ಅಣ್ತಮ್ಮಂದಿರು ಅಂತಾ ಹೇಳಿದ್ದರಿ? ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಶ್ನೆ

ನಗರದಲ್ಲಿ ಬಿಗಿ ಪೊಲೀಸ್ ಭಿಗಿ ಭದ್ರತೆ

ನಗರದ 14 ಸ್ಥಳಗಳಲ್ಲಿ ಸಿಪಿಐ ನೇತೃತ್ವದಲ್ಲಿ ಬಿಗಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ವಿವಾದಿತ ಸ್ಥಳವಾದ ಪೀರಪಾಷಾ ಬಂಗ್ಲಾ, ಪರುಷ ಕಟ್ಟೆ, ಬಸವೇಶ್ವರ ದೇವಸ್ಥಾನ, ತೇರು ಮೈದಾನ ಸೇರಿದಂತೆ 14 ಸ್ಥಳಗಳಲ್ಲಿ ಭಿಗಿ ಭದ್ರತೆ ಕೈಗೊಳ್ಳಲಾಗಿದೆ. ಎಸ್ ಪಿ, ಎಎಸ್ ಪಿ, ಮೂವರು ಡಿವೈಎಸ್ ಪಿ, ಸಿಪಿಐ, ಪಿಎಸ್ಐ, ಕೆಎಸ್ಆರ್ ಪಿ, ಡಿಎಆರ್ ತುಕಡಿ ಸೇರಿ ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ.

ವಿವಿಧ ರಾಜ್ಯಗಳಿಂದ ಮಠಾಧೀಶರ ಆಗಮನ ಸಾಧ್ಯತೆ

ಬಸವಕಲ್ಯಾಣ ನಗರದ  ತೇರು ಮೈದಾನದಲ್ಲಿ 11 ಗಂಟೆಗೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆವತಿಯಿಂದ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗದಿಂದ ಮಠಾಧೀಶರು ಶರಣರು  ಬರುವ ಸಾಧ್ಯತೆ ಇದೆ. ಮೂಲ ಅನುಭವ ಮಂಟಪ ಉಳಿವಿಗಾಗಿ ಈ ಹೋರಾಟ ಮಾಡಲಾಗುತ್ತಿದೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಸೇರಿದಂತೆ 770 ಮಠಾಧೀಶರು ಶಗರಣರು ಕಾರ್ಯಕ್ರಮ ಭಾಗಿಯಾಗುವ ಸಾಧ್ಯತೆಗಳಿವೆ ಎಂದು ತಡೋಳ ರಾಜೇಶ್ವರ ಶಿವಚಾರ್ಯ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಸಾಮರಸ್ಯ ಕೆಡಿಸುವ ಕಾರ್ಯವಲ್ಲ

ಈ ಕಾರ್ಯಕ್ರಮದಲ್ಲಿ ಹಲವಾರು ಸ್ವಾಮಿ ಹಾಗೂ ಬಸವ ಭಕ್ತರು ಭಾಗವಹಿಸುವ ನಿರೀಕ್ಷೆಗಳಿವೆ. ಹಳೆ ಅನುಭವ ಮಂಟಪ ಚಿಂತನೆ ಮಾಡಲು ಬಸವಕಲ್ಯಾಣನಲ್ಲಿ ಜಾಥಾ ಹಮ್ಮಿಕೊಳ್ಳಲಾಗಿದೆ. ನಾಡಿನ ಮಠಾದೀಶರು ಪುಣ್ಯ ಭೂಮಿಗೆ ಬರುತ್ತಿದ್ದಾರೆ. ಸಾಮಾಜಿಕ ಸಾಮರಸ್ಯ ಕೆಡಿಸುವ ಕಾರ್ಯವಲ್ಲ. ಸಾಮರಸ್ಯ ಬೆಳೆಸಲು ಜಾಥಾ ಮಾಡಲಾಗುತ್ತದೆ. ಸರಕಾರ ಮಧ್ಯೆಸ್ಥಿಕೆ ವಹಿಸಿ ಪೀರ್ ಪಾಶಾ ದರ್ಗಾದ ಬಗ್ಗೆ ಸತ್ಯಸತ್ಯತೆ ಗುರುತು ಮಾಡಿ ತಡೋಳ ರಾಜೇಶ್ವರ ಶಿವಾಚಾರ್ಯ ಸ್ವಾಮಿ ಹೇಳಿಕೆ ನೀಡಿದ್ದಾರೆ

ಇದನ್ನೂ ಓದಿ: Anubhava Mantapa Vs Peer Pasha Dargah: ಪೀರ್ ಪಾಶಾ ದರ್ಗಾದಲ್ಲಿದೆಯಾ ಅನುಭವ ಮಂಟಪ?

ಸಮೀಕ್ಷೆಗೆ ಬಸವ ಭಕ್ತರ ಆಗ್ರಹ

ಅನುಭವ ಮಂಟಪದ ವ್ಯಾಪ್ತಿಯಲ್ಲಿಯೇ ಪೀರ್ ಪಾಶಾ ದರ್ಗಾವಿದೆ. ಮೂಲ ಅನುಭವ ಮಂಟಪ (Anubhava Mantapa) ಈ ಪೀರ್ ಪಾಶಾ ದರ್ಗಾದಲ್ಲಿದೆ ಎಂಬ ವಾದ ಚರ್ಚೆಗೆ ಗ್ರಾಸವಾಗಿದೆ. 12ನೇ ಶತಮಾನದಲ್ಲಿ ಬಸವಣ್ಣವರ (Basavanna) ಅನುಭವ ಮಂಟಪ ನಿರ್ಮಾಣ ಮಾಡಿದ್ರು. ತದನಂತರ ಆಡಳಿತಕ್ಕೆ ಬಂದ ನವಾಬರು (Nawab) ಈ ಜಾಗದಲ್ಲಿಯೇ ಪೀರ್ ಪಾಶಾ ದರ್ಗಾ ನಿರ್ಮಾಣ ಮಾಡಿರುವ ಅನುಮಾನಗಳಿವೆ ಎಂದು ಬಸವ ಭಕ್ತರು ಹೇಳುತ್ತಿದ್ದಾರೆ. ಈ ಸಂಬಂಧ ಸೂಕ್ತ ಸಮೀಕ್ಷೆ ನಡೆಸಬೇಕು ಎಂದು ಭಕ್ತರು ಆಗ್ರಹಿಸುತ್ತಿದ್ದಾರೆ.
Published by:Mahmadrafik K
First published: