Beef Ban: ಕರ್ನಾಟಕದಲ್ಲಿ ಈಗ್ಲೂ ನಡೀತಿದೆ ಗೋಮಾಂಸ ವ್ಯಾಪಾರ; ಕಾನೂನು ಪ್ರಶ್ನಿಸಿ ಟೀಕೆ!

ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ಗೋಮಾಂಸ ಲಭ್ಯತೆಯ ಕುರಿತು ಕರ್ನಾಟಕ ಸರಕಾರವನ್ನು ಪ್ರಶ್ನಿಸುವ ಸಾಮಾಜಿಕ ತಾಣದ ಪೋಸ್ಟ್ ಒಂದು ಕಳೆದ ವರ್ಷ ಸರಕಾರ ಜಾರಿಗೆ ತಂದ ಗೋಹತ್ಯೆ ವಿರೋಧಿ ಕಾನೂನಿನ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬೆಂಗಳೂರಿನ ರೆಸ್ಟೋರೆಂಟ್ (Bengaluru restaurant) ಒಂದರಲ್ಲಿ ಗೋಮಾಂಸ ಲಭ್ಯತೆಯ ಕುರಿತು ಕರ್ನಾಟಕ ಸರಕಾರವನ್ನು ಪ್ರಶ್ನಿಸುವ ಸಾಮಾಜಿಕ ತಾಣದ ಪೋಸ್ಟ್ ಒಂದು ಕಳೆದ ವರ್ಷ ಸರಕಾರ ಜಾರಿಗೆ ತಂದ ಗೋಹತ್ಯೆ (Cow Slaughter) ವಿರೋಧಿ ಕಾನೂನಿನ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ. ಕಾನೂನು ಜಾರಿಯಲ್ಲಿದ್ದರೂ ರಾಜ್ಯದ ರೆಸ್ಟೋರೆಂಟ್‌ಗಳಲ್ಲಿ ಗೋಮಾಂಸವನ್ನು ನಿರ್ಭಯವಾಗಿ ಮಾರಾಟ ಮಾಡಲಾಗುತ್ತಿದೆ ಇದಕ್ಕೆ ಕಾನೂನು ಅನ್ವಯವಾಗುವುದಿಲ್ಲವೇ ಎಂಬುದಾಗಿ ಬಳಕೆದಾರರೊಬ್ಬರು ಸರಕಾರವನ್ನು ನೇರವಾಗಿ ಪ್ರಶ್ನಿಸಿದ್ದಾರೆ. ಟ್ವಿಟ್ಟರ್ (Twitter) ಬಳಕೆದಾರರಾದ ಸತೀಶ್ ಅಣ್ಣಾ ಎಂಬುವವರು ಗೋಮಾಂಸವನ್ನು ಎಗ್ಗಿಲ್ಲದೆ ರಾಜ್ಯದಲ್ಲಿ ಮಾರಾಟ ಮಾಡುತ್ತಿರುವ ಕುರಿತು ನೇರವಾಗಿ ಸರಕಾರವನ್ನೇ ಪ್ರಶ್ನಿಸಿದ್ದು, ಕರ್ನಾಟಕದಲ್ಲಿ (Karnataka) ಗೋಮಾಂಸ ನಿಷೇಧ ಹಿಂದೂಗಳನ್ನು ಮೂರ್ಖರನ್ನಾಗಿಸುವ ಬಿಜೆಪಿ ಸರಕಾರದ ಕಣ್ಣುಕಟ್ಟಿನ ಆಟವಾಗಿದೆ.

ಬೆಂಗಳೂರಿನಂತಹ ಮಹಾನಗರಗಳಲ್ಲಿ ಗೋಮಾಂಸ ನಿತ್ಯವೂ ಮಾರಾಟವಾಗುತ್ತಿದೆ. ಮುಖ್ಯಮಂತ್ರಿಗಳನ್ನು ತಮ್ಮ ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿರುವ ಸತೀಶ್ ಅಣ್ಣಾ ಅವರು, ಮಾನ್ಯ ಮುಖ್ಯಮಂತ್ರಿಗಳಿಗೆ ಇದನ್ನು ನಿಲ್ಲಿಸಲು ಹಾಗೂ ನಿಷೇಧಿಸಲು ಧೈರ್ಯವಿಲ್ಲವೆಂದು ಮೂದಲಿಸಿದ್ದಾರೆ.

ಗೋಹತ್ಯೆ ವಿರೋಧಿ ಕಾನೂನು:
ಕರ್ನಾಟಕದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರವು ಜನವರಿ 2021 ರಲ್ಲಿ ಕಟ್ಟುನಿಟ್ಟಾದ ಗೋಹತ್ಯೆ ವಿರೋಧಿ ಕಾನೂನನ್ನು ಜಾರಿಗೆ ತಂದಿತು. ಈ ಕಾನೂನಿನ ಅನ್ವಯ ಜಾನುವಾರುಗಳ (ಹಸು, ಗೂಳಿ, ಎತ್ತು) ಸಾಗಣೆ, ಮಾರಾಟ ಹಾಗೂ ವಧಿಸುವುದು ಕಾನೂನು ಬಾಹಿರವಾಗಿದೆ. ಅದಾಗ್ಯೂ 2021 ರಲ್ಲಿ ಸರಕಾರವು ಜಾರಿಗೊಳಿಸಿದ ಗೋಹತ್ಯೆ ವಿರೋಧಿ ಕಾನೂನು ಎಲ್ಲಾ ಸ್ವರೂಪಗಳಲ್ಲೂ ಗೋಮಾಂಸವನ್ನು ನಿಷೇಧಿಸಲಿಲ್ಲ.

ಇದನ್ನೂ ಓದಿ: Bharat Jodo Yatra: ಕರ್ನಾಟಕದಲ್ಲಿ 21 ದಿನ, 511 ಕಿಮೀ ಪಾದಯಾತ್ರೆ; ಇಲ್ಲಿದೆ ರೂಟ್ ಮ್ಯಾಪ್ಈ ಕಾನೂನಿನಲ್ಲಿ ಗೋಮಾಂಸ ನಿಷೇಧ ಎಂದು ವ್ಯಾಪಕವಾಗಿ ವ್ಯಾಖ್ಯಾನಿತಗೊಂಡಿದ್ದರೂ ಇತರ ರಾಜ್ಯಗಳಿಂದ ಗೋಮಾಂಸ ಸಂಗ್ರಹಣೆ ಹಾಗೂ ಸಾಗಣೆಯನ್ನು ಕಾಯ್ದೆಯು ನಿರ್ಬಂಧಿಸದೇ ಇರುವ ಕಾರಣ ರಾಜ್ಯದಲ್ಲಿ ಗೋಮಾಂಸ ಇನ್ನೂ ಲಭ್ಯವಿದೆ. ಅಂತೆಯೇ 13 ವರ್ಷ ಮೇಲ್ಪಟ್ಟ ಎಮ್ಮೆಗಳ ಹತ್ಯೆ ಕೂಡ ಇನ್ನೂ ನಿಂತಿಲ್ಲ.

ಗೋಹತ್ಯೆ ವಿರೋಧಿ ಕಾನೂನಿಂದ ಬಾಧಿತರಾದವರು
ಈ ಕಾನೂನು ಗ್ರಾಮೀಣ ಪ್ರದೇಶಗಳಲ್ಲಿರುವ ಸಣ್ಣ ಕೃಷಿಕರು ಹಾಗೂ ಚರ್ಮ ಕೆಲಸಗಾರರು ಮತ್ತು ಮಾಂಸ ರಫ್ತು ಉದ್ಯಮದಲ್ಲಿ ತೊಡಗಿಕೊಂಡಿರುವ ಜನರನ್ನು ಬಾಧಿಸುತ್ತದೆ ಎಂದು ಸುದ್ದಿಮಾಧ್ಯಮ ವರದಿ ಮಾಡಿತ್ತು. ದಲಿತರು ಹಾಗೂ ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಸುಬಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಶಂಕಿತ ಜಾನುವಾರು ಸಾಗಣೆಯನ್ನು ಪೊಲೀಸರಿಗೆ ವರದಿ ಮಾಡುವ ದಯಾಳುಗಳನ್ನು ಹೊಸ ಕಾನೂನು ರಕ್ಷಿಸುತ್ತದೆ. ಕರ್ನಾಟಕದಲ್ಲಿರುವ ಹಿಂದೂ ಸಂಘಟನೆಗಳು ಗೋವನ್ನು ಮಾತೆಯ ರೂಪದಲ್ಲಿ ಪೂಜಿಸುತ್ತಿರುವುದರಿಂದ ಗೋಮಾಂಸ ನಿಷೇಧಕ್ಕಾಗಿ ಹಿಂದಿನಿಂದಲೂ ಆಗ್ರಹಿಸುತ್ತಿತ್ತು. ಹೊಸ ಕಾನೂನು ಜಾರಿಗೆ ಬಂದ ನಂತರ, 2021 ರಲ್ಲಿ ಅದರ ಅಡಿಯಲ್ಲಿ 500 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಂಘಟನೆಯ ಕಾರ್ಯಕರ್ತರು ತಿಳಿಸಿದ್ದಾರೆ.

ಪ್ರತಿ ಜಿಲ್ಲೆಯಲ್ಲಿ ಗೋಶಾಲೆಗಳನ್ನು ಸ್ಥಾಪಿಸುವ ಚಿಂತನೆ  
ತಜ್ಞರು ಉಲ್ಲೇಖಿಸಿರುವಂತೆ ಕಾನೂನು ಬದ್ಧ ಉದ್ದೇಶಗಳಿಗಾಗಿ ದನಗಳನ್ನು ಸಾಗಿಸುವುದೂ ಕೂಡ ಇಂದಿನ ದಿನಗಳಲ್ಲಿ ಸ್ವಯಂ ಘೋಷಿತ ಗೋರಕ್ಷಕರಿಂದಾಗಿ ಅಪಾಯಕಾರಿಯಾಗಿದೆ ಎಂದು ಹೇಳಿದ್ದಾರೆ. ಮಾರ್ಚ್ 2021 ರಲ್ಲಿ ದನ ಸಾಗಾಟವನ್ನು ವೃತ್ತಿಯಾಗಿಸಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಇಬ್ಬರು ಮುಸ್ಲಿಂ ಚಾಲಕರ ಮೇಲೆ ಅವರ ವಾಹನ ಖಾಲಿಯಾಗಿದ್ದರೂ ಬಜರಂಗದಳದ ಸದಸ್ಯರು ಸೇರಿ 25 ಜನರು ಹಲ್ಲೆ ನಡೆಸಿದ್ದರು.

ಇದನ್ನೂ ಓದಿ:  Taliban Rules: ಅಫ್ಘನ್ ಯುವತಿಯರು ವಿದೇಶಕ್ಕೆ ಹೋಗುವಂತಿಲ್ಲ! ತಾಲಿಬಾನ್ ಸರ್ಕಾರದ ಹೊಸ ರೂಲ್ಸ್

ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಗೋಶಾಲೆಗಳನ್ನು ಸ್ಥಾಪಿಸುವ ಮೂಲಕ ರೈತರ ಮೇಲಿನ ಹೊರೆ ಕಡಿಮೆ ಮಾಡಲು ರಾಜ್ಯ ಸರಕಾರ ಚಿಂತನೆ ನಡೆಸಿದೆ. ಅದಾಗ್ಯೂ ರಾಜ್ಯದಲ್ಲಿ ಬೀಡಾಡಿ ದನಗಳನ್ನು ನೋಡಿಕೊಳ್ಳಲು ಗೋಶಾಲೆಗಳನ್ನು ಸ್ಥಾಪಿಸುವ ಬಗ್ಗೆ ರಾಜ್ಯ ಸರ್ಕಾರ ಸಲ್ಲಿಸಿದ ಅನುಸರಣೆ ಅಫಿಡವಿಟ್‌ನಿಂದ ಕರ್ನಾಟಕ ಹೈಕೋರ್ಟ್ ತೃಪ್ತಿ ಹೊಂದಿಲ್ಲ ಎಂದು ತಿಳಿಸಿತ್ತು.
Published by:Ashwini Prabhu
First published: