• Home
  • »
  • News
  • »
  • state
  • »
  • ದೆಹಲಿ ಹಿಂಸಾಚಾರ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ; ರಾಜಭವನಕ್ಕೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರು

ದೆಹಲಿ ಹಿಂಸಾಚಾರ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ; ರಾಜಭವನಕ್ಕೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರು

ದೆಹಲಿ ಗಲಭೆ ಖಂಡಿಸಿ ರಾಜಭವನದ ಎದುರು ಪ್ರತಿಭಟಿಸುತ್ತಿರುವ ಪ್ರತಿಭಟನಾಕಾರರು.

ದೆಹಲಿ ಗಲಭೆ ಖಂಡಿಸಿ ರಾಜಭವನದ ಎದುರು ಪ್ರತಿಭಟಿಸುತ್ತಿರುವ ಪ್ರತಿಭಟನಾಕಾರರು.

ದೆಹಲಿ ಗೆಲಭೆಯನ್ನು ಖಂಡಿಸಿ ರಾಷ್ಟ್ರದೆಲ್ಲೆಡೆ  ಖಂಡನೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೂ ಪ್ರತಿಭಟನೆಗಳು ಕಾವೇರುತ್ತಿವೆ. ಸಿಎಎ-ಎನ್​ಆರ್​ಸಿ ವಿರೋಧಿ ಸಂಘಟನೆ ಇಂದು ದೆಹಲಿ ಗಲಭೆಯನ್ನು ಖಂಡಿಸಿ ರಾಜಭವನದ ಎದುರು ಪ್ರತಿಭಟನೆಗೆ ಕರೆ ನೀಡಿದ್ದವು. ನೂರಾರು ಸಂಖ್ಯೆಯಲ್ಲಿ ಒಟ್ಟಾಗಿದ್ದ ಯುವಕರು ರಾಜಭವನದ ಎದುರು ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.

ಮುಂದೆ ಓದಿ ...
  • Share this:

ಬೆಂಗಳೂರು (ಫೆಬ್ರವರಿ 27); ರಾಷ್ಟ್ರ ರಾಜಧಾನಿಯಲ್ಲಿ ಕಳೆದ ಸೋಮವಾರ ಸಂಜೆ ಆರಂಭವಾದ ಗಲಭೆಗೆ ಈವರೆಗೆ ಸುಮಾರು 34 ಜನ ಜೀವ ಕಳೆದುಕೊಂಡಿದ್ದರೆ, 200ಕ್ಕೂ ಹೆಚ್ಚು ಜನ ಗಂಭೀರ ಗಾಯಕ್ಕೊಳಗಾಗಿದ್ದಾರೆ. ನಾಲ್ಕು ದಿನವಾದರೂ ಗಲಭೆಯನ್ನು ತಡೆಗಟ್ಟಲು ದೆಹಲಿ ಪೊಲೀಸರಿಂದ ಸಾಧ್ಯವಾಗುತ್ತಿಲ್ಲ, ಪರಿಣಾಮ ಈಶಾನ್ಯ ದೆಹಲಿಯಲ್ಲಿ ಪರಿಸ್ಥಿತಿ ಮತ್ತು ಜನಜೀವನ ದಿನೇ ದಿನೇ ಬಿಗಡಾಯಿಸುತ್ತಲೇ ಇದೆ.

ದೆಹಲಿ ಗೆಲಭೆಯನ್ನು ಖಂಡಿಸಿ ರಾಷ್ಟ್ರದೆಲ್ಲೆಡೆ  ಖಂಡನೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೂ ಪ್ರತಿಭಟನೆಗಳು ಕಾವೇರುತ್ತಿವೆ. ಸಿಎಎ-ಎನ್​ಆರ್​ಸಿ ವಿರೋಧಿ ಸಂಘಟನೆ ಇಂದು ದೆಹಲಿ ಗಲಭೆಯನ್ನು ಖಂಡಿಸಿ ರಾಜಭವನದ ಎದುರು ಪ್ರತಿಭಟನೆಗೆ ಕರೆ ನೀಡಿದ್ದವು. ನೂರಾರು ಸಂಖ್ಯೆಯಲ್ಲಿ ಒಟ್ಟಾಗಿದ್ದ ಯುವಕರು ರಾಜಭವನದ ಎದುರು ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.

ಈ ವೇಳೆ ಪ್ರತಿಭಟನಾಕಾರರು ರಾಜಭನದ ಒಳಗೆ ನುಗ್ಗಲು ಯತ್ನಿಸಿದ್ದಾರೆ. ಆದರೆ, ಪೊಲೀಸರು ಪ್ರತಿಭಟನಾಕಾರರನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗದ್ದಾರೆ.

ಇದನ್ನೂ ಓದಿ : ಬಿಜೆಪಿ ನಾಯಕರು ಅಧಿಕಾರಕ್ಕಾಗಿ ಅಮಾಯಕರನ್ನು ಬಲಿ ಪಡೆಯುತ್ತಿದ್ದಾರೆ, ದೆಹಲಿ ಗಲಭೆಗೆ ಅವರೇ ಹೊಣೆ; ಹೆಚ್​ಡಿಕೆ

Published by:MAshok Kumar
First published: