ಬೆಂಗಳೂರಿನಲ್ಲಿ ಬಾಂಗ್ಲಾ ಉಗ್ರರ ಕರಿನೆರಳು; ನಗರದ ಪಿಜಿಯಲ್ಲಿ ವಾಸವಿದ್ದ ಅನ್ಸರುಲ್ಲಾ ಟೀಮ್ ಸದಸ್ಯರು; ಎನ್ಐಎ ತನಿಖೆ

ಆರೋಪಿ ಫರ್ಹಾನ್ ಬಾಂಗ್ಲಾದ ಅನ್ಸರುಲ್ಲಾ ಸಂಘಟನೆಯ ಸದಸ್ಯನಾಗಿದ್ದಾನೆ. ಈತ ಹಾಗೂ ಮತ್ತೊಬ್ಬ ಇಬ್ಬರೂ ಸೋಲದೇವನಹಳ್ಳಿಯ ಪೇಯಿಂಗ್ ಗೆಸ್ಟ್​​ನಲ್ಲಿ ವಿದ್ಯಾರ್ಥಿಗಳ ಸೋಗಿನಲ್ಲಿ ಬಾಡಿಗೆ ಪಡೆದು ನೆಲಸಿದ್ದರು.

news18
Updated:November 22, 2019, 5:34 PM IST
ಬೆಂಗಳೂರಿನಲ್ಲಿ ಬಾಂಗ್ಲಾ ಉಗ್ರರ ಕರಿನೆರಳು; ನಗರದ ಪಿಜಿಯಲ್ಲಿ ವಾಸವಿದ್ದ ಅನ್ಸರುಲ್ಲಾ ಟೀಮ್ ಸದಸ್ಯರು; ಎನ್ಐಎ ತನಿಖೆ
ಪ್ರಾತಿನಿಧಿಕ ಚಿತ್ರ.
  • News18
  • Last Updated: November 22, 2019, 5:34 PM IST
  • Share this:
ಬೆಂಗಳೂರು(ನ. 22): ಕರ್ನಾಟಕದಲ್ಲಿ ಉಗ್ರಗಾಮಿಗಳ ಜಾಲ ಬೇರೂರಿರುವ ಬಗ್ಗೆ ಗುಪ್ತಚರ ಸಂಸ್ಥೆಗಳು ಮತ್ತು ಪೊಲೀಸರು ಆಗಾಗ ಎಚ್ಚರಿಸುತ್ತಲೇ ಇವೆ. ಬೆಂಗಳೂರಿನಲ್ಲಿ ಬಾಂಗ್ಲಾದೇಶದ ಜಮಾತ್ ಉಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರಗಾಮಿಗಳು ಬಾಂಗ್ಲಾ ವಲಸಿಗರ ವೇಷದಲ್ಲಿ ವ್ಯಾಪಿಸುತ್ತಿದ್ದಾರೆಂದು ಎನ್​ಐಎ ತಿಳಿಸಿತ್ತು. ಈಗ ಮತ್ತೊಂದು ಬಾಂಗ್ಲಾ ಉಗ್ರ ಸಂಘಟನೆಯು ನಗರದಲ್ಲಿ ಬೇರು ಬಿಡಲು ಯತ್ನಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಮೇಘಾಲಯದಲ್ಲಿ ಬಂಧಿತನಾಗಿರುವ ಬಾಂಗ್ಲಾ ಉಗ್ರ ಫರ್ಹಾನ್​ಗೆ ಬೆಂಗಳೂರಿನ ನಂಟು ಇರುವುದು ತಿಳಿದುಬಂದಿದೆ.

ಕೋಲ್ಕತಾದ ಎನ್​ಐಎ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಈತ ತಾನು ಬೆಂಗಳೂರಿನಲ್ಲಿ ವಾಸವಿದ್ದುದಾಗಿ ಮಾಹಿತಿ ನೀಡಿದ್ದಾನೆ. ವಿದ್ಯಾರ್ಥಿಯ ಸೋಗಿನಲ್ಲಿ ಈತ ಸೋಲದೇವನಹಳ್ಳಿಯ ಪಿಜಿಯೊಂದರಲ್ಲಿ ವಾಸವಿದ್ದುದಾಗಿ ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಎನ್​ಐಎ ಅಧಿಕಾರಿಗಳು ಆರೋಪಿ ಫರ್ಹಾನ್​ನನ್ನು ಕರೆ ತಂದು ತನಿಖೆ ನಡೆಸಿದ್ದಾರೆ. ಆರೋಪಿ ತಂಗಿದ್ದ ಪಿಜಿಯನ್ನು ತಪಾಸಣೆ ನಡೆಸಿದ್ದಾರೆ. ಹಾಗೆಯೇ, ಉಗ್ರರ ಇತರ ಅಡಗುದಾಣಗಳನ್ನು ಪತ್ತೆ ಮಾಡಲು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಕರ್ನಾಟಕದ 6 ನೇ ವಿಮಾನ ನಿಲ್ದಾಣ ಕಲಬುರ್ಗಿ ಆರಂಭ; ಇಲ್ಲಿದೆ ರಾಜ್ಯದ ಅತಿ ಉದ್ದದ ರನ್ ವೇ

ಆರೋಪಿ ಫರ್ಹಾನ್ ಬಾಂಗ್ಲಾದ ಅನ್ಸರುಲ್ಲಾ ಸಂಘಟನೆಯ ಸದಸ್ಯನಾಗಿದ್ದಾನೆ. ಈತ ಹಾಗೂ ಮತ್ತೊಬ್ಬ ಇಬ್ಬರೂ ಸೋಲದೇವನಹಳ್ಳಿಯ ಪೇಯಿಂಗ್ ಗೆಸ್ಟ್​​ನಲ್ಲಿ ವಿದ್ಯಾರ್ಥಿಗಳ ಸೋಗಿನಲ್ಲಿ ಬಾಡಿಗೆ ಪಡೆದು ನೆಲಸಿದ್ದರು.

ಕಳೆದ ತಿಂಗಳಷ್ಟೇ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಬಾಂಗ್ಲಾ ಉಗ್ರ ಸಂಘಟನೆ ಜಮಾತ್ ಉಲ್ ಮುಜಾಹಿದ್ದೀನ್​ನ ಜಾಲದ ಬಗ್ಗೆ ಸಾಕಷ್ಟು ವಿವರ ಬಹಿರಂಗಪಡಿಸಿತ್ತು. ಕರ್ನಾಟಕ, ಜಾರ್ಖಂಡ್, ಬಿಹಾರ್, ಮಹಾರಾಷ್ಟ್ರ ಮತ್ತು ಕೇರಳ ಮೊದಲಾದ ರಾಜ್ಯಗಳಲ್ಲಿ ಬಾಂಗ್ಲಾ ವಲಸಿಗರ ವೇಷದಲ್ಲಿ ನೆಲೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದ ಎನ್​ಐಎ ಅಧಿಕಾರಿಗಳು 125 ಶಂಕಿತ ಉಗ್ರರ ಪಟ್ಟಿ ಮಾಡಿದ್ದಾರೆ.

ಇದನ್ನೂ ಓದಿ: ನನ್ನ ತಂದೆ ನನ್ನ ಪರ ಪ್ರಚಾರ ಮಾಡೋದಿಲ್ಲ; ಶಿಸ್ತುಕ್ರಮದ ಪ್ರಶ್ನೆಯೇ ಇಲ್ಲ; ಶರತ್​​ ಬಚ್ಚೇಗೌಡ

ಮಯನ್ಮಾರ್​ನಲ್ಲಿ ರೋಹಿಂಗ್ಯಾ ಮುಸ್ಲಿಮರ ಮೇಲೆ ಅಲ್ಲಿಯ ಬೌದ್ಧರು ದೌರ್ಜನ್ಯ ನಡೆಸುತ್ತಿದ್ದಾರೆಂದು ಆಕ್ರೋಶಗೊಂಡಿರುವ ಜೆಎಂಬಿ ಉಗ್ರಗಾಮಿಗಳು ದಕ್ಷಿಣ ಭಾರತದಲ್ಲಿ ಬೌದ್ಧರು ಮತ್ತು ಬೌದ್ಧ ಮಂದಿರಗಳನ್ನು ಗುರಿಯಾಗಿಸಿ ದಾಳಿ ಮಾಡುವ ಸಂಚು ರೂಪಿಸಿದ್ದಾರೆ. ಬೆಂಗಳೂರೊಂದರಲ್ಲೇ 2014ರಿಂದ 2018ರ ಅವಧಿಯಲ್ಲಿ 20-22 ಅಡಗುದಾಣಗಳನ್ನು ನಿರ್ಮಿಸಿಕೊಂಡಿದ್ದಾರೆ. ಕರ್ನಾಟಕ-ತಮಿಳುನಾಡು ಗಡಿ ಭಾಗದಲ್ಲಿರುವ ಕೃಷ್ಣಗಿರಿಯಲ್ಲಿ ರಾಕೆಟ್ ಲಾಂಚರ್​ಗಳ ಟ್ರಯಲ್ ಕೂಡ ಮಾಡಿದ್ದಾರೆ ಎಂದು ಎನ್​ಐಎ ಅಧಿಕಾರಿಗಳು ಹೇಳಿದ್ದಾರೆ.ಈಗ ಅನ್ಸುರುಲ್ಲಾ ಬಾಂಗ್ಲಾ ಟೀಮ್ (ಎಬಿಟಿ) ಎಂಬ ಉಗ್ರ ಸಂಘಟನೆಯ ಜಾಲವೂ ಬೆಂಗಳೂರಿನಲ್ಲಿ ವ್ಯಾಪಿಸಿರುವುದು ಆತಂಕಕ್ಕೆ ಕಾರಣವಾಗಿದೆ.
First published: November 22, 2019, 5:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading