ಮಂಡ್ಯ (ಸೆ.18) : ಸಕ್ಕರೆನಾಡು ಮಂಡ್ಯದಲ್ಲಿ ದೇವಸ್ಥಾನಗಳು ಕಳ್ಳರ ಟಾರ್ಗೆಟ್ ಆಗುತ್ತಿವೆ. ದೇಗುಲದಲ್ಲಿ ದೇವರ ಆಭರಣಗಳು ಸೇರಿದಂತೆ ದೇವಾಲಯ ಹುಂಡಿ ಹಣವನ್ನು ಕದಿಯುವ ದುಷ್ಕರ್ಮಿಗಳ ಜಾಲ ಜಿಲ್ಲೆಯಲ್ಲಿ ಬೀಡು ಬಿಟ್ಟಿದೆ. ಇತ್ತೀಚೆಗಷ್ಟೆ ಮಂಡ್ಯದ ಅರ್ಕೇಶ್ವರ ದೇಗುಲದಲ್ಲಿ ಮೂವರು ಅರ್ಚಕರನು ಕೊಂದು ಹುಂಡಿ ಹಣ ಕದ್ದೋಯ್ದಿದ್ದರು. ಆ ಪ್ರಕರಣವನ್ನು ಪೊಲೀಸರು ಕೇವಲ 38 ಗಂಟೆಯಲ್ಲಿ ಭೇಧಿಸಿ ಕಳ್ಳರ ನ್ನು ಹಿಡಿದಿದ್ದರು. ಈ ಕಹಿ ಘಟನೆ ಮಾಸುವ ಮುನ್ನವೇ ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ದೇಗಲದ ದರೋಡೆ ನಡೆದಿರುವುದು ಪೊಲೀಸರ ನಿದ್ದೆಗೆಡಿಸಿದೆ.
ಹೌದು, ಕಳೆದವಾರಷ್ಟೆ ಮಂಡ್ಯದ ಅರ್ಕೇಶ್ವರ ದೇವಸ್ಥಾನಲ್ಲಿ ಮೂವರ ಅರ್ಚಕರ ಹತ್ಯೆಗೈದು ದೇಗುಲದ ಹುಂಡಿ ಹಣ ಕಳವು ಮಾಡಲಾಗಿತ್ತು. ಕೇವಲ 38 ಗಂಟೆಯಲ್ಲಿ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸುವ ಮೂಲಕ ಪೊಲೀಸರು ನಿಟ್ಟುಸಿರು ಬಿಟ್ಟಿದ್ದರು. ಈ ಪ್ರಕರಣ ಮರೆಯುವ ಮೊದಲೇ ಇದೀಗ ಅದೇ ರೀತಿಯ ಮತ್ತೊಂದು ಪ್ರಕರಣ ಮಂಡ್ಯದ ಮದ್ದೂರು ತಾಲೂಕಿ ನ ಕೆ.ಶೆಟ್ಟಹಳ್ಳಿ ಗ್ರಾಮದ ಬಳಿ ನಡೆದಿದೆ. ಗ್ರಾಮದ ಆಂಜನೇಯ ದೇವಾಲಯದ ಬಾಗಿಲು ಮುರಿದಿರುವ ದುಷ್ಕರ್ಮಿಗಳು ದೇವಾಲಯದ ಹುಂಡಿಯನ್ನು ಹೊತ್ತೊದ್ದು ಹಣ ತೆಗೆದು ಹುಂಡಿ ಬಿಸಾಡಿ ಹೋಗಿದ್ದಾರೆ. ಅರ್ಕೇಶ್ವರ ದೇಗುಲ ಕಳ್ಳರನ್ನು ಹಿಡದು ನೆಮ್ಮದಿಯಿಂದ ಇದ್ದ ಪೊಲೀಸರಿಗೆ ಅಂತಹದ್ದೆ ಮತ್ತೊಂದು ಪ್ರಕರಣ ನಡೆದಿರೋದು ಇದೀಗ ಹೊಸ ತಲೆ ನೋವಾಗಿ ಪರಿಣಮಿಸಿದೆ.
ಇನ್ನು ಮದ್ದೂರು ತಾಲೂಕಿನ ಕೆ. ಶೆಟ್ಟಹಳ್ಳಿಯ ಶ್ರೀ ಆಂಜನೇಯ ದೇಗಲದಲ್ಲಿ ನಡೆದ ಕಳ್ಳತನದ ಸಂಪೂರ್ಣ ದೃಶ್ಯ ದೇಗುಲದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಡರಾತ್ರಿ ನಾಲ್ಕೈದು ಯುವಕರ ತಂಡ ದೇಗುಲದ ಬಳಿ ಬಂದು ದೇಗುಲದ ಬಾಗಿಲು ಮುರಿದು ದರೋಡೆ ನಡೆಸಿದ್ದಾರೆ. ದುಷ್ಕರ್ಮಿ ಯುವಕರು ಮದ್ಯ ಸೇವಿಸಿ ದೇಗುಲದ ದರೋಡೆ ನಡೆಸಿದ್ದಾರೆ. ಮುಂಜಾನೆ ಗ್ರಾಮಸ್ಥರು ನೋಡಿದಾಗ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಮದ್ದೂರಿನ ಕೆ.ಎಂ. ದೊಡ್ಡಿ ಪೊಲೀಸರು ಹಾಗೂ ಎಸ್ಪಿ ಪರು ಶುರಾಮ್ ಆಗಮಿಸಿ ಪರಿಶೀಲನೆ ನಡೆಸಿದ್ದು ದೇಗುಲದ ಸಿಸಿಟಿವಿಯನ್ನು ವಶಕ್ಕೆ ಪಡೆದ ಕಳ್ಳರಿಗಾಗಿ ಬಲೆ ಬೀಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ