Suspected Terrorist: ಉಗ್ರರ ಅಡಗು ತಾಣವಾಗಿದ್ಯಾ ಬೆಂಗಳೂರು? ಮತ್ತೊಬ್ಬ ಶಂಕಿತ ಉಗ್ರನ ಬಂಧನ

ಬೆಂಗಳೂರಿನ ಮತ್ತೊಂದು ಭಾಗದಲ್ಲಿ ಸಿಸಿಬಿ ಅಧಿಕಾರಿಗಳ ಕಾರ್ಯಾಚರಣೆ ಮುಂದುವರಿದಿದೆ. ಒಟ್ಟು ನಾಲ್ಕು ತಂಡಗಳಾಗಿ ಸಿಸಿಬಿ ಕಾರ್ಯಾಚರಣೆ ನಡೆಸುತ್ತಿದೆ. ಅಕ್ತರ್ ಉಸೇನ್ ಹೇಳಿಕೆ ಮೇರೆಗೆ ಮತ್ತೊಬ್ಬ ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ.

ಸಿಸಿಬಿ

ಸಿಸಿಬಿ

  • Share this:
ಬೆಂಗಳೂರು (ಜು.25):  ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಉಗ್ರನನ್ನು (Suspected Terrorist) ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಳೆ ಮತ್ತೊಬ್ಬ ಶಂಕಿತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಬೆಂಗಳೂರಿನ (Bengaluru) ಮತ್ತೊಂದು ಭಾಗದಲ್ಲಿ ಸಿಸಿಬಿ ಅಧಿಕಾರಿಗಳ ಕಾರ್ಯಾಚರಣೆ (Operation of CCB Officers) ಮುಂದುವರಿದಿದೆ. ಒಟ್ಟು ನಾಲ್ಕು ತಂಡಗಳಾಗಿ ಸಿಸಿಬಿ ಕಾರ್ಯಾಚರಣೆ ನಡೆಸುತ್ತಿದೆ. ಅಕ್ತರ್ ಉಸೇನ್ ಹೇಳಿಕೆ ಮೇರೆಗೆ ಮತ್ತೊಬ್ಬ ಶಂಕಿತ ಉಗ್ರನನ್ನು ವಶಕ್ಕೆ ಪಡೆಯಲಾಗಿದೆ.

ನಿನ್ನೆ ರಾತ್ರಿ ಅಖ್ತರ್ ಹುಸೇನ್ ಬಂಧನ

ಬೆಂಗಳೂರಿನ ತಿಲಕ್ ನಗರದಲ್ಲಿ (Tilak Nagara, Bengaluru) ವಾಸವಾಗಿದ್ದ ಅಸ್ಸಾಂ (Assam) ಮೂಲದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು (CCB Police) ಕಳೆದ ರಾತ್ರಿ ವಶಕ್ಕೆ ಪಡೆದುಕೊಂಡಿದ್ದಾರೆ. ರಾತ್ರಿ ಸುಮಾರು 8 ಗಂಟೆಗೆ ದಾಳಿ ನಡೆಸಿದ ಮೂವತ್ತಕ್ಕೂ ಅಧಿಕ ಪೊಲೀಸರು ಅಖ್ತರ್ ಹುಸೇನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ತಿಲಕ್ ನಗರದ ಬಿಟಿಪಿ ಏರಿಯಾದ ಕಟ್ಟಡದ ಮೂರನೇ ಮಹಡಿಯಲ್ಲಿ ನಾಲ್ವರ ಜೊತೆ ಅಖ್ತರ್ ವಾಸವಾಗಿದ್ದನು.

ಮೊಬೈಲ್ ಟವರ್ ಲೊಕೇಷನ್ ಆಧರಿಸಿ ಅರೆಸ್ಟ್​

ಈ ಕೋಣೆಯಲ್ಲಿ ವಾಸವಾಗಿದ್ದ ಎಲ್ಲರೂ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ರು. ಆದ್ರೆ ಈ ಯುವಕರು ಹಗಲಿನ ವೇಳೆ ಹೊರಗೆ ಕಾಣಿಸಿಕೊಳ್ಳುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ವ್ಯಕ್ತಿಯ ಮೊಬೈಲ್ ಟವರ್ ಲೊಕೇಷನ್ (Mobile Tower Location) ಆಧರಿಸಿ ಆತ ಬರುವ ರೂಮಿಗೆ ಬರುವ ಸಮಯ ನೋಡಿಕೊಂಡು ಸಿಸಿಬಿ ದಾಳಿ ನಡೆಸಿದೆ.

ಇದನ್ನೂ ಓದಿ: Bengaluru: ಅನುಮಾನಾಸ್ಪದ ವ್ಯಕ್ತಿಯನ್ನ ವಶಕ್ಕೆ ಪಡೆದ ಸಿಸಿಬಿ; ಟವರ್ ಲೊಕೇಷನ್ ಆಧರಿಸಿ 30 ಪೊಲೀಸರಿಂದ ದಾಳಿ

ಸುಮಾರು ಒಂದು ವರ್ಷದಿಂದ ಈ ಯುವಕರು ಏರಿಯಾದಲ್ಲಿ ವಾಸವಾಗಿದ್ದರು. ಸಂಜೆ ಐದು ಗಂಟೆಗೆ ಮಪ್ತಿಯಲ್ಲಿ ಬಂದಿದ್ದ ಪೊಲೀಸ್ ತಂಡ ದಾಳಿಗೆ ಪ್ಲಾನ್ ರೂಪಿಸಿತ್ತು. ರಾತ್ರಿ ಎಂಟು ಗಂಟೆಗೆ ವ್ಯಕ್ತಿ ಬರುತ್ತಿರೋದನ್ನು ಗಮನಿಸಿ, ಸ್ಥಳೀಯ  ಪೊಲೀಸರ ಸಹಾಯದಿಂದ ಕಾರ್ಯಾಚರಣೆ ನಡೆಸಿದ್ದಾರೆ.

ಸಿಸಿಬಿ ಟೆಕ್ನಿಕಲ್ ವಿಂಗ್​ನಿಂದ ತನಿಖೆ

ಸಿಸಿಬಿ ಟೆಕ್ನಿಕಲ್ ವಿಂಗ್​ನಿಂದ ತನಿಖೆ ಮುಂದುವರಿದಿದೆ. ಶಂಕಿತ ಉಗ್ರ ಅಖ್ತರ್ ನಿಂದ ಪ್ರತಿಯೊಂದು ಮಾಹಿತಿ ಕಲೆಹಾಕುತ್ತಿದ್ದಾರೆ.  ಟೆಕ್ನಿಕಲ್ ಟೀಂ ಅಖ್ತರ್ ಮೊಬೈಲ್ ನನ್ನು ಸಂಪೂರ್ಣ ಪರಿಶೀಲನೆ ಮಾಡ್ತಿದೆ.  ಶಂಕಿತ ಉಗ್ರ‌ ನಿರಂತರವಾಗಿ ಯಾರ ಯಾರ ಜೊತೆ ಕಾಂಟ್ಯಾಕ್ಟ್ ನಲ್ಲಿ ಇದ್ದ ಅನ್ನೋದ್ರ ಮಾಹಿತಿ ಸಂಗ್ರಹ ಮಾಡಲಾಗ್ತಿದೆ.

ಕೆಲ ಡಿವೈಸ್ ಗಳ ಪರಿಶೀಲನೆ

ಶಂಕಿತ ಉಗ್ರನ ಬಳಿ ಸಿಕ್ಕಿರೋ ಕೆಲ ಡಿವೈಸ್ ಗಳ ಪರಿಶೀಲನೆ ನಡೆಸ್ತಿರೋ ಸಿಸಿಬಿ ಟೀಂ,  ಶಂಕಿತ ಉಗ್ರ ಬಳಸ್ತಿದ್ದ ಇಂಟರ್ನೆಟ್ ಡಿವೈಸ್, ನೆಟವರ್ಕ್, ಬಗ್ಗೆ ಪರಿಶೀಲನೆ, ಆತ ಸರ್ಚ್ ಮಾಡ್ತಿದ್ದ ಪ್ರಮುಖ ವೆಬ್ ಸೈಟ್ ಗಳು ಯಾವು ಅನ್ನೋದ್ರ ಪರಿಶೀಲನೆ ನಡೆಸಲಾಗುತ್ತಿದೆ. ಎಫ್ ಬಿ, ಟ್ವಿಟ್ಟರ್, ಟೆಲಿಗ್ರಾಂ ನ ಅಕೌಂಟ್ ಹಾಗೂ ಶಂಕಿತನ ಮ್ಯೂಚುಯಲ್‌ ಫ್ರೆಂಡ್ಸ್ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗಿದೆ.

ಇದನ್ನೂ ಓದಿ: MonkeyPox: ದೇಶದಲ್ಲಿ ಮಂಕಿಪಾಕ್ಸ್ ಕೇಸ್​ಗಳು ಪತ್ತೆ; ರೋಗ ತಡೆಗೆ ಕರ್ನಾಟಕದಲ್ಲಿ ಕಟ್ಟೆಚ್ಚರ- ಸುಧಾಕರ್

ಅನುಮಾಸ್ಪದ ಅಕೌಂಟ್ ಗಳ ಬಗ್ಗೆ ಮಾಹಿತಿ ಕಲೆ ಹಾಕ್ತಿರೋ ಟೆಕ್ನಿಕಲ್ ವಿಂಗ್, ಮತ್ತೊಂದೆಡೆ ಶಂಕಿತ ಉಗ್ರನ ಜೊತೆಯಿದ್ದ ಮೂವರನ್ನ ತೀವ್ರ ವಿಚಾರಣೆಗೆ ಒಳಪಡಿಸಿದೆ. ಎಂದಿನಿಂದ ಶಂಕಿತ ಇವರಿಗೆ ಪರಿಚಯ. ಆತನ ವರ್ತನೆ ಹೇಗಿತ್ತು, ಆತ ಯಾರ ಜೊತೆ ಜಾಸ್ತಿ ಮಾತಾಡ್ತಿದ್ದ. ಏನಾದ್ರು ಕೋಡ್ ವರ್ಡ್ ಬಳಸ್ತಿದ್ನಾ ಎನ್ನುವ ಕುರಿತು ಸಿಸಿಬಿ ವಿಚಾರಣೆ ನಡೆಸುತ್ತಿದೆ.

ಶಂಕಿತ ಉಗ್ರ 10 ದಿನ ಸಿಸಿಬಿ ವಶಕ್ಕೆ

ಪೇಸ್ ಬುಕ್ , ಟೆಲಿಗ್ರಾಂ ಮೆಸೆಂಜರ್ ಮೂಲಕ ಗ್ರೂಪ್ ಮಾಡಿಕೊಂಡಿದ್ದ. ಐ ಎಸ್ ಐ ಸೇರುವಂತೆ ಪ್ರೇರೇಪಿಸುತ್ತಿದ್ದ ಕೊಲ್ಕತ್ತಾ ಅಸ್ಸಾಂ ಚೆನ್ನೈ ಹೋಗಿ ಪರಿಶೀಲನೆ ನಡೆಸಬೇಕು ಎಂದು ನ್ಯಾಯಾಧೀಶರಿಗೆ ಎಸಿಪಿ ಧರ್ಮೇಂದ್ರ ಮಾಹಿತಿ ನೀಡಿದ್ರು. ಬಳಿಕ ಕೋರ್ಟ್​ ಶಂಕಿತ ವ್ಯಕ್ತಿಯನ್ನು 10 ದಿನ ಸಿಸಿಬಿ ವಶಕ್ಕೆ ನೀಡಿ ಆದೇಶ ನೀಡಿದೆ.
Published by:Pavana HS
First published: