• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • BBMP: ಗುತ್ತಿಗೆದಾರರಿಗೆ ಬಿಬಿಎಂಪಿ ಮುಖ್ಯ ಆಯುಕ್ತರು ಕೊಟ್ರು ಬಿಗ್​ ಶಾಕ್; ಕಾಮಗಾರಿ ಬಗ್ಗೆ ದೂರುಗಳಿದ್ರೆ ಬಿಲ್​ ಪಾವತಿಗೆ ಬ್ರೇಕ್!

BBMP: ಗುತ್ತಿಗೆದಾರರಿಗೆ ಬಿಬಿಎಂಪಿ ಮುಖ್ಯ ಆಯುಕ್ತರು ಕೊಟ್ರು ಬಿಗ್​ ಶಾಕ್; ಕಾಮಗಾರಿ ಬಗ್ಗೆ ದೂರುಗಳಿದ್ರೆ ಬಿಲ್​ ಪಾವತಿಗೆ ಬ್ರೇಕ್!

BBMP ಕಚೇರಿ

BBMP ಕಚೇರಿ

ಕಾಮಗಾರಿ ಗುಣಮಟ್ಟ ಹಾಗೂ ಬಿಲ್ ಪಾವತಿಯ ಸುಧಾರಣೆಗೆ ಮತ್ತಷ್ಟು ಕಠಿಣ ಕ್ರಮಗಳ ಜಾರಿಗೊಳಿಸಲು ಬಿಬಿಎಂಪಿ ಮುಂದಾಗಿದೆ. ಕಾಮಗಾರಿ ಬಗ್ಗೆ ದೂರು ಅಥವಾ ತನಿಖೆಗಳಿದ್ದರೆ ಕೂಡಲೇ ಹಣ ಬಿಡುಗಡೆ ತಡೆ ಹಿಡಿಯುವ ಹೊಸ ಸಂಪ್ರಾದಾಯಕ್ಕೆ ನಾಂದಿ ಹಾಡಿದೆ.

  • Share this:

ಬೆಂಗಳೂರು (ಸೆ. 21):  ಬಿಬಿಎಂಪಿ (BBMP) ಮೇಲೆ ಗುತ್ತಿಗೆದಾರರು 50% ಕಮಿಷನ್ (Commission) ಆರೋಪ ಮಾಡಿತ್ತು.‌ ಇದಕ್ಕೆ ಬಿಬಿಎಂಪಿ ಸರಿಯಾದ ಟಕ್ಕರ್ ಕೊಡಲು ಮುಂದಾಗಿದೆ. ಗುತ್ತಿಗೆದಾರ (Contractors) ಕಾಮಗಾರಿ (Construction) ವಿಚಾರಗಳ ಬಗ್ಗೆ ಅತೃಪ್ತಿ, ದೂರು, ತನಿಖೆ ಇದ್ರೆ ಕೂಡಲೇ ಬಿಲ್ ಸ್ಟಾಪ್ ಮಾಡಲು ಆದೇಶ ನೀಡಲಾಗಿದೆ.‌ ಈ ಮೂಲಕ ಕೊನೆಗೂ ಒಂದೊಳ್ಳೆ ಕೆಲಸಕ್ಕೆ ಬಿಬಿಎಂಪಿ ಮುಂದಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತರಿಂದ (BBMP Chief Commissioner) ಗುತ್ತಿಗೆದಾರರಿಗೆ ಮತ್ತೊಂದು ಶಾಕ್ ನೀಡಿದೆ. 


ಕಾಮಗಾರಿ ಬಗ್ಗೆ ದೂರುಗಳಿದ್ರೆ ಬಿಲ್​ಗಳಿಗೆ ಬ್ರೇಕ್​ ಹಾಕಿ


ಗುತ್ತಿಗೆದಾರರ ಕಾಮಗಾರಿ ಅಸಮಾಧಾನವಿದ್ದರೆ ಬಿಲ್ ಸ್ಥಗಿತ ಆನ್‌ಲೈನ್ ಪಾವತಿಗೆ ಬ್ರೇಕ್ ಹಾಕಲು ಮುಖ್ಯ ಆಯುಕ್ತರು, ವಲಯ ಆಯಕ್ತರಿಗೆ ಅನುಮತಿ ಹೊಸ ಆದೇಶ ಹೊರಡಿಸಿದ ಬಿಬಿಎಂಪಿ ಮುಖ್ಯ ಆಯುಕ್ತ
ಕಾಮಗಾರಿ ಗುಣಮಟ್ಟ ಹಾಗೂ ಬಿಲ್ ಪಾವತಿಯ ಸುಧಾರಣೆಗೆ ಮತ್ತಷ್ಟು ಕಠಿಣ ಕ್ರಮಗಳ ಜಾರಿಗೊಳಿಸಲು ಬಿಬಿಎಂಪಿ ಮುಂದಾಗಿದೆ. ಕಾಮಗಾರಿ ಬಗ್ಗೆ ದೂರು ಅಥವಾ ತನಿಖೆಗಳಿದ್ದರೆ ಕೂಡಲೇ ಹಣ ಬಿಡುಗಡೆ ಬ್ಲಾಕ್ ಮಾಡುವ (ತಡೆಹಿಡಿಯುವ) ಹೊಸ ಸಂಪ್ರಾದಾಯಕ್ಕೆ ನಾಂದಿ ಹಾಡಿದೆ.


ಬಿಬಿಎಂಪಿ ಮುಖ್ಯ ಆಯುಕ್ತರ ಆದೇಶ


ಇಂಟಿಗ್ರೇಟೆಡ್ ಫೈನಾನ್ಸಿಯಲ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಐಎಫ್‌ಎಂಸಿ) ಮೂಲಕ ಕಾಮಗಾರಿ ಬಿಲ್ ಪಾವತಿ ಮಾಡಲಾಗುತ್ತದೆ. ಬಿಬಿಎಂಪಿಯಿಂದ ಕೈಗೊಳ್ಳಲಾಗುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಿಲ್ ಪಾವತಿಗೂ ಮುನ್ನ ನಿರ್ದಿಷ್ಟ ಕಾಮಗಾರಿಗೆ ಬಗ್ಗೆ ದೂರು ಸಲ್ಲಿಕೆಯಾದರೆ. ತನಿಖೆ ನಡೆಯುತ್ತಿದ್ದರೆ. ಮುಖ್ಯ ಆಯುಕ್ತರು ಮತ್ತು ವಲಯ ಆಯುಕ್ತರುಗಳು ಸ್ಥಳ ಪರಿಶೀಲನೆ ವೇಳೆ ಕಾಮಗಾರಿ ಕುರಿತು ಅತೃಪ್ತಿ ಇದ್ದರೆ, ಕೂಡಲೇ ಆ ಕಾಮಗಾರಿಯ ಬಿಲ್ ಪಾವತಿಯನ್ನು ಐಎಫ್‌ಎಂಸಿ ನಲ್ಲಿ ಬ್ಲಾಕ್ ಮಾಡುವ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.


ಮುಖ್ಯ ಆಯುಕ್ತರ ಅನುಮೋದನೆ ಕಡ್ಡಾಯ


ಈ ರೀತಿ ಬ್ಲಾಕ್ ಮಾಡಲಾದ ಕಾಮಗಾರಿಯ ಬಿಲ್ ಪಾವತಿ ಆಗಬೇಕಾದರೆ ಸಂಬಂಧಪಟ್ಟ ವಲಯ ಆಯುಕ್ತರು ಅಥವಾ ಮುಖ್ಯ ಆಯುಕ್ತರ ಅನುಮೋದನೆ ಕಡ್ಡಾಯವಾಗಿದೆ. ಅವರೇ ಖುದ್ದಾಗಿ ಐಎಫ್‌ಎಂಸಿ ತಂತ್ರಾಂಶದಲ್ಲಿ ಮಾಡಲಾದ ಬ್ಲಾಕ್ ಅನ್ನು ಅನ್ ಬ್ಲಾಕ್ ಮಾಡಿದರೆ ಮಾತ್ರ ಗುತ್ತಿಗೆದಾರರಿಗೆ ಬಿಲ್ ಪಾವತಿ ಆಗಲಿದೆ. ಒಂದು ವೇಳೆ ಯಾವುದೇ ದೂರುಗಳು ಇಲ್ಲದಿದ್ದರೆ, ಜೇಷ್ಠತೆಯ ಆಧಾರದ ಮೇಲೆ ಬಿಲ್ ಪಾವತಿಗೆ ಅನುಮೋದನೆ ದೊರೆಯಲಿದೆ.


ಬಿಬಿಎಂಪಿಯ ಗುತ್ತಿಗೆದಾರರ ಆರೋಪ


ಶೇ.2 ರಿಂದ ಶೇ.25 ರಷ್ಟು ತಪಾಸಣೆ ಹೆಚ್ಚಳ , ಇದುವರೆಗೆ ಕಾಮಗಾರಿಯ ಶೇ. 10 ರಷ್ಟು ಮಾತ್ರ ಕಾಮಗಾರಿ ಪರಿಶೀಲನೆ ಮಾಡಲಾಗಿದೆ. ಇನ್ಮುಂದೆ 1 ಕೋಟಿ ರು. ವರೆಗೆ  ಶೇ.2 ರಷ್ಟು ಕಾಮಗಾರಿ 1-3 ಕೋಟಿ ವರೆಗೆ ಶೇ.5 ರಷ್ಟು, ಕಾಮಗಾರಿ ತಪಾಸಣೆ 3-10 ಕೋಟಿ ರು. ವರೆಗೆ ಶೇ. 10 ರಷ್ಟು, 10ಕೋಟಿ ರೂ.ಗಿಂತ ಮೇಲ್ಪಟ್ಟ ಕಾಮಗಾರಿಯ ಶೇ. 25 ರಷ್ಟು ಕಾಮಗಾರಿ ಬಿಲ್ ಗಾಗಿ ಶೇ 40 ರಿಂದ 50 ರಷ್ಟು ಕಮಿಷನ್ ನೀಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಬಿಬಿಎಂಪಿಯ ಗುತ್ತಿಗೆದಾರರ ಸಂಘ ಈ ಹಿಂದೆ ಆರೋಪಿಸಿತ್ತು. ಈ ಆರೋಪಕ್ಕೆ ಪುಷ್ಟಿ ನೀಡುವಂತೆ ಮುಖ್ಯ ಆಯುಕ್ತರು ಹೊಸ‌ ಆದೇಶ ಹೊರಡಿಸಿರುವುದು ಗುತ್ತಿಗೆದಾರರಿಗೆ ನುಂಗಲಾರದ ತುತ್ತಾದ್ರೆ ಜನಸಾಮಾನ್ಯರಿಗೆ ಪಾರದರ್ಶಕತೆ ಮೆರೆಯಬಹುದೇ ಎಂಬ ಆಶಾ ಭಾವನೆಯಲ್ಲಿದ್ದಾರೆ.

Published by:ಪಾವನ ಎಚ್ ಎಸ್
First published: