ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ನ ಮತ್ತೊಂದು ಹಗರಣ; ಸಾಲ ಮರುಪಾವತಿಸುವಂತೆ ಹಲವರಿಗೆ ನೋಟಿಸ್
ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ನ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್ನಿಂದ ಇತ್ತೀಚೆಗೆ ಹಲವರಿಗೆ ಬ್ಯಾಂಕ್ನಿಂದ ಪಡೆದ ಸಾಲವನ್ನು ಬಡ್ಡಿ ಸಮೇತ ಮರುಪಾವತಿಸುವಂತೆ ನೋಟಿಸ್ಗಳನ್ನು ಕಳುಹಿಸಲಾಗಿದೆ.
ಪಿಸಿಸಿ ವೈದ್ಯಕೀಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ಶಂಕರ ಗುಹಾ ದ್ವಾರಕನಾಥ್ ಪತ್ರಿಕಾಗೋಷ್ಠಿ.
ಬೆಂಗಳೂರು : ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ನ (Sri Guru Raghavendra Co-Operative Bank) ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್ನಿಂದ ಇತ್ತೀಚೆಗೆ ಹಲವರಿಗೆ ಬ್ಯಾಂಕ್ನಿಂದ ಪಡೆದ ಸಾಲವನ್ನು ಬಡ್ಡಿ ಸಮೇತ ಮರುಪಾವತಿಸುವಂತೆ ನೋಟಿಸ್ಗಳನ್ನು ಕಳುಹಿಸಲಾಗಿದೆ. ವಿಚಿತ್ರ ಎಂದರೆ ಹೀಗೆ ನೋಟಿಸ್ ಪಡೆದವರಲ್ಲಿ ಹಲವರಿಗೆ ಬ್ಯಾಂಕ್ ಎಲ್ಲಿದೆ ಎಂಬುದೇ ಗೊತ್ತಿಲ್ಲ. ಅವರಿಗೆ ಈ ಬ್ಯಾಂಕ್ನಲ್ಲಿ ಠೇವಣಿಯೂ ಇಲ್ಲ, ಬ್ಯಾಂಕ್ನಲ್ಲಿ ಯಾವುದೇ ವ್ಯವಹಾರವೂ ಅವರು ಮಾಡಿಲ್ವಂತೆ. ಹೀಗಿದ್ದರೂ ಬ್ಯಾಂಕಿನಿಂದ ನೋಟಿಸ್ ಬಂದಿದೆ ಎಂದು ಆರೋಪಲಾಗುತ್ತಿದೆ.
ಈ ಕುರಿತು ಕೆಪಿಸಿಸಿ ವೈದ್ಯಕೀಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ಶಂಕರ ಗುಹಾ ದ್ವಾರಕನಾಥ್, ಇಂದು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, "ಪ್ರಸ್ತುತ ನಾನು ನೀಡುತ್ತಿರುವ ದಾಖಲೆಯಲ್ಲಿ ಶ್ರೀಮತಿ ಚಂಪಕಾವತಿ ಅವರು 35 ಲಕ್ಷ ರೂಪಾಯಿ ಹಣವನ್ನು ಸಾಲವಾಗಿ 2011 ರಲ್ಲಿ ತೆಗೆದುಕೊಂಡಿದ್ದು ಅದರ ಯಾವುದೇ ಕಂತನ್ನು ಕಟ್ಟದೆ ಅದರ ಬಡ್ಡಿ & ಅಸಲು ಸೇರಿ ಇದೀಗ 2 ಕೋಟಿ 12 ಲಕ್ಷ ರೂಪಾಯಿಗಳನ್ನು ತಕ್ಷಣವೇ ಕಟ್ಟುವಂತೆ ಬ್ಯಾಂಕ್ ನೋಟಿಸ್ ಜಾರಿ ಮಾಡಿದೆ.
ಇವರಿಗೆ ಲೋನ್ ಕೊಡುವಾಗ ಶೂರಿಟಿಯಾಗಿ ಯಾವ ಪತ್ರಗಳನ್ನ ಇವರಿಂದ ತೆಗೆದುಕೊಂಡಿದ್ದರು ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. 35 ಲಕ್ಷ ರೂಪಾಯಿಗಳನ್ನ ಯಾವ ಕಾರಣಕ್ಕೆ ಸಾಲ ಕೊಟ್ಟಿದ್ದರು, ಲೋನ್ ಕೊಡುವಾಗ ಯಾವುದೇ ಗ್ಯಾರಂಟಿ ತೆಗೆದುಕೊಳ್ಳದೆ ಹೇಗೆ ಕೊಟ್ಟರು ಎಂಬುದಕ್ಕೂ ಮಾಹಿತಿಯಿಲ್ಲ. ಈ ರೀತಿ ಕೆಲವು ಘಟನೆಗಳು ನಮಗೆ ಕಂಡುಬಂದಿವೆ. ಈ ತರಹ ಎಷ್ಟು ಬೇನಾಮಿಗಳನ್ನು ಸೃಷ್ಟಿಸಲಾಗಿದೆ ಎಂಬುದರ ಬಗ್ಗೆ ತನಿಖೆಯಾಗಬೇಕು.
ಆಡಿಟ್ ರಿಪೋರ್ಟ್ ವೇಳೆಯೂ ಈ ಬಗ್ಗೆ ಯಾವುದೇ ಮಾಹಿತಿ ಹೊರಬೀಳದಿರೋದು ಆಶ್ಚರ್ಯಕರ. ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿ ಮಾಡಿರುವ ಹಗರಣವನ್ನು ಯಾವುದೇ ರಾಜಕೀಯ ಒತ್ತಡವಿಲ್ಲದೆ ಎಲ್ಲಾ ಆಯಾಮಗಳಿಂದಲೂ ತನಿಖೆ ಮಾಡಲು ಸಿಬಿಐ ಗೆ ಮಾತ್ರ ಸಾಧ್ಯ. ಹಾಗಾಗಿ ಈ ಹಗರಣ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು" ಎಂದು ಆಗ್ರಹಿಸಿದ್ದಾರೆ.
ಇನ್ನು ನೋಟಿಸ್ ಪಡೆದ ಶ್ರೀಮತಿ ಚಂಪಕಾವತಿ ಅವರು ಮಾತನಾಡಿ, ಬ್ಯಾಂಕ್ ಎಲ್ಲಿದೆ ಎಂಬುದೇ ನನಗೆ ಗೊತ್ತಿಲ್ಲ. ಸಾಲ ಪಡೆಯದಿದ್ರೂ ಸಾಲ ಮರುಪಾವತಿಸುವಂತೆ ನೋಟಿಸ್ ಕಳುಹಿಸಲಾಗಿದೆ. ಈಗಾಗಲೇ ಈ ಬಗ್ಗೆ ಬ್ಯಾಂಕ್ ಗೆ ನೋಟಿಸ್ ಕಳುಹಿಸಲಾಗಿದೆ. ಆದರೆ ಇದುವರೆಗೆ ಬ್ಯಾಂಕ್ ನಿಂದ ಯಾವುದೇ ಉತ್ತರ ಬಂದಿಲ್ಲ. ಈ ಕುರಿತು ಪೊಲೀಸ್ ಕಮೀಷನರ್ ರವರಿಗೂ ದೂರು ನೀಡಿದ್ದೇನೆ ಎಂದು ತಿಳಿಸಿದರು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ