Karnataka Politics: ಕಾಂಗ್ರೆಸ್​ನಲ್ಲಿ ಸಿಎಂ ಕುರ್ಚಿ ಪೈಪೋಟಿಗೆ ಮತ್ತೊಂದು ಹೆಸರು ಸೇರ್ಪಡೆ: ಮಾಜಿ ಸಿಎಂ ಹೇಳಿದ್ದೇನು? 

ರಾಜ್ಯದಲ್ಲಿ ಸಿಎಂ ಆಗಲು ಕಾಂಗ್ರೆಸ್‌ನಲ್ಲಿರುವ ಅತ್ಯಂತ ಯೋಗ್ಯ ವ್ಯಕ್ತಿ ಅಂದರೆ ಎಸ್.ಆರ್. ಪಾಟೀಲ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಇವರ ಹೆಸರನ್ನು ನಾನು ಶಿಫಾರಸು ಮಾಡಿದ್ದೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಮಾಜಿ ಸಿಎಂ ವೀರಪ್ಪ ಮೊಯ್ಲಿ

ಮಾಜಿ ಸಿಎಂ ವೀರಪ್ಪ ಮೊಯ್ಲಿ

 • Share this:
  ಬಾಗಲಕೋಟೆ (ಜು.31): ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಅಭ್ಯರ್ಥಿ ವಿಚಾರಕ್ಕೆ ಸಿದ್ದರಾಮಯ್ಯ (Siddaramaiah) ಮತ್ತು ಡಿ.ಕೆ ಶಿವಕುಮಾರ್ (D.K Shivakumar) ನಡುವೆ ತೀವ್ರ ಪೈಪೋಟಿ ಇರುವುದು ಎಲ್ಲರಿಗೂ ಗೊತ್ತೇ ಇದೆ. ಇವರಿಬ್ಬರ ಕುರಿತು ಪರ-ವಿರೋಧ ಚರ್ಚೆಗಳು ಸ್ವಪಕ್ಷದಲ್ಲೇ ನಡೆಯುತ್ತಿದೆ. ಇದೀಗ ಇವರಿಬ್ಬರ ಹೊರತಾಗಿ ಮತ್ತೊಂದು ಹೆಸರು ಕೇಳಿಬಂದಿದೆ. ಈ ವ್ಯಕ್ತಿಯೇ ಸಿಎಂ ಆಗಲು ಸೂಕ್ತ, ಯೋಗ್ಯ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ವೀರಪ್ಪ ಮೊಯ್ಲಿ (Veerappa Moily) ಹೇಳಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

  ಅತ್ಯಂತ ಯೋಗ್ಯ ವ್ಯಕ್ತಿ ಅಂದರೆ ಎಸ್.ಆರ್. ಪಾಟೀಲ

  ರಾಜ್ಯದಲ್ಲಿ ಸಿಎಂ ಆಗಲು ಕಾಂಗ್ರೆಸ್‌ನಲ್ಲಿರುವ ಅತ್ಯಂತ ಯೋಗ್ಯ ವ್ಯಕ್ತಿ ಅಂದರೆ ಎಸ್.ಆರ್. ಪಾಟೀಲ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಇವರ ಹೆಸರನ್ನು ನಾನು ಶಿಫಾರಸು ಮಾಡಿದ್ದೆ. ಮುಖ್ಯಮಂತ್ರಿ ಆಗಲು ಅತ್ಯಂತ ಆದರ್ಶ, ಯೋಗ್ಯ ವ್ಯಕ್ತಿ ಅಂದ್ರೆ ಇವರೇ. ಪ್ರಾಮಾಣಿಕತೆ, ಸಜ್ಜನಿಕೆ ವ್ಯಕ್ತಿತ್ವವುಳ್ಳ ಸಾಕಾರರೂಪ ಎಸ್.ಆರ್​ ಪಾಟೀಲ ಎಂದು ಮೊಯ್ಲಿ ಹೇಳಿದರು.

  ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಎಸ್.ಆರ್. ಪಾಟೀಲ ಅವರ ಹುಟ್ಟುಹಬ್ಬದ ಹಿನ್ನೆಲೆ ಬೆಂಬಲಿಗರು ಮತ್ತು ಅಭಿಮಾನಿಗಳು ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮೊಯ್ಲಿ, ಕಾಂಗ್ರೆಸ್‌ನಲ್ಲಿ ಸಿಎಂ ಆಗಲು ಸೂಕ್ತ ವ್ಯಕ್ತಿ ಅಂದ್ರೆ ಎಸ್.ಆರ್. ಪಾಟೀಲ ಎಂದರು.

  ಇದನ್ನೂ ಓದಿ: Independence Day 2022: ಪ್ರತಿಯೊಂದು ಮನೆ ಮೇಲೆ ಹಾರಲಿ ತ್ರಿವರ್ಣ ಧ್ವಜ; ಎಲ್ಲೆಲ್ಲೂ ಹರಡಲಿ ಅಮೃತ ಮಹೋತ್ಸವದ ಸಂಭ್ರಮ

  ಟಿಕೆಟ್ ಕೈ ತಪ್ಪಿದ ಬಳಿಕ ಅಂತರ ಕಾಯ್ದುಕೊಂಡ ಎಸ್ ಆರ್ ಪಿ..! 

  ಇತ್ತೀಚೆಗೆ ನಡೆದ ಪರಿಷತ್ ಚುನಾವಣೆ ವೇಳೆ ಹಿರಿಯ ನಾಯಕ ಎಸ್ ಆರ್ ಪಾಟೀಲ್ ಗೆ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಎಸ್ ಆರ್ ಪಾಟೀಲ್ ಕೃಷ್ಣಾ ಮೇಲ್ದಂಡೆ ಯೋಜನೆ ಮತ್ತು ಮಹಾದಾಯಿ, ನವಲಿ ನೀರಾವರಿ ಯೋಜನೆಗಳ ಜಾರಿಗೆ ಆಗ್ರಹಿಸಿ ಬೃಹತ್ ಟ್ರಾಕ್ಟರ್ ರ್ಯಾಲಿ ನಡೆಸಿದ್ದರು. ಪಕ್ಷವನ್ನು ಬದಿಗಿಟ್ಟು ಉತ್ತರ ಕರ್ನಾಟಕದ ಸ್ವಾಭಿಮಾನಿ ವೇದಿಕೆ ಮೂಲಕ ಹೋರಾಟ ಹಮ್ಮಿಕೊಂಡಿದ್ದರು. ಈ ಹೋರಾಟದಿಂದ ಹೊಸ ಚರ್ಚೆಗಳು ಆರಂಭಗೊಂಡಿದ್ದವು. ಇನ್ನು ಈ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ಯಾವುದೇ ರಾಜ್ಯ ನಾಯಕರು ಭಾಗಿಯಾಗದೆ ದೂರ ಉಳಿದಿದ್ದರೂ. ಸ್ಥಳೀಯ ಕಾಂಗ್ರೆಸ್ ನಾಯಕರಿಗೂ ಕೂಡ ಈ ಹೋರಾಟ ಇರಿಸುಮುರಿಸು ಉಂಟುಮಾಡಿತ್ತು.

  2ನೇ ಬಾರಿಯೂ ಟಿಕೆಟ್ ಕೈ ತಪ್ಪಿದ ಬಳಿಕ ಪಕ್ಷದ ಕೆಲ ನಾಯಕರ ವಿರುದ್ಧ ತೀವ್ರ ಅಸಮಾಧಾನಗೊಂಡಿರುವ ಎಸ್ ಆರ್ ಪಾಟೀಲ್ ಅಸಮಾಧಾನ ವ್ಯಕ್ತಪಡಿಸದೇ ನಾನೊಬ್ಬ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಎಂದಿದ್ದರು.
  ನಂತರದ ಕೆಲ ದಿನಗಳ ಕಾಲ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದರು. ಅದರಲ್ಲೂ ರಾಜ್ಯಕ್ಕೆ ರಾಹುಲ್ ಗಾಂಧಿ ಭೇಟಿ, ಎಂ ಬಿ ಪಾಟೀಲ್ ಪದಗ್ರಹಣ ಸಮಾರಂಭದಿಂದಲೂ ದೂರ ಉಳಿದಿದ್ದರು. ಇದೀಗ ಎಸ್ ಆರ್ ಪಾಟೀಲ್  ತಮ್ಮ 74ನೇ ಹುಟ್ಟು ಹಬ್ಬವನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ.

  ಇದನ್ನೂ ಓದಿ: Siddaramotsava: ಮುಂದಿನ ಸಿಎಂ ಸಿದ್ದರಾಮಯ್ಯ; ಡಿಕೆಶಿಗೆ ಬ್ಯಾನರ್ ಮೂಲಕ ಟಕ್ಕರ್​ ಕೊಟ್ಟ ಸಿದ್ದು ಬೆಂಬಲಿಗರು

  ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಬಾದಿತವಾಗುವ 10 ಗ್ರಾಮಗಳನ್ನ ದತ್ತು ಪಡೆದಿದ್ದಾರೆ. ಬಡ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನ ನೀಡಿದ್ದಾರೆ. ಇನ್ನು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಸಿಎಂ ವೀರಪ್ಪ ಮೊಯ್ಲಿ ಸಿಎಂ ಅಭ್ಯರ್ಥಿಯಾಗಲು ಎಸ್ ಆರ್ ಪಾಟೀಲ ಯೋಗ್ಯ ವ್ಯಕ್ತಿ ಎನ್ನುವ ಮೂಲಕ ಮತ್ತೊಂದು ಚರ್ಚೆ ಹುಟ್ಟುಹಾಕಿದ್ದಾರೆ.

  ವರದಿ: ಮಂಜುನಾಥ್ ತಳವಾರ 
  Published by:Pavana HS
  First published: