ಕಳೆದ ಕೆಲವು ದಿನಗಳಿಂದ ಕರಾವಳಿ ಭಾಗದಲ್ಲಿ (Karnataka Coastal Area) ನೈತಿಕ ಪೊಲೀಸ್ ಗಿರಿ (Moral Policing) ಅಂತಹ ಪ್ರಕರಣಗಳು ವರದಿ ಆಗುತ್ತಲೇ ಇವೆ. ಇತ್ತೀಚೆಗೆ ಬಸ್ನಲ್ಲಿ ಅಕ್ಕ-ಪಕ್ಕ ಕುಳಿತಿದ್ದ ಪದವಿ ವಿದ್ಯಾರ್ಥಿ ಮೇಲೆ ಹಲ್ಲೆ ಆಗಿತ್ತು. ಡಿಸೆಂಬರ್ 6ರಂದು ಕಂಕನಾಡಿಯ ಸುಲ್ತಾನ್ ಜ್ಯುವೆಲ್ಲರಿಯಲ್ಲಿ ನೈತಿಕ ಪೊಲೀಸ್ಗಿರಿ ನಡೆಸಲಾಗಿತ್ತು. ಈ ಘಟನೆಗಳು ಮಾಸುವ ಮುನ್ನವೇ ಮತ್ತೊಂದು ಇಂತಹವುದೇ ಒಂದು ಪ್ರಕರಣ ಶನಿವಾರ (ಡಿಸೆಂಬರ್ 10, 2022) ನಡೆದಿದೆ. ಮಂಗಳೂರು ನಗರದ ಕೊಟ್ಟಾರ (Kottar, Mangaluru) ಎಂಬಲ್ಲಿ ಈ ಘಟನೆ ನಡೆದಿದ್ದು, ಜೋಡಿಯ (Couple) ಮೇಲೆ ಹಲ್ಲೆ ಯತ್ನ ನಡೆಸಲಾಗಿದೆ.
ಶನಿವಾರ ತಡರಾತ್ರಿ ಸುಮಾರು 12 ಗಂಟೆ ವೇಳೆ ಹೋಗುತ್ತಿದ್ದ ಜೋಡಿಯನ್ನು ಭಜರಂಗದಳದ ಕಾರ್ಯಕರ್ತರು ತಡೆದಿದ್ದಾರೆ. ಯುವಕ ಮುಸ್ಲಿಂ ಸಮುದಾಯದವನಾಗಿದ್ದು, ಯುವತಿ ಹಿಂದೂ ಆಗಿದ್ದಳು. ಇದನ್ನರಿತ ಭಜರಂಗದಳದ ಕಾರ್ಯಕರ್ತರು ಜೋಡಿಯನ್ನು ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ನಡೆಸಿ ಹಲ್ಲೆಗೆ ಯತ್ನ
ಈ ವೇಲೆ ಜೋಡಿ ಊಟಕ್ಕೆ ಬಂದಿದ್ದು, ಹಿಂದಿರುಗುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ಸಮಯದಲ್ಲಿ ಯಾವ ಹೋಟೆಲ್ ತೆರದಿರುತ್ತೆ ಎಂದು ಪ್ರಶ್ನಿಸಿದ ಕಾರ್ಯಕರ್ತರು ಹಲ್ಲೆಗೆ ಮುಂದಾಗಿದ್ದರು. ಈ ಸಮಯಕ್ಕೆ ಬಂದ ಪೊಲೀಸರು ಹಲ್ಲೆಯನ್ನು ತಡೆದು ಜೋಡಿಯನ್ನು ರಕ್ಷಣೆ ಮಾಡಿದ್ದಾರೆ.
ಇದಾದ ಬಳಿಕ ಜೋಡಿಯನ್ನು ಠಾಣೆಗೆ ಕರೆದುಕೊಂಡು ಹೋಗಲಾಗಿತ್ತು. ಕೆಲ ಸಮಯದ ನಂತರ ಜೋಡಿ ಠಾಣೆಯಿಂದ ತೆರಳಿದ್ದಾರೆ. ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಾಲ್ವರು ಅರೆಸ್ಟ್
ಡಿಸೆಂಬರ್ 6ರಂದು ಮಂಗಳೂರಿನ ಸುಲ್ತಾನ್ ಗೋಲ್ಡ್ ಜ್ಯುವೆಲ್ಲರಿಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧ ಕದ್ರಿ ಪೊಲೀಸರು ನಾಲ್ವರು ಭಜರಂಗದಳದ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಶಿಬಿನ್, ಗಣೇಶ್, ಪ್ರಕಾಶ್ ಮತ್ತು ಚೇತನ್ ಬಂಧಿತ ಭಜರಂಗದಳದ ಕಾರ್ಯಕರ್ತರು. ಡಿಸೆಂಬರ್ 6ರಂದು ಕಂಕನಾಡಿಯ ಸುಲ್ತಾನ್ ಜ್ಯುವೆಲ್ಲರಿಯಲ್ಲಿ ನೈತಿಕ ಪೊಲೀಸ್ ಗಿರಿ ನಡೆಲಾಗಿತ್ತು. ಈ ಸಂಬಂಧ ಸುಲ್ತಾನ್ ಗೋಲ್ಡ್ ಜ್ಯುವೆಲ್ಲರಿ ಸೇಲ್ಸ್ ಆಫೀಸರ್ ಫೈಝಲ್ ಸ್ಥಳೀಯ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.
ದೂರಿನನ್ವಯ ಭಜರಂಗದಳದ ಕಾರ್ಯಕರ್ತರ ಮೇಲೆ ಐಪಿಸಿ 323, 448, 504, 143, 147, 149 ಅಡಿ ಎಫ್ಐಆರ್ ದಾಖಲಾಗಿತ್ತು.
ಇದನ್ನೂ ಓದಿ: Bengaluru Traffic: ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ITMS ತಂತ್ರಜ್ಞಾನ; ವಾಹನ ಸಂಚಾರ ಮತ್ತಷ್ಟು ಸುಗಮ
ಮತ್ತೊಂದು ಪ್ರಕರಣ
ನಗರದ ನಂತೂರಿನಲ್ಲಿ ಇದೇ ಮಾದರಿಯ ಮತೀಯ ಗೂಂಡಾಗಿರಿ ಪ್ರಕರಣ ನ.24 ರಂದು ನಡೆದಿತ್ತು. ಹಿಂದೂ ಯುವತಿಯ ಜೊತೆಗೆ ಪ್ರಯಾಣಿಸುತ್ತಿದ್ದ ಮುಸ್ಲಿಂ ಯುವಕನನ್ನು ಕೆಳಗಿಳಿಸಿ ಆತನ ಮೇಲೆ ಸಂಘ ಪರಿವಾರದ ಸಂಘಟನೆಗೆ ಸೇರಿದ ಸದಸ್ಯರು ಹಲ್ಲೆ ನಡೆಸಿದ್ದರು. ಕದ್ರಿ ಠಾಣೆಯ ವ್ಯಾಪ್ತಿಯಲ್ಲೇ ನಡೆದ ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಆರೋಪಿಗಳನ್ನು ಬಿಡಿಸಿಕೊಂಡು ಬಂದ ಶಾಸಕ
ಮೂಡಬಿದಿರೆಯಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪದ ಮೇಲೆ ಬಂಧಿತರಾದ ಇಬ್ಬರು ಆರೋಪಿಗಳನ್ನು ಸ್ವತಃ ಮೂಡಬಿದಿರೆಯ ಶಾಸಕ ಉಮಾನಾಥ್ ಕೋಟ್ಯಾನ್ (Mudubidare BJP MLA Umanath Kotian) ಅವರು ಪೊಲೀಸ್ ಠಾಣೆಗೆ ಹೋಗಿ ಬಿಡಿಸಿಕೊಂಡು ಬಂದಿದ್ದರು.
ಇದನ್ನೂ ಓದಿ: Moral Policing: ಮಂಗಳೂರು ಬಸ್ನಲ್ಲಿ ನೈತಿಕ ಪೊಲೀಸ್ಗಿರಿ; ಹಿಂದೂ ಯುವತಿ ಜೊತೆ ಕುಳಿತಿದ್ದಕ್ಕೆ ಹಲ್ಲೆ
ಅಕ್ಟೋಬರ್ 9 ನೇಯ ತಾರೀಖು ಶನಿವಾರ ಸಂಜೆ ಮೂಡಬಿದಿರೆಯಲ್ಲಿ ಅನ್ಯಧರ್ಮದ ದಂಪತಿಯ ಜೊತೆಗೆ ಇಬ್ಬರು ಹಿಂದೂ ಯುವತಿಯರು ಕಾರ್ ನಲ್ಲಿ ಪ್ರಯಾಣಿಸುತ್ತಿರೋದನ್ನು ಏಳೆಂಟು ಜನ ಭಜರಂಗದಳದ ಕಾರ್ಯಕರ್ತರು ನೋಡಿದ್ದಾರೆ. ಬಳಿಕ ಕಾರನ್ನು ಅಡ್ಡಗಟ್ಟಿ ಯುವತಿಯರನ್ನು ಮತ್ತು ದಂಪತಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅಶ್ಲೀಲವಾಗಿ ಬೈಯ್ದು ಅಗೌರವದಿಂದ ನಡೆದುಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ