Mangaluru: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಲು ಸಾಲು ನೈತಿಕ ಪೊಲೀಸ್ಗಿರಿ ಪ್ರಕರಣಗಳು (Moral Policing Cases) ಬೆಳಕಿಗೆ ಬರುತ್ತಿವೆ. ನಿನ್ನಯಷ್ಟೇ ಬಂಟ್ವಾಳದಲ್ಲಿ (Bantwal) ಬೆಂಗಳೂರಿಗೆ ಹೊರಟಿದ್ದ ಅನ್ಯಕೋಮಿಗಳನ್ನು ತಡೆಯಲಾಗಿತ್ತು. ನಂತರ ಎಲ್ಲಾ ಪ್ರಕರಣಗಳಂತೆ ಜೋಡಿಯನ್ನು (Couple) ಠಾಣೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿಂದ ಜೋಡಿ ದೂರು ದಾಖಲಿಸಲು ಹಿಂದೇಟು ಹಾಕಿ ಮನೆಗೆ ಹಿಂದಿರುಗಿತ್ತು. ಬಂಟ್ವಾಳ ನಗರ ಪೊಲೀಸರೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಸದ್ಯ ನಡೆಯುತ್ತಿರುವ ನೈತಿಕ ಪೊಲೀಸ್ಗಿರಿ ಪ್ರಕರಣಗಳಲ್ಲಿ ನಡೆಯುತ್ತಿರುವ ಪ್ರಕ್ರಿಯೆ ಇದೇ ಆಗಿದೆ. ಜೋಡಿಯನ್ನು ತಡೆಯೋದು, ಠಾಣೆಗೆ ಕರೆ ತರೋದು ಅಲ್ಲಿಂದ ಜೋಡಿ ಹಿಂದಿರೋಗುದು. ಸದ್ಯ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಈ ಪ್ರಕ್ರಿಯೆ ಮಾಮೂಲಿಯಾಗಿದೆ.
ಕಳೆದ ವಾರವಷ್ಟೇ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನ್ಯಕೋಮಿನ ಜೋಡಿ ಮೇಲೆ ಭಜರಂಗದಳದ ಕಾರ್ಯಕರ್ತರು ಹಲ್ಲೆಗೆ ಮುಂದಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಇದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ನೈತಿಕ ಪೊಲೀಸ್ಗಿರಿ ಪ್ರಕರಣ ಬೆಳಕಿಗೆ ಬಂದಿದೆ.
ಸಿನಿಮಾ ವೀಕ್ಷಣೆಗೆ ಬಂದಿದ್ದ ಜೋಡಿಗೆ ತಡೆ
ಮಂಗಳೂರಿನ ಬಿಜೈ ಬಳಿಯ ಭಾರತ್ ಸಿನಿಮಾಸ್ ನಲ್ಲಿ ಸಿನಿಮಾ ವೀಕ್ಷಣೆಗೆ ಬಂದಿದ್ದ ಅನ್ಯಕೋಮಿನ ಜೋಡಿಯನ್ನು ಭಜರಂಗದಳ ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Moral Policing: ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ಪ್ರಯಾಣ; ಬಸ್ ತಡೆದು ನೈತಿಕ ಪೊಲೀಸ್ಗಿರಿ
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಉರ್ವ ಠಾಣೆಯ ಪೊಲೀಸರು ಜೋಡಿಯನ್ನು ರಕ್ಷಣೆ ಮಾಡಿದ್ದಾರೆ. ಜೋಡಿಯನ್ನು ಭಜರಂಗದಳದ ಕಾರ್ಯಕರ್ತರಿಂದ ರಕ್ಷಿಸಿ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಸುಲ್ತಾನ್ ಗೋಲ್ಡ್ ಜ್ಯುವೆಲ್ಲರಿಯಲ್ಲಿ ನೈತಿಕ ಪೊಲೀಸ್ಗಿರಿ, ನಾಲ್ಕು ಜನ ಅರೆಸ್ಟ್
ಡಿಸೆಂಬರ್ 6ರಂದು ಮಂಗಳೂರಿನ ಸುಲ್ತಾನ್ ಗೋಲ್ಡ್ ಜ್ಯುವೆಲ್ಲರಿಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧ ಕದ್ರಿ ಪೊಲೀಸರು ನಾಲ್ವರು ಭಜರಂಗದಳದ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಶಿಬಿನ್, ಗಣೇಶ್, ಪ್ರಕಾಶ್ ಮತ್ತು ಚೇತನ್ ಬಂಧಿತ ಭಜರಂಗದಳದ ಕಾರ್ಯಕರ್ತರು. ಡಿಸೆಂಬರ್ 6ರಂದು ಕಂಕನಾಡಿಯ ಸುಲ್ತಾನ್ ಜ್ಯುವೆಲ್ಲರಿಯಲ್ಲಿ ನೈತಿಕ ಪೊಲೀಸ್ ಗಿರಿ ನಡೆಲಾಗಿತ್ತು. ಈ ಸಂಬಂಧ ಸುಲ್ತಾನ್ ಗೋಲ್ಡ್ ಜ್ಯುವೆಲ್ಲರಿ ಸೇಲ್ಸ್ ಆಫೀಸರ್ ಫೈಝಲ್ ಸ್ಥಳೀಯ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.
ದೂರಿನನ್ವಯ ಭಜರಂಗದಳದ ಕಾರ್ಯಕರ್ತರ ಮೇಲೆ ಐಪಿಸಿ 323, 448, 504, 143, 147, 149 ಅಡಿ ಎಫ್ಐಆರ್ ದಾಖಲಾಗಿತ್ತು.
ಬಸ್ನಲ್ಲಿ ನೈತಿಕ ಪೊಲೀಸ್ಗಿರಿ; ಹಿಂದೂ ಯುವತಿ ಜೊತೆ ಕುಳಿತಿದ್ದಕ್ಕೆ ಹಲ್ಲೆ
ಬಸ್ನಲ್ಲಿ ಹಿಂದೂ ಯುವತಿ ಜೊತೆ ಕುಳಿತಿದ್ದಕ್ಕೆ 20 ವರ್ಷದ ಮುಸ್ಲಿಂ ವಿದ್ಯಾರ್ಥಿ ಮೇಲೆ ಹಿಂದೂ ಸಂಘಟನೆಯೊಂದರ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಸೈಯ್ಯದ್ ರಾಶಿಮ್ ಉಮ್ಮರ್ ಹಲ್ಲೆಗೊಳಗಾದ ವಿದ್ಯಾರ್ಥಿ.
ಸೈಯದ್ ರಾಶಿಮ್ ಕಾರ್ಕಳದ ಖಾಸಗಿ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ನವೆಂಬರ್ 24ರಂದು ಪ್ರಯಾಣದ ವೇಳೆ ಹಿಂದೂ ಯುವತಿ ಪಕ್ಕ ಕುಳಿತಿದ್ದ ಎನ್ನಲಾಗಿದೆ.
ಇದನ್ನೂ ಓದಿ: Moral Policing: ಹೆಣ್ಣು-ಗಂಡು ಜೊತೆಗೆ ಕೂರೋ ಹಾಗೂ ಇಲ್ವಾ? ನೈತಿಕ ಪೊಲೀಸ್ಗಿರಿಗೆ ತಕ್ಕಪಾಠ ಕಲಿಸಿದ ಕೇರಳ ವಿದ್ಯಾರ್ಥಿಗಳು
ನಂತೂರ್ನಲ್ಲಿ ರಾಶಿಮ್ನನ್ನ ಬಸ್ನಿಂದ ಹೊರಕ್ಕೆ ಎಳೆದು ಥಳಿಸಿರುವ ಆರೋಪ ಕೇಳಿ ಬಂದಿದೆ. ಈ ವೇಳೆ ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರು ವಿದ್ಯಾರ್ಥಿಯನ್ನು ರಕ್ಷಣೆ ಮಾಡಿದ್ದಾರೆ.
ಕೊಲೆ ಬೆದರಿಕೆ ದೂರು ದಾಖಲು
ಹಲ್ಲೆ ಸಂಬಂಧ ವಿದ್ಯಾರ್ಥಿ ರಾಶಿಮ್ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಸ್ನಿಂದ ಕೆಳಕ್ಕೆ ಎಳೆದು ಕೊಲೆ ಬೆದರಿಕೆ ಹಾಕಲಾಗಿದೆ. ಹಲ್ಲೆ ನಡೆಸಿರೋದನ್ನ ಯಾರಿಗಾದ್ರೂ ಹೇಳಿದ್ರೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ