ವೆನ್ಲಾಕ್ ಆಸ್ಪತ್ರೆ ಎಡವಟ್ಟು; ಮೃತದೇಹದ ಅಂತ್ಯಕ್ರಿಯೆಯಾದರೂ ಮತ್ತೆ ದೇಹ ತೆಗೆದುಕೊಂಡು ಹೋಗುವಂತೆ ಕರೆ
ಆರಂಭದಲ್ಲಿ 4,300 ಬಿಲ್ ಹೇಳಿದವರು ಬಳಿಕ 2,500 ಕೊಡಿ ಎಂದು ಹೇಳಿದ್ದು ಯಾಕೆ? ಶವಗಾರದಲ್ಲಿ ರಿಜಿಸ್ಟರ್ನಲ್ಲಿ ಸಹಿ ಮಾಡಿ ಹೆಣ ಪಡೆದ ಬಳಿಕವೂ ಮತ್ತೆ ಹೆಣ ಪಡೆದುಕೊಂಡು ಹೋಗಿ ಎಂದು ಕರೆ ಬಂದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
news18-kannada Updated:August 26, 2020, 8:18 PM IST

ಮಂಗಳೂರಿನ ವೆನ್ಲಾಕ್ ಆಸ್ಪತ್ರೆ
- News18 Kannada
- Last Updated: August 26, 2020, 8:18 PM IST
ಮಂಗಳೂರು; ನಿತ್ಯ ಒಂದಿಲ್ಲೊಂದು ಆಸ್ಪತ್ರೆಯ ಎಡವಟ್ಟು ಪ್ರಕರಣಗಳೂ ದಾಖಲಾಗುತ್ತಿದೆ. ಇದೀಗ ಈ ಎಡವಟ್ಟಿನ ಸಾಲಿಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯೂ ಸೇರ್ಪಡೆಯಾಗಿದೆ. ಅಸೌಖ್ಯದಿಂದ ಮೃತಪಟ್ಟ ವ್ಯಕ್ತಿಯ ಹೆಣ ತೆಗೆದುಕೊಂಡು ಹೋದ ಬಳಿಕವೂ ಆಸ್ಪತ್ರೆಯಿಂದ ಮತ್ತೆ ಮೃತದೇಹ ತೆಗೆದುಕೊಂಡು ಹೋಗುವಂತೆ ಕರೆ ಮಾಡಿದ ಘಟನೆ ನಡೆದಿದೆ.
ಮಂಗಳೂರಿನ ಉಲಾಯಿಬೆಟ್ಟು ನಿವಾಸಿ ವಿನೋದ್ ಜಾಂಡೀಸ್ ಕಾಯಿಲೆಯಿಂದ ಇದೇ 19ರಂದು ಮೃತರಾಗಿದ್ದರು. ವಿನೋದ್ ಅವರು ಅನಾಥರಾಗಿರುವ ಕಾರಣ ಅದೇ 19ರಂದು ಸ್ಥಳೀಯರು ಮೃತ ವಿನೋದ್ ಅಂತ್ಯಸಂಸ್ಕಾರ ಮಾಡಿದ್ದರು. ಅಂತ್ಯಸಂಸ್ಕಾರ ಆಗುತ್ತಿದ್ದಂತೆ ಮತ್ತೆ ವೆನ್ಲಾಕ್ ಆಸ್ಪತ್ರೆಯಿಂದ ವಿನೋದ್ ಮೃತದೇಹ ಪಡೆದ ಸ್ಥಳೀಯರಿಗೆ ಕರೆ ಬಂದಿದೆ. ನಾಲ್ಕೂ ಸಾವಿರ ಹಣ ಕಟ್ಟಿ ಎಂದು ಹೇಳಿದ್ದಾರೆ. ಆದರೆ ಮೃತದೇಹ ಪಡೆದ ಬಳಿಕ ಯಾವುದಕ್ಕೆ ಹಣ ಕಟ್ಟಬೇಕು, ಯಾರ ಮೃತದೇಹ ಪಡೆಯಬೇಕು ಎಂದು ವಿನೋದ್ ಪರಿಚಯಸ್ಥರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ; ಸಿಎಂ ಭೇಟಿಯಾಗಿ ಚರ್ಚೆ ನಡೆಸಿದ ಕಾಗಿನೆಲೆ ಶ್ರೀ ನಿಯೋಗ
ಅಗಸ್ಟ್ 19ರಂದು ಮೃತದೇಹ ಪಡೆದಿದ್ದರೂ ಸಹ ಆ. 20 ಮತ್ತು ಆ. 21ಕ್ಕೆ ಆಸ್ಪತ್ರೆಯಿಂದ ಮತ್ತೆ ಕರೆ ಬಂದಿದೆ. ಖಾಲಿ ಹಾಳೆಯಲ್ಲಿ ಬಿಲ್ ಬರೆದು ಮೃತದೇಹ ಕೊಡಲು ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಇದನ್ನು ಪರೀಕ್ಷಿಸುವುದಕ್ಕೆ ವಿನೋದ್ ಪರಿಚಯಸ್ಥರು ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿ ಮತ್ತೆ ಪುನಃ ಬಿಲ್ನಲ್ಲಿ ಡಿಸ್ಕೌಂಟ್ ಮಾಡಿಸಿಕೊಡುವ ಭರವಸೆಯನ್ನು ನೀಡಿದ್ದಾರೆ. ಒಂದು ವೇಳೆ ಹಣ ಕೊಟ್ಟಿದ್ದರೆ ಅವರು ಮತ್ತೆ ಯಾರ ಹೆಣವನ್ನು ಆಸ್ಪತ್ರೆಯವರು ಕೊಡ್ತಾ ಇದ್ರೂ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ಆರಂಭದಲ್ಲಿ 4,300 ಬಿಲ್ ಹೇಳಿದವರು ಬಳಿಕ 2,500 ಕೊಡಿ ಎಂದು ಹೇಳಿದ್ದು ಯಾಕೆ? ಶವಗಾರದಲ್ಲಿ ರಿಜಿಸ್ಟರ್ನಲ್ಲಿ ಸಹಿ ಮಾಡಿ ಹೆಣ ಪಡೆದ ಬಳಿಕವೂ ಮತ್ತೆ ಹೆಣ ಪಡೆದುಕೊಂಡು ಹೋಗಿ ಎಂದು ಕರೆ ಬಂದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಬೇಜವಾಬ್ದಾರಿಯಿಂದ ಈ ರೀತಿ ಆಗಿದೆಯೋ, ಹಣಕ್ಕಾಗಿ ಸಿಬ್ಬಂದಿಗಳು ಈ ರೀತಿ ಮಾಡಿದ್ದಾರೋ ಎಂದು ಉನ್ನತ ಅಧಿಕಾರಿಗಳು ತನಿಖೆ ನಡೆಸಿದರೆ ಮಾತ್ರ ಗೊತ್ತಾಗಲು ಸಾಧ್ಯ.
ಮಂಗಳೂರಿನ ಉಲಾಯಿಬೆಟ್ಟು ನಿವಾಸಿ ವಿನೋದ್ ಜಾಂಡೀಸ್ ಕಾಯಿಲೆಯಿಂದ ಇದೇ 19ರಂದು ಮೃತರಾಗಿದ್ದರು. ವಿನೋದ್ ಅವರು ಅನಾಥರಾಗಿರುವ ಕಾರಣ ಅದೇ 19ರಂದು ಸ್ಥಳೀಯರು ಮೃತ ವಿನೋದ್ ಅಂತ್ಯಸಂಸ್ಕಾರ ಮಾಡಿದ್ದರು. ಅಂತ್ಯಸಂಸ್ಕಾರ ಆಗುತ್ತಿದ್ದಂತೆ ಮತ್ತೆ ವೆನ್ಲಾಕ್ ಆಸ್ಪತ್ರೆಯಿಂದ ವಿನೋದ್ ಮೃತದೇಹ ಪಡೆದ ಸ್ಥಳೀಯರಿಗೆ ಕರೆ ಬಂದಿದೆ. ನಾಲ್ಕೂ ಸಾವಿರ ಹಣ ಕಟ್ಟಿ ಎಂದು ಹೇಳಿದ್ದಾರೆ. ಆದರೆ ಮೃತದೇಹ ಪಡೆದ ಬಳಿಕ ಯಾವುದಕ್ಕೆ ಹಣ ಕಟ್ಟಬೇಕು, ಯಾರ ಮೃತದೇಹ ಪಡೆಯಬೇಕು ಎಂದು ವಿನೋದ್ ಪರಿಚಯಸ್ಥರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.