news18-kannada Updated:January 11, 2021, 8:46 AM IST
ಬೆಂಗಳೂರು ಏರ್ಪೋರ್ಟ್
ಲಂಡನ್: ಕಳೆದ ವರ್ಷ ಚೀನಾದಲ್ಲಿ ಪತ್ತೆಯಾದ ಕೊರೋನಾ ವೈರಸ್ ಇದೀಗ ಇಡೀ ವಿಶ್ವವನ್ನು ಬಿಟ್ಟೂ ಬಿಡದೆ ಕಾಡುತ್ತಿದೆ. ಜಗತ್ತಿನಾದ್ಯಂತ ಮಿಂಚಿನ ವೇಗದಲ್ಲಿ ಹರಡಿದ್ದ ಈ ವೈರಸ್ ಲಕ್ಷಾಂತರ ಜನರ ಪ್ರಾಣಕ್ಕೆ ಕುತ್ತಾಗಿದೆ. ಭಾರತದಲ್ಲೂ ಸಹ 1.5 ಲಕ್ಷಕ್ಕೂ ಅಧಿಕ ಜನ ಈ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಈ ಸೋಂಕಿಗೆ ಲಸಿಕೆಯನ್ನು ಸಂಶೋಧಿಸುವ ಕೆಲಸವೂ ನಡೆಯುತ್ತಿದೆಯಾದರೂ ಈ ವರೆಗೆ ಲಸಿಕೆಗಳು ಕ್ಲಿನಿಕಲ್ ಟ್ರಯಲ್ ಹಂತವನ್ನು ದಾಟಿಲ್ಲ. ಇನ್ನೂ ಭಾರತದಲ್ಲಿ ಲಸಿಕೆ ಡ್ರೈ ರನ್ ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ. ಈ ನಡುವೆ ಇಂಗ್ಲೆಂಡ್ನಲ್ಲಿ ಪತ್ತೆಯಾಗಿರುವ ಹೊಸ ರೂಪಾಂತರ ಪ್ರಭೇದದ ಕೊರೋನಾ ವೈರಸ್ ಇಡೀ ಜಗತ್ತಿಗೆ ಮತ್ತಷ್ಟು ಮಾರಕವಾಗುವ ಸಾಧ್ಯತೆಗಳನ್ನು ಮುಂದಿಟ್ಟಿದೆ. Covid-19 ಗಿಂತಲೂ ವೇಗವಾಗಿ ಹರಡುತ್ತಿರುವ ಈ ವೈರಸ್ ಇಂಗ್ಲೆಂಡ್ ದೇಶಕ್ಕೆ ಸವಾಲಾಗಿ ಪರಿಣಮಿಸಿದೆ. ಪರಿಣಾಮ ಅಲ್ಲಿನ ಸರ್ಕಾರ ಇಡೀ ದೇಶದಲ್ಲಿ ಮತ್ತೊಂದು ಸುತ್ತಿನ ಲಾಕ್ಡೌನ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಲಂಡನ್ನಲ್ಲಿರುವ ಅನಿವಾಸಿ ಭಾರತೀಯರನ್ನು ಭಾರತಕ್ಕೆ ಏರ್ಲಿಫ್ಟ್ ಮಾಡಲು ಭಾರತ ಸರ್ಕಾರ ಮುಂದಾಗಿದೆ.
ಲಂಡನ್ನಲ್ಲಿ ರೂಪಾಂತರ ಕೊರೊನಾ ವೈರಸ್ ಅಟ್ಟಹಾಸದ ಹಿನ್ನೆಲೆ ಭಾರತ ಸರ್ಕಾರ ಕಳೆದ ಒಂದು ವಾರದಿಂದ ಲಂಡನ್ನಲ್ಲಿರುವ ಭಾರತೀಯರನ್ನು ಮರಳಿ ಭಾರತಕ್ಕೆ ಒಂದೇ ಭಾರತ್ ಯೋಜನೆಯ ಅಡಿಯಲ್ಲಿ ಏರ್ಲಿಫ್ಟ್ ಮಾಡುತ್ತಿದೆ. ಇಂದು ಸಹ ಲಂಡನ್ನಿಂದ ಹಲವು ವಿಮಾನಗಳು ಭಾರತದ ವಿವಿಧ ರಾಜ್ಯಗಳಿಗೆ ಬಂದಿಳಿದಿದೆ ಎನ್ನಲಾಗುತ್ತಿದೆ. ಈ ನಡುವೆ ಇಂದು ಬೆಳಗ್ಗೆ05 ಗಂಟೆಗೆ ಲಂಡನ್ ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಥಾಣಕ್ಕೆ ಒಂದು ವಿಮಾನ ಆಗಮಿಸಿದ್ದು ಇದರಲ್ಲಿ 247 ಜನ ಪ್ರಯಾಣಿಕರ ರಾಜ್ಯ ರಾಜಧಾನಿಗೆ ಬಂದಿಳಿದಿದ್ದಾರೆ.
ಇದನ್ನೂ ಓದಿ: Mutant Corona: ರೂಪಾಂತರಿ ಕೊರೋನಾ ಭೀತಿ; ಮತ್ತೆ 6 ವಾರಗಳ ಲಾಕ್ಡೌನ್ ಘೋಷಿಸಿದ ಬ್ರಿಟನ್ ಸರ್ಕಾರ!
ಲಂಡನ್ನಿಂದ ಬಂದ ಎಲ್ಲರಿಗೂ ಟರ್ಮಿನಲ್ ನಲ್ಲಿ ಸ್ಕ್ರೀನಿಂಗ್ ಮತ್ತು ಕೋವಿಡ್ ಟೆಸ್ಟ್ ಮಾಡಲಾಗಿದೆ. ಕೋವಿಡ್ ಟೆಸ್ಟ್ ರಿಪೋರ್ಟ್ ನಂತರ ನೆಗಟಿವ್ ಬಂದ್ರೆ ಹೊಂ ಕ್ವಾರಂಟೈನ್, ಪಾಸಿಟಿವ್ ಬಂದರೆ ಚಿಕಿತ್ಸೆ ನೀಡಲು ಅಗತ್ಯವಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಲಾಗಿದೆ. ಹೀಗಾಗಿ ಲಂಡನ್ನಿಂದ ಬಂಡ ಎಲ್ಲರಿಗೂ ಇಮಿಗ್ರೇಷನ್ ಮುಗಿಸಿ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖಾ ಸಿಬ್ಬಂದಿಗಳು ಟೆಸ್ಟಿಂಗ್ ಮಾಡುತ್ತಿದ್ದಾರೆ.
ಲಂಡನ್ನಲ್ಲಿ ಮ್ಯೂಟೆಂಟ್ಕೊರೋನಾ ವೈರಸ್ ಕಾವು ಇದೀಗ ದಿನದಿಂದ ದಿನಕ್ಕೆ ಏರುತ್ತಿರುವ ಪರಿಣಾಮ ಅಲ್ಲಿ ಸಾವಿನ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಭಾರತೀಯರು ಲಂಡನ್ನಿಂದ ತವರಿಗೆ ಮರಳಿದರೂ ಅಚ್ಚರಿ ಇಲ್ಲ. ಹೀಗಾಗಿ ಲಂಡನ್ನಿಂದ ಭಾರತಕ್ಕೆ ಆಗಮಿಸುವವರ ಕುರಿತು ಕೇಂದ್ರ ಮತ್ತು ಎಲ್ಲಾ ರಾಜ್ಯ ಸರ್ಕಾರಗಳು ಎಚ್ಚರಿಕೆಯಿಂದಿವೆ.
Published by:
MAshok Kumar
First published:
January 11, 2021, 8:46 AM IST