ದುನಿಯಾ ವಿಜಯ್​ಗೆ ಎದುರಾದ ಮತ್ತೊಂದು ಸಂಕಷ್ಟ; ಬ್ಲಾಕ್​ ಕೋಬ್ರಾ ಮೇಲೆ ದಾಖಲಾಯ್ತು ಎಫ್​ಐಆರ್​

ಅದೇ ದಿನ ಐದು ಇಂಚಿನ ಕತ್ತಿಯಿಂದ ದುನಿಯಾ ವಿಜಯ್ ಅವರು ಕೇಕ್​ ಕತ್ತರಿಸಿದ್ದ ಸಹ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಶಸ್ತ್ರಾಸ್ತ್ರ ಕಾಯ್ದೆ ಪ್ರಕಾರ, ಆಯುಧಗಳನ್ನು ಇಟ್ಟುಕೊಳ್ಳುವಂತಿಲ್ಲ. ಅಥವಾ ಸಾರ್ವಜನಿಕವಾಗಿ ಪ್ರದರ್ಶಿಸುವಂತಿಲ್ಲ. ಆದರೆ, ದುನಿಯಾ ವಿಜಿ ಅವರು ಕತ್ತಿಯಿಂದ ಕೇಕ್​ ಕತ್ತರಿಸಿದ್ದರು. ಇದೇ ವಿಚಾರವಾಗಿ ವಿಜಯ್ ಅವರಿಗೆ ಪೊಲೀಸರು ನೋಟಿಸ್​ ಸಹ ನೀಡಿದ್ದರು.

ದುನಿಯಾ ವಿಜಯ್.

ದುನಿಯಾ ವಿಜಯ್.

 • Share this:
  ಬೆಂಗಳೂರು: ನಟ ದುನಿಯಾ ವಿಜಯ್ ಅವರಿಗೆ ಸಂಕಷ್ಟಗಳ ಸಂಕಷ್ಟ ಎದುರಾಗುತ್ತಲೇ ಇವೆ. ಈ ಬಾರಿ ದುನಿಯಾ ವಿಜಯ್ ಅವರು ತಮ್ಮ ಜನ್ಮದಿನ ಸಂಭ್ರಮಾಚರಣೆಯಿಂದಲೇ ಸಂಕಷ್ಟವನ್ನು ಬರಮಾಡಿಕೊಂಡಿದ್ದಾರೆ.

  ಇದೇ ತಿಂಗಳ 20ರಂದು ನಟ ದುನಿಯಾ ವಿಜಯ್ ಅವರ ಜನ್ಮದಿನ. ಆ ದಿನ ಅಭಿಮಾನಿಗಳು ನಟನ ಮುಂದೆ ಜಮಾಯಿಸಿದ್ದರು. ಅಲ್ಲದೇ, ಸಲಗ ಚಿತ್ರತಂಡ ಕೂಡ ಜನ್ಮ ದಿನವನ್ನು ಅದ್ಧೂರಿಯಾಗಿ ಆಚರಿಸಿತ್ತು. ಈ ಸಂಭ್ರಮದ ವೇಳೆ ತಡರಾತ್ರಿವರೆಗೂ ಲೌಡ್ ಸ್ಪೀಕರ್ ಉಪಯೋಗಿಸಿ ಅಕ್ಕಪಕ್ಕದವರಿಗೆ ತೊಂದರೆ ನೀಡಿದ್ದಾರೆ. ಹಾಗೂ ತಲ್ವಾರ್​ನಿಂದ ಕೇಕ್​ ಕತ್ತರಿಸಿದ್ದಾರೆ ಮತ್ತು ರಸ್ತೆಯಲ್ಲಿ ಪೆಂಡಾಲ್​ ಹಾಕಿಕೊಂಡು ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡಿದ್ದಾರೆ ಎಂಬ ಆರೋಪಗಳ ಮೇಲೆ ದುನಿಯಾ ವಿಜಯ್ ಅವರ ಮೇಲೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಸಾರ್ವಜನಿಕರಿಗೆ ತೊಂದರೆ ಮಾಡಿದ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 283 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಎಫ್​ಐಆರ್ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ದುನಿಯಾ ವಿಜಯ್ ಅವರಿಗೆ ಸೂಚನೆ ಸಹ ನೀಡಲಾಗಿದೆ.

  ಅದೇ ದಿನ ಐದು ಇಂಚಿನ ಕತ್ತಿಯಿಂದ ದುನಿಯಾ ವಿಜಯ್ ಅವರು ಕೇಕ್​ ಕತ್ತರಿಸಿದ್ದ ಸಹ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಶಸ್ತ್ರಾಸ್ತ್ರ ಕಾಯ್ದೆ ಪ್ರಕಾರ, ಆಯುಧಗಳನ್ನು ಇಟ್ಟುಕೊಳ್ಳುವಂತಿಲ್ಲ. ಅಥವಾ ಸಾರ್ವಜನಿಕವಾಗಿ ಪ್ರದರ್ಶಿಸುವಂತಿಲ್ಲ. ಆದರೆ, ದುನಿಯಾ ವಿಜಿ ಅವರು ಕತ್ತಿಯಿಂದ ಕೇಕ್​ ಕತ್ತರಿಸಿದ್ದರು. ಇದೇ ವಿಚಾರವಾಗಿ ವಿಜಯ್ ಅವರಿಗೆ ಪೊಲೀಸರು ನೋಟಿಸ್​ ಸಹ ನೀಡಿದ್ದರು. ಬಳಿಕ ಆದ ತಪ್ಪಿಗೆ ಕ್ಷಮೆ ಕೋರಿದ್ದ ದುನಿಯಾ ವಿಜಯ್​, ಆ ವೇಳೆ ಅಭಿಮಾನಿಯೊಬ್ಬರು ನೀಡಿದ್ದ ಕತ್ತಿಯಿಂದ ಕೇಕ್​ ಕತ್ತರಿಸಿದ್ದೆ ಹೊರತು ಪ್ರಚೋದಿಸುವ ಉದ್ದೇಶದಿಂದಲ್ಲ. ಇದು ಆ ಕ್ಷಣದಲ್ಲಿ ನಡೆದ ಅಚಾತುರ್ಯ. ನನ್ನ ತಪ್ಪು ಅರಿವಾಗಿದ್ದು, ಅದಕ್ಕೆ ಕ್ಷಮೆ ಕೋರುತ್ತೇನೆ ಎಂದು ಸ್ಪಷ್ಟನೆ ನೀಡಿದ್ದರು.

  ಇದನ್ನು ಓದಿ: SALAGA: ಘೀಳಿಟ್ಟ ಸಲಗ: ದುನಿಯಾ ವಿಜಯ್ ಹೊಸ ಅವತಾರಕ್ಕೆ ಅಭಿಮಾನಿಗಳು ಫುಲ್ ಫಿದಾ
  First published: