ಬೆಂಗಳೂರು: ಇನ್ನೇನು ಟಿಕೆಟ್ (BJP Candidate List) ಹಂಚಿಕೆ ಅಂತಿಮವಾಯ್ತು ಅನ್ನೋವಷ್ಟರಲ್ಲಿಯೇ ಮೂವತ್ತರಿಂದ ನಲವತ್ತು ಕ್ಷೇತ್ರದಲ್ಲಿ ಮತ್ತೊಂದು ಸಮೀಕ್ಷೆಗೆ ಬಿಜೆಪಿ ಹೈಕಮಾಂಡ್ (BJP High Command) ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಳೆದು ಎರಡು ದಿನಗಳ ಹಿಂದೆಯೇ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರಿಗೆ ಸಮೀಕ್ಷೆ ನಡೆಸಲು ಹೈಕಮಾಂಡ್ ಸೂಚಿಸಿತ್ತಂತೆ. ಒಟ್ಟು ಮೂರು ಪ್ರತ್ಯೇಕ ಸಂಸ್ಥೆಗಳಿಂದ ಸಮೀಕ್ಷೆ ಮಾಡಿಸಲಾಗಿದೆ ಎನ್ನಲಾಗಿದೆ. ಸರ್ವೆಯ ಆಧಾರದ ಮೇಲೆ ಟಿಕೆಟ್ ಫೈನಲ್ ಮಾಡಲಾಗುವುದು. ಈ ಹಿನ್ನೆಲೆ ಪಟ್ಟಿ ಬಿಡುಗಡೆ ವಿಳಂಬವಾಗ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂದು ಸಂಜೆಯ ಒಳಗೆ ಮೂರು ಸರ್ವೆಯ ವರದಿ ಬರಲಿದೆ ಅಂತ ಹೇಳಲಾಗ್ತಿದೆ. ವರದಿ ಬಂದನಂತರ ಇಂದು ರಾತ್ರಿ ಮತ್ತೊಂದು ಸುತ್ತಿನ ಸಭೆಯನ್ನು ಬಿಜೆಪಿ ನಾಯಕರು ನಡೆಸಲಿದ್ದಾರೆ. ತದನಂತರವೇ ಟಿಕೆಟ್ ಫೈನಲ್ ಮಾಡಲು ಹೈಕಮಾಂಡ್ ಮುಂದಾಗಿದೆಯಂತೆ.
ಬಿಎಸ್ವೈ ಅಸಮಾಧಾನ
ಪಟ್ಟಿ ಬಿಡುಗಡೆಗೆ ವಿಳಂಬ ಮಾಡುತ್ತಿರೋದಕ್ಕೆ ಸಭೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅಸಮಾಧಾನ ಹೊರ ಹಾಕಿದ್ದಾರಂತೆ. ಸಭೆಯಿಂದ ಹೊರ ಬಂದ ಬಿಎಸ್ ಯಡಿಯೂರಪ್ಪ ಅವರನ್ನು ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕಾರ್ವರೆಗೆ ಬಂದು ಬಿಟ್ಟು ಹೋಗಿದ್ದಾರೆ.
ಸಭೆಯಿಂದ ಹೊರ ಬಂದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ನಾವು ಸರ್ಕಾರ ರಚನೆ ಮಾಡಲಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಟಿಕೆಟ್ ಹಂಚಿಕೆ ಎಲ್ಲೂ ವಿಳಂಬ ಆಗಿಲ್ಲ. ನಾನೆಲ್ಲೂ ಬೇಸರಗೊಂಡಿಲ್ಲ, ನಾನು ಖುಷಿಯಾಗಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: BS Yediyurappa: ಪಟ್ಟಿ ಬಿಡುಗಡೆ ಬಗ್ಗೆ ರಾಜಾಹುಲಿ ಶಾಕಿಂಗ್ ಹೇಳಿಕೆ; ಬಿಎಸ್ವೈ ಕಳುಹಿಸಿದ ಪರೋಕ್ಷ ಸಂದೇಶ ಏನು?
ಸಭೆಗೆ ಗೈರು ಆಗಿದ್ದೇಕೆ?
ನಿನ್ನೆ ಎಲ್ಲಾ ಕ್ಷೇತ್ರದ ಬಗ್ಗೆ ಆಗಿತ್ತು. ಆದರೆ ಕೆಲವೊಂದು ಕ್ಷೇತ್ರದ ಬಗ್ಗೆ ಗೊಂದಲವಾಗಿತ್ತು. ಅದರ ಬಗ್ಗೆ ಅಧ್ಯಕ್ಷರು ವಿವರ ಕೇಳಿದ್ರು ಹಾಗಾಗಿ ವಿವರ ನೀಡಿ ಬಂದಿದ್ದೇನೆ. ಇಂದು ರಾತ್ರಿ ಅಥವಾ ನಾಳೆ ಟಿಕೆಟ್ ಬಿಡುಗಡೆಯಾಗಲಿದೆ.
ನಾನು ಕೊಟ್ಟಿರೋ ಎಲ್ಲಾ ಅಭಿಪ್ರಾಯಗಳನ್ನ ನಾಯಕರು ಕೇಳಿದ್ದಾರೆ. ಬೆಳಗ್ಗೆ ಸಭೆಗೆ ಯಾಕೆ ಗೈರಾಗಿದ್ರಿ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಎಸ್ವೈ, ಕೆಲವೊಂದು ಚುನಾವಣಾ ತಂತ್ರಗಾರಿಕೆ ಮಾಡಲು ಪ್ರತ್ಯೆಕವಾಗಿ ಕರೆದಿದ್ರು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ