ನಿತ್ಯಾನಂದ ಸ್ವಾಮಿಗೆ ಮತ್ತೆ ಸಂಕಷ್ಟ; ಅಶ್ಲೀಲ ವಿಡಿಯೋ ಹಾಕಿದ್ದಾರೆಂದು ದೂರು ನೀಡಿದ ಮಹಿಳೆ

sushma chakre | news18
Updated:October 11, 2018, 1:02 PM IST
ನಿತ್ಯಾನಂದ ಸ್ವಾಮಿಗೆ ಮತ್ತೆ ಸಂಕಷ್ಟ; ಅಶ್ಲೀಲ ವಿಡಿಯೋ ಹಾಕಿದ್ದಾರೆಂದು ದೂರು ನೀಡಿದ ಮಹಿಳೆ
  • Advertorial
  • Last Updated: October 11, 2018, 1:02 PM IST
  • Share this:
ಮಂಜುನಾಥ್​,  ನ್ಯೂಸ್​18 ಕನ್ನಡ

ಬೆಂಗಳೂರು (ಅ. 11): ಮಾಡರ್ನ್​ ಸ್ವಾಮಿ ಎಂದೇ ಕರೆಯಲ್ಪಡುವ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮಿಗೆ ಮತ್ತೆ ಸಂಕಷ್ಟ ಎದುರಾಗಿದೆ.

ನಿತ್ಯಾನಂದ ಸ್ವಾಮಿ ಮತ್ತು ಶಿಷ್ಯರ ವಿರುದ್ಧ ಆರತಿ ರಾವ್​ ಎಂಬ ಮಹಿಳೆ ಸಿಐಡಿ ಸೈಬರ್ ಕ್ರೈಂ ಸ್ಟೇಷನ್​ನಲ್ಲಿ ದೂರು ನೀಡಿದ್ದಾರೆ. 'ನನ್ನ ಅಶ್ಲೀಲ ವಿಡಿಯೋವೊಂದನ್ನು ಯೂಟ್ಯೂಬ್‌ಗೆ ಹಾಕಿ ನನ್ನ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಕರ್ಮಕಾಂಡ ಎಂಬ ಯೂಸರ್​ ಐಡಿಯಿಂದ ವಿಡಿಯೋ ಅಪ್​ಲೋಡ್​ ಆಗಿದೆ. ಪೋರ್ನ್​ಸ್ಟಾರ್ ಎಂಬ ಹೆಸರಿಟ್ಟು ವಿಡಿಯೋ ಹಾಕಿದ್ದಾರೆ' ಎಂದು ಆರೋಪಿಸಿ ಆರತಿ ರಾವ್ ದೂರು ನೀಡಿದ್ದಾರೆ.

ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನಿತ್ಯಾನಂದ ಹಾಗೂ ಅವರ ಅನುಯಾಯಿಗಳೇ ಈ ಕೆಲಸ ಮಾಡಿದ್ದಾರೆ. ಇದರಿಂದ ನನ್ನ ಗೌರವಕ್ಕೆ ಧಕ್ಕೆಯಾಗಿದೆ. ಆ ವಿಡಿಯೋ ಇಂಟರ್ನೆಟ್​ನ ವಿವಿಧ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದನ್ನು ಪರಿಚಿತರೂ ನೋಡಿರುವುದರಿಂದ ತಲೆಯೆತ್ತಿ ತಿರುಗದಂತಹ ಪರಿಸ್ಥಿತಿ ಎದುರಾಗಿದೆ. ಕೆಲವರು ಆ ವಿಡಿಯೋ ಬಳಸಿಕೊಂಡು ಕಿರುಕುಳ ನೀಡುತ್ತಿದ್ದಾರೆ. ಆದಷ್ಟು ಬೇಗ ಆ ವಿಡಿಯೋವನ್ನು ಬ್ಲಾಕ್​ ಮಾಡಿಸಿ ಹಾಗೂ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ನನಗೆ ನಿತ್ಯಾನಂದ ಅವರಿಂದ ಪ್ರಾಣಭೀತಿಯಿದೆ. ಅವರಿಂದ ನನಗೆ ರಕ್ಷಣೆ ಕೊಡಿ ಎಂದು ದೂರಿನಲ್ಲಿ ಮಹಿಳೆ ಮನವಿ ಮಾಡಿದ್ದಾರೆ.

ಮಹಿಳೆಯ ಅಶ್ಲೀಲ ವಿಡಿಯೊ ಪ್ರಕಟಿಸಿದ ಆರೋಪ (ಐಪಿಸಿ ಸೆಕ್ಷನ್​ 354ಸಿ), ಸಂಜ್ಞೆ ಮೂಲಕ ಮಹಿಳೆ ಗೌರವಕ್ಕೆ ಧಕ್ಕೆ ತಂದ (509) ಆರೋಪಗಳಡಿ ಎಫ್‌ಐಆರ್ ದಾಖಲಿಸಲಾಗಿದೆ. ಇದೇ ಆರತಿ ರಾವ್​ ಈ ಮೊದಲು ನಿತ್ಯಾನಂದನ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದರು. ಈ ಕುರಿತು ರಾಮನಗರ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ: ಸ್ವಘೋಷಿತ ದೇವಮಾನವ ನಿತ್ಯಾನಂದಗೆ ಬಂಧನದ ಭೀತಿ; ಜಾಮೀನು ರಹಿತ ವಾರಂಟ್​ ಜಾರಿ

ಅಂದಹಾಗೆ, ನಿತ್ಯಾನಂದ ಸ್ವಾಮಿ ವಿರುದ್ಧ ಅತ್ಯಾಚಾರ, ಮಾನಹಾನಿ ದೂರು ದಾಖಲಾಗಿರುವುದು ಇದೇ ಮೊದಲೇನಲ್ಲ. 2010ರಲ್ಲಿ ನಟಿ ರಂಜಿತಾ ಕೂಡ ನಿತ್ಯಾನಂದ ಸ್ವಾಮಿ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದರು. ಇದು ದಾಖಲಾದ ನಂತರ ಅನೇಕರು ಮುಂದೆ ಬಂದು ತಮಗಾದ ಅನ್ಯಾಯವನ್ನು ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ನಿತ್ಯಾನಂದ ಸ್ವಾಮಿ ಜೈಲಿಗೂ ಹೋಗಿಬಂದಿದ್ದರು.ಇದನ್ನೂ ನೋಡಿ: 

First published:October 11, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ