Janardhana Reddy: ಜನಾರ್ದನ ರೆಡ್ಡಿಗೆ ಮತ್ತೆ ಶುರುವಾಗುತ್ತಾ ಸಂಕಷ್ಟ? ಮಗಳ ಅದ್ಧೂರಿ ಮದುವೆ ಬಗ್ಗೆ ಮತ್ತೊಂದು ದೂರು ದಾಖಲು

ಮಾಜಿ ಸಚಿವ ಜನಾರ್ದನ್ ರೆಡ್ಡಿ ಮಗಳ ಅದ್ಧೂರಿ ಮದುವೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇದೀಗ ಅವರ ಮಗಳ ಮದುವೆ ಕುರಿತಂತೆ ಮತ್ತೊಂದು ದೂರು ದಾಖಲಾಗಿದೆ.

ಜನಾರ್ದನ ರೆಡ್ಡಿ ಪುತ್ರಿಯ ಅದ್ಧೂರಿ ವಿವಾಹ

ಜನಾರ್ದನ ರೆಡ್ಡಿ ಪುತ್ರಿಯ ಅದ್ಧೂರಿ ವಿವಾಹ

  • Share this:
ಬೆಂಗಳೂರು: ಮಾಜಿ ಸಚಿವ (Ex Minister), ಮಾಜಿ ಗಣಿಧಣಿ ಜನಾರ್ದನ ರೆಡ್ಡಿ (Janardhana Reddy) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅವರ ಮಗಳ (Daughter) ಅದ್ಧೂರಿ ಮದುವೆ (Grand Marriage) ವಿಚಾರವಾಗಿ ಮತ್ತೆ ಸುದ್ದಿ ಮಾಡುತ್ತಿದ್ದಾರೆ. 2016ರಲ್ಲಿ ಅವರ ಮಗಳು ಬ್ರಹ್ಮಿಣಿ ಅವರ ಮದುವೆ ‘ನ ಭೂತೋ ನ ಭವಿಷ್ಯತಿ’ ಎನ್ನುವಂತೆ ಅದ್ಧೂರಿಯಾಗಿ ನಡೆದಿತ್ತು. ರಾಜಕಾರಣಿಗಳು (Politicians), ಉದ್ಯಮಿಗಳು (Industrialist), ಚಿತ್ರ ನಟ-ನಟಿಯರು (Actors) ಸೇರಿದಂತೆ ಸಮಾಜದ ಗಣ್ಯಾತಿಗಣ್ಯರು ಈ ವಿಶೇಷ ಮದುವೆಯಲ್ಲಿ ಭಾಗಿಯಾಗಿದ್ದರು. ಕೇಂದ್ರ ಸರ್ಕಾರ (Central Government) ನೋಟ್ ನಿಷೇಧ (Note Ban) ಮಾಡಿದ್ದರೂ, ಜನ ಸಾಮಾನ್ಯರ ಖರ್ಚಿಗೆ ಮಿತಿ ವಿಧಿಸಿದ್ದರೂ ಜನಾರ್ದನ ರೆಡ್ಡಿ ಅವರ ಮಗಳ ಮದುವೆಗೆ ಕೋಟಿ ಕೋಟಿ ಹಣ ಖರ್ಚು ಮಾಡಿದ್ದು ವಿವಾದಕ್ಕೆ (Controversy) ಕಾರಣವಾಗಿತ್ತು. ಇದೀಗ ಇದೇ ಅದ್ಧೂರಿ ಮದುವೆ ವಿವಾದಕ್ಕೆ ಸಂಬಂಧಿಸಿದಂತೆ ಮತ್ತೊಂದು ದೂರು (Complaint) ದಾಖಲಾಗಿದೆ.

ಜನಾರ್ದನ ರೆಡ್ಡಿ ಮಗಳ ಅದ್ಧೂರಿ ಮದುವೆ ವಿರುದ್ಧ ದೂರು

ಜನಾರ್ದನ ರೆಡ್ಡಿ ಅವರ ಮಗಳ ಮದುವೆಗೆ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಲಾಗಿದೆ. ಮದುವೆ ಖರ್ಚಿನ ಹಣಕಾಸಿನ ಮೂಲದ ಬಗ್ಗೆ ನೀಡಿದ್ದ ದೂರನ್ನು ತನಿಖೆ ಮಾಡದೇ ನಿರ್ಲಕ್ಷ ವಹಿಸಿದೆ ಅಂತ ಆರೋಪಿಸಿ ಆದಾಯ ತೆರಿಗೆ ಇಲಾಖೆ ಬೆಂಗಳೂರು ವಲಯದ ಹೆಚ್ಚುವರಿ ನಿರ್ದೇಶಕ ಡಾ. ಸುಭಾಷ್ ಕೆ. ಅರ್. ವಿರುದ್ದ ಕೇಂದ್ರ ಜಾಗೃತ ಆಯೋಗದಲ್ಲಿ ದೂರು ದಾಖಲಾಗಿದೆ.

ದೂರು ದಾಖಲಿಸಿದ್ದು ಯಾರು?

ವಕೀಲ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಟಿ. ನರಸಿಂಹಮೂರ್ತಿ ಎಂಬುವರು ದೂರು ನೀಡಿದ್ದಾರೆ. ಇದರ ಅನ್ವಯ ಕೇಂದ್ರ ಜಾಗೃತ ಆಯೋಗವು ಏ. 4 ರಂದೇ ದೂರನ್ನು (ದೂರಿನ ನಂಬರ್ 196812/2022) ಅಂಗೀಕರಿಸಿದೆ. ಗಾಲಿ ಜನಾರ್ಧನರೆಡ್ಡಿ ಅದ್ಧೂರಿ ಮದುಗೆ ವ್ಯಯಿಸಿದ ಕೋಟಿ ಕೋಟಿ ವೆಚ್ಚದ ಬಗ್ಗೆ ತನಿಖೆ ಮಾಡದೇ ನಿರ್ಲಕ್ಷ ವಹಿಸಿದ ಅರೋಪಕ್ಕೆ ಸಂಬಂಧಿಸಿದಂತೆ ಕೆ.ಅರ್. ಸುಭಾಷ್ ಮೇಲೆ ದೂರು ನೀಡಲಾಗಿದೆ.

ಇದನ್ನೂ ಓದಿ: Explained: ತಾಂಬೂಲ ಪ್ರಶ್ನೆ ಎಂದರೇನು? ಇದರ ಆಚರಣೆ, ಮಹತ್ವಗಳ ಬಗ್ಗೆ ಇಲ್ಲಿದೆ ಮಾಹಿತಿ

2016ರಲ್ಲಿ ಬೆಂಗಳೂರಿನಲ್ಲಿ ನಡೆದಿತ್ತು ಅದ್ದೂರಿ ವಿವಾಹ ಮಹೋತ್ಸವ

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 40 ತಿಂಗಳು ಜೈಲಿನಲ್ಲಿದ್ದ ರೆಡ್ಡಿ ಬಿಡುಗಡೆಯಾದ ಬಳಿಕ ಮಗಳ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಿದ್ದರು. 2016ರಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನಾರ್ದನ ರೆಡ್ಡಿ ಹಾಗೂ ಅರುಣ ಲಕ್ಷ್ಮೀ ದಂಪತಿಯ ಪುತ್ರಿ ಬ್ರಹ್ಮಿಣಿ ವಿವಾಹವು ನಡೆದಿತ್ತು. ನ ಭೂತೋ ನ ಭವಿಷ್ಯತಿ ಎನ್ನುವಷ್ಟು ಅದ್ಧೂರಿಯಾಗಿ ವಿವಾಹ ನಡೆದಿತ್ತು. ಅರಮನೆ ಮೈದಾನದ 40 ಎಕರೆ ಜಾಗದಲ್ಲಿ ಅದ್ಧೂರಿ ಸೆಟ್ ನಿರ್ಮಿಸಲಾಗಿತ್ತು. 15 ಎಕರೆ ಪಾರ್ಕಿಂಗ್​​ಗೆ ಮೀಸಲಿಟ್ಟಿದ್ದು,  27 ಎಕರೆಯಲ್ಲಿ ಮದುವೆ ಕಾರ್ಯ ನಡೆದಿತ್ತು. ಅರತಕ್ಷತೆಗೆ ಮುಂಬೈನಿಂದ ಬಂದಿರುವ ಬಾಲಿವುಡ್​​ ಕಲಾನಿರ್ದೇಶಕರು ಮತ್ತು ಕರ್ನಾಟಕದ ಖ್ಯಾತ ಕಲಾ ನಿರ್ದೇಶಕರು ಸೆಟ್ ಹಾಕಿದ್ದರು.

ಅದ್ಧೂರಿ ಸೆಟ್‌ನಲ್ಲಿ ವಿವಾಹ

ಮಾರ್ಚ್ 5ಕ್ಕೆ ಬೆಳಗ್ಗೆ ಮೇಲು ಕೋಟೆಯ ಕಲ್ಯಾಣಿ ಮಾದರಿಯ ಮದ್ಯದಲ್ಲಿ ಮುಹೂರ್ತ ನೆರವೇರಿತ್ತು. 4 ಸಾವಿರ ಮಂದಿ ನೋಡುವಂತೆ ವ್ಯವಸ್ಥೆ ಮಾಡಲಾಗಿತ್ತು. ಇದರಲ್ಲಿ ಹಂಪಿ ವಿರೂಪಾಕ್ಷನ ದೇವಸ್ಥಾನವೂ ಒಂದು. ಸೆಟ್ ಅಲಂಕಾರಕ್ಕಾಗಿಯೇ 300 ಕಲಾವಿದರು ಕೆಲಸ ಮಾಡಲಿದ್ದಾರೆ. ಜೊತೆಗೆ ಕರ್ನಾಟಕದ 200 ಮಂದಿ ಹೂವಿನ ಅಲಂಕಾರ ಮಾಡಲೆಂದೇ ನಿಯೋಜನೆಗೊಂಡಿದ್ದರು.

ಇದನ್ನೂ ಓದಿ: Bengaluru: ಎಟಿಎಂಗೆ ಕನ್ನ ಹಾಕೋಕೆ ಬಂದು 19 ಲಕ್ಷ ಹಣ ಸುಟ್ಟ ಕಳ್ಳರು

ರೆಡ್ಡಿ ವಿರುದ್ಧ ಈ ಹಿಂದೆಯೂ ದೂರು

ಜನಾರ್ದನರೆಡ್ಡಿ ತಮ್ಮ ಪುತ್ರಿಯ ಮದುವೆಗೆ ನೂರಾರು ಕೋಟಿ ಹಣ ಖರ್ಚು ಮಾಡಿದ್ದರು. ಈ ಮದುವೆ ಖರ್ಚಿಗೆ ಓಬಳಾಪುರ ಮೈನಿಂಗ್ ಕಂಪನಿಯ ಅಂಗಸಂಸ್ಥೆಯಾದ ಟ್ಯೂಬೂಲಾರ್ ರೆವಿಟ್ ಪ್ರೈವೇಟ್ ಲಿಮಿಟೆಡ್ ಹಾಗೂ ಮಿದಿತಾ ಎಂಟರ್ ಪ್ರೈಸಸ್ ಕಂಪನಿಗಳ ಆದಾಯವೇ ಮೂಲವೆಂದು ತಿಳಿಸಿದ್ದರು. ಆದ್ರೆ ಸಿಬಿಐ ಅಧಿಕಾರಿಗಳ ಪ್ರಕಾರ ಓಬಳಾಪುರ ಮೈನಿಂಗ್ ಕಂಪನಿ ಅಸ್ಥಿತ್ವದಲ್ಲಿಲ್ಲ, ಹೀಗಾಗಿ ಮಗಳ ಮದುವೆಗೆ ಬೇನಾಮಿ ಹಣ ಖರ್ಚು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
Published by:Annappa Achari
First published: