Murugha Swamy Case: ಸಂತ್ರಸ್ತೆಯರನ್ನು ನಿಮ್ಹಾನ್ಸ್​ಗೆ ಸೇರಿಸೋ ಹುನ್ನಾರ! ಮುರುಘಾ ಸ್ವಾಮಿ ವಿರುದ್ಧ ಮತ್ತೊಂದು ಆರೋಪ

ಸಂತ್ರಸ್ತರ ಭೇಟಿಗೆ CWC ಅವಕಾಶ ನೀಡಿಲ್ಲ, ಸಂತ್ರಸ್ತೆಯರ ಭೇಟಿ ಮಾಡಲು ಕೋರ್ಟ್ ನಮಗೆ ಅನುಮತಿ ನೀಡಿದ್ದರೂ ಅಧಿಕಾರಿಗಳು ನಕಾರ ಮಾಡುತ್ತಿದ್ದಾರೆ. ಬಾಲಕಿಯರಿಗೆ ಅವ್ರ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ನಿಮ್ಹಾನ್ಸ್ ಗೆ ದಾಖಲಿಸಿ ಕೇಸ್​ಗೆ ಟ್ವಿಸ್ಟ್ ನೀಡೋ ಯತ್ನ ನಡೀತಿದೆ ಎಂದು ಸಂತ್ರಸ್ತೆ ಪರ ವಕೀಲರು ಆರೋಪಿಸಿದ್ದಾರೆ.

ಶಿವಮೂರ್ತಿ ಮುರುಘಾ ಶರಣರು

ಶಿವಮೂರ್ತಿ ಮುರುಘಾ ಶರಣರು

  • Share this:
ಚಿತ್ರದುರ್ಗ (ಸೆ.16) : ಮುರುಘಾ ಸ್ವಾಮಿ (Murugha Swamy) ವಿರುದ್ಧ ಪೋಕ್ಸೋ ಪ್ರಕರಣದ 4ನೇ ಆರೋಪಿ ಮಠದ ಕಾರ್ಯದರ್ಶಿ ಪರಮಶಿವಯ್ಯ, 5ನೇ ಆರೋಪಿ ವಕೀಲ ಗಂಗಾಧರಯ್ಯ, ಪರ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ(Application for Anticipatory Bail) ವಿಚಾರಣೆಯನ್ನ ನ್ಯಾಯಾಲಯ ಮುಂದೂಡಿದ್ದು, 3ನೇ ಆರೋಪಿ ಉತ್ತರಾಧಿಕಾರಿ ಬಸವಾದಿತ್ಯ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನ ವಜಾ ಮಾಡಿ ಆದೇಶಿಸಿದೆ. ಮುರುಘಾ ಸ್ವಾಮಿ ವಿರುದ್ದ  ದಾಖಲಾಗಿರುವ ಪೋಕ್ಸೋ ಪ್ರಕರಣದ (Pocso Case) 4, 5 ನೇ ಆರೋಪಿಗಳ ಪರ ಬೆಂಗಳೂರಿನ ಹೈಕೋರ್ಟ್ ವಕೀಲ ಸಿ.ಹೆಚ್. ಹನುಮಂತರಾಯ ವಾದ ಮಂಡನೆ ಮಾಡಿ ಜಾಮೀನು ನೀಡುವಂತೆ ಮನವಿ ಮಾಡಿದ್ದು, ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿ‌ ವಿಚಾರಣೆಯನ್ನ ಸೆಪ್ಟೆಂಬರ್ 17ಕ್ಕೆ ಮುಂದೂಡಿ ಆದೇಶ ಮಾಡಿದೆ.

 ನಿರೀಕ್ಷಣಾ ಜಾಮೀನು  ಅರ್ಜಿ ವಜಾ

ಇನ್ನೂ ಇದೇ ಪ್ರಕರಣದ  ಮಠದ ಉತ್ತರಾಧಿಕಾರಿ 3ನೇ ಆರೋಪಿ ಬಸವಾದಿತ್ಯ ಪರ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮಾಡಿರುವ ಚಿತ್ರದುರ್ಗ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯ (3ನೇ ಆರೋಪಿ ಬಾಲ ನ್ಯಾಯ ಮಂಡಳಿ ವ್ಯಾಪ್ತಿಗೆ ಒಳಪಡುವ ಕಾರಣ ವಜಾ) ಉತ್ತರಾಧಿಕಾರಿ ನಿರೀಕ್ಷಣಾ ಜಾಮೀನು  ಅರ್ಜಿ ವಜಾ ಮಾಡಿದೆ.

ಸಂತ್ರಸ್ತ ಬಾಲಕಿಯರು ಪೂರ್ವಾಪರ ವಿಚಾರಿಸಿಲ್ಲ

ಇನ್ನೂ ಈ ಪ್ರಕರಣ ಕುರಿತು 4, 5ನೇ ಆರೋಪಿಗಳ ಪರ ಹೈಕೋರ್ಟ್ ವಕೀಲ, ನಾವು CRPC 91 ಅಡಿಯಲ್ಲಿ 2 ಅರ್ಜಿ ಹಾಕಿದ್ದೇವೆ. ಸಂತ್ರಸ್ತ ಬಾಲಕಿಯರು 24/7/22ಕ್ಕೆ, ಬೆಂಗಳೂರಿನ ಕಾಟನ್ ಪೇಟೆ ಠಾಣೆಗೆ ತೆರಳಿದ್ದರು. ಆಗ ಪೊಲೀಸರು ಸಂಪೂರ್ಣ ಪೂರ್ವಾಪರ ವಿಚಾರಿಸಬೇಕಿತ್ತು.

'ತಲೆ ಕೆಟ್ಟು ಬಂದಿದ್ದಾರೋ ಅಥವಾ ಉದ್ದೇಶ ಪೂರ್ವಕ್ಕೆ ಬಂದಿದ್ದರೋ ಎಂದು ವಿಚಾರಿಸಬೇಕಿತ್ತು. ಆದ್ರೆ ಅಂದು ಯಾವುದೇ ಎಫ್ ಐ ಆರ್ ದಾಖಲು ಆಗಿಲ್ಲ, ಆ ಹೆಣ್ಣು ಮಕ್ಕಳ ಹಿಂದೆ ನಿರ್ದೇಶಕರು ಇದ್ದರು, ನಿರ್ದೇಶನದಂತೆ ಆ ಹೆಣ್ಣು ಮಕ್ಕಳು ನಡೆದುಕೊಂಡಿದ್ದರು, ಅದೇ ಸಂದರ್ಭದಲ್ಲಿ ಅಪರಾಧ ನಡೆದಿದ್ದೇ ಆದರೆ, 26/08/22ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ದಾಖಲಾದ ದೂರು ದೂರಾಗಿ ಉಳಿಯಲ್ಲ, 24/7/22ರ ಮೊದಲು ನಡೆದದ್ದು ಎಫ್ ಐ ಆರ್ ಆಗಬೇಕಾಗಿದ್ದು, ಬೆಂಗಳೂರಿನ ಕಾಟನಪೇಟೆ ಠಾಣೆಯಲ್ಲಿ ಎಫ್ ಐಆರ್ ಆಗಬೇಕು, ತನಿಖೆ ಆಗಬೇಕು, ಕಾಟನ್ ಪೇಟೆ ಪೊಲೀಸ್ ಠಾಣೆಯ ಎಸ್ ಹೆಚ್ ಡಿ ಎಂಟ್ರೀಸ್ ಮಾಹಿತಿ ಬರಬೇಕಿದೆ.

ಇದನ್ನೂ ಓದಿ; Murugha Swamiji: ಮತ್ತೆ 14 ದಿನ ಮುರುಘಾ ಸ್ವಾಮಿಗೆ ಜೈಲೇ ಗತಿ; ನ್ಯಾಯಾಂಗ ಬಂಧನ ವಿಸ್ತರಣೆ

ಸಂತ್ರಸ್ತರ ಪರ ವಾದಕ್ಕೆ ಅವಕಾಶ‌

ಸತ್ಯಾಂಶ ಹೊರ ಬಂದರೆ ತಾನಾಗಿಯೇ ಪ್ರಕರಣದ ಆರೋಪಿಗಳು ಆರೋಪ ಮುಕ್ತರಾಗುವ ಸಾಧ್ಯತೆ ಎಂದು ಹೇಳಿದ್ರು, ಇನ್ನೂ ಸೆ.17ಕ್ಕೆ ಸರ್ಕಾರಿ ವಕೀಲರು, ಹಾಗೂ ಸಂತ್ರಸ್ತರ ಪರ ವಕೀಲರಿಗೆ ವಾದ ಮಾಡಲು ಅವಕಾಶ‌ ನೀಡಲಾಗಿದೆ. ಬರವಣಿಗೆ ಮೂಲಕ ಆರ್ಗುಮೆಂಟ್ ಸಲ್ಲಿಸುವುದಾಗಿ ಸಂತ್ರಸ್ತೆಯರ ಪರ ವಕೀಲ‌ ಹೇಳಿದ್ದಾರೆ. ಹಾಗಾಗಿ ಸಂತ್ರಸ್ತೆಯರ ಪರ ವಕೀಲರ ಆರ್ಗುಮೆಂಟ್ ಬಳಿಕ ನಮಗೆ ರಿಪ್ಲೇಗೆ ಅವಕಾಶ ಇರುತ್ತದೆ ಎಂದು ಹೇಳಿದ್ದಾರೆ. ಇತ್ತ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಸಂತ್ರಸ್ತೆಯರನ್ನ ಭೇಟಿ ಮಾಡಲು ಹೋಗಿದ್ದ ವಕೀಲ ಶ್ರೀನಿವಾಸ್ CWC ಅಧಿಕಾರಿಗಳ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ:  Muruga Mutt Case: ಮುರುಘಾ ಶ್ರೀಗೆ ಮತ್ತೊಂದು ಸಂಕಷ್ಟ, ಅಟ್ರಾಸಿಟಿ ಪ್ರಕರಣವೂ ದಾಖಲು!

ಸಂತ್ರಸ್ತೆಯರನ್ನು ನಿಮ್ಹಾನ್ಸ್ ಗೆ ದಾಖಲಿಸೋ ಹುನ್ನಾರ!

ಸಂತ್ರಸ್ತರ ಭೇಟಿಗೆ CWC ಅವಕಾಶ ನೀಡಿಲ್ಲ, ಸಂತ್ರಸ್ತೆಯರ ಭೇಟಿ ಮಾಡಲು ಕೋರ್ಟ್ ನಮಗೆ ಅನುಮತಿ ನೀಡಿದ್ದರೂ ಅಧಿಕಾರಿಗಳು ನಕಾರ ಮಾಡುತ್ತಿದ್ದಾರೆ. ಬಾಲಕಿಯರಿಗೆ ಕೋಪ ಹೆಚ್ಚಿದೆ ಎಂದು ಬಿಂಬಿಸುವ ಯತ್ನ ನಡೆಯುತ್ತಿದೆ.  ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಬಿಂಬಿಸುವ ಯತ್ನ, ನಿಮ್ಹಾನ್ಸ್ ಗೆ ದಾಖಲಿಸಿ ಕೇಸ್ ಗೆ ಟ್ವಿಸ್ಟ್ ನೀಡುವ ಹುನ್ನಾರ ನಡೆದಿದೆ. ಈ ಕುರಿತು ಚಿತ್ರದುರ್ಗ CWC ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುತ್ತೇವೆ. ಚಿತ್ರದುರ್ಗ CWC ಕಾಣದ ಕೈಗಳ ಒತ್ತಡಕ್ಕೆ ಮಣಿಯುತ್ತಿದೆ ಸಂತ್ರಸ್ತರಿಗೆ ಸಮರ್ಪಕ ಆಹಾರವನ್ನೂ ನೀಡದೆ ನಿರ್ಲಕ್ಷ ಮಾಡುತ್ತಿದ್ದಾರೆ. ಸಂತ್ರಸ್ತೆಯ ತಂದೆಗೂ ಭೇಟಿಯಾಗಲು ಅವಕಾಶ ನೀಡಿಲ್ಲ ಎಂದು ಕಿಡಿಕಾರಿರುವ ಸಂತ್ರಸ್ತೆಯರ ಪರ ವಕೀಲ ಶ್ರೀನಿವಾಸ್ ಆರೋಪ ಮಾಡಿದ್ದಾರೆ.
Published by:ಪಾವನ ಎಚ್ ಎಸ್
First published: