• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Acid Attack: ಬೆಂಗಳೂರಲ್ಲಿ ಮತ್ತೊಂದು ಆ್ಯಸಿಡ್ ದಾಳಿ, ಯುವಕನ ಮೇಲೆ ಸ್ನೇಹಿತನಿಂದಲೇ ಡೆಡ್ಲಿ ಅಟ್ಯಾಕ್!

Acid Attack: ಬೆಂಗಳೂರಲ್ಲಿ ಮತ್ತೊಂದು ಆ್ಯಸಿಡ್ ದಾಳಿ, ಯುವಕನ ಮೇಲೆ ಸ್ನೇಹಿತನಿಂದಲೇ ಡೆಡ್ಲಿ ಅಟ್ಯಾಕ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯುವಕನೊಬ್ಬ ತನ್ನ ಸ್ನೇಹಿತನ ಮೇಲೆ ಆ್ಯಸಿಡ್ ಅಟ್ಯಾಕ್ ಮಾಡಿದ್ದಾನೆ. ಕಬ್ಬನ್ ಪೇಟೆಯ 10ನೇ ಕ್ರಾಸ್ ನಲ್ಲಿ ಘಟನೆ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಜನತಾ ಅದಕ್ ಎಂಬಾತನಿಂದ ಕೃತ್ಯ ನಡೆದಿದೆ. ಮಂತು ಸಂತ್ರಾ ಎಂಬಾತನ ಮೇಲೆ ಜನತಾ ಅದಕ್ ಆ್ಯಸಿಡ್ ಎರಚಿದ್ದಾನೆ.

  • Share this:

ಬೆಂಗಳೂರು: ರಾಜ್ಯ ರಾಜಧಾನಿ (Capital) ಬೆಂಗಳೂರಲ್ಲಿ (Bengaluru) ಕೆಲ ದಿನಗಳ ಹಿಂದಷ್ಟೇ ಭಗ್ನ ಪ್ರೇಮಿಯೊಬ್ಬ (Lover) ಪ್ರೀತಿ ನಿರಾಕರಿಸಿದ (Love Reject) ಯುವತಿ (Girl) ಮೇಲೆ ಆ್ಯಸಿಡ್ ದಾಳಿ (Acid Attack) ನಡೆಸಿದ್ದ. ಆ ಯುವತಿ ಆ್ಯಸಿಡ್‌ನಲ್ಲಿ ಬೆಂದು, ಇದೀಗ ಆಸ್ಪತ್ರೆಯಲ್ಲೇ (Hospital) ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಈ ಸುದ್ದಿ (News) ರಾಷ್ಟ್ರದಾದ್ಯಂತ ಸದ್ದು (Sound) ಮಾಡಿತ್ತು. ಇದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಇಲ್ಲಿ ಆ್ಯಸಿಡ್ ಎರಚಿ, ತಮಿಳುನಾಡಲ್ಲಿ (Tamil Nadu) ಆರೋಪಿ (Accused) ತಲೆ ಮರೆಸಿಕೊಂಡಿದ್ದ. ಸನ್ಯಾಸಿ (Monk) ವೇಷದಲ್ಲಿದ್ದ ಆತನನ್ನು ಪೊಲೀಸರು (Police) ಹೆಡೆಮುರಿ ಕಟ್ಟಿ ಬೆಂಗಳೂರಿಗೆ ತಂದಿದ್ದರು. ಇದೀಗ ಈ ಘಟನೆ ಮಾಸುವ ಮುನ್ನವೇ ಬೆಂಗಳೂರಲ್ಲಿ ಮತ್ತೊಂದು ಆ್ಯಸಿಡ್ ದಾಳಿ ನಡೆದಿದೆ. ಇಲ್ಲಿ ಸ್ನೇಹಿತನೇ (Friend) ತನ್ನ ಸ್ನೇಹಿತನ ಮೇಲೆ ಆ್ಯಸಿಡ್ ಎರಚಿದ್ದಾನೆ.


ಸ್ನೇಹಿತನ ಮೇಲೆ ಸ್ನೇಹಿತನಿಂದಲೇ ಆ್ಯಸಿಡ್ ಅಟ್ಯಾಕ್


ಬೆಂಗಳೂರಿನಲ್ಲಿ ಯುವಕನೊಬ್ಬ ತನ್ನ ಸ್ನೇಹಿತನ ಮೇಲೆ ಆ್ಯಸಿಡ್ ಅಟ್ಯಾಕ್ ಮಾಡಿದ್ದಾನೆ. ಕಬ್ಬನ್ ಪೇಟೆಯ 10ನೇ ಕ್ರಾಸ್ ನಲ್ಲಿ ಘಟನೆ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಜನತಾ ಅದಕ್ ಎಂಬಾತನಿಂದ ಕೃತ್ಯ ನಡೆದಿದೆ. ಮಂತು ಸಂತ್ರಾ ಎಂಬಾತನ ಮೇಲೆ ಜನತಾ ಅದಕ್ ಆ್ಯಸಿಡ್ ಎರಚಿದ್ದಾನೆ.


ಇಬ್ಬರ ನಡುವೆ ನಡೆದಿತ್ತು ಜಗಳ


ಆರೋಪಿ ಹಾಗೂ ಗಾಯಾಳು ಇಬ್ಬರು ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಇಬ್ಬರೂ ಬೆಳ್ಳಿ ಪಾಲಿಶ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇನ್ನು ಕಳೆದ ಭಾನುವಾರ ರಾತ್ರಿ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ಆರೋಪಿ ಜನತಾ ಅದಕ್, ಮಂತು ಸಂತ್ರಾ ಮೇಲೆ ಆ್ಯಸಿಡ್ ಎರಚಿದ್ದಾನೆ.


ಇದನ್ನೂ ಓದಿ: Explained: ಭಯಾನಕ ಆ್ಯಸಿಡ್ ದಾಳಿಗಳು ನಿಲ್ಲುವುದು ಯಾವಾಗ? ಬಾಳನ್ನೇ ಬಲಿಪಡೆದ ಪಾಪಿಗಳಿಗೆ ಶಿಕ್ಷೆಗಳೇನು?


ಗಾಯಾಳು ಯುವಕ ಆಸ್ಪತ್ರೆಗೆ ದಾಖಲು


ಡೈಲೂಟೇಡ್ ಸೆಲ್ಫುರಿಕ್ ಆ್ಯಸಿಡ್ ಎರಚುತ್ತಿದ್ದಂತೆ ಮಂತು ಸಂತ್ರಾ ಮುಖ, ಎದೆಗೆ ಗಾಯವಾಗಿದೆ. ಶೇಕಡಾ 30% ರಷ್ಟು ಗಾಯವಾಗಿದ್ದು, ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲಿ ಗಾಯಾಳುಗೆ ಚಿಕಿತ್ಸೆ ಮುಂದುವರೆದಿದೆ.


ಮೈಸೂರಿನಲ್ಲಿ ಸಿಕ್ಕಿಬಿದ್ದ ಆರೋಪಿ


ಇನ್ನು ಮಂತು ಸಂತ್ರಾ ಮೇಲೆ ಡೈಲೂಟೇಡ್ ಸೆಲ್ಫುರಿಕ್ ಆ್ಯಸಿಡ್ ಎರಚಿದ ಜನತಾ ಅದಕ್, ಭಯದಿಂದ ಎಸ್ಕೇಪ್ ಆಗಿದ್ದಾನೆ. ಆತ ಬಿದ್ದು ನರಳುತ್ತಿದ್ದರೆ ಈತ ಮೈಸೂರಿಗೆ ಎಸ್ಕೇಪ್ ಆಗಿದ್ದ. ಈ ಬಗ್ಗೆ ಕೇಸ್ ದಾಖಲಿಸಿಕೊಂಡ ಹಲಸೂರು ಗೇಟ್ ಠಾಣೆ ಪೊಲೀಸರು, ಮೈಸೂರಿನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.


ಆ್ಯಸಿಡ್‌ ನಾಗನನ್ನು ಕಸ್ಟಡಿಗೆ ಪಡೆದ ಪೊಲೀಸರು


ಇನ್ನು ದೇಶಾದ್ಯಂತ ಸದ್ದು ಮಾಡಿದ್ದ ಯುವತಿ ಮೇಲಿನ ಆ್ಯಸಿಡ್ ದಾಳಿಗೆ ಸಂಬಂಧಿಸಿದಂತೆ ಆರೋಪಿ ನಾಗೇಶ್‌ನನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಯುವತಿ ಮೇಲೆ ಆ್ಯಸಿಡ್ ಹಾಕಿದ್ದ ನಾಗೇಶ್, ತಮಿಳುನಾಡಿಗೆ ಹೋಗಿ ಸನ್ಯಾಸಿ ವೇಷ ಧರಿಸಿ, ತಲೆ ಮರೆಸಿಕೊಂಡಿದ್ದ. ಅಲ್ಲಿ ಇರುವ ಬಗ್ಗೆ ಮಾಹಿತಿ ತಿಳಿದ ಬೆಂಗಳೂರು ಪೊಲೀಸರು ಆತನನ್ನು ಬಂಧಿಸಿ, ಕರೆ ತಂದಿದ್ದರು.


ತಪ್ಪಿಸಿಕೊಳ್ಳುವಾಗ ಪೊಲೀಸರಿಂದ ಆರೋಪಿಗೆ ಗುಂಡೇಟು


ಮೇ 14 ನೇ ತಾರೀಖು ಬೆಳಗ್ಗೆ ತಪ್ಪಿಸಿಕೊಳ್ಳುವ ವೇಳೆ ಆರೋಪಿ ನಾಗೇಶ್ ಬಲಗಾಲಿಗೆ ಪೊಲೀಸ್ ಇನ್ಸ್‌ಪೆಕ್ಟರ್ ಗುಂಡು ಹೊಡೆದಿದ್ದರು. ತಮಿಳುನಾಡಿನಿಂದ ಕರೆತರುವಾಗ ಮುಂಜಾನೆ ಮೂತ್ರ ವಿಸರ್ಜನೆಗೆಂದು ಕೇಳಿಕೊಂಡು ಕೆಂಗೇರಿ ಬ್ರಿಡ್ಜ್ ಬಳಿ ಓಡಿಹೋಗಲು ಯತ್ನ‌ಿಸಿದ್ದ. ಇದೇ ವೇಳೆ ತಡೆಯಲು ಮುಂದಾದ ಕಾನ್ಸ್ ಟೇಬಲ್ ಗೆ ಕಲ್ಲಿನಿಂದ ಹಲ್ಲೆ ಮಾಡಿದ್ದ. ಶರಣಾಗತಿಗೂ ಮಾತು ಕೇಳದ ಹಿನ್ನಲೆ ಬಲಗಾಲಿಗೆ ಗುಂಡು ಹಾರಿಸಲಾಗಿತ್ತು.. ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು.


ಇದನ್ನೂ ಓದಿ: Exclusive: ಪೊಲೀಸರ ಮುಂದೆ ಆಸಿಡ್ ದಾಳಿಕೋರ ಹೇಳಿದ್ದೇನು? ನಾಗನ ವಿಕೃತ ಮನಸ್ಸು ಕಂಡು ಶಾಕ್!


ಶೀಘ್ರದಲ್ಲೇ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ


ಕಳೆದ 17 ದಿನಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಇದೀಗ ಗುಣಮುಖನಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಆತ ಆಸ್ಪತ್ರೆ ಸೇರಿದ್ದರಿಂದ ಆರೋಪಿ ವಿಚಾರಣೆ ಪೂರ್ಣ ಪ್ರಮಾಣದಲ್ಲಿ ಆಗಿರಲಿಲ್ಲ. ಹೀಗಾಗಿ ವಿಚಾರಣೆ ಮಾಡಿ ಶೀಘ್ರದಲ್ಲೇ ಚಾರ್ಜ್ ಶೀಟ್ ಸಲ್ಲಿಕೆಗೆ ಪೊಲೀಸರು ಸಿದ್ದತೆ ನಡೆಸಿದ್ದಾರೆ.  ವಿಚಾರಣೆ ಬಳಿಕ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ.

Published by:Annappa Achari
First published: