ಪ್ರಸಕ್ತ ವರ್ಷದಿಂದಲೇ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ (5th And 8th Students Exams) ವಾರ್ಷಿಕ ಪರೀಕ್ಷೆ ನಡೆಸುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನವೆಂಬರ್ 2022 ರಿಂದ ಮಾರ್ಚ್ 2023ರವರೆಗೆ ಪಠ್ಯಪುಸ್ತಕ ಆಧರಿಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಇಲಾಖೆ (Department Of Education) ಆದೇಶದಲ್ಲಿ ಹೇಳಿದೆ. ಪ್ರಸ್ತುತ 2022-23ನೇ ಸಾಲಿನಲ್ಲಿ ಮಕ್ಕಳ ಕಲಿಕಾ ಕೊರತೆಯನ್ನು ನೀಗಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಕಲಿಕಾ ಪ್ರಗತಿಯು ಅನುಪಾಲನೆಯಲ್ಲಿದೆ. ಆದ್ರೆ 1 ರಿಂದ 9ನೇ ತರಗತಿಯವರೆಗೆ ಶಾಲಾ ಹಂತದಲ್ಲಿ ಸಿಸಿಇ ಅಡಿ ಮೌಲ್ಯಾಂಕನ ವಿಶ್ಲೇಷಣೆ ಮಾಡುತ್ತಿರೋದರಿಂದ ಹಾಗೂ ವಾರ್ಷಿಕ ಪರೀಕ್ಷೆಗಳನ್ನು (Annual Exams) ನಿರ್ವಹಿಸದಿರುವ ಕಾರಣ ರಾಜ್ಯ ಪಠ್ಯ ಕ್ರಮದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳ ಒಟ್ಟಾರೆ ಸಾಧನೆ ಯಾವ ರೀತಿ ಇದೆ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ.
ಇದರಿಂದ ಒಟ್ಟಾರೆಯಾಗಿ ಮಕ್ಕಳ ಕಲಿಗೆ ಮಟ್ಟವೇನು? ಅವರ ಕೊರತೆಗಳೇನು? ಯಾವ ವಿಷಯದಲ್ಲಿ ಹಿನ್ನಡೆ ಉಂಟಾಗಿದೆ? ಇವುಗಳನ್ನು ನಿವಾರಿಸಲು ಯಾವ ಕ್ರಮಗಳನ್ನ ಅನುಸರಿಸಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಎಲ್ಲಾ ಶಾಲೆಯ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಕಲಿಕಾ-ಫಲಗಳನ್ನು/ಸಾಮಾರ್ಥ್ಯಗಳನ್ನಾಧರಿಸಿದ ಏಕರೂಪದ ಸಾಧನಾ ಮತ್ತು ತಂತ್ರ ಬಳಸಿ ಮೌಲ್ಯಮಾಪನ ಮಾಡಿ ವಿಶ್ಲೇಷಣೆ ಮಾಡುವುದು ಅವಶ್ಯವಿದೆ ಎಂದು ಸರ್ಕಾರ ಹೇಳಿದೆ.
ಪ್ರಯುಕ್ತ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ( KSEAB) ಇವರ ಹಂತದಲ್ಲಿ ಪ್ರಶ್ನೆ ಪತ್ರಿಕೆ ರೂಪಿಸಿ ಸರಬರಾಜು ಮಾಡಿ ಶಾಲಾ ಹಂತದಲ್ಲಿ ಪರೀಕ್ಷೆ ನಿರ್ವಹಿಸಿ ಮೌಲ್ಯಾಂಕನ ವಿಶ್ಲೇಷಣೆ ಮಾಡಲು ಸಹಕಾರಿ ಆಗುತ್ತದೆ.
ಕಲಿಕಾ ಪ್ರಕ್ರಿಯೆ
ಇದರಿಂದ ಮಕ್ಕಳ ಕಲಿಕಾ ಪ್ರಗತಿ ಕುಂಠಿತವಾಗಿರುವ ವಿಷಯವಾರು, ಶಾಲಾವಾರು, ಕ್ಲಸ್ಟರ್/ತಾಲೂಕುವಾರು ವಿಶ್ಲೇಷಿಸಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅಗತ್ಯ ಕ್ರಿಯಾ ಯೋಜನೆಯನ್ನ ರಚಿಸಿ ಬೋಧನಾ-ಕಲಿಕಾ ಪ್ರಕ್ರಿಯೆಯನ್ನು ಬಲವರ್ಧನೆಗೊಳಿಸುವ ಉದ್ದೇಶ ಹೊಂದಿದೆ ಎಂದು ಸರ್ಕಾರ ತಿಳಿಸಿದೆ.
50 ಅಂಕಗಳ ಪರೀಕ್ಷೆ
ಮುಂಬರುವ ಮಾರ್ಚ್ನಲ್ಲಿ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. 2 ಗಂಟೆಯ ಅವಧಿಗೆ 50 ಅಂಕಗಳ ನಿಗಧಿ ಮಾಡಲಾಗಿದೆ. ಅದರಲ್ಲಿ 40 ಅಂಕ ಲಿಖಿತ ಮತ್ತು 10 ಅಂಕ ಮೌಖಿಕ ಪರೀಕ್ಷೆ ನಡೆಯಲಿದೆ. ಕಲಿಕಾ ಚೇತರಿಕೆ ಪಠ್ಯಕ್ರಮದ ಅಡಿಯಲ್ಲಿ ಪ್ರಶ್ನೆಗಳು ಸಿದ್ಧಪಡಿಸಲು ಸರ್ಕಾರ ನಿರ್ಧರಿಸಿದೆ.
ಮಾರ್ಚ್ನಲ್ಲಿ ಪರೀಕ್ಷೆ, ಏಪ್ರಿಲ್ನಲ್ಲಿ ಫಲಿತಾಂಶ
ಮಾರ್ಚ್ 9, 2023 ರಿಂದ 17 ಮಾರ್ಚ್ 2023ರವರೆಗೆ ವಾರ್ಷಿಕ ಪರೀಕ್ಷೆ ಜರುಗಲಿದೆ. 08 ಏಪ್ರಿಲ್ ಮತ್ತು 10 ಏಪ್ರಿಲ್ 2023 ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ.
ಕ್ಷೀರಭಾಗ್ಯ ಯೋಜನೆಯ ಸರಿಯಾದ ಅನುಷ್ಠಾನ
ಪ್ರತಿ ಮಕ್ಕಳಿಗೂ ಸಹ ಸಮಾನವಾದ ಹಾಲು ವಿತರಣೆ ಅಂದರೆ ಪ್ರತಿ ಮಗುವಿಗೂ 150ಮಿ.ಲೀ ಉತ್ತಮ ಗುಣಮಟ್ಟದ ಹಾಲನ್ನು ವಿತರಣೆ ಮಾಡುವಂತೆ ಸೂಚಿಸಲಾಗಿದೆ. ಶಾಲೆ ಮಕ್ಕಳ ಹಾಜರಾತಿಯಂತೆ ಹಾಲಿನ ಪುಡಿಗಳನ್ನು ಸ್ವೀಕರಿಸಿ ಹೆಚ್ಚಿನ ದಿನ ದಾಸ್ತಾನು ಇಡದಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಅಗತ್ಯ ಪ್ರಮಾಣದಲ್ಲಿ ಬಿಸಿ ಹಾಲು ತಯಾರಿಸಿ ಮಕ್ಕಳಿಗೆ ನೀಡುವಂತೆ ತಿಳಿಸಲಾಗಿದೆ.
ಇದನ್ನೂ ಓದಿ: Kalaburagi: ಬಡಮಕ್ಕಳ ದ್ರೋಣಾಚಾರ್ಯ ಕಲಬುರಗಿಯ ಈ ಡಾನ್ಸ್ ಮಾಸ್ಟರ್!
ಬಿಸಿ ಊಟದ ಸಮಯ ಬದಲು
ಶಾಲೆಗಳಲ್ಲಿ ಮಕ್ಕಳಿಗೆ ಸಹಾಯವಾಗಲಿ ಮಕ್ಕಳು ಹಸಿವಿನಿಂದ ಬಳಲದಿರಲಿ ಎಂದು ಬಿಸಿ ಊಟ (Bisi Uta) ಯೋಜನೆ ಸ್ಥಾಪಿಸಿರುವ ಸಂಗತಿ ತಿಳಿದೇ ಇದೆ ಆದರೆ ಈಗ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಸಮಯವನ್ನು ಬದಲಾವಣೆ ಮಾಡಿಕೊಳ್ಳುವ ಕುರಿತು ಶಿಕ್ಷಣ ಇಲಾಖೆ ಶಾಲೆಗಳಿಗೆ (Schools) ಸೂಚನೆಯೊಂದನ್ನ ನೀಡಿದೆ. ಈ ಸೂಚನೆಯ ಪ್ರಕಾರ ಮಕ್ಕಳಿಗೆ ಬಿಸಿ ಊಟದ ಸಮಯ (Time) ಎಂದಿಗಿಂತ ಒಂದು ಗಂಟೆಗಳ ಕಾಲದ ನಂತರ ಊಟ ಬಡಿಸಲಾಗುವುದು ಎಂದು ತಿಳಿದು ಬಂದಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ