ಗದಗದಲ್ಲಿ ಅನ್ನಭಾಗ್ಯ ಯೋಜನೆಯ ಅಕ್ರಮ ದಂಧೆ ಬಯಲು; ದಾಳಿ ವೇಳೆ ಬೆಚ್ಚಿಬಿದ್ದ ಅಧಿಕಾರಿಗಳು

ಕರ್ನಾಟಕ ಸರ್ಕಾರದ ಐ ಸಿ  ಡಿ ಎಸ್ ಯೋಜನೆಯ ಅಡಿಯಲ್ಲಿ ಮಕ್ಕಳು, ಬಾಣಂತಿಯರು,ಗರ್ಭಿಣಿ ಸ್ತ್ರೀಯರಿಗೆ ನೀಡುವ ಗೋಧಿ ಹಿಟ್ಟಿನ ಚೀಲ ಹಾಗೂ ಗೋಧಿ ಹಾಗೂ ತೊಗರಿಬೇಳೆ ಪತ್ತೆಯಾಗಿದೆ. ಹಾಗೇ ಅನ್ನ ಭಾಗ್ಯ ಅಕ್ಕಿಯ 50 ಕೆಜಿಯ 94 ಕ್ಕೂ ಚೀಲ್ ಗಳು ಪತ್ತೆಯಾಗಿದ್ದು, ಈ ಕುರಿತು ತನಿಖೆ ಮಾಡಿ ತಪ್ಪಿತಸ್ಥರ ಮೇಲೆ‌ ಸೂಕ್ತವಾದ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.

ದಾಳಿ ವೇಳೆ ಪತ್ತೆಯಾದ ಅನ್ನಭಾಗ್ಯ ಯೋಜನೆಯ ಅಕ್ಕಿ

ದಾಳಿ ವೇಳೆ ಪತ್ತೆಯಾದ ಅನ್ನಭಾಗ್ಯ ಯೋಜನೆಯ ಅಕ್ಕಿ

  • Share this:
ಗದಗ(ಜ.30): ಗದಗ ಜಿಲ್ಲೆಯಲ್ಲಿ ಬಡವರ ಹೊಟ್ಟೆ ಸೇರಬೇಕಾದ ಅನ್ನ ಭಾಗ್ಯ ಅಕ್ಕಿಯ ಅಕ್ರಮ ದಂಧೆ, ರಾಜಾರೋಷವಾಗಿ ನಡೆಯುತ್ತಿದೆ. ಈಗಾಗಲೇ ಹತ್ತಾರು ಪ್ರಕರಣಗಳು ಬೆಳಕಿಗೆ ಬಂದರೂ ಅಕ್ರಮ ದಂಧೆ ಮಾತ್ರ  ನಿಂತಿಲ್ಲ. ಈವಾಗ ಮತ್ತೊಂದು ಅಕ್ರಮ ದಂಧೆ ಬಯಲಾಗಿದ್ದು, ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. ಹೌದು ಈ ಭಾರಿ ಅನ್ನ ಭಾಗ್ಯ ಅಕ್ಕಿಯ ಜೊತೆಗೆ ಮಕ್ಕಳ ಹೊಟ್ಟೆ ಸೇರಬೇಕಾದ ಪೌಷ್ಟಿಕ ಆಹಾರ ಧಾನ್ಯಗಳು ಸಹ ಪತ್ತೆಯಾಗಿದ್ದು, ದೊಡ್ಡ ಜಾಲ ಇರುವ ಶಂಕೆ ವ್ಯಕ್ತವಾಗಿದೆ.

ಮಕ್ಕಳು ಹಾಗೂ ಗರ್ಭಿಣಿ ಸ್ತ್ರೀಯರಿಗೆ ಪೂರೈಕೆ ಮಾಡುವ ಪೌಷ್ಟಿಕ ಆಹಾರ ಸೇರಿದಂತೆ ಪಡಿತರ ಅಕ್ಕಿ ಅಕ್ರಮವಾಗಿ ಸಂಗ್ರಹಣೆ ಮಾಡಲಾಗಿದೆ. ಗದಗ ನಗರದ ಟ್ಯಾಗೋರ್ ರಸ್ತೆಯ ನಿವಾಸಿಯಾದ ಬಸವರಾಜ  ಎನ್ನುವರು ತಮ್ಮ ಮನೆಯನ್ನು ಮಹಾಂತೇಶ ಎನ್ನುವ ವ್ಯಕ್ತಿಗೆ ಬಾಡಿಗೆ ನೀಡಿದ್ದಾರೆ. ಆ ಮನೆಯಲ್ಲಿ ಪಡಿತರ ಅಕ್ಕಿ, ಹಾಗೂ ಅಂಗನವಾಡಿ ಕೇಂದ್ರದ ಗೋಧಿ ಹಾಗೂ ತೊಗರಿ ಬೇಳೆ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರಿಗೆ ಆಹಾರ ಇಲಾಖೆ ಅಧಿಕಾರಿಗಳನ್ನು ಹಾಗೂ ಪೊಲೀಸರು ಜಂಟಿಯಾಗಿ ದಾಳಿ ಮಾಡಿದರು.

ಪೊಲೀಸರು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ಮಾಡ್ತಾಯಿದ್ದಂತೆ ಅಕ್ರಮ ದಂಧೆ ಮಾಡುತ್ತಿದ್ದ ಖದೀಮರು ಸ್ಥಳದಿಂದ ನಾಪತ್ತೆಯಾಗಿದ್ದಾರೆ. ನಂತ್ರ ಅಧಿಕಾರಿಗಳು ಮೂಲ ಮಾಲೀಕರಿಂದ ಆ ಮನೆಯ ಕೀ ತೆಗೆದುಕೊಂಡು ಬಂದು ಬಾಗಿಲು ಓಪನ್ ಮಾಡಿದ್ರೆ, ಅಲ್ಲಿಯೇ ಅಕ್ರಮದ ಸಂತೆ ಇತ್ತು. ಕರ್ನಾಟಕ ಸರ್ಕಾರದ ಐ ಸಿ  ಡಿ ಎಸ್ ಯೋಜನೆಯ ಅಡಿಯಲ್ಲಿ ಮಕ್ಕಳು, ಬಾಣಂತಿಯರು,ಗರ್ಭಿಣಿ ಸ್ತ್ರೀಯರಿಗೆ ನೀಡುವ ಗೋಧಿ ಹಿಟ್ಟಿನ ಚೀಲ ಹಾಗೂ ಗೋಧಿ ಹಾಗೂ ತೊಗರಿಬೇಳೆ ಪತ್ತೆಯಾಗಿದೆ. ಹಾಗೇ ಅನ್ನ ಭಾಗ್ಯ ಅಕ್ಕಿಯ 50 ಕೆಜಿಯ 94 ಕ್ಕೂ ಚೀಲ್ ಗಳು ಪತ್ತೆಯಾಗಿದ್ದು, ಈ ಕುರಿತು ತನಿಖೆ ಮಾಡಿ ತಪ್ಪಿತಸ್ಥರ ಮೇಲೆ‌ ಸೂಕ್ತವಾದ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.

ಕಾಫಿನಾಡಿನ ಗಿರಿಭಾಗಕ್ಕೆ ಪ್ರವಾಸಿಗರನ್ನ ನಿಷೇಧಿಸುವಂತೆ ಪರಿಸರವಾದಿಗಳ ಆಗ್ರಹ

ಇನ್ನೂ ಅನ್ನ ಭಾಗ್ಯ ಅಕ್ಕಿಯನ್ನು ವಿವಿಧ ಬ್ರ್ಯಾಂಡ್ ಹೆಸರಿನಲ್ಲಿ 50 ಕೆಜಿ ತೂಕದ ಚೀಲಗಳನ್ನು ರಡಿ ಮಾಡಿ ಶೇಖರಣೆ ಮಾಡಲಾಗಿದೆ. ತೂಕ ಮಾಡಲು ತೂಕದ ಯಂತ್ರ ಹಾಗೂ ವಿವಿದ ಕಂಪನಿಯ ಬ್ರ್ಯಾಂಡ್ ಇರುವ ಚೀಲ್ ಗಳು ಸಹ ಪತ್ತೆಯಾಗಿವೆ. ಇಲ್ಲಿಂದಲೇ ದೊಡ್ಡ ಮಟ್ಟದ ಅಕ್ರಮವಾಗಿ ಅನ್ನ ಭಾಗ್ಯ ಅಕ್ಕಿಯನ್ನು ಬೇರೆ ಕಡೇ ಸರಬರಾಜು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಗದಗ ಜಿಲ್ಲಾ ಆಹಾರ ಇಲಾಖೆಯ ಉಪ ನಿರ್ದೇಶಕರಾದ ವಿಠ್ಠಲ್ ರಾವ್ ಪರಿಶೀಲನೆ ನಡೆಸಿ, ಅಕ್ರಮವಾಗಿ ಸಂಗ್ರಹಣೆ ಮಾಡಿದವರ ಮೇಲೆ‌ ಸೂಕ್ತವಾದ ಕ್ರಮ ಕೈಗೊಳ್ಳಲಾಗುವುದು ಅಂತಾ ಹೇಳಿದ್ದಾರೆ. ಈ ಮನೆಯನ್ನು ಬಾಡಿಗೆ ಪಡೆದು ದೊಡ್ಡ ದೊಡ್ಡ ಕುಳಗಳು ಈ ದಂಧೆ ಮಾಡ್ತಾಯಿರೋ ಶಂಕೆ ವ್ಯಕ್ತವಾಗಿದೆ. ಹಾಗಾಗಿ  ಪ್ರಕರಣ ದಾಖಲಿಸಿ, ತಪ್ಪಿತಸ್ಥರ ಮೇಲೆ‌ ಕಾನೂನು ಕ್ರಮ ಕೈಗೊಳ್ಳುತ್ತೇವೆ ಅಂತಾ ಹೇಳುತ್ತಾರೆ ವಿಠ್ಠಲ್ ರಾವ್ ಆಹಾರ ಇಲಾಖೆ ಉಪ ನಿರ್ದೇಶಕರು.

ಗದಗ ಜಿಲ್ಲೆಯಲ್ಲಿ ಹತ್ತಕ್ಕೂ ಹೆಚ್ಚು ಅಕ್ರಮ ಅನ್ನ ಭಾಗ್ಯ ದಂಧೆ ಪ್ರಕರಣಗಳು ಇತ್ತೀಚೆಗೆ ದಾಖಲು ಆಗಿವೆ. ಆದ್ರೂ ಕೂಡಾ ಅಕ್ಕಿ ದಂಧೆಕೊರರು ಅಕ್ರಮವಾಗಿ ಅಕ್ಕಿ ದಂಧೆಯನ್ನು ಅವ್ಯಾಹತವಾಗಿ ನಡೆಸುತ್ತಿದ್ದಾರೆ. ಬಡವರ ಹೊಟ್ಟೆ ಸೇರಬೇಕಾದ ಅನ್ನ ಭಾಗ್ಯ ಯೋಜನೆ ದಂಧೆಕೋರರನ್ನು ಸೇರುತ್ತಿದೆ. ಹೀಗಾಗಿ ಸೂಕ್ತವಾದ ತನಿಖೆ ಮಾಡಿ ಅಕ್ರಮ ದಂಧೆಗೆ ಬ್ರೇಕ್ ಹಾಕಬೇಕಾಗಿದೆ.
Published by:Latha CG
First published: