ಮಗನ ಮದುವೆಗೆ ಮತದಾರರಿಗೆ ಯಾವುದೇ ಉಡುಗೊರೆ ನೀಡುತ್ತಿಲ್ಲ, ಇದೆಲ್ಲಾ ಸುಳ್ಳು ಸುದ್ದಿ: ಅನಿತಾ ಕುಮಾರಸ್ವಾಮಿ

Nikhil Kumaraswamy Marriage: ನಿಖಿಲ್​ ಮದುವೆಗೆ ಕ್ಷೇತ್ರದ ಮತದಾರರಿಗೆ ರೇಷ್ಮೆ ಸೀರೆ, ಪಂಚೆ ನೀಡುತ್ತಿದ್ದೇವೆ ಎಂದು ಸುದ್ದಿ ಹರಿದಾಡುತ್ತಿದೆ. ಆದರೆ, ಇದೆಲ್ಲಾ ಸತ್ಯಕ್ಕೆ ದೂರವಾದ್ದರು. ಈ ರೀತಿ ಯಾರು ಹಬ್ಬಿಸುತ್ತಿದ್ದಾರೆ ಗೊತ್ತಿಲ್ಲ.

ನಿಖಿಲ್​ ಕುಮಾರಸ್ವಾಮಿ ನಿಶ್ಚಿತಾರ್ಥದ ಚಿತ್ರ

ನಿಖಿಲ್​ ಕುಮಾರಸ್ವಾಮಿ ನಿಶ್ಚಿತಾರ್ಥದ ಚಿತ್ರ

  • Share this:
ರಾಮನಗರ (ಮಾ.7): ನಿಖಿಲ್​ ಕುಮಾರಸ್ವಾಮಿ ಮದುವೆಗೆ ನಾವು ಮತದಾರರಿಗೆ ಯಾವುದೇ ಉಡುಗೊರೆಯನ್ನು ನೀಡುತ್ತಿಲ್ಲ. ಇದೆಲ್ಲಾ ಸುಳ್ಳು ಸುದ್ದಿ, ಬೆಂಗಳೂರಿನ ಬದಲು ರಾಮನಗರ ಜಿಲ್ಲೆಯಲ್ಲೇ ನಾವು ಸರಳವಾಗಿ ಮದುವೆ ಮಾಡುತ್ತಿದ್ದೇವೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ತಿಳಿಸಿದರು. 

ನಗರದಲ್ಲಿ ಮಾತನಾಡಿದ ಅವರು, ನಿಖಿಲ್​ ಮದುವೆಗೆ ಕ್ಷೇತ್ರದ ಮತದಾರರಿಗೆ ರೇಷ್ಮೆ ಸೀರೆ, ಪಂಚೆ ನೀಡುತ್ತಿದ್ದೇವೆ ಎಂದು ಸುದ್ದಿ ಹರಿದಾಡುತ್ತಿದೆ. ಆದರೆ, ಇದೆಲ್ಲಾ ಸತ್ಯಕ್ಕೆ ದೂರವಾದ್ದರು. ಈ ರೀತಿ ಯಾರು ಹಬ್ಬಿಸುತ್ತಿದ್ದಾರೆ ಗೊತ್ತಿಲ್ಲ. ಆಹ್ವಾನ ಪತ್ರಿಕೆಯನ್ನು ಸರಳವಾಗಿ ಪ್ರಿಂಟ್​ ಮಾಡಿಸಿದ್ದೇವೆ. ಅದಕ್ಕೇನೂ ಸಾವಿರಾರು ರೂಪಾಯಿ ಖರ್ಚು ಮಾಡಿಲ್ಲ. ಇಲ್ಲಿಯೇ ಮದುವೆ ಮಾಡಬೇಕು ಎಂಬ ಇಚ್ಛೆ ನನಗೂ, ಕುಮಾರಸ್ವಾಮಿಗೂ ಇತ್ತು. ಈ ಹಿನ್ನೆಲೆಯಲ್ಲಿ ಹಾಗೂ ಅಧಿಕ ಜನರು ಸೇರುತ್ತಾರೆ ಎಂದು ಅದಕ್ಕಾಗಿ ವಿಶಾಲವಾದ ಸ್ಥಳ ಬೇಕು ಎಂಬ ದೃಷ್ಟಿಯಿಂದ ಇಲ್ಲಿ ಮದುವೆ ಮಾಡುತ್ತಿದ್ದೇವೆ ಎಂದರು.

ಇದೇ ವೇಳೆ ರಾಜ್ಯ ಬಜೆಟ್​ ಕುರಿತು ಟೀಕಿಸಿದ ಅವರು, ರೈತರ ಸಾಲಮನ್ನಾ ಯೋಜನೆ ಕೈ  ಬಿಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು.

ಇದನ್ನು ಓದಿ: ಚನ್ನಪಟ್ಟಣ: ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ 18 ಹಸುಗಳ ರಕ್ಷಣೆ

ಬಜೆಟ್​ ಮಂಡಿಸುವಾಗ ಹಸಿರು ಶಾಲು ಹೊದ್ದ ಸಿಎಂ, ರೈತರ ಸಾಲಮನ್ನಾ ಯೋಜನೆಯನ್ನು ಕೈ ಬಿಟ್ಟಿದ್ದಾರೆ. ಅದು ಸರಿಯಲ್ಲ. ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಂತೆ ಬಜೆಟ್​ ಮಂಡಿಸಿದ್ದಾರೆ. ಅಲ್ಲದೇ, ಎಚ್​ಡಿಕೆ ಯೋಜನೆಗಳಿಗೂ ಬ್ರೇಕ್​ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

(ವರದಿ: ಎಟಿ ವೆಂಕಟೇಶ್​)
First published: