KN Rajanna: ಅವನು ಇನ್ನೆಷ್ಟು ದಿನ ಬದುಕಿರ್ತಾನೆ, ನಾವು ನೋಡ್ತೀವಿ: ಅನಿತಾ ಕುಮಾರಸ್ವಾಮಿ ಆಕ್ರೋಶ

ದೇವೇಗೌಡರ ಕಾಲಿನ ಧೂಳಿಗೆ ಸಮನಿಲ್ಲದ ವ್ಯಕ್ತಿ ಅವನು, ಆಚಾರವಿಲ್ಲದ ನಾಲಿಗೆ ಅವರದ್ದು, ಪರಮನೀಚ ಮನುಷ್ಯ ರಾಜಣ್ಣ ಎಂದು ಆಕ್ರೋಶ ಹೊರ ಹಾಕಿದರು. ಬಹಳ ನೋವಿನಿಂದ ಈ ಮಾತುಗಳನ್ನ ಹೇಳುತ್ತಿದ್ದೇನೆ ಎಂದರು.

ಅನಿತಾ ಕುಮಾರಸ್ವಾಮಿ

ಅನಿತಾ ಕುಮಾರಸ್ವಾಮಿ

  • Share this:
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ (Former PM HD Devegowda) ಬಗ್ಗೆ ಮಾಜಿ ಶಾಸಕ ಕೆ.ಎನ್ ರಾಜಣ್ಣ (Former MLA KN Rajanna) ಆಕ್ಷೇಪಾರ್ಹ ಹೇಳಿಕೆ ವಿಚಾರವಾಗಿ ಶಾಸಕಿ ಅನಿತಾ ಕುಮಾರಸ್ವಾಮಿ (MLA Anita Kumaraswamy) ಪ್ರತಿಕ್ರಿಯಿಸಿದ್ದಾರೆ. ದೇವೇಗೌಡರ ಕಾಲಿಗೆ ಧೂಳಿಗೆ ಸಮನಿಲ್ಲ ವ್ಯಕ್ತಿ ಅವನು, ಆಚಾರವಿಲ್ಲದ ನಾಲಿಗೆ ಅವರದ್ದು, ಪರಮನೀಚ ಮನುಷ್ಯ ರಾಜಣ್ಣ ಎಂದು ಆಕ್ರೋಶ ಹೊರ ಹಾಕಿದರು. ಬಹಳ ನೋವಿನಿಂದ ಈ ಮಾತುಗಳನ್ನ ಹೇಳುತ್ತಿದ್ದೇನೆ.‌ ಅವರ ಬುದ್ಧಿಯನ್ನ ನೋಡಿಯೇ ಮಧುಗಿರಿ ಜನ ಸೋಲಿಸಿದರು.‌ ಒಬ್ಬ ಮಾಜಿ ಪ್ರಧಾನಿಗಳ ಬಗ್ಗೆ ಕನಿಷ್ಟ ಗೌರವವಿಲ್ಲದೆ ಮಾತಾಡಿದ್ದಾರೆ. ದೇವೇಗೌಡರ ಹತ್ತಿರ ಭೇಟಿ ಮಾಡ್ತೀನಿ ಅಂದಿದ್ದಾರೆ. ನಮ್ಮ ಮಾವನವರಿಗೆ ಹೇಳ್ತೀನಿ ಭೇಟಿ ಮಾಡೋದು ಬೇಡ ಎನ್ನುತ್ತೇನೆ ಎಂದರು.

ಅವರಿಗೆ 90 ವರ್ಷ ವಯಸ್ಸು. ಈ ರೀತಿ ಹೇಳಿಕೆ ಕೊಡವವರು ಇನ್ನೆಷ್ಟು ವರ್ಷ ಬದುಕುತ್ತಾರೆ ಎಂದು ನಾವು ನೋಡುತ್ತೇವೆ. ಇಂತಹವರಿಂದಲೇ ದೇವೇಗೌಡರ ಆರೋಗ್ಯ ಕೆಟ್ಟಿದೆ. ಕಳೆದ ಎರಡು ವರ್ಷದಿಂದ ಅವರ ಆರೋಗ್ಯ ಸರಿ ಇಲ್ಲ ಎಂದು ಹೇಳುತ್ತಲೇ ಗದ್ಗದಿತರಾದರು.

ರಾಜಣ್ಣ ಹೇಳಿಕೆ ಖಂಡಿಸಿ ಜೆಡಿಎಸ್ ಪ್ರತಿಭಟನೆ

ಪೌರಕಾರ್ಮಿಕರ ಕಷ್ಟ ಆಲಿಸಿದ ಅನಿತಾಕುಮಾರಸ್ವಾಮಿ ಸಮಸ್ಯೆಗೆ ಸ್ಪಂದಿಸುವುದಾಗಿ ತಿಳಿಸಿದರು. ಇನ್ನು ಕೆ.ಎನ್ ರಾಜಣ್ಣ ಹೇಳಿಕೆ ಖಂಡಿಸಿ ರಾಮನಗರದಲ್ಲಿ ಪ್ರತಿಭಟನೆ ನಡೆಸಿದರು. ಜೆಡಿಎಸ್​ ಮುಖಂಡರು ಮತ್ತು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿಕೆ.ಎನ್.ರಾಜಣ್ಣ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ:  BJP Tweet: ಸಿದ್ದರಾಮಯ್ಯಗೆ ತಾಕತ್ತಿದ್ರೆ ಡಿ.ಕೆ ಶಿವಕುಮಾರ್ ವಿರುದ್ಧ ಸೆಟೆದು ನಿಲ್ಲಲಿ; ಬಿಜೆಪಿ ಸವಾಲ್

ರಾಜಣ್ಣ ಕ್ಷಮೆಗೂ ಅರ್ಹರಲ್ಲ

ಐಜೂರು ವೃತ್ತದಲ್ಲಿ ರಾಜಣ್ಣ ಭಾವಚಿತ್ರಕ್ಕೆ ಬೆಂ ಕಿಹಾಕಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನಾಡಿಗೆ ಕೊಟ್ಟ ಕೊಡುಗೆ ಅಪಾರ, ಅವರ ವಿಚಾರವಾಗಿ ಇಷ್ಟು ಕೀಳಾಗಿ ಯಾರು ಮಾತನಾಡಬಾರದು. ರಾಜಕೀಯ ಬೇರೆ ವಯಕ್ತಿಕ ಸಂಬಂಧ ಬೇರೆ. ಅವರ ಹಿರಿತನಕ್ಕೆ ಎಲ್ಲರೂ ಗೌರವ ಕೊಡಬೇಕು. ಈ ದೇಶಕ್ಕೆ ಅವರು ನೀಡಿರುವ ಕೊಡುಗೆ ಅಪಾರ, ಹಾಗೆಯೇ ಹೆಚ್‌ಡಿಡಿ ಅವರ ಕುರಿತ ಹೇಳಿಕೆ ಕ್ಷಮೆಗೂ ಅರ್ಹವಲ್ಲ.

ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಉತ್ತರ ದೊರೆಯುತ್ತದೆ. ಕೆ.ಎನ್.ರಾಜಣ್ಣಗೆ ಮಧುಗಿರಿಯಲ್ಲೆ ತಕ್ಕ ಉತ್ತರ ಸಿಗಲಿದೆ. ಇನ್ಮುಂದೆ ನಾಲಿಗೆ ಬಿಗಿ ಹಿಡಿದು ಮಾತಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿ ಜೆಡಿಎಸ್ ಕಾರ್ಯಕರ್ತರು ಕಿಡಿಕಾರಿದರು.

ರಾಜಣ್ಣ ಸಾಯಲ್ವೇ? ಈ ಹೇಳಿಕೆ ಖಂಡನೀಯ

ಇನ್ನುಕೆ.ಎನ್.ರಾಜಣ್ಣ ಆಕ್ಷೇಪಾರ್ಹ ಹೇಳಿಕೆಗೆ ಕಾಂಗ್ರೆಸ್ MLC ಸಿ.ಎಂ.ಲಿಂಗಪ್ಪ ಖಂಡನೆ ವ್ಯಕ್ತಪಡಿಸಿದರು. ‌ದೇವೇಗೌಡರು ಯಾವುದೇ ಪಕ್ಷದವರು ಇರಬಹುದು. ಅವರು ಪ್ರಧಾನಿ, ಮುಖ್ಯಮಂತ್ರಿ ಆಗಿದ್ದಂತವರು.‌ ವಯಸ್ಸಿನಲ್ಲಿ, ರಾಜಕೀಯದಲ್ಲೂ ಹಿರಿಯ ಮುತ್ಸದಿ.‌ ರಾಜಣ್ಣ ಸಾಯಲ್ವೇ, ನಾನು ಕೂಡಾ ಸಾಯೋದಿಲ್ವೇ. ರಾಜಣ್ಣ ಬಾಯಲ್ಲಿ ಆ ಮಾತು ಬಂದದ್ದು ಅಕ್ಷಮ್ಯ ಅಪರಾಧ. ದುಡುಕು, ಆದರೂ ಈ ವಿಚಾರ ಶೋಭೆ ತರುವಂತಹದ್ದು ಅಲ್ಲ. ಯಾವುದೇ ಪಕ್ಷದವರು ಇರಲಿ ಹಿರಿಯರ ಬಗ್ಗೆ ಗೌರವ ಇರಬೇಕು. ವಿಧಾನಸೌದದಲ್ಲಿ ಸಾಕಷ್ಟು ವರ್ಷ ಇದ್ದವರು ರಾಜಣ್ಣ, ಇನ್ನೂ ಒರಟುತನ ಅವರಲ್ಲಿ ಹೋಗಿಲ್ಲ, ಕೆ.ಎನ್.ರಾಜಣ್ಣ ಒರಟುತನ ಬಿಟ್ಟು ಮಾತನಾಡಲಿ ಎಂದರು.

ದೇವೇಗೌಡರು ಭೀಷ್ಮಾಚಾರ್ಯ ಇದ್ದಂತೆ

ರಾಜಣ್ಣ ವಿರುದ್ಧ ಕುಮಾರಸ್ವಾಮಿ (Kumaraswamy) ಕೂಡ ಕಿಡಿಕಾರಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು (Deve Gowda) ಭೀಷ್ಮಾಚಾರ್ಯ ಇದ್ದಂತೆ. ಅವರಿಗೆ ಸಾವು ಅನ್ನೋದು ಅವರು ಬಯಸಿದಾಗಲೇ ಬರುತ್ತದೆಯೇ ಹೊರತು, ಯಾರೋ ಏನೋ ಹೇಳಿದಾಗ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ:  Siddaramaiah: ನನ್ನನ್ನು ಕಂಡ್ರೆ ಬಿಜೆಪಿ ಅವ್ರಿಗೆ ಹೊಟ್ಟೆ ಕಿಚ್ಚು, ನನ್ನ ಬರ್ತ್ ಡೇ ಕಾರ್ಯಕ್ರಮಕ್ಕೆ ಅವ್ರನ್ನ ಕರೆಯೋದಿಲ್ಲ

ರಾಜ್ಯದಲ್ಲಿ ಜೆಡಿಎಸ್​​ನ್ನು ಅಧಿಕಾರಕ್ಕೆ ತರಲೇಬೇಕೆಂದು ದೇವೇಗೌಡರು ಶಪಥ ಮಾಡಿದ್ದಾರೆ. ಭೀಷ್ಮಾಚಾರ್ಯರ ಗುಣ ಅವರಿಗೆ ಇದೆ. ಅವರು ಬಯಸಿದಾಗ ಸಾವು ಬರುತ್ತದೆ. ಭಗವಂತ ಅವರಿಗೆ ಇನ್ನೂ ಶಕ್ತಿ ಕೊಟ್ಟಿದ್ದಾನೆ. ನಾನು ಅವರ ಭಾವನೆಗಳನ್ನು ಗಮನಿಸಿದ್ದೇನೆ. ಯಾವುದೇ ಕಾರಣಕ್ಕೂ ಅವರ ಆಯಸ್ಸಿನ ಮೇಲೆ ದುಷ್ಪರಿಣಾಮ ಬೀರುವುದಿಲ್ಲ. ಈ ಬಗ್ಗೆ ಚರ್ಚೆ ಮಾಡಿರುವ ವ್ಯಕ್ತಿಗಳ ಬಯಕೆ ಈಡೇರುವುದಿಲ್ಲ ಎಂದು ಟಾಂಗ್​ ಕೊಟ್ಟರು.
Published by:Mahmadrafik K
First published: