ತುಮಕೂರು: ನನ್ನನ್ನು ಮದುವೆಯಾಗುವ (Marriage) ಮುನ್ನ ಅನಿತಾ (Anitha) ಅವರು ರಾಜಕೀಯಕ್ಕೆ (Politics) ಹೋಗಬಾರದು ಎಂದು ಷರತ್ತು ಹಾಕಿದ್ದರು ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ. ತುಮಕೂರಿನ (Tumakuru) ಮಧುಗಿರಿಯ ಕೈಮರದಲ್ಲಿ ಜೆಡಿಎಸ್ (JDS) ಕಾರ್ಯಕರ್ತರನ್ನು ಉದ್ದೇಶಿ ಮಾತನಾಡಿದ ಎಚ್ಡಿಕೆ, ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಕೊಂಡವಾಡಿ ಚಂದ್ರಶೇಖರ್ಗೆ ಸ್ವಾಗತ ತಿಳಿಸುತ್ತೇನೆ. ದೇವೇಗೌಡರ (HD Devegowda) ಸಾವನ್ನು ಬಯಸಿದ್ದವರಿಗೆ ಪಾಠ ಕಲಿಸಬೇಕು. ಆ ಮೂಲಕ ದೇವೇಗೌಡರ ಹೆಸರನ್ನು ಉಳಿಸಬೇಕಾಗಿದೆ ಎಂದು ಮನವಿ ಮಾಡಿದರು.
2008ರ ಉಪಚುನಾವಣೆಯಲ್ಲಿ ಮಧುಗಿರಿಯಿಂದ ಅನಿತಾ ಅವರನ್ನು ನಿಲ್ಲಿಸಿದೆ. ಅದಕ್ಕೂ ಮುನ್ನ ಅವರ ಬಳಿ ಅನುಮತಿ ಕೇಳಿದ್ದೆ, ಆಗ ನನ್ನ ಮಗ ನಿಖಿಲ್, ನಮ್ಮಪ್ಪ ತೀಟೆ ತೀರಿಸಿಕೊಳ್ಳಲು ನಿನ್ನ ನಿಲ್ಲಿಸುತ್ತಿದ್ದಾನೆ. ನೀನು ಸ್ಪರ್ಧೆ ಮಾಡಬೇಡ ಎಂದಿದ್ದ. ಕೊನೆಗೂ ಅನಿತಾ ಸ್ಪರ್ಧೆ ಮಾಡಿ ಗೆದ್ದು ಬಂದರು ಎಂದರು ತಿಳಿಸಿದರು.
ಇದನ್ನೂ ಓದಿ: HD Kumaraswamy: ಸುಪಾರಿನೋ ಸಫಾರಿನೋ, ಪಾಪ ಹುಲಿ ಬೇಟೆಯಾಡಲು ಹೋಗಿದ್ರಾ? ಮೋದಿ ವೇಷಭೂಷಣಕ್ಕೆ ಎಚ್ಡಿಕೆ ವ್ಯಂಗ್ಯ!
ಇನ್ನೋಂದು ವಿಚಾರ ನಿಮಗೆ ತಿಳಿಸಲೇಬೇಕು, ಅನಿತಾ ಅವರು ಮದುವೆ ಮುಂಚೆ ಷರತ್ತು ಹಾಕಿದ್ದರು. ರಾಜಕೀಯಕ್ಕೆ ಹೋಗಲ್ಲ ಅಂದರೆ ಮಾತ್ರ ಮದುವೆಯಾಗುತ್ತೇನೆ ಅಂದಿದ್ದರು. ಮಧುಗಿರಿ ಕ್ಷೇತ್ರದಲ್ಲಿ ಆ ವೇಳೆ ದೊಡ್ಡ ಹೋರಾಟ ಇತ್ತು. ಒಂದು ಕಡೆ ನಮ್ಮ ಕುಟುಂಬದ ಶಂಕರಣ್ಣ ನಿಂತಿದ್ದರು. ಇನ್ನೂ ಈ ರಾಕ್ಷಸ ( ಪರೋಕ್ಷವಾಗಿ ಕೆ.ಎನ್ ರಾಜಣ್ಣ ಅವರನ್ನು ರಾಕ್ಷಸ ಎಂದ ಕುಮಾರಸ್ವಾಮಿ). ಈ ಎರಡರ ನಡುವೆ ನಾವು ಉಪಚುನಾವಣೆ ಮಾಡಿದ್ದೇವೆ.
ದೇವರ ಇಚ್ಛೆ ಅನಿತಾ ಅವರೂ ರಾಜಕೀಯಕ್ಕೆ ಬಂದರು. ಹಾಸನದ ರಾಜಕೀಯದಲ್ಲಿ ಬಹಳ ಕುತೂಹಲ ನಡೆಯುತ್ತಿದೆ. ಅದಕ್ಕೆ ಅಂತಿಮ ತೆರೆ ಎಳೆಯುತ್ತೇನೆ. ದೇವೇಗೌಡರ ಆಶೀರ್ವಾದದಿಂದ ಗೆದ್ದ ರಾಜಣ್ಣ, ಈಗ ದೇವೇಗೌಡರ ಸಾವನ್ನು ಬಯಸಿದ್ದಾರೆ.
ದೇವೇಗೌಡರನ್ನು ಕುತಂತ್ರದ ರಾಜಕಾರಣದಿಂದ ತುಮಕೂರಿನಲ್ಲಿ ಸೋತರು. ಆ ನೋವಿನಿಂದ ಮಾನಸಿಕವಾಗಿ ಕುಗ್ಗಿ ಇವತ್ತು ಆರೋಗ್ಯ ತಪ್ಪಿದ್ದಾರೆ. ದೇವೇಗೌಡರು ಇನ್ನೂ ನಮ್ಮ ಜೊತೆ ಜೀವಂತವಾಗಿ ಇರಬೇಕಾದರೆ ತುಮಕೂರಿನಲ್ಲಿ 11ಕ್ಕೆ 11 ಕ್ಷೇತ್ರ ಗೆಲ್ಲಬೇಕು. ತುಮಕೂರು ಜಿಲ್ಲೆಯ ಜನತೆ ಈ ಕೆಲಸ ಮಾಡಬೇಕು ಎಂದು ಭಾವನಾತ್ಮಕವಾಗಿ ಮಾತನಾಡಿದರು.
ನಾಯಕ ಸಮುದಾಯದ ಗುರುಗಳು ತೀರಿ ಹೋದಾಗ ಮಧುಗಿರಿಯ ನಾಯಕ ಸಮುದಾಯದ ಮುಖಂಡ ಗುರುಗಳ ಕುಟುಂಬದ ನೆರವಿಗೆ ಹೋಗಿಲ್ಲ. ನಾನು ಅಧಿಕಾರದಲ್ಲಿ ಇಲ್ಲ ಎಂದರೂ ಅವರ ಕುಟುಂಬದ ನೆರವಿಗೆ ಹೋಗಿದ್ದೆ ಎಂದು ಕೆ.ಎನ್. ರಾಜಣ್ಣಗೆ ಟಾಂಗ್ ಕೊಟ್ಟರು.
ಅಲ್ಲದೆ, ತುಮಕೂರು ಜಿಲ್ಲೆಯಲ್ಲಿ 11 ತಾಲೂಕುಗಳು ಇದೆ, ಆದ್ದರಿಂದ ಮತ್ತೊಂದು ಜಿಲ್ಲೆ ಮಾಡುವುದು ಅಷ್ಟು ದೊಡ್ಡ ಕೆಲಸ ಏನು ಅಲ್ಲ. ನಿಮ್ಮ ಬೇಡಿಕೆಯಂತೆ ತುಮಕೂರನ್ನು ಎರಡು ಜಿಲ್ಲೆಯಾಗಿ ಮಾಡುತ್ತೇನೆ ಎಂದು ಇದೇ ವೇಳೆ ಭರವಸೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ