"Halal Cut ಆಗಲಿ, Jatka Cut ಆಗಿರಲಿ ಮಾಂಸ ರೆಡಿ ಮಾಡುವಾಗ ಹೀಗೇ ಇರಲಿ!" ಪಶುಸಂಗೋಪನಾ ಇಲಾಖೆಗೆ ಪತ್ರ!

ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ವಿಚಾರದ ನಡುವೆ ಪಶು ಸಂಗೋಪನಾ ಇಲಾಖೆಗೆ ಪತ್ರ ಬರೆಯಲಾಗಿದೆ. ಹಾಗಿದ್ರೆ ಆ ಪತ್ರದಲ್ಲಿ ಏನಿದೆ? ಈ ಬಗ್ಗೆ ಪಶು ಸಂಗೋಪನಾ ಸಚಿವರು ಹೇಳಿದ್ದೇನು? ಇಲ್ಲಿದೆ ಈ ಬಗ್ಗೆ ಮಾಹಿತಿ...

ಹಲಾಲ್ ಕಟ್ v/s ಜಟ್ಕಾ ಕಟ್

ಹಲಾಲ್ ಕಟ್ v/s ಜಟ್ಕಾ ಕಟ್

  • Share this:
ಬೆಂಗಳೂರು: ಹಿಜಾಬ್ ವಿವಾದದ (Hijab Controversy) ಗದ್ದಲ ಇನ್ನೂ ಮುಗಿದಿಲ್ಲ, ಅಷ್ಟರಲ್ಲೇ ಹಲಾಲ್ ಕಟ್ (Halal Cut) ಮಾಂಸಕ್ಕೆ (Meat) ಸಂಬಂಧಿಸಿದಂತೆ ಹೊಸ ವಿವಾದ ಹುಟ್ಟಿಕೊಂಡಿದ್ದು ನಿಮಗೆ ಗೊತ್ತೇ ಇದೆ. ಇಂದು ಯುಗಾದಿ ಹಬ್ಬ (Yugadi Festival) ಆಗಿರುವುದರಿಂದ ಬೆಂಗಳೂರು (Bengauru) ಸೇರಿದಂತೆ ಹಲವೆಡೆ ‘ಹೊಸತಡುಕು’ ಅಂತ ಆಚರಣೆ ಮಾಡಲಾಗುತ್ತದೆ. ಇದು ಮುಖ್ಯವಾಗಿ ಮಾಂಸಹಾರಿ (Non Veg) ಅಡುಗೆ ಮಾಡಿ, ಜನರೆಲ್ಲ ಉಂಡು ಸಂಭ್ರಮನಿಸುತ್ತಾರೆ. ಇದೇ ವೇಳೆ ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ಮಾಂಸದ ವಿವಾದ ಭುಗಿಲೆದ್ದಿದೆ. ಇಸ್ಲಾಂ (Islam) ಧರ್ಮದವರು ಸಾಮಾನ್ಯವಾಗಿ ತಾವು ಬಳಸುವ ಮಾಂಸವನ್ನು ಹಲಾಲ್ ಕಟ್ ಆಗಿರುವದನ್ನು ಖಾತ್ರಿಪಡಿಸಿಕೊಂಡು ಬಳಸುತ್ತಾರೆ. ಇದು ಮುಂಚೆಯಿಂದಲೂ ಅವರಲ್ಲಿ ಪ್ರಚಲಿತದಲ್ಲಿದೆ. ಈಗ ಇದಕ್ಕೆ ಸೆಡ್ಡು ಹೊಡೆಯುವಂತೆ ಜಟ್ಕಾ ಕಟ್ (Jatka Cut) ಮಾಂಸದ ಸ್ವರೂಪವು ಎಲ್ಲೆಡೆ ಸುದ್ದಿ ಮಾಡುತ್ತಿದೆ. ಈ ಹಿಂದೆಯೂ ಜಟ್ಕಾ ಕಟ್ ಎನ್ನುತ್ತಿದ್ದರಾದರೂ ಈ ಬಗ್ಗೆ ಬಹುಜನರಿಗೆ ಗೊತ್ತಿಲ್ಲ. ಅದರಲ್ಲೂ ವಿಶೇಷವಾಗಿ ಸಿಖ್ (Sikh) ಹಾಗೂ ಹಿಂದುಗಳಲ್ಲಿ (Hindu) ಜಟ್ಕಾ ಕಟ್ ವಿಧಿ ಪ್ರಚಲಿತದಲ್ಲಿದೆ.  ಈ ವಿವಾದದ ನಡುವೆಯೇ ಮಾಂಸಕ್ಕಾಗಿ ಪ್ರಾಣಿಗಳ ವಧೆ ಹೀಗೇ ಮಾಡಬೇಕು ಅಂತ ಕರ್ನಾಟಕ ಪಶುಸಂಗೋಪನಾ ಇಲಾಖೆಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. 

ಪಶುಸಂಗೋಪನಾ ಇಲಾಖೆಗೆ ಬರೆದ ಪತ್ರದಲ್ಲಿ  ಏನಿದೆ?

ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ವಿಚಾರದ ನಡುವೆ ಪಶು ಸಂಗೋಪನಾ ಇಲಾಖೆಗೆ ಪತ್ರ ಬರೆಯಲಾಗಿದೆ ಎನ್ನಲಾಗಿದೆ. ಇನ್ನು ಮುಂದೆ ಪ್ರಾಣಿಗಳನ್ನು ಆಹಾರಕ್ಕಾಗಿ ವಧೆ ಮಾಡುವಾಗ ಅವುಗಳಿಗೆ ಹಿಂಸೆ ನೀಡಬಾರದು, ಹಿಂಸೆ ಮಾಡದೇ ಪ್ರಾಣಿಗಳನ್ನು ಮಾಂಸಕ್ಕಾಗಿ ವಧಿಸಬೇಕು ಅಂತ ಆದೇಶಿಸುವಂತೆ ಮನವಿ ಮಾಡಲಾಗಿದೆ,

ಸ್ಟನ್ನಿಂಗ್ ಮಾಡುವುದು ಕಡ್ಡಾಯ

ಮಾಂಸಕ್ಕಾಗಿ ಮಾಂಸದ ಅಂಗಡಿಗಳಲ್ಲಿ ಪ್ರಾಣಿಗಳನ್ನು ಕತ್ತರಿಸುವಾದ ಸ್ಟನ್ನಿಂಗ್ ಮಾಡಬೇಕು ಅಂತ ಪಶುಸಂಗೋಪನಾ ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ. ಕೋಳಿ, ಕುರಿ ಅಂಗಡಿಗಳಿಗೆ ಈ ಬಗ್ಗೆ ಸುತ್ತೋಲೆ ಹೊರಡಿಸುವಂತೆ ಕೋರಲಾಗಿದೆ.

ಇದನ್ನೂ ಓದಿ: Explained: 'ಹಲಾಲ್ ಕಟ್' ಮತ್ತು 'ಜಟ್ಕಾ ಕಟ್' ನಡುವಿನ ವ್ಯತ್ಯಾಸವೇನು ಗೊತ್ತಾ? ಇಲ್ಲಿದೆ ಫುಲ್ ಡಿಟೇಲ್ಸ್

ಏನಿದು ಸ್ಟನ್ನಿಂಗ್?

ಸ್ಟನ್ನಿಂಗ್ ಎಂದರೆ ಪ್ರಜ್ಞೆ ತಪ್ಪಿಸುವ ಪ್ರಕ್ರಿಯೆ. ಮಾಂಸಕ್ಕಾಗಿ ಪ್ರಾಣಿಗಳನ್ನು ವಧೆ ಮಾಡುವ ಮೊದಲು ಪ್ರಜ್ಞೆ ತಪ್ಪಿಸುವ ವಿಧಾನ ಆಗಿದೆ. ಪ್ರಜ್ಞೆ ತಪ್ಪಿಸುವುದರಿಂದ ಪ್ರಾಣಿಗಳನ್ನು ಸಾಯಿಸುವಾಗ‌ ಅವುಗಳಿಗೆ ನೋವು ತಿಳಿಯುವುದಿಲ್ಲ. ಸ್ಟನ್ನಿಂಗ್ ವೇಳೆ ಪ್ರಾಣಿಗಳ ತಲೆಗೆ ಜೋರಾಗಿ ಹೊಡೆಯಲಾಗುತ್ತದೆ. ಆಗ ಪ್ರಾಣಿಗಳ ತಲೆಗೆ ಪೆಟ್ಟು ಬಿದ್ದು ಅವುಗಳ ಮೆದುಳು ನಿಷ್ಕ್ರಿಯಗೊಳ್ಳುತ್ತದೆ.

ಮಾಂಸದ ಅಂಗಡಿಗಳಿಗೆ ಸೂಚನೆ

ಈಗಾಗಲೇ ಕೋಳಿ, ಕುರಿ ಮುಂತಾದ ಮಾಂಸದ ಅಂಗಡಿಗಳಿಗೆ ಪಶು ಸಂಗೋಪನಾ ಇಲಾಖೆ ಪತ್ರ ಬರೆದಿದೆ ಎನ್ನಲಾಗಿದೆ.  ಯಾವುದೇ ಮಾಸಂದ ಅಂಗಡಿಗಳಲ್ಲಿ ಇದನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕಾಗಿದೆ. ಜೊತೆಗೆ ಇನ್ನು ಮುಂದೆ ಕೋಳಿ, ಕುರಿ ಅಂಗಡಿಗಳಿಗೆ ಲೈಸೆನ್ಸ್ ಕೊಡುವಾಗಲೂ ಸ್ಟನ್ನಿಂಗ್ ವ್ಯವಸ್ಥೆ ಕಡ್ಡಾಯವಾಗಿ  ಇರಲೇಬೇಕು.



ನಿಯಮ ಬ್ರೇಕ್ ಮಾಡುವವರಿಗೆ 1960 ಆಕ್ಟ್ ಪ್ರಕಾರ 5 ಸಾವಿರದಿಂದ 50 ಸಾವಿರದವರೆಗೂ ದಂಡ ವಿಧಿಸಲಾಗುವುದು ಎಂದು ಸೂಚನೆ ಕೊಡಲಾಗಿದೆ. ಆಕ್ಟ್ ಅಡಿಯಲ್ಲಿ ಪ್ರಾಣಿ ಹಿಂಸೆಯ ಕೇಸ್ ಕೂಡಾ ದಾಖಲು ಮಾಡುವ ಅವಕಾಶ ಕಾನೂನಿಲ್ಲಿ ಇದೆ.

ಇದನ್ನೂ ಓದಿ: Explained: ಹಲಾಲ್ ಮಾಂಸ ಎಂದರೇನು? ಹಲಾಲ್ ಆಹಾರ ಪ್ರಾಧಿಕಾರ ಇದನ್ನು ಹೇಗೆ ನಿರ್ಧರಿಸುತ್ತದೆ?

ಈ ಬಗ್ಗೆ ಸಚಿವರು ಹೇಳಿದ್ದೇನು?

ಇನ್ನು ಮಾಂಸದ ಅಂಗಡಿಯಲ್ಲಿ ಸ್ಟನ್ನಿಂಗ್ ಕಡ್ಡಾಯ ಆದೇಶ ಮಾಡಿಲ್ಲ. ಪತ್ರ ಬರೆದಿದ್ದಾರೆ ಅಷ್ಟೇ ಅಂತ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ. ಹಲಾಲ್ ಕಟ್ ಮಾಡಬಾರದು ಎಂದು ಪತ್ರ ಬರೆದಿದ್ದಾರೆ ಅಷ್ಟೇ. ಯಾವುದೇ ರೀತಿಯ ಆದೇಶವನ್ನು ಹೊರಡಿಸಿಲ್ಲ. ಪತ್ರದ ಬಗ್ಗೆ ನಾನು ಪರಿಶೀಲನೆ ಮಾಡುತ್ತೇನೆ ಎಂದು ಪ್ರಭು ಚೌಹಾಣ್ ತಿಳಿಸಿದ್ದಾರೆ.
Published by:Annappa Achari
First published: