ಕಾಂಗ್ರೆಸ್ ಮುಖಂಡ ಅನಿಲ್ ಲಾಡ್ ಉಪಚುನಾವಣೆ ಬಳಿಕ ಬಿಜೆಪಿ ಸೇರ್ಪಡೆ?

ಅನಿಲ್ ಲಾಡ್ ಬಿಜೆಪಿ ಸೇರ್ಪಡೆಗೆ ಈಗಾಗಲೇ ಮೂರು ಸುತ್ತಿನ ಮಾತುಕತೆ ಆಗಿದೆ. ಖಾನಾಪುರ ಕ್ಷೇತ್ರದ ಟಿಕೆಟ್ ಬೇಕೆಂಬ ಬೇಡಿಕೆಗೆ ಅಸ್ತು ಎಂದಿರುವ ಯಡಿಯೂರಪ್ಪ, ಈಗಲೇ ಹೋಗಿ ಅಲ್ಲಿ ಕೆಲಸ ಮಾಡಿ ಎಂದು ಸೂಚಿಸಿದ್ದಾರೆನ್ನಲಾಗಿದೆ.

news18
Updated:November 12, 2019, 4:10 PM IST
ಕಾಂಗ್ರೆಸ್ ಮುಖಂಡ ಅನಿಲ್ ಲಾಡ್ ಉಪಚುನಾವಣೆ ಬಳಿಕ ಬಿಜೆಪಿ ಸೇರ್ಪಡೆ?
ಅನಿಲ್ ಲಾಡ್
  • News18
  • Last Updated: November 12, 2019, 4:10 PM IST
  • Share this:
ಬೆಂಗಳೂರು(ನ. 12): ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಮುಖಂಡ ಅನಿಲ್ ಲಾಡ್ ಬಿಜೆಪಿ ಸೇರ್ಪಡೆ ಸನ್ನಿಹಿತವಾಗಿದೆ. ಆದಷ್ಟೂ ಶೀಘ್ರದಲ್ಲೇ ಅವರು ಕಮಲ ಪಾಳಯ ಸೇರಿಕೊಳ್ಳಲಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ, ಡಿಸೆಂಬರ್ 5ರಂದು ನಡೆಯಲಿರುವ ಉಪಚುನಾವಣೆ ಬಳಿಕ ಅವರು ಬಿಜೆಪಿಗೆ ಅಧಿಕೃತವಾಗಿ ಸೇರುವ ಸಾಧ್ಯತೆ ಇದೆ. ಇನ್ನೂ ಗಮನಾರ್ಹ ವಿಷಯವೆಂದರೆ, ಬಳ್ಳಾರಿ ನಗರ ಕ್ಷೇತ್ರದ ಮಾಜಿ ಶಾಸಕರಾಗಿರುವ ಅನಿಲ್ ಲಾಡ್ ಅವರು ಬೆಳಗಾವಿ ಜಿಲ್ಲೆಗೆ ತಮ್ಮ ರಾಜಕಾರಣ ಶಿಫ್ಟ್ ಮಾಡಿಕೊಳ್ಳಲಿದ್ದಾರೆ.

ಅನಿಲ್ ಲಾಡ್ ಅವರಿಗೆ ಖಾನಾಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗಲಿದೆ. 2013ರಿಂದಲೂ ಖಾನಾಪುರ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿ ಸಿಗದೇ ಹತಾಶಗೊಂಡಿದ್ದ ಬಿ.ಎಸ್. ಯಡಿಯೂರಪ್ಪ ಅವರಿಗೆ ಅನಿಲ್ ಲಾಡ್ ರೂಪದಲ್ಲಿ ಉತ್ತರ ಸಿಕ್ಕಿದೆ. 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ನ ಅಂಜಲಿ ನಿಂಬಾಳ್ಕರ್ ಅವರು ಖಾನಾಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು.

ಇದನ್ನೂ ಓದಿ: ಜೆಡಿಎಸ್​ ಅಭ್ಯರ್ಥಿಯನ್ನೇ ಆಪರೇಷನ್​ ನಡೆಸಿದ ಅನರ್ಹ ಶಾಸಕ ಗೋಪಾಲಯ್ಯ; ಪಕ್ಷಕ್ಕೆ ರಾಜೀನಾಮೆ ನೀಡಿದ ಹರೀಶ್

ಖಾನಾಪುರ ಕ್ಷೇತ್ರವನ್ನು ಲಾಡ್ ಬಯಸಿಯೇ ಹೋಗುತ್ತಿದ್ದಾರೆ. ಮರಾಠ ಸಮುದಾಯದ ಅನಿಲ್ ಲಾಡ್ ಬೆಳಗಾವಿಯ ಅಳಿಯ ಕೂಡ ಹೌದು. ಅವರ ಸಮುದಾಯದವರು ಇಲ್ಲಿ ಬಹಳಷ್ಟಿದ್ದಾರೆ. ಇಲ್ಲಿ ಬಿಜೆಪಿಗೆ ಅಭ್ಯರ್ಥಿಗಳ ಕೊರತೆ ಇರುವುದನ್ನು ಮನಗಂಡೇ ಅವರು ಖಾನಾಪುರವನ್ನು ತಮ್ಮ ಮುಂದಿನ ರಾಜಕೀಯ ನಿಲ್ದಾಣವನ್ನಾಗಿ ಆಯ್ಕೆ ಮಾಡಿಕೊಂಡಿದ್ಧಾರೆ. ಅನಿಲ್ ಲಾಡ್ ಮೂಲಕ ಮರಾಠ ಸಮುದಾಯದ ಮತಗಳನ್ನ ಇನ್ನಷ್ಟು ಸುಲಭವಾಗಿ ಸೆಳೆಯಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರವೂ ಹೌದು.

ಅನಿಲ್ ಲಾಡ್ ಬಿಜೆಪಿ ಸೇರ್ಪಡೆಗೆ ಈಗಾಗಲೇ ಮೂರು ಸುತ್ತಿನ ಮಾತುಕತೆ ಆಗಿದೆ. ಖಾನಾಪುರ ಕ್ಷೇತ್ರದ ಟಿಕೆಟ್ ಬೇಕೆಂಬ ಬೇಡಿಕೆಗೆ ಅಸ್ತು ಎಂದಿರುವ ಯಡಿಯೂರಪ್ಪ, ಈಗಲೇ ಹೋಗಿ ಅಲ್ಲಿ ಕೆಲಸ ಮಾಡಿ ಎಂದು ಸೂಚಿಸಿದ್ದಾರೆನ್ನಲಾಗಿದೆ.

ಮೂಲಗಳ ಪ್ರಕಾರ, ಸುಪ್ರೀಂ ಕೋರ್ಟ್​​ನಲ್ಲಿ ಅನರ್ಹ ಶಾಸಕರ ಪ್ರಕರಣದ ತೀರ್ಪು ಬಂದಲ್ಲಿ ಡಿ. 5ರ ಉಪಚುನಾವಣೆ ಬಳಿಕ ಅನಿಲ್ ಲಾಡ್ ಬಿಜೆಪಿಗೆ ಸೇರುತ್ತಾರೆ. ಒಂದು ವೇಳೆ, ಉಪಚುನಾವಣೆಯನ್ನ ಮುಂದೂಡಲು ನಿರ್ಧರಿಸಿದ್ದೇ ಆದಲ್ಲಿ ಕೆಲವೇ ದಿನಗಳಲ್ಲಿ ಅವರು ಬಿಜೆಪಿ ಸೇರ್ಪಡೆಯಾಗುತ್ತಾರೆ. ನಾಳೆ ಸುಪ್ರೀಂ ತೀರ್ಪಿನ ಬಳಿಕ ಸ್ಪಷ್ಟತೆ ಸಿಗಲಿದೆ.

(ವರದಿ: ಚಿದಾನಂದ ಪಟೇಲ್)ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:November 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading