ಜೀವ ಕೈಯಲ್ಲಿ ಹಿಡ್ಕೊಂಡು ಟೆಂಪೋ ರಿವರ್ಸ್​ ತೆಗೆದ್ರು ಬಿಡಲಿಲ್ಲ ಆನೆ: ವಿಡಿಯೋ ವೈರಲ್

ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇನ್ನು ವಾಹನದ ಮೇಲೆ ದಾಳಿ ಮಾಡಿದ ಆನೆಯನ್ನು ಕಾಡಿಗೆ ಅಟ್ಟುವಲ್ಲಿ ಕೊನೆಗೂ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

zahir | news18-kannada
Updated:January 17, 2020, 3:39 PM IST
ಜೀವ ಕೈಯಲ್ಲಿ ಹಿಡ್ಕೊಂಡು ಟೆಂಪೋ ರಿವರ್ಸ್​ ತೆಗೆದ್ರು ಬಿಡಲಿಲ್ಲ ಆನೆ: ವಿಡಿಯೋ ವೈರಲ್
ಆನೆ ದಾಳಿ
  • Share this:
ಮೈಸೂರು: ಚಲಿಸುತ್ತಿದ್ದ ವಾಹನದ ಮೇಲೆ ಆನೆಯೊಂದು ದಾಳಿ ಮಾಡಿದ ಘಟನೆ ಹುಣಸೂರು ತಾಲೂಕಿನ ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.

ಅರಣ್ಯ ಇಲಾಖೆಗೆ ಸೇರಿದ ಗೂಡ್ಸ್​ ಟೆಂಪೋ ಹೋಗುತ್ತಿದ್ದ ಸಂದರ್ಭದಲ್ಲಿ ಆನೆಯೊಂದು ಅಡ್ಡಗಟ್ಟಿದ್ದೆ. ಇದನ್ನು ನೋಡಿದ ಚಾಲಕ ವೇಗವಾಗಿ ರಿವರ್ಸ್​ನಲ್ಲಿ ವಾಹನ ಚಲಾಯಿಸಿದ್ದಾನೆ.

ಆದರೂ ಅಟ್ಟಾಡಿಸಿಕೊಂಡು ಬಂದ ಆನೆ ಟೆಂಪೋ ಮುಂಭಾಗಕ್ಕೆ ಗುದ್ದಿದ್ದು, ವಾಹನ ಸಜ್ಜುಗುಜ್ಜಾಗಿದೆ. ಈ ಆನೆ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಕಾಡಿನಿಂದ ಹೊರ ಬಂದಿದ್ದ ಒಂಟಿ ಸಲಗವನ್ನು ಮತ್ತೆ ಕಾಡಿಗೆ ಸೇರಿಸಲು ಹೋದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇನ್ನು ವಾಹನದ ಮೇಲೆ ದಾಳಿ ಮಾಡಿದ ಆನೆಯನ್ನು ಕಾಡಿಗೆ ಅಟ್ಟುವಲ್ಲಿ ಕೊನೆಗೂ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಕೆಲವು ತಿಂಗಳ ಹಿಂದಯಷ್ಟೇ ಬಂಡೀಪುರ ಹುಲಿಸಂರಕ್ಷಿತ ಪ್ರದೇಶದ ಸಫಾರಿ ವಾಹನದ ಮೇಲೆ ಆನೆಯೊಂದು ದಾಳಿ ನಡೆಸಿತ್ತು. ಇದರಿಂದ ಪ್ರವಾಸಿಗರು ಆತಂಕಕ್ಕೆ ಒಳಗಾಗಿದ್ದರು. ಆದರೆ ಅರಣ್ಯ ಸಿಬ್ಬಂದಿಗಳ ಎಚ್ಚರಿಕೆಯಿಂದ ಪ್ರಾಣಪಾಯದಿಂದ ಪ್ರವಾಸಿಗಳು ಪಾರಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಮ್ಮೆ ವಾಹನ ಮೇಲೆ ಆನೆ ದಾಳಿ ನಡೆಸಿದೆ.
First published:January 17, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ