ವೇತನ ಹೆಚ್ಚಳಕ್ಕೆ ಆಗ್ರಹಿಸಿ ರಾಜಧಾನಿಯಲ್ಲಿ ಎರಡು ದಿನ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಬಜೆಟ್ ವೇಳೆ ತಮ್ಮ ವೇತನ ಹೆಚ್ಚಿಸಬೇಕೆಂದು ಅಂಗನವಾಡಿ ಕಾರ್ಯರ್ತೆಯರು, ಎಐಟಿಯುಸಿ ಸಂಘಟನೆ ಹಾಗೂ ಸಹಾಯಕಿಯರ ಫೆಡರೇಷನ್ ವತಿಯಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಅಂಗನವಾಡಿ ಕಾರ್ಯಕರ್ತೆಯರು

ಅಂಗನವಾಡಿ ಕಾರ್ಯಕರ್ತೆಯರು

  • Share this:
ಬೆಂಗಳೂರು(ಜ.23) : ವಿವಿಧ ಬೇಡಿಕೆಗಳನ್ನುಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಪ್ರೀಡಂ ಪಾರ್ಕ್​​​​​​​​​​​​​​​​​​​​​​ ನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.

ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಬಜೆಟ್ ವೇಳೆ ತಮ್ಮ ವೇತನ ಹೆಚ್ಚಿಸಬೇಕೆಂದು ಅಂಗನವಾಡಿ ಕಾರ್ಯರ್ತೆಯರು, ಎಐಟಿಯುಸಿ ಸಂಘಟನೆ ಹಾಗೂ ಸಹಾಯಕಿಯರ ಫೆಡರೇಷನ್ ವತಿಯಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳು

  • ಸೇವಾ ಜ್ಯೇಷ್ಠತೆ ಆಧಾರದ ಮೇಲೆ ವೇತನ ನೀಡಬೇಕು

  • ಎಲ್​​ ಕೆ ಜಿ ಹಾಗೂ ಯುಕೆಜಿಯನ್ನು ಅಂಗನವಾಡಿಯಲ್ಲಿ ಆರಂಭಿಸಬೇಕು

  • 7ನೇ ವೇತನ ಆಯೋಗದ ಪ್ರಕಾರ ಕನಿಷ್ಠ ವೇತನ ನೀಡಬೇಕು

  • ಕನಿಷ್ಠ ವೇತನ 21 ಸಾವಿರ ರೂಪಾಯಿ ನೀಡಬೇಕು.

  • ನಿವೃತ್ತಿ  ಬಳಿಕ 5 ಸಾವಿರ ರೂ ಪಿಂಚಣಿ ನೀಡಬೇಕು


ಇನ್ನೂ ಅನೇಕ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ. ನಗರದ ಸಂಗೋಳ್ಳಿ ರಾಯಣ್ಣ ನಿಲ್ದಾಣದಿಂದ ಪ್ರೀಂಡ ಪಾರ್ಕ್​​​​ವರೆಗೆ ಬೃಹತ್​ ರ್ಯಾಲಿ ಮೂಲಕ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಾರೆ.  ಬೆಳಿಗ್ಗ 11.30ಕ್ಕೆ ರ್ಯಾಲಿ ಆರಂಭಿಸಲಿದ್ದಾರೆ. ರಾಜ್ಯದಲ್ಲಿ ಒಟ್ಟು 1 ಲಕ್ಷದ 30 ಸಾವಿರ ಕಾರ್ಯಕರ್ತೆಯರು, ಸಹಾಯಕಿಯರಿದ್ದಾರೆ.

ಇದನ್ನೂ ಓದಿ :  ನಾಯಿ ಬೊಗಳದಂತೆ ಮಾಡಿ ಕುರಿಗಳನ್ನು ಕಳ್ಳತನ ಮಾಡಿದ ಖದೀಮರು

ಎರಡು ದಿನಕ್ಕೆ ಬೇಕಾಗುವ ಉಪಹಾರ ಹಾಗೂ ಹಾಸಿಗೆ ಹೊದಿಕೆಯನ್ನು ತರಬೇಕು ಅಂತ ಕರೆ ನೀಡಿರುವ ಸಂಘಟಕರು ಹೇಳಿದ್ದಾರೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಸಂಗೋಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಎದುರು ಜಮಾಯಿಸಲಿದ್ದಾರೆ.
First published: