HOME » NEWS » State » ANGANAWADI WORKERS GAVE RENT TO ANGANAWADIS IN CHIKKODI LG

ಕೈಯಿಂದಲೇ ಬಾಡಿಗೆ ಕಟ್ಟಿ ಅಂಗನವಾಡಿ ನಡೆಸುತ್ತಿರುವ ಕಾರ್ಯಕರ್ತೆಯರು; ಕೇಳುವವರಿಲ್ಲಾ ಇವರ ಗೋಳು

ಸರಿಯಾಗಿ ಮೂಲಭೂತ ಸೌಕರ್ಯಗಳನ್ನೆ ಕಾಣದ ನಮ್ಮ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯ ಹೊಂದಿರುವ ಮನೆಗಳನ್ನು ಅಂಗನವಾಡಿ ನಡೆಸಲು ಬಾಡಿಗೆದಾರರು ನೀಡುವುದಿಲ್ಲ ಎನ್ನುವುದು ಅಂಗನವಾಡಿ ಕಾರ್ಯಕರ್ತೆಯರ ಅಳಲು.

news18-kannada
Updated:November 24, 2020, 1:28 PM IST
ಕೈಯಿಂದಲೇ ಬಾಡಿಗೆ ಕಟ್ಟಿ ಅಂಗನವಾಡಿ ನಡೆಸುತ್ತಿರುವ ಕಾರ್ಯಕರ್ತೆಯರು; ಕೇಳುವವರಿಲ್ಲಾ ಇವರ ಗೋಳು
ಸಾಂದರ್ಭಿಕ ಚಿತ್ರ
  • Share this:
ಲೋಹಿತ್(ನ.24): ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ನೀಡುವ ಗೌರವ ಧನ ಎಷ್ಟು ಹೇಳಿ. ಅಷ್ಟೋ ಇಷ್ಟೋ ದುಡ್ಡಿಗಾಗಿ ಮಕ್ಕಳನ್ನ ಸಾಕಿ ಸಲಹುವ ಅವರೀಗ ತಮ್ಮ ಸ್ವಂತ ದುಡ್ಡಿನಿಂದ ಅಂಗನವಾಡಿ ಬಾಡಿಗೆ ಕಟ್ಡಬೇಕಾದ ಅನಿವಾರ್ಯತೆ ಎದುರಾಗಿದೆ. ಗ್ರಾಮೀಣ ಭಾಗದಲ್ಲಿ  ಮೂಲಭೂತ ಸೌಕರ್ಯ ಬೇಕು ಅಂತ ಅಧಿಕಾರಿಗಳು ಹೇಳಿದ್ರೆ ಎಲ್ಲಿಂದ ಅಂತಹ ಕಟ್ಟಡಗಳನ್ನು ಹುಡುಕಾಡೋದು ಅಂತಿದಾರೆ ಕಾರ್ಯಕರ್ತೆಯರು. ಹೌದು, ಗ್ರಾಮೀಣ ಹಾಗೂ ನಗರದ ಪ್ರದೇಶದಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕಟ್ಡಡಗಳ ಬಾಡಿಗೆಗೆ ಅಂತ ಸರ್ಕಾರ ಪ್ರತಿ ತಿಂಗಳು ಕೋಟ್ಯಾಂತರ ರೂಪಾಯಿ ಖರ್ಚು ಮಾಡ್ತಿದೆ. ನಗರ ಪ್ರದೇಶದಲ್ಲಿನ ಅಂಗನವಾಡಿ ಕಟ್ಟಡಗಳಿಗೆ 4 ಸಾವಿರ  ಹಾಗೂ ಗ್ರಾಮೀಣ ಪ್ರದೇಶದಲ್ಲಿ ಇರುವ ಬಾಡಿಗೆ ಕಟ್ಟಡಗಳಿಗೆ 1 ಸಾವಿರ ದಂತೆ ಸರ್ಕಾರ ದರ ನಿಗಧಿ ಮಾಡಿದೆ. ಆದರೆ ಸಚಿವರ ಸ್ವಂತ ಜಿಲ್ಲೆ ಬೆಳಗಾವಿಯಯಲ್ಲಿ ಅಧಿಕಾರಿಗಳ ಅಕ್ರಮ ಎಸಗಿರುವುದು ಕಂಡು ಬಂದಿದ್ದು ಗ್ರಾಮೀಣ ಪ್ರದೇಶದ ಅಂಗನವಾಡಿ ಕಟ್ಟಡಗಳಿಗೆ ಕೇವಲ 300 ರೂಪಾಯಿ ಬಾಡಿಗೆ ನೀಡಲಾಗ್ತಿದೆ.

ಹೌದು, ಮೂಲಭೂತ ಸೌಕರ್ಯ ಇಲ್ಲವೆಂದು ಪೂರ್ಣ ಪ್ರಮಾಣದ ಹಣ ನೀಡ್ತಿಲ್ಲ. ಹೀಗಾಗಿ ಪ್ರತಿ ತಿಂಗಳು ಕಾರ್ಯಕರ್ತೆಯರೇ ತಮ್ಮ ಸ್ವಂತ ಜೇಬಿನಿಂದ ಬಾಡಿಗೆ ಹಣ ಸಂದಾಯ ಮಾಡುವ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲ. ಸ್ವಂತ ಕಟ್ಟಡ ಇಲ್ಲದೆ ಇರುವ ಕಾರಣದಿಂದ ಬಾಡಿಗೆಗೆ ಪಡೆದು ಅಂಗನವಾಡಿ ನಡೆಸುವ ಸ್ಥಿತಿ ಜಿಲ್ಲೆಯಲ್ಲಿ ಇದೆ. ಇಲಾಖೆಗೆ ಬೇಕಾದ ವ್ಯವಸ್ಥೆ ಇಲ್ಲದೆ ಇರುವ ಕಾರಣ ಇಲಾಖೆ ಅಧಿಕಾರಿಗಳು ಪೂರ್ಣ ಪ್ರಮಾಣದ ಬಾಡಿಗೆ ನೀಡದೆ ಬರೀ 300 ರೂಪಾಯಿ ಮಾತ್ರ ನೀಡುತ್ತಾರೆ. ಇನ್ನುಳಿದ 2 ಸಾವಿರದವರೆಗೂ ನಾವೇ ಕೈಯಿಂದಲೇ ಬಾಡಿಗೆ ಕಟ್ಟ ಬೇಕು ಅಂತಾರೆ ಅಂಗನವಾಡಿ ಕಾರ್ಯಕರ್ತೆಯರು.

ಹೆದ್ದಾರಿಯಲ್ಲಿ ದರೋಡೆ ಮಾಡುತ್ತಿದ್ದ ಖತರ್ನಾಕ್ ಆರೋಪಿಗಳ ಬಂಧನ

ಇನ್ನು ಸರಿಯಾಗಿ ಮೂಲಭೂತ ಸೌಕರ್ಯಗಳನ್ನೆ ಕಾಣದ ನಮ್ಮ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯ ಹೊಂದಿರುವ ಮನೆಗಳನ್ನು ಅಂಗನವಾಡಿ ನಡೆಸಲು ಬಾಡಿಗೆದಾರರು ನೀಡುವುದಿಲ್ಲ ಎನ್ನುವುದು ಅಂಗನವಾಡಿ ಕಾರ್ಯಕರ್ತೆಯರ ಅಳಲು. ಹೀಗಾಗಿಯೇ ಸಮುದಾಯ ಭವನ, ಅಂಗಡಿ ತೆರೆಯಲು ಬಳಸುವ ವಾಣಿಜ್ಯ ಸಂಕೀರ್ಣಗಳಲ್ಲಿ ಅಂಗನವಾಡಿ ನಡೆಸುವ ಸ್ಥಿತಿ ಇದೆ ಅಂತಾರೆ ಕಾರ್ಯಕರ್ತೆಯರು.

ಇನ್ನು ಈ ಬಗ್ಗೆ ಸಚಿವೆ ಶಶಿಕಲಾ ಜೊಲ್ಲೆಯವರನ್ನ ಕೇಳಿದ್ರೆ  ಈಗಲೂ ಸಹ ಸರ್ಕಾರ ಈ ಹಿಂದೆ ನಿಗದಿ ಮಾಡಿದ್ದ ಹಳೆ ದರವೇ ಮುಂದುವರೆದಿದೆ. ಈ ಬಗ್ಗೆ ಅಧಿಕಾರಿಗಳ ಸಭೆ ಕರೆದು ಈಗಿನ ದಿನ ಮಾನದ ಪ್ರಕಾರ ಬಾಡಿಗೆ ರಿವೈಸ್ ಮಾಡಲು ಸೂಚನೆ ನೀಡಿದ್ದೇನೆ  ಅಂತ ಹೇಳ್ತಿದ್ದಾರೆ.‌ ಆದ್ರೆ ಅಧಿಕಾರಿಗಳನ್ನ ಕೇಳಿದ್ರೆ ಮೂಲಭೂತ ಸೌಕರ್ಯ ಹೊಂದಿರುವ ಬಾಡಿಗೆ ಅಂಗನವಾಡಿ ಕೇಂದ್ರಗಳಿಗೆ ನಗರಪ್ರದೇಶದಲ್ಲಿ ತಲಾ ನಾಲ್ಕು ಸಾವಿರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಒಂದ ಸಾವಿರ ಮಾತ್ರ ನೀಡಲು ನಮಗೆ ಅವಕಾಶ ಇದೆ ಹಾಗಾಗಿ ಅಷ್ಟೇ ಹಣವನ್ನು ನೀಡ್ತಿದ್ದಿವಿ ಅಂತಾರೆ.

ಒಟ್ಟಿನಲ್ಲಿ ಒಂದು ಕಡೆ ಅಧಿಕಾರಿಗಳು ಮೂಲಭೂತ ಸೌಕರ್ಯ ಬೇಕು ಅಂತ ಹೇಳ್ತಿದ್ರೆ ಅಂತಹ ಮನೆಗಳು ಇದ್ದರೂ ಸಹ ಬಾಡಿಗೆಗೆ ಲಭ್ಯವಾಗ್ತಿಲ್ಲ ಎನ್ನುವುದು ಅಂಗನವಾಡಿ ಕಾರ್ಯಕರ್ತೆಯರ ಅಳಲು. ಇದರಿಂದಾಗಿ ಕಾರ್ಯಕರ್ತೆಯರು ಗ್ರಾಮೀಣ ಭಾಗದಲ್ಲಿ ಲಭ್ಯವಿರುವ ಮನೆ, ಸಂಕೀರ್ಣ, ಸಮುದಾಯ ಭವನದಲ್ಲೆ ಅಂಗನವಾಡಿ ನಡೆಸಿ ಮೂಲಭೂತ ಸೌಕರ್ಯ ಹೊಂದದ ಅಂಗನವಾಡಿ ಕಟ್ಟಡಗಳ ಹೆಸರಿನಲ್ಲಿ ಕೊಡುವ ಅಷ್ಟೋ ಇಷ್ಟು ಬಾಡಿಗೆ ಪಡೆದು ಉಳಿದ ಹಣವನ್ನು ತಮ್ಮ ಜೇಬಿನಿಂದಲೇ ಸಂದಾಯಿಸುತ್ತಿದ್ದಾರೆ. ಹೀಗಾಗಿ ಸಚಿವರು ಈ ಬಗ್ಗೆ ಮುತುವರ್ಜಿ ವಹಿಸಿ ಅಂಗನವಾಡಿ ಕಾರ್ಯಕರ್ತೆಯರ ಜೇಬಿಗೆ ಬೀಳುತ್ತಿರುವ ಕತ್ತರಿಗೆ ಬ್ರೇಕ್ ಹಾಕಬೇಕಿದೆ.
Published by: Latha CG
First published: November 24, 2020, 1:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading