• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Tumakuru: ಚಡ್ಡಿಯಲ್ಲಿ ಮೂತ್ರ ಮಾಡಿಕೊಂಡಿದ್ದಕ್ಕೆ ಬಾಲಕನ ಖಾಸಗಿ ಅಂಗಕ್ಕೆ ಬೆಂಕಿ ಇಟ್ಟ ಶಿಕ್ಷಕಿ!

Tumakuru: ಚಡ್ಡಿಯಲ್ಲಿ ಮೂತ್ರ ಮಾಡಿಕೊಂಡಿದ್ದಕ್ಕೆ ಬಾಲಕನ ಖಾಸಗಿ ಅಂಗಕ್ಕೆ ಬೆಂಕಿ ಇಟ್ಟ ಶಿಕ್ಷಕಿ!

ಅಂಗನವಾಡಿ ಕೇಂದ್ರ

ಅಂಗನವಾಡಿ ಕೇಂದ್ರ

ಮೂರು ವರ್ಷ ಬಾಲಕ ಚಡ್ಡಿಯಲ್ಲಿಯೇ ಪದೇ ಪದೇ ಮೂತ್ರ ಮಾಡಿಕೊಳ್ಳುತ್ತಿದ್ದನು. ಇದರಿಂದ ಶಿಕ್ಷಕಿ ಬಾಲಕನ ಖಾಸಗಿ ಭಾಗಕ್ಕೆ ಬೆಂಕಿ ಇಟ್ಟಿದ್ದಾಳೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

  • Share this:

ಕೆಲ ಮಕ್ಕಳು (Children) ಮೂರು ವರ್ಷವಾದ್ರೂ ಚಡ್ಡಿಯಲ್ಲಿ ಮೂತ್ರ (Urine) ಮಾಡಿಕೊಳ್ಳುತ್ತವೆ. ಆ ಮಕ್ಕಳಿಗೆ ಮೂತ್ರ ಬಂದಿದೆ ಹೊರಗೆ ಹೋಗಿ ಮಾಡಬೇಕು ಅಂತ ಗೊತ್ತಾಗಲ್ಲ. ಈ ಸಮಯದಲ್ಲಿ ಪೋಷಕರು (Parents) ಮಕ್ಕಳಿಗೆ ಈ ಬಗ್ಗೆ ಅರ್ಥ ಮಾಡಿಸುತ್ತಾರೆ. ಕೆಲವೊಮ್ಮೆ ಶಾಲೆಗಳಲ್ಲಿ (Schools) ಮಕ್ಕಳು ಗಲೀಜು ಮಾಡುತ್ತವೆ. ಶಿಕ್ಷಕರು ಸಹ ಮಕ್ಕಳಿಗೆ ತಿಳಿ ಹೇಳುವ ಕೆಲಸ ಮಾಡುತ್ತಾರೆ.  ಚಡ್ಡಿಯಲ್ಲಿ ಮೂತ್ರ ಮಾಡಿದ್ದಕ್ಕೆ ಮೂರು ವರ್ಷದ ಬಾಲಕನ ಖಾಸಗಿ ಅಂಗಕ್ಕೆ (Private Part) ಅಂಗನವಾಡಿ ಶಿಕ್ಷಕಿ (Anganawadi Teacher) ಬೆಂಕಿ ಇಟ್ಟಿದ್ದಾಳೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿಗೆ ಕಾರಣ ಕೇಳಿ ನೋಟಿಸ್ (Notice) ನೀಡಲಾಗಿದೆ. ಬಾಲಕನ ಖಾಸಗಿ ಅಂಗ ಮತ್ತು ತೊಡೆ ಭಾಗಕ್ಕೆ ಗಾಯಗಳಾಗಿವೆ.


ತುಮಕೂರು‌ ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆಯ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಮೂರು ವರ್ಷ ಬಾಲಕ ಚಡ್ಡಿಯಲ್ಲಿಯೇ ಪದೇ ಪದೇ ಮೂತ್ರ ಮಾಡಿಕೊಳ್ಳುತ್ತಿದ್ದನು. ಇದರಿಂದ ಶಿಕ್ಷಕಿ ಬಾಲಕನ ಖಾಸಗಿ ಭಾಗಕ್ಕೆ ಬೆಂಕಿ ಇಟ್ಟಿದ್ದಾಳೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.


ಬಾಲಕನ ಅಜ್ಜಿಯ ಪ್ರತಿಕ್ರಿಯೆ


ಇನ್ನೂ ಈ ಕುರಿತು ಮಾತನಾಡಿರುವ ಬಾಲಕನ ಅಜ್ಜಿ, ಹೌದು, ಬೆಂಕಿಪೊಟ್ಟಣದ ಕಡ್ಡಿಯಿಂದ ಬೆಂಕಿ ಹಚ್ಚಿರೋದು ನಿಜ ಅಂತ ಹೇಳಿದ್ದಾರೆ. ಮೊಮ್ಮಗ ಈ ಹಿಂದೆಯೂ ಮೂರ್ನಾಲ್ಕು ಬಾರಿ ಅಂಗನವಾಡಿ ಕೇಂದ್ರದೊಳಗೆ ಮೂತ್ರ ಮಾಡಿಕೊಂಡಿದ್ದನು. ಈಗ ಮತ್ತೆ ಮೂತ್ರ ಮಾಡಿಕೊಂಡಿದ್ದಾನೆ.


ಇದನ್ನೂ ಓದಿ:  Bengaluru: ಮಕ್ಕಳು ಅಸ್ವಸ್ಥರಾಗಿದ್ದಕ್ಕೆ ಶಾಲೆಯ ಆಡಳಿತ ಮಂಡಳಿ ಹಿಂಗಾ ಹೇಳೋದು! ಪೋಷಕರ ಆಕ್ರೋಶ


ಘಟನೆ ಬಳಿಕ ನನ್ನನ್ನು ಬಂದು ಭೇಟಿಯಾದ ಶಿಕ್ಷಕಿ ಮತ್ತು ಸಹಾಯಕಿ ಘಟನೆ ಕುರಿತು ವಿವರಿಸಿದರು. ಆತನಿಗೆ ಹೆದರಿಸಲು ಬೆಂಕಿ ಕಡ್ಡಿ ಗೀರಿ ಹಿಡಿದುಕೊಂಡಿದ್ದರಂತೆ. ಈ ವೇಳೆ ಆತ ಭಯದಿಂದ ಮೇಲೆಳಲು ಮುಂದಾದಾಗ ಬೆಂಕಿ ತಗುಲಿದೆ ಎಂದು ಹೇಳಿದ್ದಾರೆ.


ಈ ರೀತಿ ಮಕ್ಕಳಿಗೆ ಭಯ ಹುಟ್ಟಿಸೋದು ತಪ್ಪು


ಕೂಡಲೇ ಅಂಗನವಾಡಿ ಕೇಂದ್ರದ ಸಹಾಯಕಿ ಮೊಮ್ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಇದೊಂದು ಆಕಸ್ಮಿಕವಾಗಿ ನಡೆದ ಘಟನೆ. ಆದ್ರೆ ಮಕ್ಕಳ ಮುಂದೆ ಶಿಕ್ಷಕರು ಬೆಂಕಿ ಹಿಡಿದು ಭಯ ಹುಟ್ಟಿಸೋದು ತಪ್ಪು ಎಂದು ಬಾಲಕನ ಅಜ್ಜಿ ಹೇಳುತ್ತಾರೆ.


ನನಗೂ ಮಕ್ಕಳಿದ್ದಾರೆ. ನಾನು ಈ ರೀತಿ ಮಾಡುವಳಲ್ಲ. ಮಗು ಮತ್ತೊಮ್ಮೆ ಚಡ್ಡಿಯಲ್ಲಿ ಮೂತ್ರ ಮಾಡದಿರಲಿ ಎಂದು ಈ ರೀತಿ ಮಾಡಲು ಹೋದೆ ಎಂದು ಹೇಳಿ ಬಾಲಕನ ಪೋಷಕರ ಬಳಿ ಶಿಕ್ಷಕಿ ಕ್ಷಮೆ ಕೇಳಿದ್ದಾರಂತೆ.


ಇಬ್ಬರಿಗೂ ನೋಟಿಸ್


ಘಟನೆ ಬೆಳಕಿಗೆ ಬಂದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾ ಘಟಕದ ಅಧಿಕಾರಿಗಳು ಗೋಡೆಕೆರೆ ಅಂಗನವಾಡಿ ಶಿಕ್ಷಕಿ, ಸಹಾಯಕಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಇನ್ನು ಶಿಕ್ಷಕಿಯ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.


ಕಾಲೇಜಿನಲ್ಲಿ ಲೈಂಗಿಕ ಶೋಷಣೆ!


ಧಾರವಾಡದ ಜಯನಗರದಲ್ಲಿನ ವಿಶ್ವೇಶ್ವರಯ್ಯ ಪಿಯು ವಿಜ್ಞಾನ ಕಾಲೇಜಿನಲ್ಲಿ ನಡೆಯಬಾರದ ಘಟನೆ ನಡೆದುಹೋಗಿದೆ. ವಿದ್ಯಾರ್ಜನೆ ಮಾಡೋ ಜಾಗದಲ್ಲಿ ವಿದ್ಯಾರ್ಥಿಗಳ ಮೇಲೆ ಲೈಂಗಿಕ ಶೋಷಣೆ ಮಾಡುತ್ತಿರೋ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.


ಇದನ್ನೂ ಓದಿ:  Chikkamagaluru: ಒಬ್ಬಳನ್ನೇ ಮದುವೆಯಾದ ಇಬ್ಬರು, ಪತ್ನಿಗಾಗಿ ಗಂಡಂದಿರ ಫೈಟ್, ಕಿಡ್ನಾಪ್ ವೇಳೆ ತಗ್ಲಾಕೊಂಡ 2ನೇ ಪತಿ!


ಕಾಲೇಜು ಅಧ್ಯಕ್ಷನಿಂದ ಕೃತ್ಯ!

top videos


    ಖುದ್ದು ಈ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷನ ವಿರುದ್ಧವೇ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದ್ರೆ, ಅದಕ್ಕೆ ಪ್ರಿನ್ಸಿಪಾಲ್ ಸಾಥ್ ನೀಡುತ್ತಾರೆ ಅನ್ನೋ ಆರೋಪವೂ ಜೋರಾಗಿದೆ. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ಯಡವಣ್ಣವರ ಹಾಗೂ ಪ್ರಾಚಾರ್ಯ ಮಹದೇವ ಕುರವತ್ತಿಗೌಡರ ವಿರುದ್ಧ ದೂರು ದಾಖಲಾಗಿದೆ.

    First published: