ಅಂಗನವಾಡಿಯಲ್ಲಿ ಮೂತ್ರ ಮಾಡಿದ್ದಕ್ಕೆ ಮಗು ಮೇಲೆ ಚಾಕುವಿನಿಂದ ಹಲ್ಲೆ

ಪರಿಣಾಮ ಮಗುವಿನ ತಲೆಗೆ ತೀವ್ರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರು ಮಗುವಿನ ತಲೆಗೆ 3 ಹೊಲಿಗೆ ಹಾಕಿದ್ಧಾರೆ ಎಂದು ತಿಳಿದು ಬಂದಿದೆ. 

Latha CG | news18-kannada
Updated:November 26, 2019, 1:34 PM IST
ಅಂಗನವಾಡಿಯಲ್ಲಿ ಮೂತ್ರ ಮಾಡಿದ್ದಕ್ಕೆ ಮಗು ಮೇಲೆ ಚಾಕುವಿನಿಂದ ಹಲ್ಲೆ
ಹಲ್ಲೆಗೊಳಗಾದ ಮಗು
  • Share this:
ಚಿಕ್ಕಮಗಳೂರು(ನ.26): ಮೂರು ವರ್ಷದ ಮಗು ಅಂಗನವಾಡಿಯಲ್ಲಿ ಮೂತ್ರ ಮಾಡಿಕೊಂಡಿದ್ದಕ್ಕೆ  ಅಂಗನಾವಾಡಿ ಶಿಕ್ಷಕಿ ಮತ್ತು ಸಹಾಯಕಿ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕೆರೆಮಕ್ಕಿ ಗ್ರಾಮದಲ್ಲಿ ನಡೆದಿದೆ. 

ಅಮಿತ್(3) ಹಲ್ಲೆಗೊಳಗಾದ ಮಗು. ಅಂಗನವಾಡಿಯಲ್ಲಿ ಮಗು ಚಡ್ಡಿಯಲ್ಲಿ ಮೂತ್ರ ವಿಸರ್ಜನೆ ಮಾಡಿದೆ ಎಂಬ ಕಾರಣಕ್ಕೆ ಕೋಪಗೊಂಡ ಆಯಾ ಮಂಜುಳಾ ಮತ್ತು ಶಿಕ್ಷಕಿ ಮಾಲ ಮಗುವಿನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.

ಕೆಲವೇ ಕ್ಷಣಗಳಲ್ಲಿ ಸುಪ್ರೀಂಕೋರ್ಟ್​ನಿಂದ ಮಹಾ ತೀರ್ಪು; ರಾಜಕೀಯ ಮೇಲಾಟಕ್ಕೆ ಬೀಳಲಿದೆಯಾ ತೆರೆ?

ಪರಿಣಾಮ ಮಗುವಿನ ತಲೆಗೆ ತೀವ್ರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರು ಮಗುವಿನ ತಲೆಗೆ 3 ಹೊಲಿಗೆ ಹಾಕಿದ್ಧಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಮಲ್ಲಂದೂರು‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂಗನವಾಡಿ ಶಿಕ್ಷಕಿ ಮಾಲ, ಸಹಾಯಕಿ ಮಂಜುಳಾ ವಿರುದ್ಧ ದೂರು ದಾಖಲಾಗಿದೆ. ಶಿಕ್ಷಕಿ ಹಾಗೂ ಸಹಾಯಕಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

First published: November 26, 2019, 10:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading