Udupi: ಅಮೃತ ಮಹೋತ್ಸವಕ್ಕೆ ANF ಸಿಬ್ಬಂದಿಯಿಂದ ಸಾರ್ಥಕ‌ ಕಾರ್ಯ; ಅರಣ್ಯವಾಸಿಗೆ ಸೂರು ನಿರ್ಮಾಣ

ಕೂಂಬಿಂಗ್ ತೆರಳುವ ವೇಳೆ ನಾಡ್ಪಾಲು ಗ್ರಾಮದ ತೆಂಗುಮಾರ್ ಎಂಬ ದಟ್ಟ ಕಾನನದಲ್ಲಿ ವಾಸವಿದ್ದ ನಾರಾಯಣ ಗೌಡ ಎಂಬವರಿಗೆ ಹಲವಾರು ವರ್ಷಗಳಿಂದ ದಿನಸಿ ಸಾಮಾಗ್ರಿ ಮತ್ತು ಹಣದ ಸಹಾಯವನ್ನು ಮಾಡುತ್ತಿದ್ದರು.

ತಿರಂಗ ಧ್ವಜ ಹಸ್ತಾಂತರ

ತಿರಂಗ ಧ್ವಜ ಹಸ್ತಾಂತರ

  • Share this:
ಉಡುಪಿಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ (Western Hills) ಸಾರ್ಥಕ ಸ್ವಾತಂತ್ರ್ಯ ಅಮೃತ ಮಹೋತ್ಸವ (Amrit Mahotsava) ನಡೆದಿದೆ. ನಕ್ಸಲರ (Naxals) ಬೇಟೆಗೆ ನಿಯೋಜನೆಗೊಂಡಿರುವ ಎಎನ್ಎಫ್ ಸಿಬ್ಬಂದಿ (ANF Staff), ಮಾನವೀಯತೆ ಮೆರೆಯುವುದರ ಜೊತೆಗೆ, ದೇಶಭಕ್ತಿಯ ಸಂದೇಶ (Patriotic Message) ನೀಡಿದ್ದಾರೆ. ಹೌದು, ದಟ್ಟ ಅರಣ್ಯದ ನಡುವೆ ಕಳೆದ ಹಲವಾರು ದಶಕಗಳಿಂದ ಕೊಟ್ಟಿಗೆಯಂತಹ ಗುಡಿಸಲಿನಲ್ಲಿ (Hut) ವಾಸಿಸುತ್ತಿದ್ದ ವ್ಯಕ್ತಿಗೆ ಎಎನ್ಎಫ್ ಸಿಬ್ಬಂದಿಗಳೇ ಸೇರಿ ವಾಸಕ್ಕೊಂದು ಸೂರು (Shelter) ನಿರ್ಮಿಸಿ ಕೊಟ್ಟಿದ್ದಾರೆ. 73 ಹರೆಯದ ವೃದ್ಧ ನಾರಾಯಣ ಗೌಡರಿಗೆ ಸೂರನ್ನು ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಉಡುಪಿ ಜಿಲ್ಲೆಯ ಹೆಬ್ರಿ ಎಎನ್ಎಫ್ ಕ್ಯಾಂಪಿನ (ANF Camp, Hebri) ಸಿಬ್ಬಂದಿ ಕಳೆದ ಹಲವಾರು ವರ್ಷಗಳಿಂದ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ (Combing Operation) ನಡೆಸುತ್ತಿದ್ದಾರೆ.

ಈ ರೀತಿ ಕೂಂಬಿಂಗ್ ತೆರಳುವ ವೇಳೆ ನಾಡ್ಪಾಲು ಗ್ರಾಮದ ತೆಂಗುಮಾರ್ ಎಂಬ ದಟ್ಟ ಕಾನನದಲ್ಲಿ ವಾಸವಿದ್ದ ನಾರಾಯಣ ಗೌಡ ಎಂಬವರಿಗೆ ಹಲವಾರು ವರ್ಷಗಳಿಂದ ದಿನಸಿ ಸಾಮಾಗ್ರಿ ಮತ್ತು ಹಣದ ಸಹಾಯವನ್ನು ಮಾಡುತ್ತಿದ್ದರು.

ಸೂರು ನಿರ್ಮಿಸಿಕೊಡುವ ಸಂಕಲ್ಪ

ಏಕಾಂಗಿಯಾಗಿರುವ ಇವರಿಗೆ ನೆರವಾಗುತ್ತಿದ್ದರು. ಗೌಡರ ಸಂಕಷ್ಟಕ್ಕೆ ಮರುಗುತ್ತಿದ್ದರು. ಈ ಬಾರಿ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಅವರಿಗೊಂದು ಸೂರು ನಿರ್ಮಿಸಿಕೊಡುವ ಸಂಕಲ್ಪ ಮಾಡಿದರು.

ANF Staff built Shelter for old man psud mrq
ಅಮೃತ ನಿವಾಸ


ಇದನ್ನೂ ಓದಿ:  Independence Day: ಕೆಂಪು ಕೋಟೆಯಲ್ಲಿ ಮೊದಲ ಬಾರಿ 'ಮೇಡ್ ಇನ್ ಇಂಡಿಯಾ' ಫಿರಂಗಿಯಿಂದ ತ್ರಿವರ್ಣ ಧ್ವಜಕ್ಕೆ ವಂದನೆ!

27 ಎಎನ್ಎಫ್ ಸಿಬ್ಬಂದಿ, ಪೊಲೀಸ್ ಇನ್ಸ್ಪೆಕ್ಟರ್ ಸತೀಶ್ ಹಾಗೂ ಎಸ್ಪಿ ಪ್ರಶಾಂತ್ ನಿಕ್ಕಂ ಅವರು ಸ್ವಂತ ಹಣದಲ್ಲಿ ಪುಟ್ಟ ಮನೆಯನ್ನು ನಿರ್ಮಿಸಿ ಇದೀಗ ಹಸ್ತಾಂತರಿಸಿದ್ದಾರೆ. ನಾರಾಯಣ ಗೌಡರ ವಾಸದ ಸ್ಥಳಕ್ಕೆ ಹೆಬ್ರಿಯಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ತೆಂಗುಮಾರ್ ಗೆ ತಿಂಗಳಮಕ್ಕಿಯಿಂದ 1.50 ಕಿ.ಮೀ ನಡೆದುಕೊಂಡೇ ಹೋಗಬೇಕು.

ಸಿಬ್ಬಂದಿಗೆ ಸ್ಥಳೀಯರ ಸಹಕಾರ

ನಕ್ಸಲ್ ನಿಗ್ರಹ ದಳದ ಸಿಬ್ಬಂದಿಗಳೇ ಸೇರಿ ಬ್ಲಾಕ್ ಕಲ್ಲು, ಸಿಮೆಂಟ್, ತಗಡು ಶೀಟ್ನ್ನು ಹೊತ್ತುಕೊಂಡು ಕಾಡು ದಾರಿಯಲ್ಲಿ ನಡೆದು ಗೌಡರಿಗೆ ಮನೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ. ಎ.ಎನ್.ಎಫ್ ಸಿಬ್ಬಂದಿಗಳಿಗೆ ಸ್ಥಳೀಯರು ಸಹಕಾರ ನೀಡಿದ್ದಾರೆ.

ANF Staff built Shelter for old man psud mrq
ಅಮೃತ ನಿವಾಸ


ಏಳು ದಶಕಗಳಿಂದ ವಾಸ

ನಾರಾಯಣ ಗೌಡರು ಹಲವಾರು ದಶಕಗಳಿಂದ ಪ್ರಕೃತಿಯ ನಡುವೆ ವಾಸವಿದ್ದು, ಮದುವೆಯಾಗಿಲ್ಲ. ದಟ್ಟ ಅರಣ್ಯದೊಳಗೆ ಒಬ್ಬರೇ ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ನಗರವೆಂದರೆ ಹೆಬ್ರಿ. ಸುಮಾರು 20 ಕಿ.ಮೀ ದೂರವಿರುವ ಹೆಬ್ರಿ ಪೇಟೆಗೆ ಕಾಲು ನಡಿಗೆಯಲ್ಲೇ‌ ಪಯಣ ಮಾಡುತ್ತ ಏಳು ದಶಕ ಕಳೆದಿದ್ದಾರೆ. ನಾಟಿ ವೈದ್ಯರಾಗಿರುವ ಗೌಡರು ದಟ್ಟ ಅರಣ್ಯದೊಳಗೆ ಒಬ್ಬರೇ ವಾಸವಿದ್ದರೂ, ಅವರ ಮುಖದಲ್ಲಿ ನಗು ಒಂದಿನಿತು ಕಡಿಮೆಯಾಗಿಲ್ಲ.

20 ಸಾವಿರ ಬಹುಮಾನ ಘೋಷಣೆ

ಹೆಬ್ರಿ ಎ.ಎನ್.ಎಫ್ ಕ್ಯಾಂಪಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿಕೊಂಡು ಉತ್ತಮ ಕಾರ್ಯವನ್ನು ಮಾಡಿದ್ದಾರೆ. ಈ ತಂಡಕ್ಕೆ 20,000 ರೂ.ಗಳ ಬಹುಮಾನವನ್ನು ಘೋಷಿಸುತ್ತೇನೆ ಎಂದು ಎಎನ್ಎಫ್. ಎಸ್ಪಿ ಪ್ರಶಾಂತ್ ನಿಕ್ಕಂ ಬೆಂಬಲ ನೀಡಿದ್ದಾರೆ.
ಇದೇ ವೇಳೆ ಫಲಾನುಭವಿ ನಾರಾಯಣ ಗೌಡರಿಗೆ ತ್ರಿವರ್ಣಧ್ವಜವನ್ನು ಹಸ್ತಾಂತರಿಸುವ ಮೂಲಕ ಹರಘರ್ ತಿರಂಗ ಅಭಿಯಾನಕ್ಕೆ ಸಾರ್ಥಕತೆ ನೀಡಿದ್ದಾರೆ.

ANF Staff built Shelter for old man psud mrq
ಮನೆ ಹಸ್ತಾಂತರ


ಪ್ರಧಾನಿ ಮನವಿ

ಕೆಂಪುಕೋಟೆಯ ಐತಿಹಾಸಿಕ ಕೋಟೆಯಿಂದ ಒಂಬತ್ತನೇ ಬಾರಿಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi Speech) ಮಹಿಳೆಯ ಬಗ್ಗೆ ಮಾನಸಿಕ ಬದಲಾವಣೆಗೆ ಕರೆ ನೀಡಿದರು.

ಇದನ್ನೂ ಓದಿ:  Bengaluru Traffic: ಬೆಂಗಳೂರಿಗರೇ ಗಮನಿಸಿ, ಮಧ್ಯಾಹ್ನ 2ರ ನಂತರ ಈ ಭಾಗದಲ್ಲಿ ಟ್ರಾಫಿಕ್

ಮಹಿಳೆಯರಿಗೆ ಗೌರವವು (Respect Women) ಭಾರತದ ಬೆಳವಣಿಗೆಯ ಪ್ರಮುಖ ಆಧಾರ ಸ್ತಂಭವಾಗಿದೆ ಎಂದು ಹೇಳಿದ ಪ್ರಧಾನಿ ಮೋದಿ, 'ನಾರಿಶಕ್ತಿ'ಗೆ (Nari Shakti) ಬೆಂಬಲ ನೀಡುವ ಅಗತ್ಯವನ್ನು ಒತ್ತಿ ಹೇಳಿದರು. ದೈನಂದಿನ ಜೀವನದಲ್ಲಿ ಮಹಿಳೆಯರ ಬಗೆಗಿನ ಮನಸ್ಥಿತಿಯನ್ನು ಬದಲಾಯಿಸುವಂತೆ ಮನವಿ ಮಾಡಿದರು.
Published by:Mahmadrafik K
First published: